ಜೋಸೆಫ್ ಸ್ಟೀಫನ್

ಗಣಿತಜ್ಞ
ಸ್ಟೀಫನ್ ಜೋಸೆಫ್

ಜೋಸೆಫ್ ಸ್ಟೀಫನ್ ಆಸ್ಟ್ರಿಯಾ ದೇಶದ ಸುಪ್ರಸಿದ್ಧ ಭೌತವಿಜ್ಞಾನಿ. ಇವರು ಕ್ರಿ.ಶ ೧೮೩೫ ಮಾರ್ಚ್ ೨೪ರಂದು ಆಸ್ತಿಯಾದ ಕ್ಲಾಗೆನ್ ಪುರ್ಟ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇವರು ವಿಯನ್ನಾ ದಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ಶಾಲಾ ಶಿಕ್ಷಕರಾದರು. ನಂತರ ಕ್ರಿ.ಶ ೧೮೬೩ ರಲ್ಲಿ ಇವರ ಸತತ ಪರಿಶ್ರಮದ ಫಲವಾಗಿ ವಿಯನ್ನಾ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ನೇಮಕಗೊಂಡರು. []

ಸಂಶೋಧನೆ

ಬದಲಾಯಿಸಿ

ಇವರು ವಿಕಿರಣಕ್ಕೂ ನಿರಪೇಕ್ಷಣ ಉಷ್ಣತೆಗೂ ಇರುವ ಸಂಬಂಧವನ್ನು ಕಂಡುಹಿಡಿದರು. ಅಷ್ಟೇ ಅಲ್ಲದೆ ವಿಸರಣ ಮತ್ತು ಅನಿಲಗಳ ಚಲನವಾದವನ್ನು ಕುರಿತು ಸಂಶೋಧನೆ ಮಾಡಿದರು. ಜೊತೆಗೆ ಕಾಂತದ ಕುರಿತು ತಮ್ಮದೇ ಆದ ಪರಿಕಲ್ಪನೆಯನ್ನು ಮಂಡಿಸಿದರು. []

ಕಾಯಿಸಿದ ಪ್ಲಾಟಿನಂ ತಂತಿಯಿಂದ ಉಂಟಾಗುವಂತಹ ವಿಕಿರಣವನ್ನು ಪ್ರಯೋಗದಿಂದ ಅಳತೆಮಾಡಿ ವಿಕಿರಣದ ಕಾಲಬದ್ಧ ದರ ನಿರಪೇಕ್ಷ ಉಷ್ಣತೆಯ ನಾಲ್ಕನೆಯ ಘಾತದ ಪ್ರಮಾಣದಲ್ಲಿ ಇರುತ್ತದೆಂದು ಕಂಡುಹಿಡಿದರು. ಈ ಸಮೀಕರಣದಲ್ಲಿ ಬರುವಂತಹ ಪ್ರಮಾಣದ ನಿಯತಾಂಶವನ್ನು ಸ್ಟೀಫನ್ ನಿಯತಾಂಶವೆಂದು ಕರೆಯಲಾಗುತ್ತದೆ.

ಇವರು ಜನೆವರಿ ೭, ೧೮೯೩ ರಲ್ಲಿ ವಿಧಿವಶರಾದರು.

ಉಲ್ಲೇಖಗಳು

ಬದಲಾಯಿಸಿ
  1. http://www.britannica.com/EBchecked/topic/564834/Josef-Stefan
  2. http://www-history.mcs.st-andrews.ac.uk/Biographies/Stefan_Josef.html