ಝಮ್ ಝಮ್ (ಚಲನಚಿತ್ರ)

ಝಮ್ ಝಮ್ ಅನ್ನುವುದು ಇನ್ನೂ ತೆರೆಕಾಣದ ಮಲೆಯಾಳಂ ಚಲನಚಿತ್ರ. ಇದರ ನಿರ್ದೇಶಕರು ನೀಲಕಂಠ ರೆಡ್ಡಿ. ಮತ್ತು ನಿರ್ಮಾಪಕರು ಮನುಕುಮಾರನ್. ಇದು ೨೦೧೪ ರಲ್ಲಿ ತೆರೆ ಕಂಡ ಹಿಂದಿ ಚಲನಚಿತ್ರ "ಕ್ವೀನ್" ನ ರಿಮೇಕ್ ಆಗಿದೆ. [] ಇದರ ನಾಯಕಿ ಮಂಜಿಮಾ ಮೋಹನ್.[][]

ಝಮ್ ಝಮ್
ಝಮ್ ಝಮ್
ನಿರ್ದೇಶನನೀಲಕಂಠ ರೆಡ್ಡಿ
ನಿರ್ಮಾಪಕಮನು ಕುಮಾರನ್
ಕಥೆವಿಕಾಸ್ ಬಾಹ್ಲ್
ಪಾತ್ರವರ್ಗಮಂಜಿಮಾ ಮೋಹನ್
ಶಿಬಾನಿ ದಂಡೇಕರ್
ಸನ್ನಿ ವಾಯ್ನೆ
ಮುತ್ತುಮಣಿ
ಬೈಜು
ಸಂಗೀತಅಮಿತ್ ತ್ರಿವೇದಿ
ಛಾಯಾಗ್ರಹಣMichael ಮೈಕಲ್ ಟಬುರಿಯಾಕ್ಸ್
ಸಂಕಲನಪ್ರದೀಪ್ ಶಂಕರ್
ಸ್ಟುಡಿಯೋMediente International Films Ltd
Liger Commercial Brokers
ದೇಶಭಾರತ
ಭಾಷೆಮಲಯಾಳಂ

ತಾರಾಗಣ

ಬದಲಾಯಿಸಿ
  1. ಮಂಜಿಮಾ ಮೋಹನ್ ಜಮಾ ನಸ್ರೀನ್ ಪಾತ್ರದಲ್ಲಿ
  2. ಶಿಬಾನಿ ದಂಡೇಕರ್ ಜಮಾ ಫರ್ಜಿಲ್ ಪಾತ್ರದಲ್ಲಿ
  3. ಸನ್ನಿ ವಾಯ್ನೆ ಕ್ಯಾಪ್ಟನ್ ಬಿಜುಮೋಹನ್ ಪಾತ್ರದಲ್ಲಿ
  4. ಮುತ್ತುಮಣಿ ಕವಿತಾ ಕಾರ್ತಿಯಾಯೇನಿ ಪಾತ್ರದಲ್ಲಿ
  5. ಬೈಜು ಚಕೋಚಾನ್ ನಾಯರ್ ಪಾತ್ರದಲ್ಲಿ

ಚಿತ್ರದ ನಿರ್ಮಾಣ

ಬದಲಾಯಿಸಿ

೨೦೧೪ ರ ಜೂನಿನಲ್ಲಿ ಹಿಂದಿ ಚಲನಚಿತ್ರ ಕ್ವೀನ್ ನ ನಿರ್ಮಾಣ ಸಂಸ್ಥೆಯಾದ ವಿಯಕಾಮ್ ೧೮ ಮೋಷನ್ ಪಿಕ್ಟರ್ಸ್ ಅವರು ಚಿತ್ರದ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ರಿಮೇಕ್ ಹಕ್ಕುಗಳನ್ನು ತಿಯಾಗರಾಜನ್ ಅವರಿಗೆ ಮಾರಿರುವುದಾಗಿ ಘೋಷಿಸಿದರು. ತಿಯಾಗರಾಜನ್ ಅವರು ಆ ರಿಮೇಕುಗಳನ್ನು ತಮ್ಮ ನಿರ್ಮಾಣ ಸಂಸ್ಥೆಯಾದ ಸ್ಟಾರ್ ಮೂವಿಸ್ ಮೂಲಕ ಮಾಡುವುದಾಗಿ ಘೋಷಿಸಿದರು. ವಿಯಾಕಾಂ ಅವರು ಚಲನಚಿತ್ರಗಳ ಚಿತ್ರೀಕರಣ ೮ ಜೂನ್ ೨೦೧೭ರ ಒಳಗೆ ಶುರುವಾಗಬೇಕು. ಇಲ್ಲದಿದ್ದರೆ ಆ ರಿಮೇಕ್ ಹಕ್ಕುಗಳು ಪುನಃ ವಿಯಾಕಾಂ ಗೇ ವಾಪಾಸ್ ಹೋಗುವುದಾಗಿ ಷರತ್ತು ಹಾಕಿದ್ದರು. [] ಈ ಗೊಂದಲದಿಂದಾಗಿ ಚಿತ್ರದ ಮಲೆಯಾಳಿ ರಿಮೇಕ್ ಇನ್ನೂ ತೆರೆ ಕಂಡಿಲ್ಲ.

ಪಾತ್ರಗಳ ಆಯ್ಕೆ

ಬದಲಾಯಿಸಿ

ಅಮಲಾ ಪೌಲ್ ಅವರು ನಾಯಕಿಯ ಪಾತ್ರ ಮಾಡಲು ಮೊದಲು ಆಯ್ಕೆಯಾಗಿದ್ದರು. ನಂತರದಲ್ಲಿ ಅವರ ಜಾಗದಲ್ಲಿ ಮಂಜಿಮಾ ಮೋಹನ್ ಅವರನ್ನು ಆಯ್ಕೆ ಮಾಡಲಾಯಿತು.

ಚಿತ್ರೀಕರಣ

ಬದಲಾಯಿಸಿ

ಈ ಚಿತ್ರದ ಚಿತ್ರೀಕರಣ ೨೦೨೦ಕ್ಕೆ ಮುಗಿಯಬೇಕಿತ್ತು. ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ.

ನಿರ್ಮಾಣ ನಂತರದ ಕೆಲಸಗಳು

ಬದಲಾಯಿಸಿ

ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ೨೦೧೯ರಲ್ಲಿ ನಡೆಯಬೇಕಿತ್ತು

ಮೂಲ ಹಿಂದಿ ಚಿತ್ರ ಕ್ವೀನ್ ನ ಕತೆ

ಬದಲಾಯಿಸಿ

ಮೂಲ ಹಿಂದಿ ಚಿತ್ರದಲ್ಲಿ ರಾಣಿ ಬೆಹ್ರ(ಕಂಗನಾ ರನಾವತ್) ಅವರು ೨೪ ವರ್ಷದ ಸುಂದರ ಪಂಜಾಬಿ ಮಹಿಳೆ. ಅವರು ದೆಹಲಿಯಲ್ಲಿ ಇರುತ್ತಾರೆ. ಅವಳ ಮದುವೆಯ ಎರಡು ದಿನ ಮುಂಚೆ ಅವಳನ್ನು ಮದುವೆಯಾಗುವ ಹುಡುಗ ವಿಜಯ್ ಧಿಂಗ್ರ(ರಾಜ್ ಕುಮಾರ್ ರಾವ್) ತನಗೆ ಆ ಮದುವೆ ಇಷ್ಟವಿಲ್ಲ ಎಂದು ಅವಳಿಗೆ ತಿಳಿಸುತ್ತಾನೆ. ವಿದೇಶದಲ್ಲಿ ಬದುಕಿದ ನಂತರ ತನ್ನ ಜೀವನದ ರೀತಿ ನೀತಿಗಳು ಬದಲಾವಣೆಯಾಗಿವೆ ಮತ್ತು ರಾಣಿ ಬೆಹ್ರ ತನಗೆ ತಕ್ಕ ಜೋಡಿಯಲ್ಲ ಎನಿಸುತ್ತಿದೆ ಎಂಬ ಆತನ ಅಭಿಪ್ರಾಯವನ್ನು ರಾಣಿಗೆ ತಿಳಿಸುತ್ತಾನೆ. ಬಾಲ್ಯದಿಂದಲೂ ಗೆಳೆಯರಾಗಿದ್ದ ವಿಜಯ್ ಹೀಗೆ ಹೇಳಿದ ವಿಷಯವನ್ನು ಕೇಳಿದ ರಾಣಿಗೆ ದುಃಖ ತಡೆಯಲಾಗದೇ ಒಂದಿಡೀ ದಿನ ತನ್ನ ಕೋಣೆಯಲ್ಲೇ ಇರುತ್ತಾಳೆ. ಈ ಪರಿಸ್ಥಿತಿಯಿಂದ ಹೊರಬರಲು ತಾನು ಪ್ಯಾರಿಸ್ ಮತ್ತು ಆಮ್ ಸ್ಟರ್ ಡ್ಯಾಂಗೆ ಹೋಗಬೇಕೆಂದು ತನ್ನ ಪೋಷಕರಿಗೆ ತಿಳಿಸುತ್ತಾಳೆ. ಆ ಜಾಗಗಳಿಗೆ ಮಧುಚಂದ್ರಕ್ಕೆ ಹೋಗಬೇಕು ಎಂದು ಟಿಕೇಟ್ ಬುಕ್ ಮಾಡಿರುತ್ತಾರೆ. ಆದರೆ ಮದುವೆ ಮುರಿದುಬಿದ್ದ ಕಾರಣ ತಾನೊಬ್ಬಳೇ ಹೋಗಬೇಕೆಂದು ರಾಣಿ ಬಯಸುತ್ತಾಳೆ. ಮೊದಲಿಗೆ ಪೋಷಕರು ಒಪ್ಪದಿದ್ದರೂ ನಂತರ ಇದಕ್ಕೆ ಸಮ್ಮತಿಸುತ್ತಾರೆ.

ಪ್ಯಾರಿಸ್ಸಿನಲ್ಲಿ ರಾಣಿ ವಿಜಯಲಕ್ಷ್ಮಿ(ಲಿಸಾ ಹೇಡನ್) ಎನ್ನೋ ಫ್ರೆಂಚ್-ಸ್ಪ್ಯಾನಿಷ್ ಮೂಲದ ಭಾರತೀಯ ಮಹಿಳೆಯನ್ನು ಭೇಟಿ ಮಾಡುತ್ತಾಳೆ. ಪ್ಯಾರಿಸ್ಸಿಗೆ ಬಂದ ಹೊಸದರಲ್ಲಿ ಅಲ್ಲಿನ ಪೋಲೀಸರಿಂದ ಮತ್ತು ನಂತರ ಒಬ್ಬ ಕಳ್ಳನಿಂದ ರಾಣಿ ತೊಂದರೆಗೆ ಸಿಲುಕುತ್ತಾಳೆ. ಇದರಿಂದ ಬೇಸತ್ತು ಭಾರತಕ್ಕೆ ವಾಪಾಸ್ ಹೋಗಿಬಿಡೋಣ ಎಂದು ರಾಣಿ ಅಂದುಕೊಳ್ಳುವ ಹೊತ್ತಿಗೆ ವಿಜಯಲಕ್ಷ್ಮಿ ರಾಣಿಗೆ ಸಹಾಯ ಮಾಡುತ್ತಾಳೆ. ಇವರಿಬ್ಬರೂ ಆ ನಗರದ ಟೂರ್ ಮಾಡುತ್ತಾರೆ. ಆ ಸಂದರ್ಭದಲ್ಲಿ ವಿಜಯ್ ತನಗೆ ಕುಡಿಯೋಕೆ ಅಥವಾ ಕುಣಿಯೋಕೆ ಯಾವುದಕ್ಕೂ ಬಿಡುತ್ತಿರಲಿಲ್ಲ ಎಂದು ನೆನಪು ಮಾಡಿಕೊಳ್ಳುತ್ತಾಳೆ. ಇಲ್ಲಿ ಹೇಗೂ ಆತನಿಲ್ಲ , ಮಜಾ ಮಾಡೋಣ ಎಂದು ಖುಷಿಯಾಗಿರುತ್ತಾಳೆ. ಅಲ್ಲಿನ ಒಂದು ಮಾದಕವಾದ ಉಡುಪನ್ನು ಧರಿಸಿದ ರಾಣಿ ಆ ಬಟ್ಟೆಯೊಂದಿಗೆ ತೆಗೆದ ಸೆಲ್ಫಿಯನ್ನು ವಿಜಯಲಕ್ಷ್ಮಿಗೆ ಕಳಿಸೋ ಬದಲು ವಿಜಯ್ ಗೆ ಕಳಿಸಿಬಿಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಆಕೆಗೆ ತನ್ನ ತಪ್ಪಿನ ಅರಿವಾಗುತ್ತದೆ. ಆದರೆ ಅಷ್ಟರಲ್ಲೇ ವಿಜಯ್ ಗೆ ಮತ್ತೆ ರಾಣಿಯ ಮೇಲೆ ಆಸಕ್ತಿ ಮೂಡುತ್ತದೆ.

ಪ್ಯಾರಿಸ್ಸಿನಲ್ಲಿ ವಿಜಯಲಕ್ಷ್ಮಿಯನ್ನು ಬೀಳ್ಕೊಟ್ಟು ರಾಣಿ ಆಮ್ ಸ್ಟರ್ ಡ್ಯಾಂಗೆ ಬರುತ್ತಾಳೆ. ಆದರೆ ಅಲ್ಲಿಗೆ ಬಂದಾಗ ಅವಳ ಹೋಟೇಲ್ ರೂಮಿನಲ್ಲಿ ಮೂರು ಜನ ಗಂಡಸರಿದ್ದಾರೆ ಎಂಬ ವಿಷಯ ತಿಳಿಯುತ್ತದೆ. ಜಪಾನಿನ ಟಾಕಾ, ಫ್ರಾನ್ಸಿನ ಟಿಂ ಮತ್ತು ರಷ್ಯಾದ ಒಲೆಕ್ಸಾಂಡರ್ ಈ ಮೂವರು. ತನ್ನ ಪೂರ್ವಾಗ್ರಹದಿಂದ ಹೊರಬಂದ ರಾಣಿ ಈ ಮೂವರೊಂದಿಗೆ ಗೆಳೆತನ ಸಂಪಾದಿಸುತ್ತಾಳೆ. ಈ ಹೊಸ ಗೆಳೆಯರ ಜೊತೆ ಆಕೆಯ ಸುತ್ತಾಟ ಮುಂದುವರಿಯುತ್ತದೆ ಎಂಬಲ್ಲಿಗೆ ಕತೆ ಮುಂದೆ ಸಾಗುತ್ತದೆ.

Untitled
GenreFeature film soundtrack

ಈ ಚಿತ್ರದ ಸಂಗೀತ ಸಂಯೋಜನೆ ಮಾಡಿದವರು ಅಮಿತ್ ತ್ರಿವೇದಿ. ಇದರ ಸಾಹಿತ್ಯ ರಚನೆ ಮಾಡಿದವರು ರಫೀಕ್ ಅಹಮದ್

ಹಾಡುಗಳು
ಸಂ.ಹಾಡುಸಾಹಿತ್ಯಸಂಗೀತಗಾರ(ರು)ಸಮಯ
1."ಕಿಲಿ ಪೆಣ್ಣೆ" (Backing Vocals: ರಾಜೀವ್ ಸುಂದರೇಶನ್, ಸುಹಾಸ್ ಸಾವನ್ ಮತ್ತು ಅರುಣ್ ಹೆಚ್.ಕೆ)ರಫೀಕ್ ಅಹಮದ್ಜಸ್ಸಿ ಗಿಫ್ಟ್ ಮತ್ತು ಸಿತಾರ ಕೃಷ್ಣಕುಮಾರ್3:31
2."ಇನಿ ವಿದ ಪರಾಯಂ"ರಫೀಕ್ ಅಹಮದ್ಗೌರಿ ಲಕ್ಷ್ಮಿ ಮತ್ತು ಸತ್ಯ ಪ್ರಕಾಶ್3:53

ಉಲ್ಲೇಖಗಳು

ಬದಲಾಯಿಸಿ
  1. "Queen's Malayalam remake titled Zam Zam, Manjima Mohan to step into Kangana Ranaut's shoes". The Indian Express. 27 September 2017. Archived from the original on 12 September 2018. Retrieved 2 August 2019.
  2. "Manjima Mohan and Sunny Wayne wrap up Zam Zam's final schedule - Times of India". The Times of India. 27 July 2018. Archived from the original on 3 April 2019. Retrieved 2 August 2019.
  3. ಪ್ರಿಯಾಂಕ ತಿರುಮೂರ್ತಿಯವರ ಲೇಖನ (15 December 2017). "My favourite scene from 'Zam Zam' is when I get drunk: Manjima Mohan to TNM". The News Minute. Archived from the original on 12 September 2018. Retrieved 2 August 2019.
  4. "Thiagarajan bags rights to remake 'Queen' down south". The Hindu. 11 June 2014. Archived from the original on 3 December 2021. Retrieved 2 August 2019.