ಜಿರೇನಿಯಮ್
ಜಿರೇನಿಯಮ್ - ಜಿರೇನಿಯೇಸೀ ಕುಟುಂಬಕ್ಕೆ ಸೇರಿದ ಏಕವಾರ್ಷಿಕ ದ್ವೈವಾರ್ಷಿಕ ಹಾಗೂ ಬಹುವಾರ್ಷಿಕ ಮೂಲಿಕೆ ಸಸ್ಯ. ಅಲಂಕಾರ ಸಸ್ಯವೆಂದು ಪ್ರಸಿದ್ಧವಾಗಿದೆ.
ಇದನ್ನು ಅಂಚುಸಸ್ಯ, ಕಲ್ಲೇರಿ ಸಸ್ಯವಾಗಿ ಬೆಳೆಸಲಾಗುತ್ತದೆ. ಜಿರೇನಿಯಮ್ ಎಂಬ ಹೆಸರು ಇನ್ನೊಂದು ಸುಪ್ರಸಿದ್ಧ ಅಲಂಕಾರ ಸಸ್ಯವಾದ ಪೆಲಾರ್ಗೋನೀಯಮಿಗೂ ಅನ್ವಯವಾಗುತ್ತದೆ. ಇದು 8 - 45 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಪುಟ್ಟಗಿಡ. ಎಲೆಗಳು ಸರಳ; ಪರ್ಯಾಯ ಇಲ್ಲವೆ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ಅಲಗು ಹಸ್ತಾಕೃತಿಯ ಹಾಲೆಗಳಾಗಿ ವಿಭಾಗಗೊಂಡಿದೆ. ಹೂಗಳು ಕ್ರಮಬದ್ಧ ಹಾಗೂ ಸಮಾಂಗತ್ವವುಳ್ಳವು, ಮಧ್ಯಾರಂಭಿ ಇಲ್ಲವೆ ಸಿನ್‍ಸಿನಸ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿ ಹೂವಿನಲ್ಲಿ 5 ಬಿಡಿ ಪುಷ್ಪ ಪತ್ರಗಳು, 5 ಬಿಡಿ ದಳಗಳು, 10 ಕೇಸರಗಳು, 5 ಕಾರ್ಪೆಲುಗಳುಳ್ಳ ಉಚ್ಚಸ್ಥಾನದ ಅಂಡಾಶಯ ಇವೆ. ಉದ್ದವಾದ ಶಲಾಕೆಯೂ ಅದರ ತುದಿಯಲ್ಲಿ 5 ಕವಲುಗಳ ಶಲಾಕಾಗ್ರವೂ ಉಂಟು. ಫಲ ಸಂಪುಟ ಮಾದರಿಯದು: ಸಂಪೂರ್ಣ ಬಲಿತ ಅನಂತರ ಒಣಗಿ ಒಡೆಯುತ್ತದೆ. ಹೀಗೆ ಕಾರ್ಪೆಲುಗಳು ಮೇಲಕ್ಕೆದ್ದುಕೊಳ್ಳುತ್ತವೆ.
ಜಿರೋನಿಯಮನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಬೇರುತುಂಡುಗಳಿಂದಲೂ ಇದನ್ನು ಬೆಳೆಸಬಹುದು. ಉದ್ಯಾನಗಾರಿಕೆಯಲ್ಲಿ ಮುಖ್ಯವೆನಿಸಿದ ಪ್ರಭೇದಗಳು; ರಾಬರ್ಟಿಯಾನಮ್, ಮ್ಯಾಕ್ಯುಲೇಟಮ್, ಗ್ರ್ಯಾಂಡಿಫ್ಲೋರಮ್, ನೇಪಾಲೆನ್ಸ್, ಕಾಲಿನಮ್, ಎರಿಯೊಸ್ಟೆಮಾನ್, ಸ್ಯಾಂಗ್ವೀನಿಯಮ್, ಫ್ರೆಮಾಂಟಿಯೈ ಮತ್ತು ಆರ್ಮೀನಮ್.
ಚಿತ್ರಸಂಪುಟ
ಬದಲಾಯಿಸಿ-
Pink Wild Geranium
-
Geranium maculatum
-
Geranium phaeum - from Thomé Flora von Deutschland, Österreich und der Schweiz 1885
-
Geranium platypetalum
-
Geranium sanguineum
-
Geranium pratense (meadow cranesbill)
-
Geranium robertianum (herb robert)
-
Geranium maderense
-
Geranium maculatum
-
Geranium arboreum
-
Geranium petal under the microscope