ಜೋಡು ನುಡಿಗಟ್ಟು
ಧೋ
ಜೋಡು ನುಡಿ: -ದ್ವಿರುಕ್ತಿಯ ಹಾಗೆಯೇ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಪ್ರಯೋಗಿಸುವುದುಂಟು. ಅವು ದ್ವಿರುಕ್ತಿಗಳ ಹಾಗೆ ಕಂಡರೂ, ದ್ವಿರುಕ್ತಿಗಳಲ್ಲ. ಅವುಗಳನ್ನು ಜೋಡು ಪದಗಳು
ಗಳೆಂದು ಕರೆಯುತ್ತಾರೆ. ಅವುಗಳಲ್ಲಿ, ಸಾಮಾನ್ಯವಾಗಿ ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.
- ಕಾಯಿಕಸರು ಬೆಳೆಯುತ್ತೇನೆ - ಇಲ್ಲಿ ಕಸರು ಪದಕ್ಕೆ ಅರ್ಥವಿಲ್ಲ.
- ದೇವರುಗೀವರ ಕಾಟ ಇದೆಯೋ? ಇಲ್ಲಿ ಗೀವರು ಪದಕ್ಕೆ ಅರ್ಥವಿಲ್ಲ.
- ಬಟ್ಟೆಬರೆಗಳನ್ನು ಕೊಂಡನು - ಇಲ್ಲಿ ಬರೆ ಪದಕ್ಕೆ ಅರ್ಥವಿಲ್ಲ.
- ಮಕ್ಕಳುಗಿಕ್ಕಳು ಇವೆಯೋ - ಇಲ್ಲಿ ಗಿಕ್ಕಳು ಪದಕ್ಕೆ ಅರ್ಥವಿಲ್ಲ.
- ಸೊಪ್ಪುಸೆದೆ ಬೆಳೆಯುತ್ತಾನೆ - ಇಲ್ಲಿ ಸೆದೆ ಪದಕ್ಕೆ ಅರ್ಥವಿಲ್ಲ.
- ಸಾಲಸೋಲ ಮಾಡಿದ್ದಾನೆ - ಇಲ್ಲಿ ಸೋಲ ಪದಕ್ಕೆ ಅರ್ಥವಿಲ್ಲ.
- ಹುಳುಹುಪ್ಪಡಿಗಳಿದ್ದಾವು - ಇಲ್ಲಿ ಹುಪ್ಪಡಿ ಪದಕ್ಕೆ ಅರ್ಥವಿಲ್ಲ.
ಮೇಲಿನ ಜೋಡು ನುಡಿಗಟ್ಟುಗಳು, ಗ್ರಂಥಗಳಲ್ಲಿ. ಮಾತುಗಳಲ್ಲಿ ಕೆಲವರಿಂದ ಪ್ರಯೋಗಿಸಲ್ಪಟ್ಟಿವೆ. ಇವು ಒಂದೇ ರೀತಿಯ ಎರಡು ಶಬ್ದಗಳ ಪ್ರಯೋಗಗಳಲ್ಲ. ಬೇರೆಬೇರೆ ರೀತಿಯ ಎರಡು ಪದಗಳು. ಎರಡನೆಯ ಶಬ್ದಕ್ಕೆ ವಾಚ್ಯಾರ್ಥವಿಲ್ಲದಿದ್ದರೂ ಮೊದಲನೆಯ ಶಬ್ದದ ಅರ್ಥಕ್ಕೆ ಪುಷ್ಟಿಯನ್ನು ಕೊಡಲು ಉಪಯೋಗಿಸುವ ಪದಗಳಾಗಿವೆ.