ಜೆರ್ ಬಾಯಿ ನುಝರ್ ವಾನ್ ಜಿ ವಾಡಿಯ

(೧೮೫೨ ಮಾರ್ಚ್ ೮, ೧೯೫೬)

'ಶ್ರೀಮತಿ. ಜೆರ್ ಬಾಯಿ ನುಝರ್ ವಾನ್ ಜಿ ವಾಡಿಯ' ಝೊರಾಷ್ಟ್ರಿಯನ್ ಮತದ ಪಾರ್ಸಿ-ಜನಸಮುದಾಯಕ್ಕೆ ಕಡಿಮೆ-ಖರ್ಚಿನ ವಸತಿ-ಗೃಹಗಳನ್ನು ಸ್ಥಾಪಿಸಿಸಿದವರಲ್ಲಿ ಮೊದಲಿಗರು. ಅವುಗಳು ’ಬಾಗ್,’ ಎಂಬ ಹೆಸರಿನಿಂದ ಪ್ರಖ್ಯಾತವಾಗಿವೆ.'ಜೆರ್ ಬಾಯಿ ನುಝರ್ ವಾನ್ ಜಿ ವಾಡಿಯ' ರವರು ತೆಗೆದುಕೊಂಡ ಮುಂದಾಳತ್ವದಿಂದಲೇ ’ಲಾಲ್ ಬಾಗ್,’ ’ನವರೋಝ್ ಬಾಗ್,’ ನಂತಹ ಹೌಸಿಂಗ್ ಕಾಲೋನಿಗಳು, ಅಸ್ತಿತ್ವಕ್ಕೆ ಬಂದವು.' ಜೆರ್ ಬಾಯಿಯವರು, ತಮ್ಮ ಅನುದಾನವನ್ನು ಸಮೃದ್ಧವಾಗಿ ನೀಡಿದ್ದಾರೆ.

'ವಾಡಿಯಾ ಸಾರ್ವಜನಿಕ ಮಕ್ಕಳ ಆಸ್ಪತ್ರೆ'

ಬದಲಾಯಿಸಿ

೧೯೧೭ ರಲ್ಲಿ, ಅವರು, 'ಜೆರ್ ಬಾಯಿ ನವರೋಜಿ ಎನ್. ವಾಡಿಯ ಬಿಲ್ಡಿಂಗ್ ಟ್ರಸ್ಟ್,' ಸ್ಥಾಪಿಸಿದರು. ಈ ಟ್ರಸ್ಟ್ ಮುಖಾಂತರವೇ ’ಬಾಗ್’ ಗಳನ್ನು ನಿರ್ಮಿಸಲು ಸಹಾಯವಾಯಿತು. ಮುಂದೆಯೂ 'ರುಸ್ತುಮ್ ಬಾಗ್', ಹಾಗೂ 'ಜೆರ್ ಬಾಗ್,' ಕಟ್ಟಲು ನೆರವಾಯಿತು. ಆಕೆಯ ಮಕ್ಕಳು, 'ಕುಸ್ರೋ,' ಹಾಗೂ 'ನೆಸ್,' ಮುಂದುವರೆಸಿಕೊಂಡು ಬಂದು, ಅನೇಕ ಪಾರಸಿ ಕುಟುಂಬಗಳಿಗೆ ನೆರವಾದರು. ಇದಲ್ಲದೆ, ಅನೇಕ ಆಸ್ಪತ್ರೆಗಳು, ಮತ್ತು, ಕ್ಲಿನಿಕ್ಸ್ ಗಳನ್ನು ಕಟ್ಟಲು ಉದಾರ ಹಣವನ್ನು ದಾನಮಾಡಿದರು. ಜೆರ್ ಬಾಯಿಯವರ ಮರಣಾನಂತರ ಅವರ ಪ್ರೀತಿಯ ಮಕ್ಕಳು, ಈಗಲೂ ಅತ್ಯಂತ ಪ್ರಸಿದ್ದವಾದ, ’ಬಾಯಿ ಜೆರ್ ಬಾಯಿ ವಾಡಿಯಾ ಫಾರ್ ಚಿಲ್ಡ್ರನ್’, ಹಾಸ್ಪಿಟಲ್ ನಿರ್ಮಿಸಿ,ತಮ್ಮ ತಾಯಿಯವರ ಹೆಸರನ್ನು ಅಮರಗೊಳಿಸಿದರು. ಮುಂಬಯಿ ನ ಪರೇಲ್ ವಲಯದಲ್ಲಿರುವ 'ವಾಡಿಯಾ ಆಸ್ಪತ್ರೆ,' ಸ್ತ್ರೀಯರ ಹೆರಿಗೆ ಆಸ್ಪತ್ರೆಯ ಒಂದು ವಿಶೇಷ ವಿಭಾಗವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಿದೆ.