ಜೂಝೆಪ ಜಾಕೋಸಾ (1847-1906}. ಇಟಲಿಯ ನಾಟಕಕಾರ.

ಜೂಝೆಪ ಜಾಕೋಸಾ

ಪೀಡ್‍ಮಾಂಟ್ ಪರ್ವತ ಪ್ರದೇಶದಲ್ಲಿ ಹುಟ್ಟಿದ. ತನ್ನ ಲೇಖನ ವೃತ್ತಿಯನ್ನು ಟೂರಿನ್ ಮತ್ತು ಮಿಲಾನ್ ಪಟ್ಟಣಗಳಲ್ಲಿ ನಡೆಸಿದ.

ಈತನ ನಾಟಕ ಕೃತಿಗಳು

ಬದಲಾಯಿಸಿ

ಇವನ ಪ್ರಥಮ ಕೃತಿಗಳಾದ ಎ ಗೇಮ್ ಆಫ್ ಚೆಸ್ ಮತ್ತು ಇಲ್ ಟ್ರಿಯಾನ್‍ಫೊ ದಮೋರೆ ಇವು ಉತ್ತಮ ನಾಟಕಗಳು. ಅನಂತರ ಈತ ಮತ್ತೆ ಕೆಲವು ಲಘುವಾದ ಉಲ್ಲಾಸ ನಾಟಕಗಳನ್ನು ಬರೆದ. ಅವುಗಳಲ್ಲಿ ಮೌಂಟನ್ ಷವರ್ಸ್, ಬ್ರದರ್ಸ್ ಇನ್ ಆರಮ್ಸ್ ಹೆಸರುವಾಸಿ ಕೃತಿಗಳು : ಉತ್ತಮ ಪಾತ್ರ ಸೃಷ್ಟಿಯಿಂದ ಕೂಡಿ ಮನೋಹರ ಕಾವ್ಯ ಶೈಲಿಯಲ್ಲಿ ರಚಿಸಿದವು. ಮೊದಲಿಗೆ ಈತ ಹೆಚ್ಚಾಗಿ ಐತಿಹಾಸಿಕ ವಸ್ತುವನ್ನೇ ಬಳಸಿಕೊಂಡು ಆಮೇಲೆ ಗಂಭೀರ ಸಾಮಾಜಿಕ ವಸ್ತುವಿನತ್ತ ತನ್ನ ದೃಷ್ಟಿಯನ್ನು ಚೆಲ್ಲಿ, ಹಲವಾರು ಉತ್ತಮ ನಾಟಕಗಳನ್ನು ಬರೆದ. ಇವುಗಳಲ್ಲಿ ಪ್ರಮುಖವಾದವು ಹ್ಯಾಪ್‍ಲೆಸ್ ಲೌವ್ಸ್, ಆ್ಯಸ್ ದಿ ಲೀವ್ಸ್ ಫಾಲ್, ದಿ ಸ್ಟ್ರಾಂಗರ್, ಗಹನಚಿಂತನೆ, ಗಂಭೀರದರ್ಶನ, ವಸ್ತುವೈವಿಧ್ಯ, ಅಲ್ಲಲ್ಲಿ ಮಿಂಚಿ ಮಿನುಗುವ ತಿಳಿಹಾಸ್ಯ, ನೀತಿಬೋಧೆ-ಇವು ಇವನ ನಾಟಕಗಳ ಹಿರಿಯ ಗುಣಗಳು. 1891ರಲ್ಲಿ ಈತ ಸಾರ ಬರ್ನಾರ್ಟ್ ಎಂಬ ನಟಿಗೋಸ್ಕರ ಕಾವ್ಯಶೈಲಿಯಲ್ಲಿ ಫ್ರೆಂಚ್ ನಾಟಕವೊಂದನ್ನು ಬರೆದ, ಆ ಐತಿಹಾಸಿಕ ರೊಮ್ಯಾಂಟಿಕ್ ನಾಟಕ ನ್ಯೂಯಾರ್ಕಿನಲ್ಲಿ ಜನಪ್ರಿಯವಾಯಿತು. ಈತ ಅನೇಕ ಉತ್ತಮ ಸಣ್ಣ ಕಥೆಗಳನ್ನೂ ಐತಿಹಾಸಿಕ ಮತ್ತು ವರ್ಣನಾಪ್ರಬಂಧಗಳನ್ನೂ ಬರೆದು ಪೀಡ್‍ಮಾಂಟ್ ಪರ್ವತಕ್ಷೇತ್ರವನ್ನು ಓದುಗರಿಗೆ ಚಿರಪರಿಚಿತಗೊಳಿಸಿದ್ದಾನೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: