ಜಿ.ಆರ್.ತಿಪ್ಪೇಸ್ವಾಮಿ

ಜಿ. ಆರ್. ತಿಪ್ಪೇಸ್ವಾಮಿ, [] [][] ಜಿ. ಆರ್. ಟಿ. ಎಂದೇ ವಿದ್ಯಾರ್ಥಿವಲಯದಲ್ಲಿ ಗುರುತಿಸಲ್ಪಟ್ಟವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ತಿಪ್ಪೇಸ್ವಾಮಿಯವರು ಹಲವಾರು ಕೃತಿಗಳ ಕರ್ತೃ. ಜಾನಪದ, ಸಂಶೋಧನೆ-ಸಂಪಾದನೆ, ವಿಮರ್ಶೆ ಅವರ ಕೃತಿಗಳ ಪ್ರಮುಖ ವಸ್ತುಗಳು.

ಪ್ರೊ. ಜಿ. ಆರ್. ತಿಪ್ಪೇಸ್ವಾಮಿ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಜ್ಜನಾಡು ಗ್ರಾಮದವರಾದ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ ಅವರು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ೧೯೯೯ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಆಗಿ ಸೇರಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಮತ್ತು ಆಳವಾಗಿ ಅಧ್ಯಯನ ಮಾಡಿರುವ ಹೊಸ ಸಂವೇದನೆಯ ವಿದ್ವಾಂಸರಾಗಿದ್ದ ತಿಪ್ಪೇಸ್ವಾಮಿ ಅವರು ವಿಮರ್ಶಕರಾಗಿ ಜಾನಪದ ಕ್ಷೇತ್ರದಲ್ಲಿಯೂ ಪ್ರಸಿದ್ಧಿ ಪಡೆದಿದ್ದರು.

ಕೃತಿಗಳು

ಬದಲಾಯಿಸಿ

ವಿಮರ್ಶೆ

ಬದಲಾಯಿಸಿ
  1. ಪ್ರಸ್ತಾಪ
  2. ಪ್ರಣೀತ
  3. ಅಭಿಮುಖ
  1. ಬಂದೀರೆ ನನ್ನ ಜಡೆವೊಳಗೆ
  2. ಕೋಲಾರಮ್ಮ
  3. ದಾಸ ಸಾಹಿತ್ಯ ಮತ್ತು ಜಾನಪದ

ವ್ಯಕ್ತಿಚಿತ್ರಗಳು

ಬದಲಾಯಿಸಿ
  1. ಕನ್ನಡ ನಾಡಿನ ಕಲಾವಿದರು
  2. ಬಾಲಣ್ಣ-ಭಾಗವತರು
  3. ಜೀವನ ಕಥೆ
  4. ಪ್ರಶಸ್ತಿ ಪಡೆದ ಮಹನೀಯರು

ಸಾಹಿತ್ಯ ವಾಚಿಕೆ

ಬದಲಾಯಿಸಿ
  • ಜಿ.ವೆಂಕಟಯ್ಯ

ಸಂಪಾದನೆ

ಬದಲಾಯಿಸಿ
  1. ಅಗ್ನಿಸಾಕ್ಷಿ
  2. ಕಮಲಾ ಕೃತಿ ವಿಮರ್ಶೆ
  3. ಕುಮಾರವ್ಯಾಸ (ವಿರಹಗಳ ಶೃಂಗಾರ)
  4. ಮೂಡಲ ವೈಭವ (ಲೇಖನಗಳ ಸಂಕಲನ)
  5. ಹೊಂಗಿರಣ
  6. ಸಿರಿನಂದಿ (ಸ್ಮರಣ ಸಂಚಿಕೆ) ಸೇರಿದಂತೆ ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ, ವಿದ್ವಾಂಸ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ (೬೩) ಅವರು ಉಪನ್ಯಾಸ ನೀಡುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಶುಕ್ರವಾರ ನಿಧನರಾದರು.[][] ಜಯಲಕ್ಷ್ಮೀಪುರಂನ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಿಎಂಶ್ರೀ ನೆನಪು ಕಾರ್ಯಕ್ರಮದಲ್ಲಿ ಬಿ.ಎಂ.ಶ್ರೀಕಂಠಯ್ಯನವರ ವಿಮರ್ಶೆ ವಿಚಾರ ಕುರಿತು ಉಪನ್ಯಾಸ ನೀಡುತ್ತಿದ್ದರು. ಕುಸಿದು ಬಿದ್ದ ಅವರನ್ನು ತಕ್ಷಣವೇ ಕಾಲೇಜಿನ ಸಮೀಪದಲ್ಲಿಯೇ ಇರುವ ಚಂದ್ರಕಲಾ ಆಸ್ಪತ್ರೆಗೆ ಕರೆದ್ಯೊಯಲಾಯಿತು. ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಪತ್ನಿ ಕಮಲವಾಣಿ, ಅವಳಿ ಪುತ್ರಿಯರಾದ ಸಿಂಧು, ಬಿಂದು, ಸ್ನೇಹಿತರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ