ಜಾವ ತಂಗಡಿ - ಫ್ಯಾಬೇಸೀ (ಲೆಗ್ಯೂಮಿನೋಸೀ) ಕುಟುಂಬದ ಸೀಸಾಲ್‍ಪಿನೀ ಉಪಕುಟುಂಬಕ್ಕೆ ಸೇರಿದ ಒಂದು ಅಲಂಕಾರ ವೃಕ್ಷ. ರಸ್ತೆಗಳ ಪಾಶ್ರ್ವಗಳಲ್ಲಿ ಉದ್ಯಾನಗಳಲ್ಲಿ ಇದನ್ನು ಬೆಳೆಸುವುದುಂಟು. ಕ್ಯಾಶಿಯ ಜಾವಾನಿಕ ಇದರ ಶಾಸ್ತ್ರೀಯ ಹೆಸರು.

ಮರದ ಚಿತ್ರ

ಇದರ ತವರು ಮಲಯ. ಜಾವ, ಸುಮಾತ್ರಗಳಲ್ಲೂ ಭಾರತದಲ್ಲೂ ಇದನ್ನು ಕಾಣಬಹುದು.

ವರ್ಣನೆ

ಬದಲಾಯಿಸಿ

ಇದು 6-10 ಮೀ. ಎತ್ತರ ಬೆಳೆಯುವ ಮಧ್ಯಮ ಗಾತ್ರದ ಮರ. ತೊಗಟೆ ಕಪ್ಪುಮಿಶ್ರಿತ ಕಂದು ಬಣ್ಣದ್ದು. ಎಲೆಗಳು ದ್ವಿಪಿಚ್ಛಕ ಸಂಯುಕ್ತ ಮಾದರಿಯವು: ಪರ್ಯಾಯ ಬಗೆಯಲ್ಲಿ ಜೋಡಣೆಗೊಂಡಿವೆ. ಡಿಸೆಂಬರ್ ವೇಳೆಗೆ ಎಲೆಗಳೆಲ್ಲ ಉದುರುಹೋಗಿ ಮತ್ತೆ ಮೇ ತಿಂಗಳ ಸಮಯಕ್ಕೆ ಹೊಸ ಎಲೆಗಳು ಹುಟ್ಟುತ್ತವೆ. ಜೊತೆಯಲ್ಲಿ ಹೂಗಳ ಬಣ್ಣ ಗುಲಾಬಿ ಇಲ್ಲವೇ ಪಾಟಲ. ಹೂಗಳು ಹೆಚ್ಚು ಕಡಿಮೆ ಪ್ರತಿಯೊಂದು ರೆಂಬೆಯ ಬುಡದಿಂದ ತುದಿಯವರೆಗೂ ಅರಳುವುದರಿಂದ ಮರ ತುಂಬ ಚೆಲುವಾಗಿ ಕಾಣುತ್ತದೆ. ಪ್ರತಿ ಹೂವಿನಲ್ಲಿ 5 ಪುಷ್ಪ ಪತ್ರಗಳು, 5 ದಳಗಳು, 10 ಕೇಸರಗಳು ಮತ್ತು ಉಚ್ಛಸ್ಥಾನದ ಅಂಡಾಶಯ ಇವೆ. ಕಾಯಿ ಪಾಡ್ ಮಾದರಿಯದು, 40-60 ಸೆಂ.ಮೀ. ಉದ್ದ ಇದೆ. ಅದರ ಬಣ್ಣ ಕಪ್ಪು ಮಿಶ್ರಿತ ಕಂದು.

 
ಎಲೆ ಮತ್ತು ಹೂಗಳು


ಜಾವ ತಂಗಡಿಯನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ನರ್ಸರಿಗಳಲ್ಲಿ ಬೀಜ ಬಿತ್ತಿ ಸಸಿಮಾಡಿ ಒಂದು ವರ್ಷದ ಅನಂತರ ಅವನ್ನು ಬೇಕಾದೆಡೆ ನೆಡಲಾಗುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: