ಟೋಟಲ್ ಕನ್ನಡ ಬೆಂಗಳೂರು ಮೂಲದ ಕನ್ನಡ ಮಳಿಗೆ. ಈ ಸಂಸ್ಥೆಯ ಉದ್ದೇಶ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗು ಪರಂಪರೆಯನ್ನು ಸಂರಕ್ಷಿಸಿ ಪ್ರಚಾರ ಮಾಡುವುದು.ಈ ಮಳಿಗೆಯಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ವಸ್ತುಗಳು ಮಾರಾಟಕ್ಕಿವೆ. ಇಂತಹ ಮಳಿಗೆ ಕರ್ನಾಟಕದಲ್ಲೇ ಪ್ರಥಮ. ದೇಶ- ವಿದೇಶ ಗಳಿಗು ಕನ್ನಡ ವಸ್ತುಗಳನ್ನು ತಮ್ಮ ಅಂತರಜಾಲ ತಾಣ ಹಾಗು ಸ್ಪೀಡ್ ಪೋಸ್ಟ್ ಮತ್ತು ಫೆಡೆರಲ್ ಎಕ್ಸ್ಪ್ರೆಸ್ಸ್ ಮೂಲಕ ಕಳುಹಿಸುತ್ತಾರೆ.[]

ಟೋಟಲ್ ಕನ್ನಡ
ಸಂಸ್ಥಾಪಕ(ರು)ವಿ.ಲಕ್ಷ್ಮಿಕಾಂತ್
ಮುಖ್ಯ ಕಾರ್ಯಾಲಯಜಯನಗರ, ಬೆಂಗಳೂರು
ಪ್ರಮುಖ ವ್ಯಕ್ತಿ(ಗಳು)ವಿ.ಲಕ್ಷ್ಮಿಕಾಂತ್
ಉತ್ಪನ್ನಕನ್ನಡ ಪುಸ್ತಕಗಳು
ಕನ್ನಡ ಗೀತೆಗಳು
ಕನ್ನಡ ಚಲನಚಿತ್ರಗಳು
ಜಾಲತಾಣhttp://www.totalkannada.com/

ಹಿನ್ನೆಲೆ ಮತ್ತು ಬೆಳವಣಿಗೆ

ಬದಲಾಯಿಸಿ

ಕನ್ನಡ ಭಾಷೆಯ ಕೆಲವು ಪುಸ್ತಕಗಳು, ಸಿಡಿ-ಡಿವಿಡಿಗಳು ಲಭ್ಯವಿಲ್ಲದೇ ಇರುವ ಕಾರಣದಿಂದ, ಕನ್ನಡ ಭಾಷೆ ಹಾಗು ಸಂಸ್ಕೃತಿಯ ವೈಭವವನ್ನು ಕನ್ನಡ ಪುಸ್ತಕಗಳು, ಚಲನಚಿತ್ರಗಳು ಹಾಗು ಸಂಗೀತದ ಪ್ರಚಾರದಿಂದ ಮಾಡಲು ೨೦೦೧ರಲ್ಲಿ ಟೋಟಲ್ ಕನ್ನಡ ಡಾಟ್ ಕಾಮ್ ಎಂಬ ಅಂತರಜಾಲ ತಾಣವನ್ನು ಸೃಷ್ಟಿಸಿ ಕನ್ನಡ ಪುಸ್ತಕ ಹಾಗು ಇತರ ವಸ್ತುಗಳನ್ನು ಪ್ರಪಂಚದ ಎಲ್ಲಾ ಮೂಲೆಗಳಿಗು ಸ್ಪೀಡ್ ಪೋಸ್ಟ್ ಮತ್ತು ಫೆಡೆರಲ್ ಎಕ್ಸ್ಪ್ರೆಸ್ಸ್ ಮೂಲಕ ಕಳುಹಿಸುತ್ತಿದ್ದರು.[] ೨೦೦೬ರಲ್ಲಿ ಆ ಜಾಲತಾಣದ ಜತೆ ಬೆಂಗಳೂರಿನಲ್ಲಿ ಒಂದು ಮಳಿಗೆಯನ್ನು ಆರಂಭಿಸಿದರು.[] ಇದಲ್ಲದೆ ಈಗ ಒಂದು ಸಂಚಾರಿ ಮಳಿಗೆಗಳನ್ನು ಬೆಂಗಳೂರಿನ ಏಳು ಕಡೆ ಬಿಟ್ಟಿದ್ದಾರೆ.[]

ಲಭ್ಯವಿರುವ ವಸ್ತುಗಳು

ಬದಲಾಯಿಸಿ

ಟೋಟಲ್ ಕನ್ನಡ ಮಳಿಗೆಯಲ್ಲಿ ೨೫೦೦೦ಕ್ಕೂ ಹೆಚ್ಚು ಕನ್ನಡ ವಸ್ತುಗಳಿವೆ.[] ಕನ್ನಡ ಪುಸ್ತಕಗಳು, ಕನ್ನಡ ಸಂಗೀತ ಹಾಗು ಕನ್ನಡ ಚಿತ್ರಗಳಲ್ಲದೆ ಕನ್ನಡ ಗ್ರೀಟಿಂಗ್ ಕಾರ್ಡುಗಳು, ಪಂಚಾಂಗ-ಕ್ಯಾಲೆಂಡರ್, ಮಾಸಪತ್ರಿಕೆಗಳು, ಮಕ್ಕಳಿಗಾಗಿ ಅನಿಮೇಷನ್‌ ಸಿಡಿಗಳು, ಶಿಶುಗೀತೆಗಳು, ಟಿ-ಶರ್ಟ್ ಹಾಗು ಈ-ಪುಸ್ತಕಗಳ ಸಿಡಿಗಳು ಲಭ್ಯವಿವೆ.[]

ಉಲ್ಲೇಖಗಳು

ಬದಲಾಯಿಸಿ
  1. http://www.totalkannada.com/
  2. "ಆರ್ಕೈವ್ ನಕಲು". Archived from the original on 2014-05-20. Retrieved 2014-05-14.
  3. "ಆರ್ಕೈವ್ ನಕಲು". Archived from the original on 2014-05-20. Retrieved 2014-05-14.
  4. "ಆರ್ಕೈವ್ ನಕಲು". Archived from the original on 2014-07-08. Retrieved 2014-05-14.
  5. "ಆರ್ಕೈವ್ ನಕಲು". Archived from the original on 2014-05-20. Retrieved 2014-05-14.
  6. "ಆರ್ಕೈವ್ ನಕಲು". Archived from the original on 2014-05-20. Retrieved 2014-05-14.