ಜೆಫ್ ಡನ್ಹಮ್, ಪಪೆಟ್ ಶೋ

'ಜೆಫ್ ಡನ್ಹಮ್', ಅಮೆರಿಕದ ಒಬ್ಬ ಪ್ರಶಸ್ತಿವಿಜೇತ 'ಪಪಟ್ ಶೋಮನ್,' (ventriloquist) ಹಾಸ್ಯಗಾರ. ಸಾವಿರಾರು ಕಾಮೆಡಿಶೊ ಗಳನ್ನು ಮಾಡಿ, ಲಕ್ಷಾಂತರ ಪರಮ ಪ್ರಿಯರನ್ನು ಪಡೆದಿದ್ದಾರೆ ! ಒಳ್ಳೆಯ ಹೆಸರು, ಹಾಗೂ ಹಣ, ಮಾಡಿದ್ದಾರೆ, ೨೦೦೩ ರಲ್ಲಿ ಮಾಡಿದ 'ಕಾಮೆಡಿ ಸೆಂಟ್ರಲ್' ಸೇರಿದಂತೆ, ಅವರ ಸೂಟ್ ಕೇಸ್, (ಟ್ರಂಕಿನಲ್ಲಿರುವ) ಪಪೆಟ್ ಗಳಲ್ಲಿ, 'ಪೀನಟ್', ತರಲೆ-ಪುಟ್ಟ, 'ವಾಲ್ಟರ್' ಕಿರಿ-ಕಿರಿಮಾಡುವ ವಯಸ್ಸಾದ ಮನುಷ್ಯ. ಡೆಡ್ ಆತಂಕವಾದಿ, 'ಅಖ್ಮದ್', 'ಹೋಸೆ ಜಲಪೆನೊ'- ಕಡ್ಡಿಯಮೇಲೆ ನಿಂತಿದ್ದಾನೆ. ಮೊದಲ, ಡಿವಿಡಿ, ’ಆರ್ಗ್ಯೂಯಿಂಗ್ ವಿತ್ ಮೈಸೆಲ್ಫ್,’ ೨೦೦೬ ರ ಏಪ್ರಿಲ್ ನಲ್ಲಿ ರಿಲೀಸ್ ಆಯಿತು. ಈ ಶೊ ನಲ್ಲಿ, ಜೆಫ್ ರವರು, "ಪಪೆಟ್ ಶೋ," ವೃತ್ತಿಗೆ, ಪಾದಾರ್ಪಣೆ ಮಾಡಿರುತ್ತಾರೆ.

'ಜೆಫ್ ಡನ್ಹಮ್, ಪಪೆಟ್ ಶೋ'

'ಜೆಫ್ ಡನ್ಹಮ್,' ರ ಪುಟ್ಟ-ಪೂರ್ವೋತ್ತರ ಪರಿಚಯ ಬದಲಾಯಿಸಿ

ಜೆಫ್ ಡನ್ಹಮ್ ೧೯೬೦ ರಲ್ಲಿ, ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಲ್ಲಿ ಜನಿಸಿದರು. ಮುಂದೆ, 'ಬೇಲರ್ ವಿಶ್ವವಿದ್ಯಾಲಯ, ' ದಲ್ಲಿ ತಮ್ಮ ಬ್ಯಾಚುಲರ್ ಡಿಗ್ರಿಯನ್ನು ಯಶಸ್ವಿಯಾಗಿ ಮಾಡಿಮುಗಿಸಿದರು. ೧೯೮೦ ರಲ್ಲಿಯೇ ಪಪೆಟ್ ಶೋಗೀಳು ಅವರನ್ನು ಆಕ್ರಮಿಸಿತ್ತು. ಅದರಲ್ಲಿ ಅವರಿಗೆ, ವಿಶೇಷ ಆಸಕ್ತಿ, ಹಾಗೂ ಆ ಕಲೆ ಅವರಿಗೆ ಒಲಿದಿರುವವಿಚಾರ, ಅವರಿಗೂ ಮನದಟ್ಟಾಗಿತ್ತು. ಆಗಲೇ ಅವರ ಕೀರ್ತಿ ಅಲ್ಲಲ್ಲಿ ಹರಡಲು ಶುರುವಾಗಿತ್ತು. ಅವರು 'ದ ಟು ನೈಟ್,' ಶೋನಲ್ಲಿ ಕಾಣಿಸಿಕೊಂಡಿದ್ದರು. ಅಂದಿನ ದಿನಗಳಲ್ಲಿ ಹೆಸರುವಾಸಿಯಾಗಿದ್ದ, 'ಜೆ ಕಾರ್ಸನ್,' ರವರ, 'ಲೇಟ್ ಶೊ ವಿತ್ ಡೇವಿಡ್ ಲೆಟರ್ಮನ್', ಶೊನಲ್ಲಿ ಅವರ ಜೊತೆ ತಾವೂ ಕುಳಿತು ಪ್ರಸ್ತುತಪಡಿಸುವ ಒಂದು ಸುಸಂಧಿಯನ್ನು ಅವರು ಚೆನ್ನಾಗಿ ಬಳಸಿಕೊಂಡರು. ಪ್ರಚಂಡ ಕರತಾಡನಕ್ಕೆ ಪಾತ್ರರಾಗಿ ಆ ಶೊ ನಿಂದ ಹೊರಗೆ ಬರುವಷ್ಟರಲ್ಲಿ, ಒಬ್ಬ ದೊಡ್ಡ ಪಪೆಟ್ ಶೋಗಾರನಾಗಿ ಬೆಳೆದು, ಹೊರಬಂದಿದ್ದರು. ೨೦೦೩ ರಲ್ಲಿ ಕಾಮೆಡಿ ಸೆಂಟ್ರೆಲ್ ಪ್ರಸ್ತುತಪಡಿಸಿದ, ಪಪೆಟ್ ಶೊ ಬೆಳೆಯುತ್ತಾ ಗಿ, ಜನವರಿ, ೨೦೦೮ ರಲ್ಲಿ, ಜೆಫ್ ಡನ್ಹಮ್ ರನ್ನು ಕಾಮೆಡಿಕಿಂಗ್, ನಂಬರ್ ಒಂದು ಎಂದು, ಎಂದು ಜನರು ಅವರನ್ನು ಆರಿಸಿ ಗೌರವಿಸಿದರು. ಹೆಂಡತಿ, ಪೈಗ್ ರವರು ಒಬ್ಬ ಪ್ರತಿಭಾನ್ವಿತ ಕಲಾವಿದೆ. ಸೆಪ್ಟೆಂಬರ್, ೨೩, ೨೦೦೭ ರಲ್ಲಿ, ಮದುವೆಯಾಗಿ, ಈಗ ೧೭ ವರ್ಷಗಳಾಗಿವೆ. ಆಕೆ ಡನ್ಹಮ್ ರ ’ಸ್ಪಾರ್ಕ್ ಆಫ್ ಇನ್ಸ್ಯಾನಿಟಿ " ಯ ನಲ್ಲಿ ಮೊದಲಬಾರಿ ಕಾಣಿಸಿಕೊಳ್ಳುತ್ತಾರೆ. ಈ ದಂಪತಿಗಳಿಗೆ ಕೆನ್ನ, ಆಷ್ಲಿನ್, ಹಾಗೂ ಬ್ರೀ ಎಂಬ ಹೆಸರಿನ, ಮೂರುಜನ ಹೆಣ್ಣುಮಕ್ಕಳು. ಈ ಮೂವರು, ೯, ೧೧, ಹಾಗೂ ೧೫ ವರ್ಷಗಳ ಅಂತರದ ಹುಡುಗಿಯರು. ಜೆಫ್ ರವರಬಳಿ ಅನೇಕ ನಾಯಿಗಳಿವೆ. ಅದರಲ್ಲಿ ಬಿಲ್, ಅವರ ಪ್ರೀತಿಯ ನಾಯಿ. ಹುಡುಗಿಯರು, ಈಗಾಗಲೇ ಪಪೆಟ್ ಶೋನಲ್ಲಿ ತಮ್ಮ ತಂದೆಯವರು ಸಾಗಿದಹಾದಿಯನ್ನು ಸಾಕಷ್ಟು ಪರಿಚಯಮಾಡಿಕೊಂಡಿದ್ದಾರೆ. ಮೂವರೂ ಪ್ರತಿಭಾವಂತರು.

೧. 'ಡೆಡ್ ಟೆರೊರಿಸ್ಟ್ ಅಖ್ಮದ್' ಬದಲಾಯಿಸಿ

ತಮ್ಮ ಸೂಟ್ ಕೇಸ್ ನಲ್ಲಿ ಲಕ್ಷಣವಾಗಿ ಜೋಡಿಸಿಟ್ಟ ಬೊಂಬೆಗಳ ಸಾಲಿನಲ್ಲಿ, ಮತ್ತೆರಡು 'ಸ್ವೀಟ್ ಡ್ಯಾಡೊ ಡೀ' ಮತ್ತು, 'ಬಾಬಿ ಜಾನ್' (ಬುಬ್ಬ ಜೆ.) ವ್ಯಕ್ತಿಗಳನ್ನು ಸೇರಿಸುತ್ತಾರೆ. ತಮ್ಮ ಹುಬ್ಬನ್ನೇರಿಸಿ, ಭಾರಿಕಣ್ಣುಗುಡ್ಡೆಗಳನ್ನು ಆಡಿಸುತ್ತಾ, ಕೀರಲುಧ್ವನಿಯಲ್ಲಿ ಸಭಿಕರ ಕೂಗನ್ನು ನಿಲ್ಲಿಸಲು, " ಸಲೆನ್ಸ್ ಪ್ಲೀಸ್, ಐ ವಿಲ್ ಕೀಲ್ ಯು " ಎನ್ನುವ ದೃಷ್ಯವನ್ನು ನೋಡಿಕೇಳಿ ಹೊಟ್ಟೆಹುಣ್ಣಾಗುವಂತೆ ನಗದವರಿಲ್ಲ ! ಸ್ವೀಟ್ ಡ್ಯಾಡಿ ಡೀ, ಅವರ ಕಾಮೆಡಿ ವಿಶೇಷ, "ಸ್ಪಾರ್ಕ್ ಆಫ್ ಇನ್ಸ್ಯಾನಿಟಿ," ರೆಡ್ ಬಾಕ್ಸ್ ಸ್ಟ್ಯಾಂಡ್ ನಲ್ಲಿ ಲಬ್ಯವಿತ್ತು. ಸೆಪ್ಟೆಂಬರ್ ೪ ೨೦೦೭ [೪ ನೆ ಸೆಪ್ಟೆಂಬರ್ ೨೦೦೭ ರಲ್ಲಿ. [ಹೆಸರನ್ನು ಸೂಚಿಸುವುದು ಅಗತ್ಯ], ಸೆಪ್ಟೆಂಬರ್ ೧೮, ೨೦೦೭, ರಿಂದ ಡೀವಿಡಿ ಗಳು, ಸಾರ್ವಜನಿಕರಿಗೆ ಕೊಳ್ಳಲು ಲಭ್ಯವಾಯಿತು. ಈ ಡೀವೀಡಿಯಲ್ಲಿ ಪೀನಟ್ ಕಾಣಿಸಿಕೊಳ್ಳುತ್ತಾರೆ. ಹೋಸೆ, ವಾಲ್ಟರ್, ಮೆಲ್ವಿನ್, ಸೂಪರ್ ಹೀರೋಗೈ, ಮತ್ತು ಡೆಡ್ ಅಖ್ಮೆದ್, ಆತಂಕವಾದಿಗಳ ಕಾರ್ನಾಮಗಳನ್ನು, ಪ್ರೇಕ್ಷಕರು, ವಾರ್ನರ್ ಥಿಯೇಟರ್ ನಲ್ಲಿನೋಡಿ ಆನಂದಿಸಿದ್ದರು. ’ಕಾಮೆಡಿ ಸೆಂಟ್ರಲ್,” ನವರು, ಪ್ರಸ್ತುತಪಡಿಸಿದ, "ಸ್ಪಾರ್ಕ್ ಆಫ್ ಇನ್ಸ್ಯಾನಿಟಿ ", ನ 'Arguing With Myself, ' ಶೋಗೆ, ಜೆಫ್ ಕಾಮೆಂಟರಿ ಕೊಡುತ್ತಾರೆ. ಮೊಟ್ಟಮೊದಲ ಪಪೆಟ್, ಹೋಸೆ ಜಲಪೆನೊ, ಹೊಸ ಪಪೆಟ್ ಏನೂ ಅಲ್ಲ. ಜೆಫ್ ಡನ್ಹಮ್ ತಮ್ಮ ಕಾಲೇಜಿನದಿನಗಳಲ್ಲೇ ಅವರನ್ನು ಪ್ರೇಕ್ಷಕವೃಂದಕ್ಕೆ ಪರಿಚಯಿಸಿದ್ದರು. ಈ ಪಪೆಟ್ ನ ಹೊರಆಕಾರ, ಮತ್ತು ಮಾತಿನ ಶೈಲಿಗಳನ್ನು ಅನೇಕಬಾರಿ ಬದಲಾಯಿಸಿದ್ದಾರೆ. 'Arguing With Myself, ' ಇವರ, ಮೂರನೆಯ ಪುನರ್ನಿರ್ಮಾಣ. 'Arguing With ನಲ್ಲಿ ಕೆಲಸಮಾಡುತ್ತಿದ್ದ ಪಪೆಟ್, ಕೊನೆಗಳಿಗೆಯಲ್ಲಿ, ನಿರ್ಮಿಸಿದ್ದು. ಜೆಫ್ ಹೇಳುವಂತೆ, ಇನ್ನು ಬಣ್ಣ ಮಾಸಿರಲಿಲ್ಲ. ಬಾಬಿ ಜಾನ್, ತಮ್ಮ ಶೊ ನಲ್ಲಿ ಬಳಸುತ್ತಿದ್ದಾಗಿನ ಸಮಯದಲ್ಲಿನ ಮಾತು.

೨. 'ಪೀನಟ್' ಬದಲಾಯಿಸಿ

ಮಾತಿನಮಲ್ಲ, ಕೀಟಲೆ ಮಾಡುವಸ್ವಭಾವದ, "ಖುಲ್ಲಾ ಬೋಲ್ನೆವಾಲ, " ನೆಂದು ಪ್ರಸಿದ್ಧಿಪಡೆದ ಪೀನಟ್, ನೇರಳೆಬಣ್ಣದ ಪಪೆಟ್ ತಲೆಯಮೇಲೆ ಒಂದೆರದು ಪುರುಚುಲು ಕೂದಲಿವೆ. ಸಲೆಮ್, ವರ್ಜೀನಿಯದಲ್ಲಿ ತಯಾರಿಸಿದ, ಒಂದೇ ಶು, ಧರಿಸುತ್ತಾರೆ. ಜೆಫ್ ಈ ಸಂಗತಿಯನ್ನು ಎಲ್ಲರಿಗೂ ಕೇಳುವಂತೆ ಹೇಳುತ್ತಾರೆ. ಆಗ ನಮಗೆ ಗೊತ್ತಾಗುವುದು, ಪಿನಟ್ ತಮ್ಮ ಶು ಕಳೆದುಕೊಂಡಂತೆ. ಆದರೆ ಪೀನಟ್ ಸುಮ್ಮನಿರುತ್ತಾರೆಯೇ ? ತಕ್ಷಣ ಉತ್ತರ, " ಇಲ್ಲ ಕಣೊ ಅದು ನನಗೆ ಹೇಗೋ ಸಿಕ್ತು," ಎಂದು ಮಾತು ಹಾರಿಸುತ್ತಾರೆ. ಇನ್ನೊಂದು ವಿಚಾರ- ಜೆಫ್ ರವರ ಬೇರೆ ಬೊಂಬೆಗಳ ತರಹ, ಪೀನಟ್ ರವರ ಹುಬ್ಬು , ಕಣ್ಣು, ಮತ್ತು ರೆಪ್ಪೆಕೂಡ, ಕದಲುವುದಿಲ್ಲ. ಇದು, ತಮ್ಮ ಕೈಯನ್ನು ಧಾರಾಳವಾಗಿ ಎಲ್ಲಾಕಡೆ ಆಡಿಸಲು ಅನುಕೂಲ. ಎಡಮೊಣಗೈ ಗೆ ಒಂದು ರಾಡ್ ಸೇರಿಸಿದ್ದಾರೆ. ಜೆಫ್ ಗೆ ಕೈಯಾಡಿಸಲು ಅನುಕೂಲ.

೩. 'ವಾಲ್ಟರ್' ಬದಲಾಯಿಸಿ

ವಾಲ್ಟರ್ ಒಬ್ಬ ನಿವೃತ್ತ, ವಯಸ್ಸಾದ ವ್ಯಕ್ತಿ. ಯಾವಾಗಲೂ ಕೈಕಟ್ಟಿಕೊಂಡಿರುತ್ತಾರೆ. ಯಾವಾಗಲೂ ಏನೋ ಬೇಸರ, ಅಸಮಧಾನ. ತನ್ನ ಮಾತಿಗೆ ಯಾರೂ ಬೆಲೆಕೊಡುತ್ತಿಲ್ಲವೆಂಬ ಸಂಕಟ. ಮದುವೆಯಾಗಿ ೪೭ ವರ್ಷ ಜೊತೆಯಲ್ಲಿ ಸಂಸಾರ ಮಾಡಿದ್ದಾರೆ. ಯಾರಿಗೂ ಅವರು, ಸೊಪ್ಪುಹಾಕಿದವರಲ್ಲ- ಅವರ ಹೆಂಡತಿಯು ಸೇರಿದಂತೆ. ಯಾವಾಗಲೂ ಅವರ ತಲೆಯಲ್ಲಿ ನಕಾರಾತ್ಮಕ ವಿಚಾರಗಳೇ ಸುಳಿದಾಡುತ್ತಿರುತ್ತವೆ. ಇಂದಿನ ವಿಶ್ವದ ವ್ಯಾಪಾರಗಳೆಲ್ಲ ಅಸಮರ್ಪಕ, ಯಾವುದೂ ಸರಿಯಿಲ್ಲ ಎನ್ನುವುದು ಅವರ ವಿಚಾರ, ವಿಯಟ್ನಾಮ್ ಯುದ್ಧದಲ್ಲಿ ಭಾಗವಹಿಸಿದ್ದವರು. ಹಿರಿಯರು. ವೆಲ್ಡರ್ ಆಗಿಕೆಲಸಮಾಡಿದವರು. ಎಲ್ಲ ನಿರ್ಣಯಗಳನ್ನೂ ತಾವೇ ಸ್ವಂತವಾಗಿ ತೆಗೆದುಕೊಳ್ಳುವ ಆತ್ಮ-ವಿಶ್ವಾಸ ಅವರಿಗಿದೆ.

೪. 'ಹೊಸೆ ಜಲಪೆನೊ' ಬದಲಾಯಿಸಿ

ಒಂದು ಕಡ್ಡಿಯಮೇಲೆ ಆಸನರಾಗಿರುವವರೇ ಹೊಸೆ ಜಲಪೆನೊ, ರವರು ಮೆಕ್ಸಿಕೊದೇಶದ ಪೆಪ್ಪೆರ್ ವ್ಯಕ್ತಿತ್ವ. ಬುಗುಟು-ಸ್ಟ್ರಾ ಹ್ಯಾಟ್ ಹಾಕಿಕೊಂಡಿರುವವರು. ಸೌತೆಕಾಯಿನ ಆಕಾರದ ಮುಖ, ಮುಖದ ತುಂಬಾಮೀಸೆ, ತಮಾಷೆಸ್ವಭಾವ. ಆದರೆ, ತಾವು ಮಾತ್ರಾ ನಗದೆ, ಬೇರೆಯವರನ್ನು ಪೇಚಿಗೆ ಸಿಲುಕಿಸುತ್ತಾರೆ. ಕಡ್ಡಿಯಮೇಲೆ, ಅವರ ವಾಸ. ತಮ್ಮ ಮಾತುಮುಗಿಯುವ ಹೊತ್ತಿಗೆ, ಅವರ ಕೈಕಾಲಿನ ಚಲನೆ, ಒಂದು ಹಂತದಲ್ಲಿರುತ್ತದೆ. ಬಾಯಿನ ಚಲನೆಯನ್ನು ಜೆಫ್ ಮಾಡಿತೊರಿಸುತ್ತಾರೆ. ತಮ್ಮ ಹೆಬ್ಬೆಟ್ಟನ್ನು ಉಪಯೋಗಿಸಿ, ಬೆನ್ನಿನ ಹಿಂದೆ ಕಡ್ಡಿಯನ್ನು ಮೀಟಿ, ಹಾಡು ಹೆಳುವುದರಲ್ಲಿ ವಿಶಾರದರು. ಕೈಕಾಲು ಆಡಿಸಲಾಗದಿದ್ದರೂ, ಕಡ್ಡಿಯ ಸಹಾಯದಿಂದ. ಅಲ್ಲೆ ಗಟ್ಟಿಯಾಗಿ ನಿಂತಿರುತ್ತಾರೆ.

೫. 'ಬಾಬಿ ಜಾನ್' ಬದಲಾಯಿಸಿ

ಬಾಬಿ ಜಾನ್ ಇವರು, 'ನಸ್ಕಾರ್ ' ಮತ್ತು ' ಬಿಯರ್ ' ಬಹಳವಾಗಿ ಇಷ್ಟಪಡುತ್ತಾರೆ. ಜೂನಿಯರ್ ಮದುವೆಯಾಗಿದೆಯೆಂದು ಎಲ್ಲರೊಡನೆ ಹೇಳಿಕೊಳ್ಳುತ್ತಾರೆ. ಕೊನೆಯಪಕ್ಷ ಒಂದು ಮಗುವಿದೆ, ಎನ್ನುವಮಾತು ಅವರ ಬಾಯಿನಿಂದ ಪದೆ-ಪದೆ ಕೇಳುತ್ತೇವೆ. ತಮಾಷೆಯೆಂದರೆ, ಬಾಬಿ ಜಾನ್ ರವವರು ತಮ್ಮ ಎಡಗಣ್ಣಿನ ಕಣ್ಣುಗುಡ್ಡೆಗಳನ್ನು ಮಾತ್ರ ಮಧ್ಯಭಾಗದಿಂದ ಎಡಕ್ಕೆ ಮಾತ್ರ ಚಲಿಸಬಲ್ಲರು. ಅವರು ತಮ್ಮ ಮಾತಿನ ಶೈಲಿಯಿಂದ ಎಲ್ಲರನ್ನೂ ರಂಜಿಸುತ್ತಾರೆ.

೬. 'ಮೆಲ್ವಿನ್,'- ಸೂಪರ್ ಹೀರೋ ಬದಲಾಯಿಸಿ

ಇವರ ಮೂಗು ತುಂಬಾ ಉದ್ದವಾಗಿದೆ. ಎಲ್ಲರನ್ನೂ ಚೆನ್ನಾಗಿ ನಗಿಸಿ, ಗೋಳುಹೊಯ್ಯಿಕೊಳ್ಳುತ್ತಾರೆ.

೭. 'ಸ್ವೀಟ್ ಡ್ಯಾಡಿ ಡೀ' ಬದಲಾಯಿಸಿ

ಜೆಫ್ ಡನ್ ಹ್ಯಾಮ್ ರವರ ಹೊಸ ಮ್ಯಾನೇಜರ್. ಬಾಯಿನಲ್ಲಿ ’ಚೀ” ಯೆಂದು ಮಾಡುವ ಶಬ್ದ, ಎಲ್ಲರಿಗೂ ಪ್ರಿಯ. ಕೆಲವರು ಹೇಳುವಂತೆ, ಇವರು, ಬಾಲಿವುಡ್ ಕಾಮಿಡಿ ನಟ, ' ಜಾನಿ ಲಿವರ್,' ನನ್ನು ಹೋಲುತ್ತಾರೆ. ಜಾನಿಲಿವರ್ ಭಾಯಿಯವರು, ಒಬ್ಬ ಅತ್ಯಂತ ಪ್ರತಿಭಾವಂತ ನಟನೆಂದು ಮಾತ್ರ ಇಲ್ಲಿ ನೆನೆಸಿಕೊಳ್ಳಬಹುದು.

ಇವರ ’ಯೂಟ್ಯೂಬ್ ’ಅಥವಾ ”ವೀಡಿಯೋ,’ ವೀಕ್ಷಿಸಲು ಸಂಪರ್ಕ ಕೊಂಡಿ ಬದಲಾಯಿಸಿ

http://www.jeffdunham.com/