ಜೂನಿಯಸ್
ಜೂನಿಯಸ್ - ಲಂಡನ್ನಿನ ಪಬ್ಲಿಕ್ ಅಡ್ವರ್ಟೈಸರ್ ಪತ್ರಿಕೆಗೆ ರಾಜಕೀಯ ಪತ್ರಗಳನ್ನು ಬರೆದು ಪ್ರಸಿದ್ಧಿಗೆ ಬಂದ ವ್ಯಕ್ತಿಯ ಗುಪ್ತನಾಮ.
ಪತ್ರಗಳು
ಬದಲಾಯಿಸಿಹೆಚ್ಚಿನ ಪತ್ರಗಳು ಅಚ್ಚಾದದ್ದು ಜನವರಿ 1769ರಿಂದ ಜನವರಿ 1772ರವರೆಗಿನ ಅವಧಿಯಲ್ಲಿ. ಅಂದಿನ ಹಿರಿಯ ಅಧಿಕಾರಿಗಳನ್ನೂ ದೊರೆಯ ಅನುಯಾಯಿಗಳನ್ನೂ ಕೊನೆಗೆ 3ನೆಯ ಜಾರ್ಜ್ ದೊರೆಯನ್ನೂ ಈತ ಕಟುವಾಗಿ ಟೀಕಿಸುತ್ತಿದ್ದ. ಈತನ ಪತ್ರಗಳು ಅಂದು ತುಂಬ ಜನಪ್ರಿಯವಾದುವು. ಇವನನ್ನು ಪತ್ತೆ ಹಚ್ಚುವ ಕಾರ್ಯ ಸಫಲವಾಗದೆ ರಹಸ್ಯ ಇನ್ನೂ ಗೂಢವಾಯಿತು. ಪತ್ರಗಳಿಗೆ ಮತ್ತಷ್ಟು ಪ್ರಶಸ್ತಿ ಬಂತು. ಈ ಪತ್ರಗಳ ಕರ್ತೃತ್ವ ಅನೇಕರ ತಲೆಗೆ ಅಂಟಿದರೂ ಅವರಲ್ಲಿ ಪ್ರಮುಖವಾಗಿ ಉಳಿದು ಬಂದವರು ಸರ್ ಫಿಲಿಪ್ ಫ್ರ್ಯಾನ್ಸಿಸ್, ಲಾರ್ಡ್ ಷೆಲ್‍ಬರ್ನ್ ಮತ್ತು ಷೆಲ್‍ಬನ್ರ್ನನ ಆಪ್ತಕಾರ್ಯದರ್ಶಿ ಲಾಫ್‍ಲಿನ್ ಮ್ಯಾಕ್‍ಲೀನ್. ಇವರಲ್ಲಿ ಫಿಲಿಪ್ ಫ್ರ್ಯಾನ್ಸಿಸನ ಕೈಬರೆಹ ಜೂನಿಯಸನ ಕೈಬರೆಹಕ್ಕೆ ತುಂಬ ಸಮೀಪವಾಗಿದ್ದರಿಂದ ಪತ್ರಗಳ ಲೇಖಕ ಈತನೇ ಎಂದು ಅನೇಕರು ನಂಬುವಂತಾಯಿತು. ನಿಜವಾದ ಲೇಖಕ ಕೊನೆಗೂ ಪತ್ತೆಯಾಗಲಿಲ್ಲ. 1772ರಲ್ಲಿ ಜೂನಿಯಸ್ ತನ್ನ ಪತ್ರಗಳ ಸಂಗ್ರಹವೊಂದನ್ನು ಹೊರತಂದು ಅದನ್ನು ಆತ ಬ್ರಿಟಿಷ್ ಜನತೆಗೆ ಅರ್ಪಿಸಿದ್ದ. ಈ ಪತ್ರಗಳು ವಿಷಯ ವೈವಿಧ್ಯ. ರಾಜಕೀಯ ಪ್ರಾಮುಖ್ಯ. ಶೈಲಿ ಮತ್ತು ಕರ್ತೃತ್ವದ ಗೂಢ ರಹಸ್ಯಗಳಿಂದಾಗಿ ಆ ಜನತೆಯ ಮನಸ್ಸಿನಲ್ಲಿ ಉಳಿದುಬಂದಿವೆ.