ಟೈಬೀರಿಯಸ್ ಗ್ರ್ಯಾಕಸ್
ಪ್ರಾಚೀನ ರೋಮನ್ ರಾಜಕಾರಣಿ
ಜೀವನ
ಬದಲಾಯಿಸಿಟೈಬೀರಿಯಸ್ ಗ್ರ್ಯಾಕಸ್ (Tiberius Gracchus) (ಕ್ರಿ.ಪೂ 163 - 133). ಇವನನ್ನೂ ಇವನ ಸೋದರ ಗೇಯಸನನ್ನೂ ಇವರ ತಾಯಿ ಕಾರ್ನೀಲಿಯಳೇ ಬೆಳೆಸಿ ಮುಂದೆ ತಂದಳು.[೧] [೨] ಫಿನೀಷಿಯನರ ವಿರುದ್ಧ ನಡೆದ ಕೊನೆಯ ಪ್ಯೂನಿಕ್ ಯುದ್ಧದಲ್ಲಿ (ಕ್ರಿ.ಪೂ. 147) ಈತ ಭಾಗವಹಿಸಿದ. ಕ್ರಮೇಣ ಅನೇಕ ಸರ್ಕಾರಿ ಹುದ್ದೆಗಳಲ್ಲಿದ್ದು ಕೊನೆಗೆ ಟ್ರಿಬ್ಯೂನ್ ಎಂಬ ಅಧಿಕಾರಿಯಾದ (ಕ್ರಿ.ಪೂ. 133). ಇವನು ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಅನೇಕ ತೀವ್ರಗಾಮಿ ಯೋಜನೆಗಳನ್ನು ಪ್ರಚಾರದಲ್ಲಿ ತಂದ. ಶ್ರೀಮಂತರಿಗೆ ಸೇರಿದ ದೊಡ್ಡ ಜಮೀನುಗಳನ್ನು ರೈತರಿಗೆ ಹಂಚಿದ. ರೋಮನರನ್ನು ಮತ್ತೆ ಸಾಗುವಳಿಗೆ ಹಚ್ಚಿ ಅವರನ್ನು ಉತ್ತಮ ಸ್ಥಿತಿಗೆ ತರಬೇಕೆಂಬುದು ಇವನ ಒಂದು ಉದ್ದೇಶ. ರೋಮನರ ಪೌರುಷ ಕುಂದುತ್ತಿದ್ದದ್ದು ಇವನನ್ನು ಚಿಂತೆಗೆ ಈಡುಮಾಡಿತ್ತು. ಇವನ ಕ್ರಮಗಳನ್ನು ಒಪ್ಪದಿದ್ದ ಬಲಿಷ್ಠ ಸೆನೇಟು ಇವನ ವಿರುದ್ಧ ಒಳಸಂಚು ನಡೆಸಿತು. ಮರುವರ್ಷ ಟ್ರಿಬ್ಯೂನನ ಆಯ್ಕೆಯ ಸಮಯದಲ್ಲಿ ಸಂಭವಿಸಿದ ದಂಗೆಯಲ್ಲಿ ಇವನ ಕೊಲೆಯಾಯಿತು.
ಉಲ್ಲೇಖ
ಬದಲಾಯಿಸಿ- ↑ https://www.britannica.com/biography/Tiberius-Sempronius-Gracchus
- ↑ The Great Books, Encyclopædia Britannica, Plutarch: The Lives of the Noble Grecians and Romans (Dryden translation), 1952, Library of Congress Catalog Card Number: 55-10323