ಜೀರಾ ರೈಸ್
ಜೀರಾ ರೈಸ್ ಒಂದು ಭಾರತೀಯ ಮತ್ತು ಪಾಕಿಸ್ತಾನಿ ಖಾದ್ಯವಾಗಿದ್ದು ಅನ್ನ ಮತ್ತು ಜೀರಿಗೆ ಬೀಜಗಳನ್ನು ಹೊಂದಿರುತ್ತದೆ.[೧] ಇದು ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲಿ ದಿನನಿತ್ಯದ ಅನ್ನದ ಖಾದ್ಯವಾಗಿ ಜನಪ್ರಿಯವಾಗಿದೆ.[೨] ಬಿರಿಯಾನಿಗೆ ಭಿನ್ನವಾಗಿ ಇದು ತಯಾರಿಸಲು ಸುಲಭವಾಗಿದೆ. "ಜೀರಾ" ಎಂಬುದು ಜೀರಿಗೆ ಬೀಜಗಳಿಗೆ ಹಿಂದಿ ಶಬ್ದವಾಗಿದೆ. ಬಳಸಲಾದ ಘಟಕಾಂಶಗಳೆಂದರೆ ಅನ್ನ, ಜೀರಿಗೆ ಬೀಜಗಳು, ವನಸ್ಪತಿ ಎಣ್ಣೆ, ಈರುಳ್ಳಿ ಮತ್ತು ಕೊತ್ತುಂಬರಿ ಎಲೆಗಳು.
ತಯಾರಿಕೆ
ಬದಲಾಯಿಸಿಬಿಸಿ ಎಣ್ಣೆಯಲ್ಲಿ ಜೀರಿಗೆ ಬೀಜಗಳನ್ನು ಕರಿಯಲಾಗುತ್ತದೆ. ಉದ್ದ ಧಾನ್ಯದ ಬಾಸ್ಮತಿ ಅಕ್ಕಿ ಮತ್ತು ಉಪ್ಪನ್ನು ಅದಕ್ಕೆ ಸೇರಿಸಲಾಗುತ್ತದೆ. ಹೆಚ್ಚುಕಡಿಮೆ ಅಕ್ಕಿಯ ದುಪ್ಪಟ್ಟು ಪ್ರಮಾಣದ ನೀರನ್ನು ಸುರಿದು ಮುಚ್ಚಳವನ್ನು ಮುಚ್ಚಿ ಹೆಚ್ಚಿನ ಉರಿಯಲ್ಲಿ ಬೇಯಲು ಬಿಡಲಾಗುತ್ತದೆ. ನಂತರ ಅಕ್ಕಿಯನ್ನು ಕಡಿಮೆ ಉರಿಯಲ್ಲಿ ಬೇಯಿಸಿ ಎಲ್ಲ ನೀರು ಹೀರಿಕೊಳ್ಳಲ್ಪಡುವವರೆಗೆ ಬಿಡಲಾಗುತ್ತದೆ.
ಜೀರಾ ರೈಸ್‌ನ್ನು ಸಾಮಾನ್ಯವಾಗಿ ಸಣ್ಣಗೆ ಕತ್ತರಿಸಿದ ತಾಜಾ ಕೊತ್ತಂಬರಿ ಎಲೆಗಳಿಂದ ಅಲಂಕರಿಸಲಾಗುತ್ತದೆ.