ಜೋಯಲ್ ಗಾರ್ನರ್ (ಹುಟ್ಟಿದ್ದು ಡಿಸೆಂಬರ್ ೧೬, ೧೯೫೨ ಕ್ರೈಸ್ಟ್ ಚರ್ಚ್, ಬಾರ್ಬೆಡಾಸ್) ವೆಸ್ಟ್ ಇಂಡೀಜ್ ತಂಡದ ಒಬ್ಬ ವೇಗದ ಬೌಲರರಾಗಿದ್ದರು. ಇವರನ್ನು "ಬಿಗ್ ಜೋಯಲ್" ಅಥವಾ "ಬಿಗ್ ಬರ್ಡ್" ಎಂದು ಕರೆಯಲಾಗುತ್ತದೆ ಮತ್ತು ಇವರು ೧೯೭೦ , ೮೦ರ ವಿಶ್ವ ಪ್ರಖ್ಯಾತ ವೆಸ್ಟ್ ಇಂಡೀಸ್ ತಂಡದ ಸದಸ್ಯರು.

ಜೋಯಲ್ ಗಾರ್ನರ್
ಜೋಯಲ್ ಗಾರ್ನರ್
ಮೂಲ: [೧], 25 January 2006

೬ ft ೮ in ಎತ್ತರದ ವೇಗದ ಬೌಲರ್ ಜೋಯಲ್, ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳ ಹ್ರುದಯದಲ್ಲಿ ಭೀತಿ ಮೂಡಿಸುತ್ತಿದ್ದರು. ಜೋಯಲ್ ಗಾರ್ನರ್ರವರು ಸಹ ವೇಗದ ಬೌಲರ್ಗಳಾದ ಮೈಕಲ್ ಹೋಲ್ಡಿಂಗ್,ಆಂಡಿ ರೊಬೆರ್ಟ್ಸ್, ಕೊಲಿನ್ ಕ್ರೊಫ್ತ್ ಮತ್ತು ಮುಂದೆ ಮಾಲ್ಕಮ್ ಮಾರ್ಶಲ್ ಒಟ್ಟಿಗೆ ಆಡಿದ ಸಮಯದಲ್ಲಿ ವೆಸ್ಟ್ ಇಂಡೀಸ್ ತಂಡವು ಟೆಸ್ಟ್ ಮತ್ತು ಒಂದು ದಿನದ ಕ್ರಿಕೆಟ್ನಲ್ಲಿ ಅತ್ಯುನ್ನತ ಸಾಧನೆ ಗಳಿಸಿದ್ದು, ೧೫ ವರ್ಷಗಳಲ್ಲಿ ಒಂದು ಟೆಸ್ಟ್ ಸರಣಿಯನ್ನೂ ಸೋತಿರಲಿಲ್ಲ. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಆಡಿದ ಅತಿ ಎತ್ತರದ ಬೌಲರ್ಗಳಲ್ಲಿ ಒಬ್ಬರು.

೧೯೭೭ ರಿಂದ ೧೯೮೭ರವರೆಗೆ ಒಟ್ಟು ೫೮ ಟೆಸ್ಟ್ ಪಂದ್ಯಗಳಲ್ಲಿ ಆಡಿ, ೨೫೯ ವಿಕೆಟ್ಟುಗಳನ್ನು ಕೇವಲ ೨೦ರ ಸರಾಸರಿಯಲ್ಲಿ ಗಳಿಸಿದ್ದು, ಅಂಕಿ ಅಂಶಗಳ ಪ್ರಕಾರ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.