ಜೈವಿಕನೀತಿ
ಪರಿಸರ ಮತ್ತು ಜೈವಿಕನೀತಿ ದೃಷ್ಟಿಕೋನ
ಧ್ಯೇಯ/ಉದ್ದೇಶ : ನಾವು ನಮ್ಮ ನಿರಂತರ ಶ್ರಮದಿಂದ, ನಮ್ಮ ಪರಿಸರದ ಶ್ರೇಯೋಭಿವೃದ್ಧಿಗಾಗಿ ಮಹತ್ವಾಕಾಂಕ್ಷಿ ಯೋಜನೆಗಳಿಂದ ನಮ್ಮ ಕಾಯ೯ಕ್ಷೇತ್ರದಲ್ಲಿ ಪರಿಸರ ಮತ್ತ್ತು ಜೈವಿಕನೀತಿಯನ್ನು ಸಮನ್ವಯಗೊಳಿಸುವಿಕೆ. ಮತ್ತು ವಿಶ್ವದ ಸಮಗ್ರ ಜೈವಿಕ ಸಮತೋಲನ ಅಭಿವೃದ್ಧಿಗಾಗಿ, ಪರಿಸರಪೂರಕ ವಿಧಾನಗಳ ಅಳವಡಿಕೆಯೊಂದಿಗೆ ಮಾರುಕಟ್ಟೆ ಅವಶ್ಯಕತೆಯ ಪೂರೈಕೆ.
ಮಾಗ೯ : ಧ್ಯೇಯ / ಉದ್ದೇಶ ಸಾಧನೆಗಾಗಿ
- ೧. ಸರಿಯಾದ ಸಂಪನ್ಮೂಲಗಳ ಬಳಕೆ, ಅತ್ಯುತ್ತಮ ಪದ್ಧತಿಗಳ ಆಚರಣೆಯಿಂದ ನಿರಂತರ ಶ್ರಮವಹಿಸಿ ಪರಿಸರದ ಮೇಲಿನ ದುಷ್ಪರಿಣಾಮ ನಿಯಂತ್ರಣ. ಗುರುತರವಾದ ಪರಿಸರ ಹಾನಿ ಇದ್ದಲ್ಲಿ ಅಥವಾ ಆಗುವುದಾದಲ್ಲಿ ಲಿಖಿತ ನಿವ೯ಹಣಾ ಪದ್ಧತಿಯನುಸಾರ ಉತ್ಪಾದನಾ ನಿಯಂತ್ರಣ.
- ೨. ನಮಗೆ ಅನ್ವಯವಾಗುವ ಎಲ್ಲಾ ಕಾನೂನುಗಳಿಗೆ ಬದ್ಧರಾಗಿರುವುದು ಮತ್ತು ಪರಿಸರದ ಬದ್ಧತೆಯನ್ನು ಪ್ರೋತ್ಸಾಹಿಸುವುದು.
- ೩. ನಮ್ಮಲ್ಲಿ ಬಳಸುವ ಎಲ್ಲಾ ಜೀವಕಣಗಳನ್ನು ಲಿಖಿತವಾಗಿ ಗುರುತಿಸಿ, ಅವುಗಳ ಸುರಕ್ಷಿತ ನಿವ೯ಹಣೆ, ಮಾಪ೯ಡಿಸುವಿಕೆ, ವಿಪತ್ತು ವಿಶ್ಲೇಷಣೆಯಿಂದ ಮಾನವನ ಮತ್ತು ಪರಿಸರದ ಮೇಲಿನ ಪರಿಣಾಮಗಳನ್ನು ತಡೆಯುವ ಖಾತ್ರಿಗೊಳಿಸುವಿಕೆ.
- ೪. ನಮ್ಮ ಎಲ್ಲಾ ಸಹವತಿ೯ಗಳ ಜೈವಿಕ ನೀತಿ ಮತ್ತು ಪರಿಸರ ಕಾಳಜಿಯನ್ನು ಗಮನಿಸಿ, ಪಾರದಶ೯ಕವಾಗಿ ಪ್ರತಿಕ್ರಿಯಿಸುವುದು.
- ೫. ನಮ್ಮ ಕಾಯ೯ಕ್ಷೇತ್ರದಲ್ಲಿನ ಸಮುದಾಯದೊಂದಿಗೆ ನಿಕಟ ಸಂಪಕ೯ದಲ್ಲಿರುವುದು.
- ೬. ನಮ್ಮ ಪೂರೈಕೆದಾರರ, ಗುತ್ತಿಗೆದಾರರ, ಅಧಿಕಾರಿಗಳ, ಗ್ರಾಹಕರ, ಪಾಲುದಾರರ ಮತ್ತು ಸಹವತಿ೯ಗಳ ಪರಿಸರ ಮತ್ತು ಜೈವಿಕನೀತಿಗಳಿಗೆ ಪ್ರೋತ್ಸಾಹ ಮತ್ತು ಅವರೊಂದಿಗೆ ಸಹಕಾರ.
- ೭. ಹೊಸ ಉತ್ಪನ್ನ, ಹೊಸ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು, ಮತ್ತು ಅದರಲ್ಲಿನ ಕಚ್ಚಾವಸ್ತುವಿನಿಂದ ಹಿಡಿದು ತ್ಯಾಜ್ಯ ನಿವ೯ಹಣೆ ಹಂತದವರೆಗಿನ ಪರಿಸರದ ಮೇಲಿನ ಪರಿಣಾಮ, ಜೈವಿಕನೀತಿಯ ಸಮಸ್ಯೆಗಳ ವಿಶ್ಲೇಷಣೆ ನೆಡೆಸುವುದು.
- ೮. ಪರಿಸರ ನಿವ೯ಹಣೆ ಮತ್ತು ಜೈವಿಕನೀತಿ ಸಮಸ್ಯೆಗಳನ್ನು ನಿಯಮಿತವಾಗಿ ವರದಿ ಮಾಡುವುದು.
_______________________________________________________________________________________________
ಉಲ್ಲೇಖ : NZ-30 Standard for environmental management
NZ-31 Standard for data (TBL) for external reporting
______________________________________________________________________________________________