ಜೇಮ್ಸ್ ಹ್ಯಾಡ್ಲಿ ಚೇಸ್

ಜೇಮ್ಸ್ ಹ್ಯಾಡ್ಲಿ ಚೇಸ್ (24 ಡಿಸೆಂಬರ್ 1906 - 6 ಫೆಬ್ರವರಿ 1985)  ಒಬ್ಬ ಇಂಗ್ಲಿಷ್ ಬರಹಗಾರ []. ಅವರ ಜನ್ಮನಾಮ ರೆನೆ ಲಾಡ್ಜ್ ಬ್ರಬಜ಼ೋನ್ ರೇಮಂಡ್. ಜೇಮ್ಸ್ ಹ್ಯಾಡ್ಲಿ ಚೇಸ್ ಅವರು 24 ಡಿಸೆಂಬರ್ 1906 ರಂದು ಲಂಡನ್, ಇಂಗ್ಲೆಂಡ್‌ನಲ್ಲಿ ಜನಿಸಿದರು. ಅವರು ವಸಾಹತುಶಾಹಿ ಭಾರತೀಯ ಸೇನೆಯ ಕರ್ನಲ್ ಫ್ರಾನ್ಸಿಸ್ ರೇಮಂಡ್ ಅವರ ಮಗ , (ತಂದೆ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ). ಅವರು ಅಂತರಾಷ್ಟ್ರೀಯವಾಗಿ ಅತಿ ಹೆಚ್ಚು ಮಾರಾಟವಾದ ಲೇಖಕರಲ್ಲಿ ಒಬ್ಬರಾಗಿದ್ದರು ಮತ್ತು ಇಲ್ಲಿಯವರೆಗೆ ಅವರ 50 ಪುಸ್ತಕಗಳನ್ನು ಚಲನಚಿತ್ರಗಳಾಗಿ ಪರಿವರ್ತಿಸಲಾಗಿದೆ

ಜೇಮ್ಸ್ ಹ್ಯಾಡ್ಲಿ ಚೇಸ್
ಜನನರೆನೆ ಲಾಡ್ಜ್ ಬ್ರಬಜಾನ್ ರೇಮಂಡ್
(೧೯೦೬-೧೨-೨೪)೨೪ ಡಿಸೆಂಬರ್ ೧೯೦೬
ಲಂಡನ್
ಮರಣ6 February 1985(1985-02-06) (aged 78)
ಸ್ವಿಟ್ಜ಼ರ್ಲೆಂಡ್ ಸಮಾಧಿ
ಕಾವ್ಯನಾಮರೇಮಂಡ್ ಮಾರ್ಶಲ್, ಆಂಬ್ರೋಸ್ ಗ್ರಾಂಟ್
ವೃತ್ತಿಕಾದಂಬರಿಕಾರ
ಭಾಷೆಇಂಗ್ಲೀಷ್
ರಾಷ್ಟ್ರೀಯತೆಬ್ರಿಟಿಷ್
ಪ್ರಕಾರ/ಶೈಲಿಅಪರಾಧ ತನಿಖೆ, ಪತ್ತೇದಾರಿ, ಗೂಢಚಾರಿ
ಬಾಳ ಸಂಗಾತಿಸಿಲ್ವಿಯಾ ರೇ (1932–1985)
ಮಕ್ಕಳು1

ವೈಯಕ್ತಿಕ ಹಿನ್ನೆಲೆ

ಬದಲಾಯಿಸಿ

ಅವರ ತಂದೆ ತಮ್ಮ ಮಗನಿಗೆ ವೈಜ್ಞಾನಿಕ ವೃತ್ತಿಜೀವನವನ್ನು ಸೆರಲೆಂಬ ಬಯಕೆ ಇಟ್ಟುಕೊಂಡಿದ್ದರು. ಚೇಸ್ ಅವರು ಕೆಂಟ್‌ನ ರೋಚೆಸ್ಟರ್‌ನ ಕಿಂಗ್ಸ್ ಸ್ಕೂಲ್‌ನಲ್ಲಿ ಶಿಕ್ಷಣವನ್ನು ಪಡೆದರು .ಚೇಸ್ 18 ನೇ ವಯಸ್ಸಿನಲ್ಲಿ ಮನೆ ತೊರೆದರು. 1932 ರಲ್ಲಿ, ಚೇಸ್ ಸಿಲ್ವಿಯಾ ರೇ ಅವರನ್ನು ವಿವಾಹವಾದರು ಮತ್ತು ಅವರಿಗೆ ಒಬ್ಬ ಮಗನಿದ್ದನು. 1956 ರಲ್ಲಿ, ಅವರು ಫ್ರಾನ್ಸಿಗೆ ತೆರಳಿದರು. ಅಲ್ಲಿಂದ 1969 ರಲ್ಲಿ, ಅವರು ಸ್ವಿಟ್ಜರ್ಲೆಂಡ್‌ಗೆ ತೆರಳಿದರು , ಜಿನೀವಾ ಸರೋವರದ ಕಾರ್ಸಿಯಾಕ್ಸ್ -ಸುರ್-ವೆವಿಯಲ್ಲಿ ಏಕಾಂತ ಜೀವನವನ್ನು ನಡೆಸಿದರು . 6 ಫೆಬ್ರವರಿ 1985 ರಂದು ಚೇಸ್ ಅಲ್ಲಿ ನಿಧನರಾದರು. ಜೇಮ್ಸ್ ಹ್ಯಾಡ್ಲಿ ಚೇಸ್ ಅವರು ಜೇಮ್ಸ್ ಎಲ್. ಡೊಚೆರ್ಟಿ , ರೇಮಂಡ್ ಮಾರ್ಷಲ್ , ಆರ್. ರೇಮಂಡ್ ಮತ್ತು ಆಂಬ್ರೋಸ್ ಗ್ರಾಂಟ್ ಸೇರಿದಂತೆ ಅವರ ವಿವಿಧ ಗುಪ್ತನಾಮಗಳಿಂದ ಚಿರಪರಿಚಿತರಾಗಿದ್ದರು . ಅವರು ಸಾರ್ವಕಾಲಿಕ ಪ್ರಸಿದ್ಧ ಥ್ರಿಲ್ಲರ್ ಬರಹಗಾರರಲ್ಲಿ ಒಬ್ಬರು [] . 90 ಶೀರ್ಷಿಕೆಗಳನ್ನು ಒಳಗೊಂಡಿರುವ ಚೇಸ್‌ನ ಸಂಗ್ರಹದ ಕಾರಣದಿಂದ ಅವರು ಯುರೋಪ್‌ನಲ್ಲಿ ಥ್ರಿಲ್ಲರ್ ಬರಹಗಾರರ ರಾಜ ಎಂದು ಖ್ಯಾತಿಯನ್ನು ಗಳಿಸಿದರು.[]

ವೃತ್ತಿಪರ ಹಿನ್ನೆಲೆ

ಬದಲಾಯಿಸಿ

ಮಿಲಿಟರಿ ಸೇವೆ

ಬದಲಾಯಿಸಿ

ಎರಡನೆಯ ಮಹಾಯುದ್ಧದ ಸಮಯದಲ್ಲಿ ಅವರು ರಾಯಲ್ ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಸ್ಕ್ವಾಡ್ರನ್ ಲೀಡರ್ ಶ್ರೇಣಿಯನ್ನು ಸಾಧಿಸಿದರು. ಅವರು ಡೇವಿಡ್ ಲ್ಯಾಂಗ್ಡನ್ ಅವರೊಂದಿಗೆ RAF (ರಾಯಲ್ ಏರ್ ಫೋರ್ಸ್) ಜರ್ನಲನ್ನು ಸಂಪಾದಿಸಿದರು ಮತ್ತು ಸ್ಲಿಪ್ಸ್ಟ್ರೀಮ್: ಎ ರಾಯಲ್ ಏರ್ ಫೋರ್ಸ್ ಆಂಥಾಲಜಿ ಪುಸ್ತಕದಲ್ಲಿ ಯುದ್ಧದ ನಂತರ ಹಲವಾರು ಕಥೆಗಳನ್ನು ಪ್ರಕಟಿಸಿದರು .[]

ಬರವಣಿಗೆಯ ಹಿನ್ನೆಲೆ

ಬದಲಾಯಿಸಿ

18 ನೇ ವಯಸ್ಸಿನಲ್ಲಿ ಚೇಸ್ ಮನೆಯಿಂದ ಹೊರಬಂದ ನಂತರ, ಅವರು ಪುಸ್ತಕೋದ್ಯಮದಲ್ಲಿ ಮಾರಾಟದ ಕೆಲಸ ಮಾಡಿದರು,. ಅವರು ಪುಸ್ತಕದ ಅಂಗಡಿಯಲ್ಲಿ ಕೆಲಸ ಮಾಡುವಾಗ ಮಕ್ಕಳ ವಿಶ್ವಕೋಶಗಳನ್ನು ಮಾರಾಟ ಮಾಡಿದರು. ಅವರು 90 ಕ್ಕೂ ಹೆಚ್ಚು ರಹಸ್ಯ ಪುಸ್ತಕಗಳನ್ನು ಉತ್ಪಾದಿಸುವ ಬರವಣಿಗೆಯ ವೃತ್ತಿಜೀವನಕ್ಕೆ ತಿರುಗುವ ಮೊದಲು ಪುಸ್ತಕ ಸಗಟು ವ್ಯಾಪಾರಿಗೆ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು . ಅವರ ಆಸಕ್ತಿಗಳಲ್ಲಿ ವೃತ್ತಿಪರ ಗುಣಮಟ್ಟದ ಛಾಯಾಗ್ರಹಣ, ಓದುವುದು ಮತ್ತು ಶಾಸ್ತ್ರೀಯ ಸಂಗೀತ ಮತ್ತು ಒಪೆರಾದಲ್ಲಿ ಭಾಗವಹಿಸುವುದು ಇವೆಲ್ಲವೂ ಸೇರಿದೆ. ಕಾದಂಬರಿಗಳ ನಡುವಿನ ವಿಶ್ರಾಂತಿಯ ರೂಪವಾಗಿ, ಅವರು ಹೆಚ್ಚು ಸಂಕೀರ್ಣವಾದ ಮತ್ತು ಅತ್ಯಾಧುನಿಕ ಯಂತ್ರಮಾದರಿ ವಿದೆಯ್ಯಾದ ಮೆಕ್ಕಾನೊದ ಮಾದರಿಗಳನ್ನು ಒಟ್ಟುಗೂಡಿಸಿದರು.

ವಿಶ್ವದಲ್ಲಿ ಆಗಿದ್ದ ನಿಷೇಧ ಮತ್ತು ನಂತರದ ಅಮೆರಿಕದ ಮಹಾ ಆರ್ಥಿಕ ಕುಸಿತವು (1929-39) ಎರಡನೆ ವಿಶ್ವ ಸಮರದ ಮೊದಲು ಚಿಕಾಗೋದ ಜನಪ್ರಿಯ ದರೋಡೆಕೋರ ಸಂಸ್ಕೃತಿಗೆ ಕಾರಣವಾಯಿತು. ಇದು ಚೇಸ್‌ನ ಪುಸ್ತಕ ವ್ಯಾಪಾರದ ಅನುಭವದೊಂದಿಗೆ ಸೇರಿಕೊಂಡು, ಅಪರಾಧ ಲೋಕದ ದರೋಡೆಕೋರರ ಕಥೆಗಳಿಗೆ ದೊಡ್ಡ ಬೇಡಿಕೆಯಿದೆ ಎಂದು ಅವರಿಗೆ ಮನವರಿಕೆಯಾಯಿತು. . ಜೇಮ್ಸ್ ಎಂ. ಕೇನ್ ಅವರ ಕಾದಂಬರಿ ದಿ ಪೋಸ್ಟ್‌ಮ್ಯಾನ್ ಆಲ್ವೇಸ್ ರಿಂಗ್ಸ್ ಟ್ವೈಸ್ (1934) ಅನ್ನು ಓದಿದ ನಂತರ , ಮತ್ತು ಅಮೇರಿಕನ್ ದರೋಡೆಕೋರಳಾದ ಮಾ ಬಾರ್ಕರ್ ಮತ್ತು ಅವರ ಪುತ್ರರ ವರದಿಯನ್ನೂ ಬಗ್ಗೆ ಓದಿದ ನಂತರ ತಾವೇ ಕೆಲವು ಅಮೆರಿಕನ್ ಭೂಪಟ ನಕ್ಷೆಗಳು ಮತ್ತುಆಡುಭಾಷೆಯ (ಸ್ಲಾಂಗ್) ನಿಘಂಟಿನ ಸಹಾಯದಿಂದ ಅವರು ನೋ ಆರ್ಕಿಡ್ಸ್ ಫಾರ್ ಮಿಸ್ ಬ್ಲಾಂಡಿಶ್‌ ಕಾದಂಬರಿಯನ್ನು ಬರೆದರು. ಅವರ ಬಿಡುವಿನ ವೇಳೆಯಲ್ಲಿ, ಒಟ್ಟು ಆರು ವಾರಾಂತ್ಯಗಳ ಅವಧಿಯಲ್ಲಿ ಇದು ಸಾಧ್ಯವಾಯಿತೆನ್ನುತ್ತಾರೆ, ಇನ್ನೂ ಹೆಚ್ಚಿನ ಸಮಯವಾಯಿತು ಎಂದು ಹಲವರ ನಂಬಿಕೆ.. ಈ ಪುಸ್ತಕಕ್ಕೆ ಹೆಚ್ಚಿನ ಕುಖ್ಯಾತಿ ಲಭಿಸಿತು ಮತ್ತು ಇದು ಆ ದಶಕದ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಗೆ ಸೇರಿತು.

ಚೇಸ್ ಮತ್ತು ರಾಬರ್ಟ್ ನೆಸ್ಬಿಟ್ ಅದನ್ನು ಅದೇ ಹೆಸರಿನ ರಂಗ ನಾಟಕಕ್ಕೆ ಅಳವಡಿಸಿಕೊಂಡರು , ಅದು ಲಂಡನ್‌ನ ವೆಸ್ಟ್ ಎಂಡ್‌ನಲ್ಲಿ ಉತ್ತಮ ವಿಮರ್ಶೆಗಳನ್ನು ಗಳಿಸಿತು.  1948 ರ ಇದರ ಚಲನಚಿತ್ರ ರೂಪಾಂತರವು ಹಿಂಸೆ ಮತ್ತು ಲೈಂಗಿಕತೆಯ ಚಿತ್ರಣದಿಂದಾಗಿ ವ್ಯಾಪಕವಾಗಿ ನಿಂದನೀಯವಾಗಿದೆ ಎಂದು ಖಂಡಿಸಲಾಯಿತು.  ರಾಬರ್ಟ್ ಆಲ್ಡ್ರಿಚ್ ಗ್ರಿಸ್ಸಮ್ ಗ್ಯಾಂಗ್ ಎಂಬ ಹೆಸರಿನಲ್ಲಿ 1971 ರಲ್ಲಿ ರೀಮೇಕ್ ಮಾಡಿದರು, ಇದರ ನಂತರ ಅವರ ಸಾಹಿತ್ಯ ಪಯಣ ಮುಂದುವರೆಯಿತು.

ಬರಹವೃತ್ತಿ ಜೀವನ

ಬದಲಾಯಿಸಿ

ವಿಶ್ವ ಸಮರ II ರ ಸಮಯದಲ್ಲಿ, ಚೇಸ್ ಮೆರಿಲ್ ಪಾನಿಟ್ (ತರುವಾಯ TV ಗೈಡ್ ಸಂಪಾದಕ ) ರೊಂದಿಗೆ ಸ್ನೇಹ ಬೆಳೆಸಿದರು, ಅವರು ಅವರಿಗೆ ಅಮೇರಿಕನ್ ಆಡುಭಾಷೆಯ ನಿಘಂಟು, ವಿವರವಾದ ನಕ್ಷೆಗಳು ಮತ್ತು ಅಮೇರಿಕನ್ ಭೂಗತ ಜಗತ್ತಿನ ಉಲ್ಲೇಖ ಪುಸ್ತಕಗಳನ್ನು ಒದಗಿಸಿದರು. ಇದು ಚೇಸ್‌ಗೆ ಅಮೆರಿಕನ್ ಸೆಟ್ಟಿಂಗ್‌ಗಳೊಂದಿಗೆ ಅವರ ಆರಂಭಿಕ ಪುಸ್ತಕಗಳಿಗೆ ಹಿನ್ನೆಲೆಯನ್ನು ನೀಡಿತು, ಅವುಗಳಲ್ಲಿ ಹಲವಾರು ಅಲ್ಲಿ ಸಂಭವಿಸುವ ನೈಜ ಘಟನೆಗಳನ್ನು ಆಧರಿಸಿವೆ. ಚೇಸ್ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎಂದಿಗೂ ವಾಸಿಸಲಿಲ್ಲ, ಆದರೂ ಅವರು ಅಲ್ಲಿಗೆ ಎರಡು ಸಂಕ್ಷಿಪ್ತ ಭೇಟಿಗಳನ್ನು ಮಾಡಿದರು, ಒಂದು ಮಿಯಾಮಿಗೆ ಮತ್ತು ಇನ್ನೊಂದು ಮೆಕ್ಸಿಕೊಕ್ಕೆ ಹೋಗುವ ಮಾರ್ಗದಲ್ಲಿ .

ನಂತರದ ವರ್ಷಗಳಲ್ಲಿ, ಚೇಸ್ ತನ್ನ ಬರವಣಿಗೆಯಲ್ಲಿ ಒಂದು ವಿಶಿಷ್ಟವಾದ, ಸಹಿ ಶೈಲಿಯನ್ನು ಅಭಿವೃದ್ಧಿಪಡಿಸಿದರು, ಅದು ವೇಗದ ಗತಿಯ, ಸುತ್ತಮುತ್ತಲಿನ ಘಟನೆಗಳ ಬಗ್ಗೆ ಹೇಳದೇ ಹವಾಮಾನದ ಬಗ್ಗೆ ಕಡಿಮೆ ವಿವರಣೆಗಳು ಇದ್ದು ಜೊತೆಗೆ ವಿಶ್ವಾಸಾರ್ಹವಲ್ಲದ ಪಾತ್ರಗಳು ಇರುತ್ತಿದ್ದವು [].  ಅವರ ಕಾದಂಬರಿಗಳು ಮತ್ತು ಸಣ್ಣ ಕಥೆಗಳಲ್ಲಿನ ಪಾತ್ರಗಳು ಹೆಚ್ಚು ಸುಸಂಬದ್ಧ ಮತ್ತು ಸ್ಥಿರವಾಗಿದ್ದವು ಮತ್ತು ಅವರು ವಾದಿಸಲಾಗದ ತರ್ಕದೊಂದಿಗೆ ವರ್ತಿಸುವರು ಮತ್ತು ಪ್ರತಿಕ್ರಿಯಿಸುವರು.[] ಧಾರಾಳವಾಗಿ ಸಂಭಾಷೆಣೆಯಲ್ಲಿ- ಪಂಚ್ ವಾಕ್ಯಗಳು, ಸಾಕಷ್ಟು ಆಕ್ಷನ್, ವ್ಯಂಗ್ಯ ಹಾಸ್ಯ, ಅಧಿಕೃತ ಧ್ವನಿಯ ಆಡುಭಾಷೆಯಲ್ಲಿ ಸಂಭಾಷಣೆ ಇವೆಲ್ಲ ನ್ವಾಹ್ ಶೈಲಿಯ ಹೆಗ್ಗುರುತುಗಳಾಗಿದ್ದವು [] . ಇವರು ಮತ್ತೊಬ್ಬ ಜನಪ್ರಿಯ ಅಮೆರಿಕನ್ ಪತ್ತೇದಾರಿ ಲೇಖಕ -ರೇಮಂಡ್ ಚಾಂಡಲರ್ ಎಂಬವರ ಕಥೆಯ ಶೈಲಿ ಮತ್ತು ಆ ಕಾಲದ ಸಮಾಜದ ಚಿತ್ರಣ ನೀಡಿದ್ದರಿಂದ ಬಹಳ ಪ್ರಭಾವಿತರಾಗಿದ್ದರು ಎನ್ನುತ್ತಾರೆ ವಿಮರ್ಶಕರು.

ಚೇಸ್‌ನ ಹಲವಾರು ಕಥೆಗಳಲ್ಲಿ, ನಾಯಕನು ಅಪರಾಧವನ್ನು ಮಾಡುವ ಮೂಲಕ ದಿಢೀರ್ ಶ್ರೀಮಂತನಾಗಲು ಪ್ರಯತ್ನಿಸುತ್ತಾನೆ - ವಿಮಾ ವಂಚನೆ ಅಥವಾ ಕಳ್ಳತನದ ಮೂಲಕ. ಆದರೆ ಈ ಯೋಜನೆಯು ಹೇಗಾದರೂ ವಿಫಲಗೊಳ್ಳುತ್ತದೆ ಮತ್ತು ಬಹುಶಃ ಕೊಲೆಗೆ/ಇನ್ನಷ್ಟು ಅಪರಾಧಗಳಿಗೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಅವನು ವಿಧಿಯಿಲ್ಲದೇ ಕಾನೂನಿಗೆ ಸಿಕ್ಕಿಬೀಳುತ್ತಾನೆ ಅಥವಾ ಪ್ರಾಣ ತೆರಬೆಕಾಗುತ್ತದೆ. ಹೀಗೆ ಅಪರಾಧದಿಂದ ಕೊನೆಗೆಂದೂ ಜಯವಿಲ್ಲ ಎಂಬುದನ್ನು ಅವನ ಕಥೆಗಳು ಬಹುತೇಕ ಪ್ರತಿಪಾದಿಸುತ್ತವೆ.

ಅವರ ಎಲ್ಲಾ ಕಾದಂಬರಿಗಳು ಎಷ್ಟು ವೇಗದ ಗತಿಯಲ್ಲಿದ್ದವು ಎಂದರೆ ಓದುಗರು ಪುಸ್ತಕದ ಅಂತ್ಯವನ್ನು ತಲುಪಲು ಕಾತರದಿಂದ ಓದಲು ಪುಟಗಳನ್ನು ತಿರುಗಿಸಬೇಕಾಯಿತು.. ಅಂತಿಮ ಪುಟವು ಸಂಪೂರ್ಣವಾಗಿ ಅನಿರೀಕ್ಷಿತವಾದ ಕಥಾವಸ್ತುವಿನ ಟ್ವಿಸ್ಟ್ (ತಿರುವು) ಅನ್ನು ಹೊಂದಿರುತ್ತದೆ. ಅದು ಅವರ ಅತ್ಯಂತ ಕಟ್ಟಾ ಅಭಿಮಾನಿಗಳನ್ನು ಸಹ ಆಶ್ಚರ್ಯಗೊಳಿಸುತ್ತಿದ್ದವು.. ಅವರ ಆರಂಭಿಕ ಕೆಲವು ಪುಸ್ತಕಗಳು ಅವರು ಬರೆಯಲ್ಪಟ್ಟ ಆ ಕಾಲಘಟ್ಟಕ್ಕೆ ಹೊಂದಿಕೆಯಾಗುವ ಕೆಲವು ಹಿಂಸಾಚಾರವನ್ನು ಒಳಗೊಂಡಿವೆ, ಆದರೆ ಅನಂತರದ ಕೃತಿಗಳು ಹೆಚ್ಚಿನ ಮಟ್ಟದ ಉದ್ವೇಗವನ್ನು ಸೃಷ್ಟಿಸಲು ಸಾಂದರ್ಭಿಕ ಸನ್ನಿವೇಶಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುವುದರಿಂದ ಇದು ಗಣನೀಯವಾಗಿ ಕಡಿಮೆಯಾಗುತ್ತಾ ಬಂದವು. ಲೈಂಗಿಕತೆ ಮತ್ತು ಶೃಂಗಾರ ಸನ್ನಿವೇಶಗಳು ಆ ಕಥಾವಸ್ತುವಿಗೆ ಅನಿವಾರ್ಯವಾದರೂ ಎಂದಿಗೂ ಅತಿಯಾಗಿಲ್ಲ ಮತ್ತು ಅವನ್ನು ತೀರ ಅಸಹ್ಯವಾಗದಂತೆ ಚೇಸ್ ನಿಯಂತ್ರಿಸಿದ್ದರು.

ಅವರ ಅನೇಕ ಕಾದಂಬರಿಗಳಲ್ಲಿ, ವಿಶ್ವಾಸಘಾತುಕ ಮಹಿಳೆಯರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಸುಂದರಿ ನಾಯಕಿ ಒಬ್ಬಳನ್ನು ನಾಯಕ ಪ್ರೀತಿಸುತ್ತಾನೆ ಮತ್ತು ಅವಳ ಆಜ್ಞೆಯ ಮೇರೆಗೆ ಯಾರನ್ನಾದರೂ ಕೊಲ್ಲಲು ಸಿದ್ಧನಾಗುತ್ತಾನೆ. ಆದರೆ ಅವನು ಕೊಂದಾಗ ಮಾತ್ರ, ಆ ಮಹಿಳೆ ತನ್ನ ಸ್ವಂತ ಉದ್ದೇಶಗಳಿಗಾಗಿ ಅವನನ್ನು ಕುಶಲತೆಯಿಂದ ಮೋಸ ಮಾಡಿ ಸಿಕ್ಕಿಹಾಕಿಸಿ ದ್ರೋಹ ಮಾಡುತ್ತಾಳೆ. ಇದನ್ನು ತಡವಾಗಿ ನಾಯಕ ಕೊನೆಯಲ್ಲಿ ಅರಿತುಕೊಳ್ಳುತ್ತಾನೆ. ಆಗ ಕಥೆ ದುಃಖಾಂತ್ಯವೇ ಆಗುತ್ತದೆ.

ಚಲನಚಿತ್ರಗಳು

ಬದಲಾಯಿಸಿ

ನೋ ಆರ್ಕಿಡ್ಸ್ ಫಾರ್ ಮಿಸ್ ಬ್ಲಾಂಡಿಷ್ ಕಾದಂಬರಿಯಾಧರಿತ ಚಿತ್ರವನ್ನು ಎರಡು ಸಲ 1948 ಮತ್ತು 1971 ನಲ್ಲಿ ನಿರ್ಮಿಸಿದರು ದಿ ವೇರ್ ಟ್ರಾನ್ಸ್ಗ್ರೆಸ್ಸರ್ ಕಾದಂಬರಿ ಆಧರಿತ ಚಿತ್ರ ದಿ ನೈಟ್ ಆಫ್ ದಿ ಜೆನೆರಲ್ಸ್ (1952) ಈವ್ ಕಾದಂಬರಿ ಆಧರಿತ ಚಿತ್ರ (1962) ಸಹಾ ಚೇಸ್ ಬರೆದ ಹಲವಾರು ಕೃತಿಗಳ ಚಲನಚಿತ್ರಗಳಲ್ಲಿ ಸೇರಿವೆ. ಇನ್ನೂ ಹೆಚ್ಚಿನ ಸಂಖ್ಯೆಯ ಚಿತ್ರಗಳು ಇವರ ಹೆಸರಿನ ಉಲ್ಲೇಖವಿಲ್ಲದೆಯೇ ಹಲವಾರು ಭಾಷೆಗಳಲ್ಲಿ ಚಿತ್ರಗಳಾಗಿ ಬಂದು ಹೋಗಿವೆ

ಕೃತಿಗಳು

ಬದಲಾಯಿಸಿ

ಜೇಮ್ಸ್ ಹ್ಯಾಡ್ಲಿ ಚೇಸ್

ಬದಲಾಯಿಸಿ
Year
published
Title Central character(s) Film adaptations
1939 No Orchids for Miss Blandish
also The Villain and the Virgin
Dave Fenner
Slim Grisson
Miss Blandish
No Orchids for Miss Blandish (1948)
The Grissom Gang (1971)
1940 The Dead Stay Dumb Dillon
Roxy
Myra
1941 Twelve Chinks and a Woman
also Twelve Chinamen and a Woman
also The Doll's Bad News
Dave Fenner
Glorie Leadler
1941 Miss Callaghan Comes to Grief Jay Ellinger
Raven
Méfiez-vous fillettes (1957)
1942 Get a Load of This (short story collection)
1944 Miss Shumway Waves a Wand Ross Millan
Myra Shumway
Une blonde comme ça (1962)
Rough Magic (1995)
1945 Eve Clive Thurston
Eve

Carol

Eva (1962)
Eva (2018)
1946 I'll Get You for This Chester Cain

Miss Wonderly,

Killeano, Fleggerty||I'll Get You for This (1951)

1947 Last Page (play) The Last Page (1952)
1948 The Flesh of the Orchid (novel) Carol Blandish
The Sullivan Brothers
La Chair de l'orchidée (1975)
1949 You Never Know with Women Floyd Jackson
1949 You're Lonely When You're Dead Vic Malloy
Paula Bensinger
Jack Kerman
1950 Figure It Out for Yourself
also The Marijuana Mob
Vic Malloy
Paula Bensinger
Jack Kerman
1950 Lay Her Among the Lilies
ASIN B001GD0R8K
Vic Malloy
Paula Bensinger
Jack Kerman
Die Katze im Sack (de)}} (1965)
1951 Strictly for Cash Johnny Farrar

Della

1952 The Fast Buck
also The Soft Touch
Verne Baird
Rico
Ed Dallas
1952 Double Shuffle Steve Harmas

Hellen Harmas Maddux ||

1953 I'll Bury My Dead Nick English

Morilli

1953 This Way for a Shroud Paul Conard
Vito Ferrari
1954 Tiger By the Tail Ken Holland
Lieutenant Harry Adams
The Man in the Raincoat (1957)
Kashmakash (1973)
Akalmand (1984)
88 Antop Hill (1984) []
1954 Safer Dead
also Dead Ringer
Chet Sladen
1955 You've Got It Coming Harry Griffin Он своё получит (On svoyo poluchit) (Russian, 1992)
1956 There's Always a Price Tag Glyn Nash, Steve Harmas Retour de manivelle (1957)
Maharathi (2008)
1957 The Guilty Are Afraid Lew Brandon
1958 Not Safe to Be Free
also The Case of the Strangled Starlet
Jay Delaney Le Démoniaque (1968)
1959 Shock Treatment Steve Harmas, Terry Regan Ek Nari Do Roop (1973), Joshila (1973)
1959 The World in My Pocket Morgan World in My Pocket (1961)
Мираж (Mirazh) (ru)}} (1983)
1960 What's Better Than Money Jefferson Halliday
1960 Come Easy – Go Easy Chet Carson Chair de poule (1963)
1961 A Lotus for Miss Quon Steve Jaffe Lotus Flowers for Miss Quon (1967)
1961 Just Another Sucker Harry Barber, John Renick Dans la gueule du loup (1961)

Bullet (1976)
Palmetto (1998)

1962 I Would Rather Stay Poor Dave Calvin The Catamount Killing (fr)}} (1974)
1962 A Coffin from Hong Kong Nelson Ryan Coffin from Hong Kong (1964)
1963 One Bright Summer Morning Crime on a Summer Morning (1965)
36 Ghante (1974)
1963 Tell It to the Birds Steve Harmas, John Anson, Maddox
1964 The Soft Centre Frank Terrell
Valiere Burnette
1965 This Is for Real Mark Girland
1965 The Way the Cookie Crumbles Frank Terrell

Ticky Edris Phil Algir||Trop petit mon ami (fr) (1970)

1966 You Have Yourself a Deal Mark Girland The Blonde from Peking (1968)
1966 Cade Val Cade
1967 Have This One on Me Mark Girland
1967 Well Now – My Pretty Frank Terrell Казино (Casino) (Russian, 1992)[]
1968 An Ear to the Ground Steve Harmas, Al Barney
1968 Believed Violent Frank Terrell, Jay Delaney Présumé dangereux (1990)
1969 The Whiff of Money Mark Girland
1969 The Vulture Is a Patient Bird Max Kahlenberg Shalimar (1978)
1970 Like a Hole in the Head Jay Benson Снайпер (Snayper) (ru)}} (Russian, 1991)
1970 There's a Hippie on the Highway Frank Terrell, Harry Mitchell Бухта смерти (Bukhta smerti) (ru)}} (Russian, 1991)
1971 Want to Stay Alive? Poke Toholo Le Denier du colt (1990)
1971 An Ace Up My Sleeve Helga Rolfe Crime and Passion (1976)
1972 Just a Matter of Time Chris Patterson
Sheila Oldhill
Miss Morely-Johnson
Pas folle la guêpe (fr) (1972)
1972 You're Dead Without Money Al Barney
1973 Have a Change of Scene Larry Carr
1973 Knock, Knock! Who's There? Johnny Bianda
1974 So What Happens To Me? Jack Crane
1974 Goldfish Have No Hiding Place Steve Manson
1975 Believe This – You'll Believe Anything Clay Burden
1975 The Joker in the Pack Helga Rolfe
1976 Do Me a Favour, Drop Dead Keith Devery
1977 My Laugh Comes Last Larry Lucas The Set-Up (1995)
1977 I Hold the Four Aces Helga Rolfe
1978 Consider Yourself Dead Mike Frost
1979 You Must Be Kidding Ken Brandon
Tom Lepski
Paradise City Police Force
1979 A Can of Worms Bart Anderson
1980 You Can Say That Again Jerry Stevens
1980 Try This One for Size Paradise City Police Force Try This One for Size (1989)
1980 Hand Me a Fig Leaf Dirk Wallace
1982 Have a Nice Night Passez une bonne nuit (1990)
1982 We'll Share a Double Funeral Perry Weston
Chet Logan
1983 Not My Thing Ernie Kling
1984 Hit Them Where It Hurts Dirk Wallace

ರೇಯ್ಮಂಡ್ ಮಾರ್ಶಲ್

ಬದಲಾಯಿಸಿ
Year
published
Title Central character(s) Film adaptations
1940 Lady, Here's Your Wreath Nick Mason Mem Saab (1971)[೧೦]
1944 Just The Way It Is Harry Duke
1945 Blonde's Requiem Mack Spewack
1947 Make The Corpse Walk Rollo

Susan Putch ||

1947 No Business of Mine Steve Harmas
1948 Trusted Like the Fox
also Ruthless
Edwin Cushman
Grace Clark
Richard Crane
1949 The Paw in the Bottle Julie Holland
Harry Gleb
1950 Mallory Martin Corridon
1951 But a Short Time to Live
also The Pick-up
Harry Ricks
Clair Dolan
A Little Virtuous (1968)
1951 Why Pick on Me? Martin Corridon
1951 In A Vain Shadow Frank Mitchell
1952 The Wary Transgressor David Chisholm
1953 The Things Men Do Harry Collins ಟೆಂಪ್ಲೇಟು:Interlanguage link multi (1959)
1954 The Sucker Punch Chad Winters

Vestal Shelley Lt. Leggit||A Kiss for a Killer (1957); Aar Ya Paar (Hindi 1997)

1954 Mission To Venice Don Micklem Mission to Venice (1964)
1955 Mission To Siena Don Micklem Waiting Room to the Beyond (1964)
1956 You Find Him, I'll Fix Him Ed Dawson ಟೆಂಪ್ಲೇಟು:Interlanguage link multi (1960)
1958 Hit And Run Chester Scott ಟೆಂಪ್ಲೇಟು:Interlanguage link multi (1959)
Rigged (1985)
  • He Wont Need It Now (as James L. Docherty, 1941)
  • Slipstream: A Royal Air Force Anthology (as R. Raymond, 1946)
  • More Deadly Than the Male (as Ambrose Grant, 1947)

ಉಲ್ಲೇಖಗಳು

ಬದಲಾಯಿಸಿ
  1. Obituary Variety 13 February 1985
  2. Frank Northen Magill (1988). Critical survey of mystery and detective fiction. Salem Press. p. 319. ISBN 0-89356-486-9.
  3. Publishers' Association, Booksellers Association of Great Britain and Ireland (1982). The Bookseller. J. Whitaker. p. 46.
  4. "Biography".
  5. "The Sunday Tribune - Books". www.tribuneindia.com. Retrieved 2022-02-14.
  6. "Invisible Ink: No 126 - James Hadley Chase". The Independent (in ಇಂಗ್ಲಿಷ್). 2012-06-02. Retrieved 2022-02-14.
  7. Ulrike Tabbert, & Juhani Rudanko (26 Apr 2021). "Aspects of Characterisation in James Hadley Chase's Crime Fiction: Multiple Perspectives". English Studies. 102 (3): 362–383. doi:10.1080/0013838X.2021.1911106. S2CID 235219055 – via https://www.tandfonline.com/. {{cite journal}}: External link in |via= (help)
  8. https://twitter.com/IWTKQuiz/status/1594553669260713986 ಟೆಂಪ್ಲೇಟು:Bare URL inline
  9. "Kazino (1992) - IMDb". IMDb.
  10. https://twitter.com/IWTKQuiz/status/1594553669260713986 ಟೆಂಪ್ಲೇಟು:Bare URL inline


.