ಝಾಬುವಾ
ಝಾಬುವಾ- ಮಧ್ಯಪ್ರದೇಶದ ಇಂದೌರ್ ವಿಭಾಗದ ಒಂದು ಜಿಲ್ಲೆ ಹಾಗೂ ಅದರ ಆಡಳಿತ ಕೇಂದ್ರ, ಜಿಲ್ಲಾ ಪ್ರದೇಶ ಹಿಂದೆ ಮಧ್ಯಭಾರತದ ಒಂದು ಸಂಸ್ಥಾನವಾಗಿದ್ದು, ಜೋಧಪುರದ ರಾಠೌರ್ ವಂಶದವರ ಆಳ್ವಿಕೆಗೆ ಒಳಪಟ್ಟಿತ್ತು.
ನಗರ
ಬದಲಾಯಿಸಿರತ್ಲಂ ರೈಲು ನಿಲ್ದಾಣಕ್ಕೆ 40 ಮೈ. ದೂರದಲ್ಲಿರುವ ಝಾಬುವ ನಗರ ಸಮುದ್ರಮಟ್ಟದಿಂದ 1.171' ಎತ್ರರದಲ್ಲಿದೆ, ಬಹಾದುರ್ ಸಾಗರವೆಂಬ ಸರೋವರದ ದಡದಲ್ಲಿ ಈ ನಗರ ಹರಡಿಕೊಂಡಿದೆ. ಕಿರಿದಾದ, ಕಡಿದಾದ ಹಾಗೂ ಸುತ್ತುಬಳಸಿದ ದಾರಿಗಳು ಈ ನಗರದ ವಿಶೇಷ. ಬಹಾದುರ್ ಸಾಗರದ ಉತ್ತರ ದಡದಲ್ಲಿ ನೆಲೆಗೊಂಡಿರುವ ಅರಮನೆ ಮಣ್ಣಿನ ಗೋಡೆಯಿಂದ ಆವೃತವಾಗಿದೆ. ಬತ್ತ, ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು, ಇಲ್ಲಿ ಅನೇಕ ಅಕ್ಕಿ ಗಿರಣಿಗಳೂ, ನೂಲು ತೆಗೆಯುವ ಕೇಂದ್ರಗಳು ಇವೆ. ಇಲ್ಲೊಂದು ಕಾಲೇಜೂ ಇದೆ. ಪಟ್ಟಣದ ಜನಸಂಖ್ಯೆ 10,487(1971).
ಜಿಲ್ಲೆ
ಬದಲಾಯಿಸಿಝಾಬುವಾ ಜಿಲ್ಲೆಯ ವಿಸ್ತೀರ್ಣ 6,781 ಚ. ಕಿಮೀ. ಜನಸಂಖ್ಯೆ 6,67,811 (1971). ಮಾಳವದ ಬೆಟ್ಟಗಾಡಿನ ಭಾಗವಾಗಿರುವ ಈ ಜಿಲ್ಲೆ ಮಧ್ಯ ಪ್ರದೇಶ ರಾಜ್ಯದ ಪಶ್ಚಿಮದ ತುತ್ತತುದಿಯಲ್ಲಿದೆ. ಮಾಹೀ ಮತ್ತು ಅದರ ಉಪನದಿಯಾದ ಆನಸ್ ಇಲ್ಲಿಯ ಮುಖ್ಯ ನದಿಗಳು. ಈ ನದಿಗಳ ಪ್ರದೇಶದಲ್ಲಿ ಬೇಸಾಯ ಆಗುತ್ತದೆ. ಜಿಲ್ಲೆಯ ಉಳಿದ ಬಹುಭಾಗ ಪರ್ವತಮಯ ಅರಣ್ಯ. ಬೇಸಾಯಕ್ಕೆ ಯೋಗ್ಯವಲ್ಲ. ಬತ್ತ, ಕಡಲೆ, ಗೋದಿ, ಜೋಳ ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಈ ಜಿಲ್ಲೆಯ ಪಶ್ಚಿಮಕ್ಕಿರುವ ರಂಭಾಪುರ ವಲಯದಲ್ಲಿ ಮ್ಯಾಂಗನೀಸ್ ಅದುರಿನ ನಿಕ್ಷೇಪಗಳು ದೊರೆತಿವೆ. ಜಿಲ್ಲೆಯ ಬಹುಪಾಲು ಜನ ಆದಿವಾಸಿಗಳು. ಭಿಲ್ಲರು, ಭಿಲಬ್ಬರು ಹಾಗೂ ಪಾಟ್ಲಿಯಾಗಳು ಇವರಲ್ಲಿ ಮುಖ್ಯರು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಈ ಜಿಲ್ಲೆ ಹೆಚ್ಚಿನ ಪ್ರಗತಿ ಸಾಧಿಸಿಲ್ಲ.