ಟಿಯನನ್ಮೆನ್ ಚೌಕ
ಟಿಯನನ್ಮೆನ್ ಚೌಕವು ಚೀನಾ ದೇಶದ ಬೀಜಿಂಗ್ ನಗರದ ನಟ್ಟ ನಡುವಿನ ಚೌಕಪ್ರದೇಶವಾಗಿದೆ. ಇದರ ಉದ್ದ ೮೮೦ ಮೀಟರ್, ಅಗಲ ೫೦೦ ಮೀಟರ್. ಒಟ್ಟು ಕ್ಷೇತ್ರ-೪.೪ ಲಕ್ಷ ಚದರ ಮೀಟರ್ ಅಂದರೆ ೧೦೯ ಎಕರೆ. ಇದು ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಚೌಕಪ್ರದೇಶವಾಗಿದೆ.
ಚೀನಾದ ಇತಿಹಾಸದಲ್ಲಿನ ಅನೇಕ ಮಹತ್ವದ ಘಟನೆಗಳು ಇಲ್ಲಿಯೇ ಜರುಗಿದ್ದು ಭಾರೀ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ೧೯೮೯ರಲ್ಲಿ ಪ್ರಜಾಸತ್ತೆಯ ಪರ ಚಳುವಳಿಯು ಇಲ್ಲಿಯೇ ನಡೆದಿದ್ದು ಅದನ್ನು ಭಾರೀ ಸಾವುನೋವುಗಳೊಂದಿಗೆ ಸೈನ್ಯಬಲದಿಂದ ಹತ್ತಿಕ್ಕಿದ ಘಟನೆಯ ಕಾರಣದಿಂದಾಗಿ ಚೀನಾದ ಹೊರಗಡೆ ಜನರ ನೆನಪಿನಲ್ಲಿ ಇದು ಇದೆ.