“ಕನ್ನಡ ವಿಮರ್ಶೆಯ ಕಡೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಹರೀಶ ಇವರು ೧೯೭೫ರಲ್ಲಿ ಹಾಸನ'ದಲ್ಲಿ ಜನಿಸಿದರು. ಕೆಲ ಕಾಲ ಕ್ರಿಸ್ತ ಕಾಲೇಜಿನ ಕನ್ನಡ ಸಾಹಿತ್ಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಂತರ ಸಿಸ್ಕೊ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದರು. ಶೆಶಾದ್ರಿಪುರಮ್ ಸ್ನಾತಕೊತ್ತರ ಕೇಂದ್ರದಲ್ಲಿ ಕನ್ನಡ ಸಾಹಿತ್ಯ, ಭಾರತೀಯ ಸಮಾಜದ ಬಗ್ಗೆ ೩ ಸಂವತ್ಸರ ಕಾಲ ಪಾಠ ಮಾಡಿದರು. ಅನೇಕ ಲೇಖನ, ಕವನ, ಅನುವಾದ,ಕಥೆ, ರೇಡಿಯೊ ನಾಟಕ ಹಾಗೂ ವಿಮರ್ಶೆಗಳನ್ನು ರಚಿಸಿದ್ದಾರೆ. ತತ್ವಶಾಸ್ತ್ರ ಇವರ ಪ್ರಮುಖ ಆಸಕ್ತಿಯ ಮುಖ.


ಇವರ ಕೆಲವು ಕೃತಿಗಳು:

  • ಬೆಳಕಿನಾಟ
  • ತಂತ್ರಶಾಸ್ತ್ರ
  • ವೇದ ತಂತ್ರ ಸಂಸ್ಕ್ರುತಿ
  • ಶ್ರೀಮಾತೆ-ಸಹ ಲೇಖಕಿ:ಎಂ.ಆರ್.ಗಿರಿಜ
  • ನೀರಬೆಳಗು-ಡಾ.ಶಂಕರ ಮೊಕಾಶಿ ಪುಣೆಕರ್ ಅವರ ಅಪ್ರಕಟಿತ ಬರಹಗಳ ಸಂಪಾದನೆ
  • ಹಿಂದ್ ಸ್ವರಾಜ್-೧೦೧:ಸಂಚಯ ೮೧ನೆಯ ಸಂಚಿಕೆ ಅತಿಥಿ ಸಂಪಾದಕ
  • ಮಹಮ್ಮದ್ ಅಲಿ ಜಿನ್ನಾ-ನಾನು ಮೊದಲು ಭಾರತೀಯ ಎಂದವನು ಭಾರತವನ್ನು ಒಡೆದನೆ?-ಸಹಲೇಖಕ:ಪ್ರತಾಪ ಸಿಂಹ

ತಂತ್ರ ಶಾಸ್ತ್ರ:ಬಯಲನು ತುಂಬುವ ಆಲಯದ ಬೆಳಕಿನ ಬೀಜಗಳು

ಬದಲಾಯಿಸಿ

‘ತಂತ್ರಶಾಸ್ತ್ರ’ ಎಂಬ ಕಿರುಹೊತ್ತಿಗೆಯನ್ನು ಈ ಮಾಲೆಗಾಗಿ ಬರೆದು ಕೊಟ್ಟಿರುವ ಡಾ. ಜಿ.ಬಿ. ಹರೀಶ ಅವರಿಗೆ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ. ಈ ಪುಸ್ತಕವನ್ನು ಅಂದವಾಗಿ ಪ್ರಕಟಿಸಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಹಾಯಕ ನಿರ್ದೇಶಕ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಅಭಿನಂದನೆಗಳು.