ಜೀಗುಜ್ಜೆ ಪಲ್ಯ
ಜೀಗುಜ್ಜೆ ಒಂದು ತರಕಾರಿ ಆಗಿದೆ. ಇದು ಮೊರಸಿ ಕುಟುಂಬಕ್ಕೆ ಸೇರಿ , ಅರ್ಟೋಕಾರ್ಪಸ್ ಇನ್ಸಿಸ (Artocarpus incisa)(Artocarpus altilis) ಎಂಬುದು ಇದರ ವೈಜ್ಞಾನಿಕ ಹೆಸರು. ಇಂಗ್ಲಿಷಲ್ಲಿ ಬ್ರೆಡ್ ಫ್ರುಟ್ (Bread Fruit) ಅಂತ ಹೇಳುತ್ತಾರೆ .ಇದು ಮರದಲ್ಲಿ ಆಗುವಂತ ಒಂದು ರೀತಿಯ ಕಾಯಿ.ಇದನ್ನು ಜೀಗುಜ್ಜೆ, ಅಥವಾ ದೀವಿ ಹಲಸು ಅಂತಲೂ ಕರೆಯುತ್ತಾರೆ. ೧೮ನೇ ಶತಮಾನದಲ್ಲಿ ಲೆಫ್ಟಿನೆಂಟ್ ವಿಲಿಯಮ್ ಬ್ಲೀಗ್ ಎಂಬಾತ ಜೀಗುಜ್ಜೆಯನ್ನು ಎಲ್ಲಾ ಕಡೆಗಳಿಗೆ ಪರಿಚಯ ಮಾಡಿಸಿದ್ದು.ಕರ್ನಾಟಕ ದಲ್ಲಿ ಮತ್ತೆ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತೋಟಗಳಲ್ಲಿ ದೀವಿ ಹಲಸು, ಜೀಗುಜ್ಜೆ ಯನ್ನು ಬೆಳೆಸುತ್ತಾರೆ. ದೀವಿ ಹಲಸಿನಲ್ಲಿ ಹಲವಾರು ಬಗೆಯ ಪ್ರಮುಖ ವಿಟಮಿನ್ ಗಳು, ಖನಿಜಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಇವೆ. ಇದರಲ್ಲಿನ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿಸಿ ಕಾಲಜನ್ ಉತ್ಪತ್ತಿ ಮಾಡಿ ಆರೋಗ್ಯಕಾರಿ ತ್ವಚೆಗೆ ನೆರವಾಗುವುದು. ಅದೇ ರೀತಿಯಲ್ಲಿ ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶಗಳಿವೆ. ಜೀಗುಜ್ಜೆ ಅಥವಾ ದೀಗುಜ್ಜೆ ಇದನ್ನು ಸಾರು , ಪಲ್ಯ , ಕಡ್ಲೆ ಜೀಗುಜ್ಜೆ, ಪೋಡಿ, ಹಪ್ಪಳ - ಹೇಗೆ ಬಗೆ ಬಗೆಯ ಖಾದ್ಯ ಗಳನ್ನು ಮಾಡಲು ಬಳಸುತ್ತಾರೆ.
ಪ್ರದೇಶ ಅಥವಾ ರಾಜ್ಯ | ಕರಾವಳಿ / ಕೊಂಕಣ್ |
---|---|
ಮುಖ್ಯ ಸಲಕರಣೆ | ಜೀಗುಜ್ಜೆ |
ಸಲಕರಣೆ | ತೆಂಗಿನಕಾಯಿ |
ಇದರ ವಿಧದ ಆಹಾರಗಳು | w:Theeyal |
ಜೀಗುಜ್ಜೆ ಸುಕ್ಕ (ಪಲ್ಯ ) ಮಾಡುವ ವಿಧಾನ
ಬದಲಾಯಿಸಿ- ಬೇಕಾಗುವ ಸಾಮಾನು[೧]
ಜೀಗುಜ್ಜೆ,ತೆಂಗಿನ ತುರಿ,ಮೆಣಸು,ಜೀರಿಗೆ,ದಾಸೆಮಿ,ಉಪ್ಪು,ಈರುಳ್ಳಿ
ಮಾಡುವ ವಿಧಾನಗಳು
ಬದಲಾಯಿಸಿಜೀಗುಜ್ಜೆಯನ್ನು ನೀರಲ್ಲಿ ಬೇಯಿಸಬೇಕು.ಮತ್ತೆ ತೆಂಗಿನ ತುರಿ ,ಮೆಣಸು , ಸಂಬರ, ಜೀರಿಗೆ, ದಾಸೆಮಿ, ನೀರುಳ್ಳಿ, ಉಪ್ಪು ಇದನ್ನೆಲ್ಲಾ ರುಬ್ಬಿ , ಆ ಮಸಾಲೆಯನ್ನು ಜೀಗುಜ್ಜೆಗೆ ಹಾಕಿ . ಮತ್ತೆ ಸರಿಯಾಗಿ ಬೇಯಿಸಿ. ಅಲ್ಲಿಗೆ ಜೀಗುಜ್ಜೆ ಸುಕ್ಕ ರೆಡಿ.
ಉಲ್ಲೇಖ
ಬದಲಾಯಿಸಿ