ಜೇನುಪೆಟ್ಟಿಗೆ

Eco Bee Box Winter Hive.png
Bee boxes at an organic farm.jpg
BeeSmoking.JPG

ಜೇನುಪೆಟ್ಟಿಗೆಸಂಪಾದಿಸಿ

ಜೇನು ಪೆಟ್ಟಿಗೆಗಳಲ್ಲಿ ಒಂದೇ ಅಳತೆ ಹೊಂದಿರುವ ಚೌಕಟ್ಟುಗಳನ್ನು ಇರಿಸುವುದು ತೀರಾ ಅಗತ್ಯ.. ಇದರಿಂದ ಹಲವು ಉಪಯೋಗಗಳು ದೊರೆಯುತ್ತವೆ. ಜೇನು ಕುಟುಂಬವನ್ನು ವಿಭಾಗಿಸುವಾಗ, ಜೇನುತುಪ್ಪ ತೆಗೆಯುವಾಗ, ನಿರ್ಹವಣೆಯ ವಿವಿಧ ಹಂತಗಳಲ್ಲಿ, ಎರಿಗಳನ್ನು ಎರವಲು ನೀಡಲು ಮತ್ತು ಸ್ಥಳಾಂತರ ಜೇನು ಕೃಷಿ ನೆಡಸಲು ಸಹ ಪೂರಕವಾಗುವುದು. ಭಾರತದಲ್ಲಿ ಆಚರಣೆಗೆ ತಂದಿರುವ ಐ.ಎಸ್.ಐ."ಎ" ಮತ್ತು"ಬಿ" ಮಾದರಿ ಜೇನು ಪೆಟ್ಟಿಗೆಗಳಲ್ಲಿ ಭಾರತೀಯ ತುಡುವೆ ಜೇನು ಕುಟುಂಬಗಳನ್ನು ಸುಲಭವಾಗಿ ಪಾಲನೆ ಮಾಡಬಹುದು. ಹಾಗೂ ವನ್ಯಜೇನು ಕುಟುಂಬಗಳನ್ನು ಪೊಟರೆ/ಹುತ್ತಗಳಲ್ಲಿರುವ ತುಡುವೆ ಕುಟುಂಬಗಳನ್ನು ಸೇರಿಸಿ ಆ ಪೆಟ್ಟಿಗೆಯಲ್ಲೇ ನೆಲೆಸುವಂತೆ ನೋಡಿಕೊಳ್ಳಲು ಸುಲಭ. ಈ ಪೆಟ್ಟಿಗೆಗಳಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳಿವೆ. ಅವೆಂದರೆ ೧)ಅಡಿಮಣೆ, ೨)ಸಂಸಾರ ಕೋಣೆ, ೩)ಜೇನು ಕೋಣೆ, ೪)ಮೇಲ್ಮುಚ್ಚಳ ಹೀಗೆ ನಾಲ್ಕು ಭಾಗಗಳಲ್ಲದೆ ಈ ನಾಲ್ಕು ಭಾಗಗಳ ಉಪ ಭಾಗಗಳೂ ಸಹ ಇವೆ. ಉದಾ: ಅಡಿಮಣೆಯಲ್ಲಿ ಮುಖದ್ವಾರ ಪಟ್ಟಿ ಇದಕ್ಕೆ ಹೊಂದಿಸಲು ಬರುವಂತೆ ರಾಣಿ ತಡೆ ದ್ವಾರವಿರಿಸಬಹುದು.

ಅಡಿಮಣೆ:ಸಂಪಾದಿಸಿ

ಅಡಿಮಣೆಯು ಒಂದೇ ಹಲಗೆಯಿಂದ ಮಾಡಲ್ಪಟ್ಟಿರುತ್ತದೆ. ಒಂದೇ ಹಲಗೆ ಯಿಂದ ಅಡಿಮಣೆ ಮಾದುವುದರಿಂದ ಜೇನುಕುಟುಂಭದ ಪ್ರಥಮ ಶತ್ರುವಾದ ಮೇಣದ ಚಿಟ್ಟೆಯ ಹಾವಳಿಯನ್ನು ತಡೆಗಟ್ಟಲು ಪೂರಕವಾಗುವುದು. ಏಕೆಂದರೆ ಹಲವು ಹಲಗೆಗಳನ್ನು ಬಳಸಿದಾಗ ಅವುಗಳ ಜೋಡಣೆಯಲ್ಲಿ ಉಂಟಾಗುವ ಬಿರುಕುಗಳಲ್ಲಿ ಮೇಣದ ಚಿಟ್ಟೆಯು ಮೊಟ್ಟೆ ಇರಿಸಿ ಅದರ ಮರಿಗಳು ಹೆಚ್ಚು ಸಂಖ್ಯೆಯಲ್ಲಿ ಬೆಳೆಯಲು ಕಾರಣವಾಗುವುದು. ಅಡಿಮಣೆಯು ಮುಂಭಾಗದಲ್ಲಿ ಇಳಿಜಾರಾಗಿರುವುದರಿಂದ ಜೇನುನೊಣಗಳು ಆಹಾರದ ಹೊರೆಯನ್ನು ಹೊತ್ತು ಹೊತ್ತು ಹಾರಿಬರುವ ನೊಣಗಳು ಸಲೀಸಾಗಿ ಒಳಸೇರಲು ನೆರವಾಗುವುದು, ಮತ್ತು ಮಳೆ ನೀರು ಜಾರಿ ಹೋಗಲು ಪೂರಕ. ಇದಲ್ಲದೇ ಈ ಮಣೆಯ ತಳಭಾಗ ಮತ್ತು ಮೇಲುಭಾಗವೂ ಸಹ ಬಳಸಲು ಬರುವಂತಹ ರಚನೆಯಲ್ಲಿರುತ್ತದೆ. ಅಡಿಮಣೆಯಲ್ಲಿ ಮುಖದ್ವಾರ ಪಟ್ಟಿಯನ್ನು ಜೋಡಿಸಿಡಬಹುದು. ಈ ಪಟ್ಟಿಯನ್ನು ಜೋಡಿಸಿದಾಗ ಪಟ್ಟಿಯಲ್ಲಿರುವ ಎರಡು‍ ಗರ್ಜು ಗಳಲ್ಲಿ ಯಾವುದನ್ನು ಚುನಾಯಿಸಿ ಇರಿಸುತ್ತೇವೊ ಅದರಲ್ಲಿಂದ ಮಾತ್ರ ನೊಣಗಳು ಒಳಸೇರಬಹುದು. ಮುಖ ದ್ವಾರ ಪಟ್ಟಿಯನ್ನು ಬೇಸಿಗೆ ಕಾಲದಲ್ಲಿತೆಗೆದಿರಿಸಿ ನೊಣಗಳು ಮುಕ್ತವಾಗಿ ಸಂಸಾರ ಕೋಣೆಯ ಒಳಗೆ ಸೇರುವಂತೆಯೂ ಮಾಡಬಹುದು. ಮಳೆ ಮತ್ತು ಛಳಿಗಾಲದಲ್ಲಿ ಚಿಕ್ಕ ಗರ್ಜು ಇರುವ ಭಾಗವನ್ನು ಬಳಸಿ ವಾತಾಯನ ಹಾಗೂ ಶತ್ರುಕೀಟಗಳ ನಿಯಂತ್ರಣಗೊಳಿಸಬಹುದು. ರಾಣಿತಡೆ ಗೇಟನ್ನು ಇದಕ್ಕೆ ಹೊಂದಿಸಿ ಇರಿಸಿ ಹೊಸಕುಟುಂಭಗಳು ಪರಾರಿಯಾಗುವುದನ್ನು ಕೆಲಮಟ್ಟಿಗೆ ತಡೆಯಬಹುದು. ಈ ಅಡಿಮಣೆಯನ್ನು ಆಗಿಂದಾಗ್ಯೆ ಶುಚಿಮಾಡಿ ಇರಿಸುವುದು ಅಸ್ಟೇ ಅಗತ್ಯ..

ಸಂಸಾರ ಕೋಣೆ:ಸಂಪಾದಿಸಿ

ಅಡಿಮಣೆಯ ಮೇಲೆ ಸಂಸಾರ ಕೋಣೆಯನ್ನು ಇರಿಸಬಹುದು. ಸಂಸಾರ ಕೋಣೆಯಲ್ಲಿ ಸುಮಾರಾಗಿ ಚೌಕಾಕಾರ ಹೋಲುವಂತಹ ಚಲಿಸುವ ಅಂದರೆ ತೆಗೆದು ಪುನಃ ಇರಿಸಲು ಬರುವ ಮತ್ತು ೭ಮಿ.ಮೀ. ನಿರ್ದಿಷ್ಟ ಅಂತರದಲ್ಲಿ ನೊಣಗಳ ದಾರಿಯೊಂದಿಗೆ ೮ ಚೌಕಟ್ಟುಗಳಿವೆ. (ಐ.ಎಸ್.ಐ-ಏ.ಮಾದರಿಯಲ್ಲಿ). ಈಚವ್ಕಟ್ಟುಗಳಲ್ಲಿ ಅದರ ಮಧ್ಯದಲ್ಲಿ ನೇರವಾಗಿ ನೊಣಗಳು ಎರಿ ರಚಿಸಲು ಸುಲಭವಾಗುವಂತೆ ರಚನೆ ಇರುವುದು. ಇದರಲ್ಲಿ ಮೇಣದ ತಳಹದಿಗಳನ್ನೂ ಮಾರ್ಗರ್ಶಿಯಾಗಿ ಅಂಟಿಸಿ ಕೊಡಬಹುದು. ಇದರಿಂದ ನೊಣಗಳಿಗೆ ಎರಿಯನ್ನು ನೇರವಾಗಿ ಮತ್ತು ಶೀಘ್ರವಾಗಿ ನಿರ್ಮಿಸಲು ನೆರವಾಗುವುದು. ಈರೀತಿ ರಚಿಸಿದ ಎರಿಗಳು ಚೌಕಟ್ಟುಳಿಂದ ಕಳಚಿ ಬೀಳದಂತೆ ಭದ್ರವಾಗಿರಲು ತಂತಿಯನ್ನೂ ಜೋಡಿಸಬಹುದು.ಇದರಲ್ಲಿಯೇ ಒತ್ತರಿಸುವ ಹಲಗೆಯನ್ನು ಬಲ ಹೀನ ಕುಟುಂಬಗಳಿಗಾಗಿ ಅಳವಡಿಸಲು ಸಾಧ್ಯವಾಗುವುದು, ಈ ಮೊದಲು ಒಂದು ಚೌಕಟ್ಟನ್ನು ಹೊರ ತೆಗೆದು ನಂತರವಷ್ಟೇ ಒತ್ತರಿಸುವ ಹಲಗೆಯನ್ನು ಇರಿಸಬೇಕಾಗುವುದು. ಈ ಕೋಣೆಯಲ್ಲಿರುವ ಎರಿಗಳಲ್ಲಿ ರಾಣಿನೊಣವು ಮೊಟ್ಟೆ ಇರಿಸುವುದು ಮತ್ತು ಜೇನು ಸಂಸಾರ ಅಭಿವೃದ್ಧಿಯಾಗುವುದು. ಆದುದರಿಂದಲೇ ಇದಕ್ಕೆ ಸಂಸಾರ ಕೋಣೆ ಎನ್ನಲಾಗಿದೆ.

ಜೇನು ಕೋಣೆ:ಸಂಪಾದಿಸಿ

ಸಂಸಾರ ಕೋಣೆಯ ಮೇಲೆ ಜೇನು ಕೋಣೆಯನ್ನು ಇರಿಸಬಹುದು. ಜೇನು ಕೋಣೆಯು ಸಹ ೮ ಚೌಕಟ್ಟುಗಳನ್ನು ಹೊಂದಿರುತ್ತದೆ. ಈ ಕೋಣೆಯಲ್ಲೂ ಸಹ ೭ಮಿ.ಮೀ. ಅಂತರದಲ್ಲಿರುವಂತೆ ಚೌಕಟ್ಟುಗಳಿರುತ್ತವೆ. ಜೇನು ಕೋಣೆಯು ಎತ್ತರದಲ್ಲಿ, ಸಂಸಾರ ಕೋಣೆಯ ಸುಮಾರು ಅರ್ಧದಷ್ಟು ಇರವುದು. ಈ ಕೋಣೆಯೊಳಗಿನ ೮ ಚೌಕಟ್ಟುಗಳಿಗೂ ಪ್ರತಿಯೊಂದರ ಒಳಗೆ ಮೇಣದ ತಳಹದಿಯನ್ನು ಪೂರ್ಣವಾಗಿ ಕೊಡುತ್ತಾರೆ. (ಕರಗಿದ ಮೇಣದಿಂದ ಚೌಕಟ್ಟಿಗೆ ಅಂಟಿಸಿ ಜೋಡಿಸುತ್ತಾರೆ)

ಜೇನು ಕೋಣೆ-೨:ಸಂಪಾದಿಸಿ

ಕೆಲವೊಮ್ಮೆ ಒಂದು ಜೇನುಕೋಣೆಯ ಮೇಲೆ ಇನ್ನೊಂದು ಅಥವಾ ಹೆಚ್ಚು ಜೇನು ಕೋಣೆ ಜೋಡಿಸಬೇಕಾಗಬಹುದು. ಜೇನು ಕೋಣೆಯಲ್ಲಿ ಜೇನು ನೊಣಗಳು ದಿನವಹಿ ದುಡಿದು ಸಂಪಾದಿಸಿ ದೊರೆತ ಆಹಾರವನ್ನು ಉಪಯೋಗಿಸಿದ ನಂತರ ಮಿಕ್ಕುಳಿದ ಆಹಾರವನ್ನು ದಾಸ್ತಾನು ಮಾಡಿ ಕಾಪಿಡುತ್ತವೆ. ಆದುದರಿಂದಲೇ ಈ ಭಾಗವನ್ನು ಜೇನುಕೋಣೆ ಎನ್ನಲಾಗಿದೆ.

ಒಳಮುಚ್ಚಳ:ಸಂಪಾದಿಸಿ

ಜೇನು ಕೋಣೆಯ ಮೇಲೆ/ ಸಂಸಾರ ಕೋಣೆಯ ಮೇಲೆ ಅಗತ್ಯವಿದ್ದರೆ ಒಳಮುಚ್ಚಳ ಇರಿಸಬಹುದು. ಇದು ನೊಣಗಳಿಗೆ ಗೂಡಿನೊಳಗಿನ ಶಾಖ ಕಾಪಾಡಿಕೊಳ್ಳಲು ನೆರವಾಗುವುದು. ಅನೇಕರು ಈ ಒಳಮುಚ್ಚಳವನ್ನು ಬಳಸದೇ ಜೇನು ಕೋಣೆಯ ಮೇಲೆ/ಸಂಸಾರ ಕೋಣೆಯ ಮೇಲೆ ನೇರವಾಗಿ ಮೇಲುಮುಚ್ಚಳವನ್ನು ಇರಿಸುತ್ತಾರೆ.

ಮೇಲು ಮುಚ್ಚಳ:ಸಂಪಾದಿಸಿ

ಮೇಲು ಮುಚ್ಚಳವು ಗೂಡಿನೊಳಗೆ ಹೆಚ್ಚು ಗಾಳಿ ಬೆಳಕು ಮತ್ತು ನೀರು ಹೋಗದಂತೆ ಮಾಡುವುದು. ಇದರಲ್ಲಿ ಮುಂಭಾಗ ಹೊರತುಪಡಿಸಿ ಉಳಿದ ಮೂರೂ ಭಾಗದಲ್ಲಿ ಸುಮಾರು ಒಂದು ಇಂಚು ವ್ಯಾಸದ ರಂಧ್ರ ಮಾಡಿ ತಂತಿಬಲೆ ಜೋಡಿಸಿರುತ್ತಾರೆ. ಆದುದರಿಂದ ನೊಣಗಳು ಈ ರಂಧ್ರದಿಂದ ಹೊರ ಬರಲಾರವು. ಆದರೆ ವಾತಾಯನದ ವ್ಯವಸ್ಥೆ ದೊರಕುವುದು.ಅತಿ ಹೆಚ್ಚು ಉಷ್ಣತೆ ಇರುವಾಗ ವಾತಾಯನ ಕೋಣೆ ಗವಾಕ್ಷ/ ವೆಂಟಿಲೇಟರ್ ಜೇನು ಕೋಣೆಯ ಮೇಲೆ ಹೆಚ್ಚುವರಿಯಾಗಿ ಕೊಡುವುದೂ ಇರುತ್ತದೆ. ಅಡಿಮಣೆ, ಅದರ ಮೇಲೆ ಸಂಸಾರ ಕೋಣೆ, ಸಂಸಾರ ಕೋಣೆಯ ಮೇಲೆ ಜೇನು ಕೋಣೆ ಕೊನೆಯದಾಗಿ ಮೇಲುಮುಚ್ಚಳ ಹೀಗೆ ಈ ನಾಲ್ಕು ಭಾಗಗಳನ್ನು ಒಂದರ ಮೇಲೆ ಇನ್ನೊಂದರಂತೆ ಇರಿಸಬಹುದು. ಮತ್ತು ಬೇಕೆಂದಾಗ ಪ್ರತ್ಯೇಕಿಸಬಹುದು. ಅಡಿಮಣೆಯ ಮೇಲೆ ಸಂಸಾರ ಕೋಣೆಯನ್ನು ನೇರವಾಗಿ ಇರಿಸುವ ಬದಲು ಜಾರಿಸಿ ಇರಿಸಬಹುದು. ಅದೇ ರೀತಿಯಲ್ಲಿ ಸಂಸಾರ ಕೋಣೆಯ ಮೇಲೆ ಜೇನು ಕೋಣೆಯನ್ನು ಸಹ ಜಾರಿಸಿ ಇರಿಸುವುದು ಕ್ಷೇಮ. ಹೀಗೆ ಮಾಡಿದಾಗ ನೊಣಗಳು ಜಜ್ಜಿ ಸಾಯುವುದನ್ನು ತಡೆಯಬಹುದು. ಅಹಿಂಸಾ ಕ್ರಮಕ್ಕೆ ಇದು ಪೂರಕವಾಗುವುದು. ಜೇನು ಪೆಟ್ಟಿಗೆ ಹಾಗು ಚೌಕಟ್ಟುಗಳ ಅಳತೆಗೆ ಐ.ಎಸ್.ಐ.ಮಾನದಂಡವನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಚನ್ನಾಗಿ ಒಣಗಿದ ಗಟ್ಟಿ ಜಾತಿಯ ಮರದಿಂದ ತಯಾರಿಸಲಾದ ಜೇನು ಪೆಟ್ಟಿಗೆಗಳಿಗೆ ಬಣ್ಣವನ್ನು ಕೊಡುವುದರಿಂದ ಪೆಟ್ಟಿಗೆಯ ಬಾಳಿಕೆ ಇನ್ನಷ್ಟು ಹೆಚ್ಚುವುದಲ್ಲದೆ ಆಕರ್ಷಣೆಯು ಹೆಚ್ಚುವುದು. ಆದರೆ ಕಪ್ಪು ಮತ್ತು ಕೆಂಪು ಬಣ್ಣವು ಜೇನು ನೊಣಗಳಿಗೆ ವಿಹಿತವಾದ ಬಣ್ಣವಾಗುವುದಿಲ್ಲ. ಆದುದರಿಂದ ಈ ಎರಡೂ ಬಣ್ಣಗಳನ್ನು ಜೇನು ಪೆಟ್ಟಿಗೆಗೆ ಬಳಿಯುವುದಿಲ್ಲ. ಜೇನು ಪೆಟ್ಟಿಗೆಗಳಿಗೆ ಬಣ್ಣವನ್ನು ಕೊಟ್ಟ ತರುವಾಯ, ಬಣ್ಣದ ರಾಸಾಯನಿಕದ ವಾಸನೆಯು ನೀಗುವವರೆಗೆ ಸುಮಾರು ಕನಿಷ್ಟ ೨೫ ದಿನಗಳವರೆಗಾದರೂ ಅದನ್ನು ಜೇನು ಪಾಲನೆಗಾಗಿ ಬಳಸಬಾರದು. ಪಾಲನೆಗಾಗಿ ಬಳಸಿದರೆ ರಾಸಾಯನಿಕದ ವಾಸನೆಯ ಪರಿಣಾಮವಾಗಿ ನೊಣಗಳು ಗೂಡುಬಿಟ್ಟು ಪಲಾಯನ ಮಾಡುತ್ತವೆ. ತೇಗದಮರ, ನಂದಿಮರ, ನೇರಲುಮರಗಳು ಜೇನು ಪೆಟ್ಟಿಗೆ ತಯಾರಿಸಲು ಉತ್ತಮವಾದ ಜಾತಿಯ ಮರಗಳಾಗಿರುತ್ತವೆ. ಹಾಗೆಯೇ ಉತ್ತರ ಭಾರತದಲ್ಲಿ ಪೈನ್, ಕಾಚು ಉತ್ತಮ ಜಾತಿಯ ಮರಗಳಾಗಿರುತ್ತವೆ. ಗುಣಮಟ್ಟದ ಮರಗಳು ದೊರೆಯುವುದು ಇಂದಿನ ದಿನಗಳಲ್ಲಿ ಕಠಿಣವಾಗಿರುವುದರಿಂದ ಮರದ ಬದಲೀ ಸಾಮಗ್ರಿಗಳ ಬಳಕೆ ಪ್ರಾಯೋಗಿಕವಾಗಿ ಪ್ರಯತ್ನವೂ ಜೇನು ಕೃಷಿಕರಲ್ಲಿ ನಡೆದಿದೆ.ಯಾವುದೇ ಮರವನ್ನು ಜೇನು ಪೆಟ್ಟಿಗೆಯ ತಯಾರಿಕೆಗಾಗಿ ಬಳಸಿದರೂ ಸಹ ಹವಾಗುಣದ ಏರು ಪೇರನ್ನು ತಡೆದು ಕೊಳ್ಳುವಂತಿರಬೇಕು ಮತ್ತು ಜೇನು ನೊಣಗಳಿಗೆ ಬೇಡದ ವಾಸನೆಯನ್ನು ಸೂಸದಂತೆ ಇರಬೇಕು. ಹಾಗಿದ್ದಲ್ಲಿ ಮಾತ್ರ ಜೇನು ಕುಟುಂಬವು ಅದರಲ್ಲಿ ಹೆಚ್ಚು ಕಾಲ ನೆಲಸುವಂತೆ ಮಾಡಲು ನೆರವಾಗುವುದು.ಈಗ ನಾವು ಬಳಸುತ್ತಿರುವ ಐ.ಎಸ್.ಐ ಜೇನು ಪೆಟ್ಟಿಗೆ ಯಲ್ಲಿ ಐಎಸ್ಐ-ಎ ಮತ್ತು ಐಎಸ್ಐ-ಬಿ ಎಂಬ ಎರಡು ಮಾದರಿಗಳು ಇವೆ. ಎ ಮಾದರಿಯಲ್ಲಿ 8 ಹಾಗೂ ಬಿ ಮಾದರಿಯಲ್ಲಿ10 ಚಲಿಸುವ ಚೌಕಟ್ಟುಗಳನ್ನು ಸಂಸಾರ ಕೋಣೆಯಲ್ಲಿ ಜೋಡಿಸಬಹುದಾಗಿದೆ. ಈ ಚೌಕಟ್ಟುಗಳಲ್ಲಿ ನೊಣಗಳು ಏರಿ ನೇರವಾಗಿ ನಿರ್ಮಿಸಲು ಬೇಕಾಗುವ ಅನುಕೂಲ ಕಲ್ಪಿಸಲು ಮೇಣದ ತಳಹದಿಯನ್ನು ಅಂಟಿಸಲು ಬೇಕಾಗುವ ಛಡಿಯನ್ನು ಕೊರೆಯಲಾಗಿದೆ. ಪ್ರತಿಯೊಂದು ಚೌಕಟ್ಟಿನ ಮದ್ಯದಲ್ಲಿ 7ಮಿ.ಮೀ. ನಿಗದಿತ ಅಂತರ ಏರ್ಪಡುವಂತೆ ನೋಡಿಕೊಳ್ಳಲಾಗಿದೆ. ಇದರಿಂದ ಜೇನು ನೊಣಗಳು ಕುಟುಂಬದ ಕೆಲಸ ಕಾರ್ಯ ನಿರ್ವಹಿಸುವಾಗ ಅತ್ತಿಂದಿತ್ತ ಚಲಿಸಲು ಅನುಕೂಲವಾಗುವುದು.ಚೌಕಟ್ಟುಗಳಲ್ಲಿ ಎರಿಯು ಭದ್ರವಾಗಿರಲು ಚಿಕ್ಕತಂತಿಯನ್ನೂ ಸಹ ಜೋಡಿಸಿ ಕೊಡಬಹುದು. ಜೇನು ಕುಟಂಬವು ಬಲಹೀನವಾಗಿರುವಾಗ ಒಂದು ಚೌಕಟ್ಟು ತೆಗೆದಿರಿಸಿ ಆ ಜಾಗದಲ್ಲಿ ಒಂದು ವಿಭಾಗಿಸುವ ಹಲಗೆಯನ್ನು ನೀಡಬಹುದು. ಇದು ಗೂಡಿನ ಶಾಖವನ್ನು ಕಾಯ್ದಿರಿಸಿಕೊಳ್ಳಲು ನೊಣಗಳಿಗೆ ಸಂಸಾರ ಬೆಳಸಲು ನೆರವಾಗುವುದು..ಹೊಸದಾದ ಪೆಟ್ಟಿಗೆಯನ್ನು ಮೊದಲು ಬಾರಿ ಜೇನು ಕೂಡಿಸಲು ಬಳಸುವ ಮುನ್ನ ಪೆಟ್ಟಿಗೆಯನ್ನು ತೊಳೆದು ಒಣಗಿದನಂತರ ಪರಿಶುದ್ಧವಾದ ಜೇನುಮೇಣವನ್ನು ಕರಗಿಸಿ ಪೆಟ್ಟಿಗೆಯ ಒಳಭಾಗಕ್ಕೆ ಬಳಿಯುವುದರಿಂದ ನೊಣಗಳಿಗೆ ಪರಕೀಯತೆ ನಿವಾರಿಸಲು ಮತ್ತು ಅಲ್ಲಿ ನೆಲೆಸಲು ಪ್ರೇರಣೆ ದೊರಕುತ್ತದೆ.

ಇವುಗಳನ್ನೂ ನೋಡಿಸಂಪಾದಿಸಿ

  1. ಜೇನು
  2. ಗಂಡುಜೇನುನೊಣ
  3. ಜೇನುಸಾಕಣೆ
  4. ಜೇನು ಹುಳು
  5. ಜೇನುಪ್ರಪಂಚ