ಜಾರ್ಜ್ ಮಕಾಲೆ ಟ್ರಿವೆಲ್ಯನ್

ಜಾರ್ಜ್ ಮಕಾಲೆ ಟ್ರಿವೆಲ್ಯನ್ (1876-1982). ಇಂಗ್ಲಿಷ್ ಇತಿಹಾಸಕಾರ.

ಜಾರ್ಜ್ ಆಟೊ ಟ್ರಿವೆಲ್ಯನರ ಮಗ. ಸ್ಟ್ರಾಟ್‍ಫರ್ಡ್-ಅಪಾನ್-ಏವನ್‍ನಲ್ಲಿ 1876ರಲ್ಲಿ ಜನಿಸಿದರು. ಹ್ಯಾರೋದಲ್ಲೂ ಕೇಂಬ್ರಿಜ್ ವಿಶ್ವವಿದ್ಯಾಲಯದ ಆಧುನಿಕ ಇತಿಹಾಸದ ರೀಜಿಯಸ್ ಪ್ರಾಧ್ಯಾಪಕರಾಗಿ ನೇಮಕವಾದರು. 1940ರಲ್ಲಿ ಟ್ರಿನಿಟಿ ಕಾಲೇಜಿನ ಆಚಾರ್ಯರಾದರು. 1951ರಲ್ಲಿ ನಿವೃತ್ತರಾಗಿ, 1962ರಲ್ಲಿ ಕೇಂಬ್ರಿಜಿನಲ್ಲಿ ಮರಣಹೊಂದಿದರು. 1930ರಲ್ಲಿ ಅವರಿಗೆ ಆರ್ಡರ್ ಆಫ್ ಮೆರಿಟ್ ಗೌರವ ಲಭಿಸಿತು.

ಇತಿಹಾಸ ಕೃತಿಗಳು

ಬದಲಾಯಿಸಿ

ಇವರು ಇತಿಹಾಸ ಕುರಿತ ಅನೇಕ ಕೃತಿಗಳನ್ನು ರಚಿಸಿದರು. ಉದಾರ ದೃಷ್ಟಿಯಿಂದ ಇವರು ಇಟಲಿಯ ಸ್ವಾತಂತ್ರ್ಯ ಮತ್ತು ಏಕೀಕರಣಕ್ಕಾಗಿ ದುಡಿದ ಮಹಾನಾಯಕ ಗ್ಯಾರಿಬಾಲ್ಡಿಯನ್ನು ಕುರಿತ ಮೂರು ಪುಸ್ತಕಗಳನ್ನು ಬರೆದರು. ಇಂಗ್ಲೆಂಡ್ ಇನ್ ದಿ ಏಜ್ ಆಫ್ ವೈಕ್ಲಿಫ್ (1904), ಲೈಫ್ ಆಫ್ ಜಾನ್ ಬ್ರೈಟ್ (1913), ಬ್ರಿಟಿಷ್ ಹಿಸ್ಟೊರಿ ಇನ್ ದಿ ಇಂಗ್ಲಿಷ್ ರೆವಲ್ಯೂಷನ್, 1688-1689 (1939), ಇಂಗ್ಲಿಷ್ ಸೋಷಿಯಲ್ ಹಿಸ್ಟೊರಿ (1942), ದಿ ಸೆವೆನ್ ಇಯರ್ಸ್ ಆಫ್ ವಿಲಿಯಂ IV (1952)-ಇವು ಅವರ ಇತರ ಕೃತಿಗಳು. ಅವರ ಆನ್ ಆಟೊಬಯಾಗ್ರಫಿ ಅಂಡ್ ಅದರ್ ಎಸ್ಸೇಸ್ ಎಂಬುದು 1949ರಲ್ಲಿ ಪ್ರಕಟವಾಯಿತು. ಇವರ ಇತಿಹಾಸ ಕೃತಿಗಳು ಸಾಹಿತ್ಯಾಂಶಗಳಿಂದ ಕೂಡಿವೆ. ತಮ್ಮ ಕೃತಿಗಳು ಸಾಮಾನ್ಯರಿಗೂ ಇತಿಹಾಸ ವಿದ್ಯಾರ್ಥಿಗಳಿಗೂ ಹಿಡಿಸುವಂತಿರಬೇಕೆಂಬ ದೃಷ್ಟಿಯಿಂದ ಅವರು ಇದನ್ನು ಬರೆದರು.