ಜಾಮಾ ಮಸೀದಿ, ಮಥುರಾ
ಜಾಮಾ ಮಸೀದಿ (ಹಿಂದಿ:जामा मस्जिद, ಉರ್ದು: جامع مسجد) ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿದೆ. ಇದರ ಕೆಲಸವನ್ನು ಔರಂಗಜೇಬ್‍ನ ಪ್ರಾಂತಾಧಿಪತಿಯಾಗಿದ್ದ ಅಬ್ದ್-ಉನ್-ನಬಿ ೧೬೬೨ರಲ್ಲಿ ಪೂರ್ಣಗೊಳಿಸಿದನು.[೧]
ಅಬ್ದುನ್-ಉನ್-ನಬಿ ಖಾನ್ ಈ ಮಸೀದಿಯ ತಾಣವಾಗಿ ಆಯ್ಕೆ ಮಾಡಿದ ನೆಲವನ್ನು ಕೆಲವು ಕಟುಕರಿಂದ ಖರೀದಿಸಿದನು. ಉಳಿದದ್ದನ್ನು ಕಾಜ಼ಿಗಳ ಒಂದು ಕುಟುಂಬದಿಂದ ಪಡೆದನು. ಅವರ ವಂಶಸ್ಥರು ಈಗಲೂ ಕುಸ್ಕ್ ಮಹಲ್ಲಾ ಎಂದು ಕರೆಯಲ್ಪಡುವ ಪ್ರದೇಶದ ಸ್ವಾಧೀನ ಪಡೆದಿದ್ದಾರೆ.
ವಾಸ್ತುಕಲೆ
ಬದಲಾಯಿಸಿಮಸೀದಿಯಲ್ಲಿ ನಾಲ್ಕು ಸ್ತಂಭಗೋಪುರಗಳಿವೆ. ಪ್ರತಿಯೊಂದು 40 ಮೀ (132 ಅಡಿ) ಎತ್ತರವಿದೆ, ಮತ್ತು ಒಂದು ಪ್ರಾಂಗಣವು ರಸ್ತೆಯ ಮಟ್ಟಕ್ಕಿಂತ ಎತ್ತರಕ್ಕಿದೆ. ಮುಂಭಾಗವು ಎರಡೂ ಕಡೆಗಳಲ್ಲಿ ಪರ್ಷಿಯನ್ ಶಾಸನಗಳೊಂದಿಗೆ ಅಲ್ಲಾಹನ ತೊಂಬತ್ತೊಂಬತ್ತು ಹೆಸರುಗಳನ್ನು ಹೊಂದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Visiting the Jama Masjid". Times of India Travel. Retrieved 2019-11-05.