ಟೈಗರ್ ಕೇವ್ ಭಾರತದ ತಮಿಳುನಾಡು ರಾಜ್ಯದ ಮಹಾಬಲಿಪುರಂ ಬಳಿಯ ಸಾಳುವನ್‍ಕುಪ್ಪಂ ಗ್ರಾಮದಲ್ಲಿರುವ ಬಂಡೆಯಲ್ಲಿ ಕೆತ್ತಲ್ಪಟ್ಟ ಹಿಂದೂ ದೇವಾಲಯ ಸಂಕೀರ್ಣವಾಗಿದೆ . ಸಂಕೀರ್ಣದ ಒಂದು ಭಾಗವಾಗಿರುವ ಗುಹೆಯ ಬಾಯಿಯ ಮೇಲೆ ಹುಲಿ ತಲೆಯ ಕೆತ್ತನೆಗಳಿಂದ ಇದು ತನ್ನ ಹೆಸರನ್ನು ಪಡೆದುಕೊಂಡಿದೆ. ಟೈಗರ್ ಕೇವ್ ಪಲ್ಲವರು ಕ್ರಿ.ಶ. 8 ನೇ ಶತಮಾನದಲ್ಲಿ ನಿರ್ಮಿಸಿದ, ಮಹಾಬಲಿಪುರಮ್‍ನ ಬಂಡೆಯಲ್ಲಿ ಕೆತ್ತಲ್ಪಟ್ಟ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ತಾಣವು ಬಂಗಾಳ ಕೊಲ್ಲಿಯ ಕರಾವಳಿಯಲ್ಲಿದೆ ಮತ್ತು ಇದು ಜನಪ್ರಿಯ ಪಿಕ್ನಿಕ್ ತಾಣ ಹಾಗೂ ಪ್ರವಾಸಿ ತಾಣವಾಗಿದೆ.[] ಈ ದೇವಾಲಯವನ್ನು ಭಾರತದ ಪುರಾತತ್ವ ಸರ್ವೇಕ್ಷಣೆಯು (ASI) ನಿರ್ವಹಿಸುತ್ತದೆ. 2005 ರಲ್ಲಿ ಟೈಗರ್ ಕೇವ್ ಸಂಕೀರ್ಣದಲ್ಲಿನ ಒಂದು ಬಂಡೆ ಹೊರಚಾಚಿನ ಮೇಲಿನ ಒಂದು ಶಾಸನದ ಆವಿಷ್ಕಾರವು ಹತ್ತಿರದಲ್ಲಿ ಸಂಗಮ ಕಾಲದ ಸುಬ್ರಹ್ಮಣ್ಯ ದೇವಾಲಯದ ಉತ್ಖನನಕ್ಕೆ ಕಾರಣವಾಯಿತು.[]

ಟೈಗರ್ ಕೇವ್‍ಗೆ ಹತ್ತಿರವಿರುವ ಬಂಡೆಯ ಹೊರಚಾಚು. ಇವುಗಳಲ್ಲಿ ಒಂದರ ಮೇಲೆ ಶಾಸನ ಪತ್ತೆಯಾಗಿದ್ದು ಸುಬ್ರಹ್ಮಣ್ಯ ದೇವಾಲಯದ ಉತ್ಖನನಕ್ಕೆ ಕಾರಣವಾಯಿತು

ವಾಸ್ತುಕಲೆ

ಬದಲಾಯಿಸಿ
 
ಗುಹೆಯ ಮುಖಭಾಗದಲ್ಲಿ ಹುಲಿ ತಲೆ ಕೆತ್ತನೆಯೊಂದಿಗೆ ಟೈಗರ್ ಕೇವ್

ಗುಹಾ ದೇವಾಲಯವು ಮಹಾಬಲಿಪುರಂನಿಂದ ೪.೮ ಕಿ.ಮಿ. ದೂರದಲ್ಲಿದೆ. ಬಂಡೆಯಲ್ಲಿ ಕೆತ್ತಲ್ಪಟ್ಟ ಈ ದೇಗುಲಕ್ಕೆ ಮೆಟ್ಟಿಲುಗಳ ಸಾಲು ಇದೆ. ಇದು ಒಂದು ಸಣ್ಣ ಮುಖಮಂಟಪ ಹೊಂದಿದ್ದು ಅದರ ಬದಿಗಳಲ್ಲಿ ಎರಡು ಚೌಕಸ್ಥಂಭಗಳಿದ್ದು ಅವುಗಳಿಗೆ ನೇರವಾಗಿ ನಿಂತಿರುವ ಸಿಂಹಗಳು ಆಧಾರವಾಗಿವೆ. ಪ್ರವೇಶದ್ವಾರದ ಸುತ್ತಲೂ ಸಿಂಹಗಳ ಚಿತ್ರಗಳಿವೆ, ಇದು ಟೈಗರ್ ಕೇವ್‍ನ ಹೆಸರಿಗೆ ಕಾರಣವಾಗಿದೆ. ಆನೆಯ ತಲೆಗಳನ್ನು ಅವುಗಳ ಕೆಳಗೆ ಕೆತ್ತಲ್ಪಟ್ಟಿರುವ ಇತರ ಎರಡು ಕೋಶಗಳಿವೆ. ವಾಸ್ತುಕಲಾ ಶೈಲಿಯ ಆಧಾರದ ಮೇಲೆ, ಗುಹೆಯು ರಾಜಸಿಂಹ ನರಸಿಂಹವರಂ II (690–728) ನೊಂದಿಗೆ ಸಂಬಂಧ ಹೊಂದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Tiger Cave". Atlas Obscura. 30 November 2015.
  2. Swahilya (January 5, 2007). "Visit Tiger's Cave for a quiet weekend getaway". The Hindu. Archived from the original on January 7, 2007.
  3. C., Sivaramamurthi (2004). Mahabalipuram. New Delhi: The Archaeological Survey of India, Government of India. p. 3, 34.