ಜಾರ್ಜ್ ಪೇನ್ ರೇನ್ಸ್‌ಫರ್ಡ್ ಜೇಮ್ಸ್‌

ಜಾರ್ಜ್ ಪೇನ್ ರೇನ್ಸ್‌ಫರ್ಡ್ ಜೇಮ್ಸ್‌ (1799-1860). ಇಂಗ್ಲಿಷ್ ಕಾದಂಬರಿಕಾರ. ಚರಿತ್ರಕಾರ.

ಲಂಡನಿನ ವೈದ್ಯನೊಬ್ಬನ ಮಗನಾದ ಈತ ಅಮೆರಿಕ ಯೂರೋಪ್‍ಗಳಲ್ಲಿ ಅನೇಕ ಕಡೆ ರಾಯಭಾರಿಯಾಗಿ ಕೆಲಸ ಮಾಡಿದ.

ಚಿಕ್ಕಂದಿನಿಂದ ಚಾರಿತ್ರಿಕ ಕಾದಂಬರಿಗಳನ್ನು ಬರೆಯಲಾರಂಭಿಸಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾನೆ. ಅವಸರದಿಂದ ಬರೆದನಾದ ಕಾರಣ ಈತನ ಸಾಹಿತ್ಯ ತಾತ್ಕಾಲಿಕ ಯಶಸ್ಸನ್ನು ಮಾತ್ರ ಗಳಿಸಿತು. ರಿಷಲೂ (1829), ಫಿಲಿಪ್ ಆಗಸ್ಟಸ್ (1831), ಹ್ಯೂಜನಾಟ್ (1838), ದಿ ರಾಬರ್ (1838), ಹೆನ್ರಿ ಆಫ್ ಗೀಜ್ (1839), ದಿ ಮ್ಯಾನ್ ಎಟ್ ಆರಮ್ಸ್ (1840), ದಿ ಕಿಂಗ್ಸ್ ಹೈವೇ (1840), ಆಜಿನ್ ಕೋರ್ಟ್ (1844)-ಇವು ಈತನ ಪ್ರಮುಖ ಕೃತಿಗಳು. ಇವೇ ಅಲ್ಲದೆ ಈತ ಮೆಮ್ವಾರ್ಸ್ ಆಫ್ ಗ್ರೇಟ್ ಕಮ್ಯಾಂಡರ್ಸ್, ಲೈಪ್ ಆಫ್ ದಿ ಬ್ಲ್ಯಾಕ್ ಪ್ರಿನ್ಸ್ ಮೊದಲಾದ ಜೀವನ ಚರಿತ್ರೆಗಳನ್ನೂ ಬರೆದಿದ್ದಾನೆ. ಹಿಸ್ಟೋರಿಯಾಗ್ರಫರ್ ರಾಯಲ್ ಎಂಬ ಗೌರವ ಈತನಿಗೆ ಲಭಿಸಿತ್ತು.