ಟಾರ್ಟನ್ ಬೇರೆ ಬೇರೆ ಬಣ್ಣಗಳ ಹಾಗೂ ಅಗಲಗಳ ಪಟ್ಟೆಗಳು ಲಂಬಕೋನಗಳಲ್ಲಿ ಪರಸ್ಪರ ಛೇದಿಸುವಂತೆ ನೇಯ್ದ ಉಣ್ಣೆಯ ಇಲ್ಲವೆ ಹುರಿದಾರದ ವಸ್ತ್ರ. ಸ್ಕಾಟ್‍ಲೆಂಡಿನ ಹೈಲ್ಯಾಂಡುಗಳ ಜನರು ಧರಿಸುತ್ತಿದ್ದುದು ವಾಡಿಕೆ. ಅವರ ಒಂದೊಂದು ಬುಡಕಟ್ಟಿಗೂ ವಿಶಿಷ್ಟ ನಮೂನೆಗಳ ಇಂಥ ವಸ್ತ್ರಗಳು ಇದ್ದುವು.

ಮೂರು ಟಾರ್ಟನ್ ಬಟ್ಟೆಗಳು


ಕ್ರೇಪ್ ಮತ್ತು ಇತರ ಅಭಿರುಚಿಪ್ರಿಯ ನೇಯ್ಗೆಗಳನ್ನು ಅಳವಡಿಸಿಕೊಂಡು ಹತ್ತಿ, ರೇಷ್ಮೆ ಮತ್ತು ಇತರ ನೂಲುಗಳನ್ನು ಬಳಸಿಕೊಂಡು ಟಾರ್ಟನ್ ವಿನ್ಯಾಸಗಳಲ್ಲಿ ಅನೇಕ ಸುಧಾರಣೆಗಳನ್ನು ಮಾಡಿರುತ್ತಾರೆ. ಸೈನಿಕ ಬಟ್ಟೆಗಳನ್ನು ಕುರಿತು ಹೇಳುವಾಗ ಟಾರ್ಟನ್ ಎಂಬ ಪದವನ್ನು ಬಳಸಿದ್ದರೆ ಅದು ವಸ್ತುವನ್ನು ಕುರಿತು ಹೇಳಿದೆಯೇ ಹೊರತು, ಅದರ ವರ್ಣಸಂಯೋಜನೆಯ ಬಗ್ಗೆ ಅಲ್ಲ; ಏಕೆಂದರೆ, ಅನಾಕರ್ಷಣೀಯ ಮಿಶ್ರಣದ ವಸ್ತ್ರವನ್ನು ಟಾರ್ಟನ್ ಎನ್ನುವುದುಂಟು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಾರ್ಟನ್&oldid=1085536" ಇಂದ ಪಡೆಯಲ್ಪಟ್ಟಿದೆ