ಜೊವಾನಿ ಆರ್ಡುನೊ
'
ಜೊವಾನಿ ಆರ್ಡುನೊ | |
---|---|
ಜನನ | Caprino Veronese, Veneto, Italy | ೧೬ ಅಕ್ಟೋಬರ್ ೧೭೧೪
ಮರಣ | March 21, 1795 ವೆನಿಸ್,ಇಟಲಿ | (aged 80)
ರಾಷ್ಟ್ರೀಯತೆ | ಇಟಾಲಿಯನ್ |
ಕಾರ್ಯಕ್ಷೇತ್ರ | ಭೂಗರ್ಭ ಶಾಸ್ತ್ರ |
ಪ್ರಸಿದ್ಧಿಗೆ ಕಾರಣ | Italian Geology |
ಜೊವಾನಿ ಆರ್ಡುನೊ (ಒಕ್ಟೋಬರ್ 16, 1714 – ಮಾರ್ಚ್ 21, 1795) ಇಟಲಿಯ ಭೂವಿಜ್ಞಾನಿ. ಕೇಪ್ರಿನೊ ಎಂಬಲ್ಲಿ ಜನಿಸಿದ. ಉತ್ತರ ಇಟಲಿಯಲ್ಲಿ ಕಂಡುಬರುವ ಶಿಲೆಗಳ ವರ್ಗೀಕರಣಕ್ಕೆ ಈತ ಹೆಸರು ಗಳಿಸಿದ್ದಾನೆ. ಇವುಗಳಲ್ಲಿ ಪ್ರಾಥಮಿಕ ಶಿಲೆಗಳು (ಪ್ರೈಮರಿ ರಾಕ್ಸ್), ದ್ವಿತೀಯಕ ಶಿಲೆಗಳು (ಸೆಕೆಂಡರಿ ರಾಕ್ಸ್) ಮತ್ತು ತೃತೀಯಕ ಶಿಲೆಗಳು (ಟರ್ಷಿಯರಿ ರಾಕ್ಸ್) ಎಂಬುವೇ ಈತ ಮಾಡಿದ ವರ್ಗೀಕರಣ. ಅಗ್ನಿಪರ್ವತಗಳ ಬಗ್ಗೆ ಅನೇಕ ಕೃತಿಗಳನ್ನು ಈತ ರಚಿಸಿದ್ದಾನೆ.