ಜಾನ್ ವಿಲ್ಸನ್ (ಮತ ಪ್ರಚಾರಕ)

‘’’ಜಾನ್ ವಿಲ್ಸನ್, [೧] (1804–1875) ಒಬ್ಬ ಕ್ರಿಶ್ಚಿಯನ್ ಮತಪ್ರಚಾರಕನಾಗಿ ಯುರೋಪಿನಿಂದ ಭಾರತಕ್ಕೆ ಬಂದು ಮಹಾರಾಷ್ಟ್ರ ರಾಜ್ಯದ ನಾಗರಿಕರಿಗೆ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣಾವಕಾಶ ನೀಡುವ ನಿಟ್ಟಿನಲ್ಲಿ ದುಡಿದರು. 1829 ರಲ್ಲಿ ಅವರು ಇಂಗ್ಲೆಂಡ್ ನಲ್ಲಿಯೇ 'ಮಾರ್ಗರೆಟ್ ಬೇನ್' ಎಂಬ ಮಹಿಳೆಯನ್ನು ಲಗ್ನವಾದರು. ವಿವಾಹದ ಬಳಿಕ ದಂಪತಿಗಳು, ಮುಂಬಯಿ ನಗರಕ್ಕೆ ಕ್ರಿಶ್ಚಿಯನ್ ಮತ ಪ್ರಚಾರಕರಾಗಿ ಆಗಮಿಸಿದರು. ಮುಂಬಯಿ ನಾಗರಿಕರಿಗೆ ಇಂಗ್ಲಿಷ್ ಶಿಕ್ಷಣ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸಮಾಡಲು ಆರಂಭಿಸಿದರು. ಮೊದಲು ಅವರು ಮುಂಬಯಿಯಲ್ಲಿ 'ವಿಲ್ಸನ್ ಕಾಲೇಜ್' ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಕಾಲಕ್ರಮದಲ್ಲಿ 'ಯೂನಿವರ್ಸಿಟಿ ಆಫ್ ಮುಂಬಯಿ'ನ ಸ್ಥಾಪನೆಗೂ ಅವರೇ ಕಾರಣರಾದರು. ಆಗ ಮುಂಬಯಿಯಲ್ಲಿ ಸ್ಥಾಪಿಸಲ್ಪಟ್ಟಿದ್ದ 'ಏಶಿಯಾಟಿಕ್ ಸೊಸೈಟಿ ಆಫ್ ಮುಂಬಯಿ'ಯ ಅಧ್ಯಕ್ಷರಾಗಿ 1835 to 1842 ರ ತನಕ ಕೆಲಸಮಾಡಿದರು. ಮುಂದೆ ಭಾರತದಿಂದ ತಮ್ಮ ತಾಯ್ನಾಡಿಗೆ ಮರಳಿದಾಗ, 'ಚರ್ಚ್ ಆಫ್ ಸ್ಕಾಟ್ಲೆಂಡ್' ನ 'ಮಾಡರೇಟರ್' ಆಗಿ ಸೇರಿಕೊಂಡು ಕೆಲಸನಿರ್ವಹಿಸಿದರು.

ಜೀವನ ಮತ್ತು ಅಧ್ಯಯನ

ಬದಲಾಯಿಸಿ

'ಜಾನ್,' ಬ್ರಿಟನ್ ಸಮೀಪದ ಸ್ಕಾಟ್ಲೆಂಡ್ ನ 'ಲಾಡರ್' ಎಂಬ ಊರಿನಲ್ಲಿ 'ಆಂಡ್ರ್ಯೂ ವಿಲ್ಸನ್', ಹಾಗೂ 'ಜನೆಟ್ ಹಂಟರ್', ಪರಿವಾರದ ಚೊಚ್ಚಲ ಮಗನಾಗಿ 1804, ರಲ್ಲಿ ಜನಿಸಿದರು. ಅವರ ತಂದೆ ತಾಯಿಯರ ೭ ಜನ ಮಕ್ಕಳಲ್ಲಿ ಜಾನ್ ಹಿರಿಯರು. ಅವರಿಗೆ ೩ ಸೋದರರು ಮತ್ತು ೪ ಜನ ಸೋದರಿಯರಿದ್ದರು. ತಂದೆ ಆಂಡ್ರ್ಯೂ ವಿಲ್ಸನ್ ವೃತ್ತಿಯಲ್ಲಿ ಒಬ್ಬ ಕೃಷಿಕರು. ೮೨ ವರ್ಷ ವಯಸ್ಸಿನ ತನಕ ಬದುಕಿದ್ದರು. ಬಾರೋ ನ ಧಾರ್ಮಿಕ ಪ್ರವಚನಗಳ ಆಗಿ ೪೦ ವರ್ಷ ಸೇವೆಸಲ್ಲಿಸಿದ್ದರು ಹಿರಿಯ ಶ್ರದ್ಧಳುವಾಗಿ ಪ್ಯಾರಿಶ್ ನ್ನು ಪ್ರತಿನಿಧಿಸುತ್ತಿದ್ದರು. ತಾಯಿ ಜನೆಟ್ ಹಂಟರ್ ಅವರ ತಂದೆಗೆ ೧೩ ಮಕ್ಕಳಲ್ಲಿ ಹಿರಿಯರು. ತಮ್ಮ ಮತದಲ್ಲಿ ನಂಬಿಕೆ ಶ್ರದ್ಧೆಗಲಿದ್ದು ಸದ್ಧರ್ಮ ಪರಾಯಣರಾಗಿ ೮೨ ವರ್ಷದ ತನಕ ಜೀವಿಸಿದ್ದರು. ಜಾನ್ ಪರಿವಾರ ಲಾಡರ್ ನ ವಿಶಾಲ ೧,೭೦೦ ಎಕರೆ ಹೊಲದ ಪರಿಸರದಲ್ಲಿ ಬೆಳೆದು ದೊಡ್ಡವರಾದರು. 'ಜಾನ್' ತನ್ನ ಎಳೆಯವಯಸ್ಸಿನಲ್ಲೇ ತಮ್ಮ ಒಡನಾಡಿಗಳಿಗಿಂತ ಅತ್ಯಂತ ಹೆಚ್ಚು ಜಾಣ್ಮೆಯನ್ನು ಹೊಂದಿದ್ದರು. ಬೇಗ ಮಾತಾಡಲು ಕಲಿತರು. ಎಲ್ಲ ವಿಷಯಗಳನ್ನು ತಿಳಿಯಲು ಹಿರಿಯರನ್ನು ಸದಾ ಪ್ರಶ್ನಿಸುತ್ತಿದ್ದರು. ಶಾಲೆಯಲ್ಲಿ ಅವರನ್ನು ಒಬ್ಬ 'ಸಂತ'ನೆಂದು ಗೆಳೆಯರು ಕರೆಯುತ್ತಿದ್ದರು. ಆಟದ ಮೈದಾನದಲ್ಲಿದ್ದಾಗಲೂ ಅವರು ತಮ್ಮ ಸ್ನೇಹಿತರಿಗೆ ಏನಾದರು ನೀತಿಯ ಕಥೆ ಹೇಳುತ್ತಿದ್ದರು. ಈ ತರಹದ ಅವರ ವಿಶೇಷ ತಿಳುವಳಿಕೆ ಅವರಿಗೆ ಎಲ್ಲಾ ಸಮಯದಲ್ಲೂ ಸಹಾಯಕಾರಿಯಾಗಿರುತ್ತಿರಲಿಲ್ಲ. ಜಾನ್ ರನ್ನು ಅವರ ತಂದೆಯವರು ೪ ನೆಯ ವಯಸ್ಸಿನಲ್ಲಿ 'ಲಾಡರ್' ನ ಶಾಲೆಯೊಂದಕ್ಕೆ ಭರ್ತಿಮಾಡಿದರು.'ಜಾರ್ಜ್ ಮುರ್ರೆ' ಎನ್ನುವ ಶಿಕ್ಷಕರ ಬಳಿ ಒಂದು ವರ್ಷ ಕಲಿತರು. ಅಲ್ಲಿಂದ ಪ್ಯಾರೀಶ್ ಶಾಲೆಗೆ ಸೇರಿ, 'ಅಲೆಕ್ಸಾಂಡರ್ ಪ್ಯಾಟರ್ಸನ್' ಎಂಬ ಬೋಧಕರ ಮಾರ್ಗದರ್ಶನದಲ್ಲಿ ಅಭ್ಯಾಸಮಾಡಿ, ೧೪ ನೆಯ ವಯಸ್ಸಿನಲ್ಲೇ ಪದವಿಧರರಾದರು. ಪ್ಯಾಟರ್ಸನ್ ಒಬ್ಬ ವಿದ್ವಾಂಸರು. ಅಧ್ಯಾತ್ಮವಿಚಾರಗಳನ್ನು ಅಲ್ಲಿನ ಪರಿಜನರಿಗೆ ಬೊಧಿಸುತ್ತಿದ್ದರು. ಮಕ್ಕಳ ಹಂತದಲ್ಲೂ ಬೋಧಿಸಿ ಅವರ ಆಸಕ್ತಿಗೆ ತಕ್ಕಂತೆ ಉಪನ್ಯಾಸ ಕೊಡುವ ನಿಷ್ಣಾತರಾಗಿದ್ದರು. ಸ್ಕೂಲ್ ಶಿಕ್ಷಣ ಮುಗಿದ ಮೇಲೆ, 'ಜಾನ್ ವಿಲ್ಸನ್, ಏಡಿನ್ಬರ್ಘ್ ವಿಶ್ವವಿದ್ಯಾಲಯಕ್ಕೆ ಸೇರಿದರು. ಭಾಷಾಶಾಸ್ತ್ರ, ತತ್ವಶಾಸ್ತ್ರ, ಥಿಯಾಲಜಿ ವಿಷಯಗಳನ್ನು ೮ ವರ್ಷಗಳ ಕಾಲ ಅಭ್ಯಾಸಮಾಡಿದರು. ಜಾನ್ ವಿಲ್ಸನ್ ರಿಗೆ ಭಾಷೆಗಳನ್ನು ಕಲಿಯಲು ಅಪಾರ ಆಸಕ್ತಿ ಯಿತ್ತು. ಹಲವಾರು ಭಾಷೆಗಳನ್ನು ಕಲಿಯಲು ಪ್ರಯತ್ನಿಸಿ ಪ್ರಭುತ್ವವನ್ನು ಪಡೆದರು. ಗುಜರಾತಿ, ಹಿಬ್ರ್ಯು, ಗ್ರೀಕ್, ಲ್ಯಾಟಿನ್, ಉರ್ದು, ಅರೇಬಿಕ್, ಹಿಂದಿ, ಪರ್ಷಿಯನ್ ಮತ್ತು ಜೆಂಡ್ ಭಾಷೆಗಳಲ್ಲಿ ತಮ್ಮಲ್ಲಿ ಬೋಧಿಸುವ ಶಕ್ತಿಯಿರುವುದನ್ನು ಮನಗಂಡು ಬೋಧಿಸುವ ವಿಷಯದಲ್ಲಿ ಪ್ರಶಿಕ್ಷಣ ಗಳಿಸಿ ೧೮೨೮ ರಲ್ಲಿ ಪದವಿ ಗಳಿಸಿದರು.

ಬೋಧನೆಯ ಆರಂಭ

ಬದಲಾಯಿಸಿ

ಮೊದಲು ತಮ್ಮ ಗೆಳೆಯ 'ಕರ್ನಲ್ ರೋಸ್ ಕಾರ್ಮಾಕ್' ಎಂಬುವರ ೩ ಜನ ಗಂಡು ಮಕ್ಕಳಿಗೆ ಪಾಠ ಹೇಳಿಕೊಟ್ಟು ಮಾರ್ಗದರ್ಶನ ಮಾಡಿದ ಅನುಭವ ಸ್ಮರಣೀಯವಾಗಿತ್ತು. ನೆದರ್ ಲ್ಯಾಂಡ್ ನಲ್ಲಿ ಮಕ್ಕಳನ್ನು ಸುತ್ತಾಡಿಸಲು ಕರೆದುಕೊಂಡು ಹೋದಾಗ ಹೇಳಿಕೊಟ್ಟ ಪಾಠಗಳು ಅವರಮೇಲೆ ಪ್ರಭಾವ ಬೀರಿದ್ದವು. ಹೀಗೆ ವಿಲ್ಸನ್ ರಿಂದ ಕಲಿತ ಯುವಕರು ತಮ್ಮ ಜೀವನದಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿ ಪ್ರಸಿದ್ಧರಾದರು. ಅವರಲ್ಲಿ ಪ್ರಮುಖರು  : ಕಾರ್ಮಾರ್ಕ್, ಪ್ಯಾರಿಸ್ ನಲ್ಲಿ ವೈದ್ಯರಾದರು. ಮುಂದೆ ೪ ವರ್ಷ ಪ್ರವಾಸದಲ್ಲಿ ಕಾರ್ಮಾರ್ಕ್ ಯುವಕರ ಜೊತೆ ಏಡಿನ್ ಬರ ವಿಶ್ವವಿದ್ಯಾಲಯದಲ್ಲಿ ಪ್ರಶಿಕ್ಷಣ ಗಳಿಸಿದರು. ಭಾರತಕ್ಕೆ ಬಂದು ಅಲ್ಲಿನ ಜನರಿಗೆ ಶಿಕ್ಷಣ ಕೊಟ್ಟು ಮಾರ್ಗದರ್ಶನ ಮಾಡುವ ಆಶೆ ಕುಡಿಯೊಡೆಯಿತು ಅದರಲ್ಲೂ ಮುಂಬಯಿ ನಗರದ ಮಕ್ಕಳಿಗೆ ಪಾಠಮಾಡುವ ಪ್ರಬಲ ಆಶೆ ಅವರಿಗಿತ್ತು.

ಶಿಕ್ಷಣ ಪ್ರಸಾರ, ಮೂಲ ಧ್ಯೇಯ

ಬದಲಾಯಿಸಿ

೧829, ರಲ್ಲಿ ತಮ್ಮ ಪದವಿಗಳಿಸಿದ ಮಾರನೆಯ ವರ್ಷ, ವಿಲ್ಸನ್ ತಮ್ಮ ಪತ್ನಿಯ ಜೊತೆ ಮುಂಬಯಿನಗರಕ್ಕೆ ಕ್ರಿಶ್ಚಿಯನ್ ಮತಪ್ರಚಾರಕರಾಗಿ ಪಾದಾರ್ಪಣೆ ಮಾಡಿದರು. ಅವರಿಗೆ ಚರ್ಚ್ ಆಫ್ ಸ್ಕಾಟ್ಲೆಂಡ್ ನ ಬೆಂಬಲವಿತ್ತು. ಮೊದಲು ಮಹಾರಾಷ್ಟ್ರದ ಕೊಂಕಣ ಪ್ರದೇಶದ 'ಹರ್ನಾಯ್' ನಲ್ಲಿ ದಂಪತಿಗಳು ಮರಾಠಿ ಭಾಷೆಯನ್ನೂ ಕಲಿತು ಅಭ್ಯಾಸ ಮಾಡಿದರು.

ಹರ್ನಾಯ್ ನಿಂದ ಬೊಂಬಾಯಿಗೆ ವಾಪಸ್

ಬದಲಾಯಿಸಿ

1831 ರಲ್ಲಿ ಕೊಂಕಣ ಪ್ರದೇಶದ ನಗರ ಹ್ರ್ನಾಯ್ ನಿಂದ, ಮುಂಬಯಿ ನಗರಕ್ಕೆ ವಾಪಸ್ಸಾದರು. ಜಾನ್ ವಿಲ್ಸನ್, 'ಅಮ್ರೋಲಿ ಚರ್ಚ್' ಸ್ಥಾಪಿಸಿದರು. ಸ್ಥಾನೀಯ ಯುವ-ಜನರಿಗೆ ಒಂದು ಶಿಕ್ಷಣ ಸಂಸ್ಥೆಯನ್ನು ತೆರೆಯುವಬಗ್ಗೆ ಅವರಿಗೆ ಸದಾ ಆಸಕ್ತಿಯಿತ್ತು. ೧೮೩೨ ರಲ್ಲಿ ಒಂದು ಇಂಗ್ಲಿಷ್ ಶಾಲೆಯನ್ನು ಆರಂಭಿಸಿದರು. ಹಾಗೆಯೇ ಮುಂದುವರೆದು ಒಂದು ಕಾಲೇಜನ್ನು ೧೮೩೬ ರಲ್ಲಿ ತೆರೆದರು.[] ಅದೇ ಮುಂದೆ 'ವಿಲ್ಸನ್ ಕಾಲೇಜ್' ಎಂಬ ಹೆಸರಿನಲ್ಲಿ ಪ್ರಸಿದ್ಧಿಗೊಂಡಿತು. ಯೋರೋಪಿಯನ್ ಮಾದರಿಯ ಶಾಲೆಯನ್ನು ಮೊದಲು ಸ್ಥಾನೀಯರಿಗೆ ಪರಿಚಯಿಸಿದ ಖ್ಯಾತಿ ಅವರದಾಯಿತು. ಇದರ ಜೊತೆಯಲ್ಲಿ ಉಪಯುಕ್ತ ಪಠ್ಯ ಪುಸ್ತಕಗಳು, ಮತ್ತು ಪರೀಕ್ಷಾ ಪದ್ಧತಿಯನ್ನೂ ವ್ಯವಸ್ಥಿತವಾಗಿ ಜಾರಿಗೆ ತಂದರು. ಹೀಗೆ ಮುಂಬಯಿ ನಗರದಲ್ಲಿ ಬಳಕೆಯಲ್ಲಿದ ಶಿಕ್ಷಣ ಪದ್ಧತಿ ಕಾಲಕ್ರಮದಲ್ಲಿ ಬದಲಾವಣೆಯಾಯಿತು. ೧೮೫೭ ರಲ್ಲಿ ಜಾನ್ ಮುಂಬಯಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಹಾಯಮಾಡಿ, ೧೮೬೯ ರಲ್ಲಿ ಅದರ 'ವೈಸ್ ಛಾನ್ಸಲರ್' ಆಗಿ ನಿಯುಕ್ತರಾದರು. ಮುಂಬಯಿ ನಗರದಲ್ಲಿ ಹೀಗೆ ಪ್ರಚಲಿತವಾದ ಹೊಸ ಶಿಕ್ಷಣ ವ್ಯವಸ್ಥೆಗೆ 'ಮಾರ್ಗರೆಟ್' ರವರ ಕೊಡುಗೆ ಅಮೂಲ್ಯವಾದದ್ದು. ಮಿಸೆಸ್. ಮಾರ್ಗರೆಟ್ ವಿಲ್ಸನ್, ಬಾಲಕಿಯರ ಶಾಲೆಯನ್ನು ೧೮೨೯ ರಲ್ಲಿ ಸ್ಥಾಪಿಸಿದರು. 1832 ಮಾರ್ಗರೆಟ್ ರವರು ಹೆಣ್ಣು ಮಕ್ಕಳ ವಸತಿಗಾಗ ಹಾಸ್ಟೆಲ್ ಸ್ಥಾಪಿಸಿದರು. ಪಶ್ಚಿಮ ಭಾರತದ ಮೊಟ್ಟಮೊದಲ ಬಾಲಕಿಯರ ಸೇಂಟ್ ಕೊಲಂಬಿಯ ಹಾಯ್ ಸ್ಕೂಲ್ ಎಂದು ಹೆಸರುಗಳಿಸಿದೆ. ಕೊಂಕಣ ಪ್ರದೇಶದಲ್ಲಿ ಅಲ್ಲಿನ 'ಸ್ಥಾನಿಯ ಬೇನೆ ಇಸ್ರೇಲಿ ಯಹೂದಿ ಕಮ್ಯುನಿಟಿ'ಗೆ ಮರಾಠಿ ಮತ್ತು ಹಿಬ್ರ್ಯು ಭಾಷೆಯ ಶಾಲೆಗಳನ್ನು ತೆರೆದರು. ಬಾಲಕ, ಬಾಲಕಿಯರಿಗೆ ಪವಿತ್ರ ಬೈಬಲ್ ಗ್ರಂಥದ ಹಳೆಯ ಒಡಂಬಡಿಕೆಯನ್ನು ಅನುವಾದಮಾದಿಕೊಡುವುದು ಅವರ ಆದ್ಯತೆಗಳಲ್ಲೊಂದಾಗಿತ್ತು. ಭಾರತಿಯ ಚಾರಿತ್ರ್ಯಿಕ ಸ್ಮಾರಕಗಳನ್ನು ವ್ಯವಸ್ಥಿತವಾಗಿ ಇರಿಸುವಲ್ಲಿ ಅವರಿಗೆ ಅತಿಯಾದ ಆಸಕ್ತಿಯಿತ್ತು. ಆಗ ಚಾಲ್ತಿಯಲ್ಲಿದ್ದ 'ಏಶಿಯಾಟಿಕ್ ಸೊಸೈಟಿ ಆಫ್ ಮುಂಬಯಿ'ಯ ಗೌರವ ಅಧ್ಯಕ್ಷರಾಗಿ ಕೆಲಸಮಾಡಿದರು. ೧೮೪೮ ರಲ್ಲಿ 'ಮುಂಬಯಿ ಕೇವ್ ಟೆಂಪಲ್ ಕಮಿಷನ್ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಆಸಂಸ್ಥೆಯ ಅಧ್ಯಕ್ಷರಾದರು. 'Archaeological Survey of India.', ೧೮೬೧ ರಲ್ಲಿ ಸ್ಥಾಪನೆಗೆ ಪ್ರೋತ್ಸಾಹ ನಿಡುವವರಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪುಸ್ತಕ ಪ್ರಕಟಣೆ

ಬದಲಾಯಿಸಿ

ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ತಮ್ಮ ಮಿಶನ್ ನ ಪ್ರಾರಂಭದಲ್ಲಿ ಧರ್ಮ, ಸಮಾಜ, ಸಂಸ್ಕೃತಿ, ಕಲೆ, ಯುರೋಪಿಯನ್ನರ ದೃಷ್ಟಿ ಕೋನವನ್ನು ಸೂಚಿಸಿದ್ದಾರೆ.

  • culture and European thought, called The Oriental Christian Spectator, which ran from 1830 to 1862.
  • 1838 A Memoir of Mrs. Margaret Wilson, and in 1850.[]
  • 1838 a Memoir of the Cave Temples and Monasteries and Ancient Remains in Western India.
  • India Three Thousand Years Ago.
  • Parsi Religion (1843),
  • Evangelisation of India (1849),
  • History of the Suppression of Female Infanticide in Western India (1855),
  • Aboriginal Tribes of The Bombay Presidency (1876)
  • Indian Caste (1877).
  • 1838. the origins of the Bene Israel Jewish community of the Konkan region.

ಪುರಾತತ್ವಶಾಸ್ತ್ರಜ್ಞನಾಗಿ ರಚಿಸಿದ ಪುಸ್ತಕಗಳು

ಬದಲಾಯಿಸಿ
  1. 1861 The Caves of Karla (Karla Caves)
  2. 1875 Religious Excavations of Western India: Buddhist, Brahmanical and Jain.

ವಿಲ್ಸನ್ ಕಾಲೇಜ್

ಬದಲಾಯಿಸಿ
  • ೧೪ ಡಿಸೆಂಬರ್, ೧೮೬೧ರಲ್ಲಿ ವಿಲ್ಸನ್ ಕಾಲೇಜಿನ ಕಾಲೆಜಿಯೇಟ್ ವಿಭಾಗ, ವಿಲ್ಸನ್ಸ್ ಇನ್ಸ್ಟಿಟ್ಯೂಶನ್ ಫ್ರೀ ಜನರಲ್ ಅಸೆಂಬ್ಲಿಸ್ ಇನ್ಸ್ಟಿಟ್ಯೂಶನ್ ಎಂಬ ಹೆಸರಿನಲ್ಲಿ ಖಾಸಗಿಯಾಗಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ಸೇರಿದ ಮೊಟ್ಟಮೊದಲ ಸಂಸ್ಥೆಯೆಂದು ಹೆಸರು ಪಡೆಯಿತು ೧೯೫೨,ರಲ್ಲಿ ಕಾಲೇಜಿನ ಸಂಸ್ಥಾಪಕರು ಸ್ವಾಯತ್ತತೆಯನ್ನು ಭಾರತದ ಪಡೆದ ಮೊದಲ ಸಮಿತಿ ಎಂದು ಹೆಸರಾಯಿತು.
  • ೧೯೬೩ ರಿಂದ ಮುಂದೆ, ಜಾನ್ ವಿಲ್ಸನ್ ಪ್ರಶಿಕ್ಷಣ ಸಂಘದ ಆಶ್ರಯದಲ್ಲಿ ಕೆಲಸಗಳು ನಡೆದವು. ಕ್ರಿಶ್ಚಿಯನ್ ಅಲ್ಪ ಸಂಖ್ಯಾತ ಜನಾಂಗದ ಸಂಸ್ಥೆ ಸಿ.ಎನ್.ಐ. ಗೆ ಹತ್ತಿರದಲ್ಲಿದೆ. ಭಾರತಡ ಕ್ರಿಶ್ಚಿಯನ್ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಹಾಗೂ ನೌಕರಿಯ ಅವಕಾಶಕೊಡುವ ಧ್ಯೇಯವನ್ನು ಹೊಮ್ದಿತ್ತು. ಇದಲ್ಲದೆ ಇತರ ಸಮುದಾಯಗಳಿಗೂ-ಸೇವೆಗಳನ್ನು ಸೌಲಭ್ಯಗಳನ್ನು ಒದಗಿಸುವುದು, ಅವರ ಆಶಯಗಳಲ್ಲೊಂದಾಗಿತ್ತು.

ದ ವಿಲ್ಸೋನಿಯನ್ ಎಂಬ ಪತ್ರಿಕೆ

ಬದಲಾಯಿಸಿ

'ವಿಲ್ಸೋನಿಯನ್' ವಿಲ್ಸನ್ ಕಾಲೇಜಿನ ವಾರ್ಷಿಕ ಪತ್ರಿಕೆ, ಮೊಟ್ಟಮೊದಲು ಪುಣೆಯಿಂದ ಅಚ್ಚಾಗಿ ಪ್ರಕಟವಾಯಿತು. ಸ್ಕಾಟಿಶ್ ಮಿಶನ್ ಇಂಡಸ್ಟ್ರೀಸ್ ಕಂ.(.ಲಿಮಿಟೆಡ್) ವತಿಯಿಂದ ಕಾಲೇಜಿನ ಲೈಬ್ರೆರಿ ಸೊಸೈಟಿಯ ಪರವಾಗಿ ಮೊದಲನೆಯ ಸಂಚಿಕೆ ೧೯೦೯ ರಲ್ಲಿ ವಿದ್ಯಾರ್ಥಿಗಳಿಗೆ ದೊರೆಯಿತು ೧೯೩೩ ರ ವರೆಗೆ ಪತ್ರಿಕೆಯಲ್ಲಿ ಎಲ್ಲೂ ಸಂಪಾದಕರ ಹೆಸರು ಮುದ್ರಿಸುತ್ತಿರಲಿಲ್ಲ. ವರ್ಷಕ್ಕೆ ೨ ಬಾರಿ, ೧೯೦೯ ರಿಂದ ೧೯೪೪ ರ ವರೆಗೆ ನಂತರ ವರ್ಷಕ್ಕೊಮ್ಮೆ ಪ್ರಕಟವಾಗುತ್ತಿತ್ತು. ವಿದ್ಯಾರ್ಥಿಗಳು ಎಲ್ಲಾ ಜಾತಿವರ್ಗ, ಸಾಮಾಜಿಕ ವ್ಯವಸ್ಥೆ ಯಿಂದ ಬಂದ ವಿಶ್ವದ ಯಾವುದೇ ಭಾಗದ ವಿದ್ಯಾರ್ಥಿಗಳಿಗೆ ಒದಗಿಸುವ ಧ್ಯೇಯವನ್ನು ಹೊಂದಿದೆ. 'Be thou the bond to bind in love, and peace. Wilsonians all that are, And were, and are to be'.

ವಿಲ್ಸನ್ ರ ಮರಣಾನಂತರ

ಬದಲಾಯಿಸಿ

೧೮೭೫ ರಲ್ಲಿ ರೆವರೆಂಡ್ .ಡಾ. ವಿಲ್ಸನ್ ರ ನಿಧನದ ಬಳಿಕ, ಡಾ. ಡುಗಾಲ್ಡ್ ಮೆಕಿಚನ್ ಎಂಬುವರು ಉತ್ತರಾಧಿಕಾರಿಯಾಗಿ ಮೊದಲು ೬ ತಿಂಗಳ ಕಾಲ ಶ್ರಮಿಸಿದರು. ನಂತರ ೯ ವರ್ಷಗಳ ಕಾಲ ತಮ್ಮ ಸೇವೆಯನ್ನು ಮುಂದುವರೆಸಿದರು. ೧೯೨೦ ರವರೆಗೆ ಪ್ರಾಂಶು ಪಾಲರಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು . ಭೌತಶಾಸ್ತ್ರದ, ಲ್ಯಾಬೊರೇಟೊರಿಯನ್ನು ಸ್ಥಾಪಿಸಿದರು. ಬ್ರಿಟಿಷ್ ವಿಜ್ಞಾನಿ ಲಾರ್ಡ್ ಕೆಲ್ವಿನ್ ಜೊತೆ ಕೆಲಸಮಾಡಿದ್ದ ಅನುಭವವಿತ್ತು. ೨೦೦೪ ರಲ್ಲಿ ಭಾರತ ಸರಕಾರದ ಅಂಚೆ ಇಲಾಖೆ ವಿಲ್ಸನ್ ಕಾಲೇಜಿನ ಸ್ಥಾಪಕರನ್ನು ಹಾಗೂ ಸಂಸ್ಥೆಯ ಸೇವಾ ಕಾರ್ಯಕುಶಲತೆಯನ್ನು ಶ್ಲಾಘಿಸಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಮಾಡಿತು. ೨೦೦೭ ರಲ್ಲಿ ೧೭೫ ವರ್ಷಗಳ ಸೇವೆಯನ್ನು ಸ್ಮರಿಸಿ ಆಯೋಜಿಸಿದ ದಲ್ಲಿ ಅಂಚೆ ಚೀಟಿ, ಮತ್ತು ಮೊದಲದಿನದ ಲಿಫಾಫವನ್ನು (First day cover) ಸಾರ್ವಜನರಿಗೆ ಬಿಡುಗಡೆಮಾಡಿದರು.

ವಿಲ್ಸನ್ ಕಾಲೇಜ್ ಕಟ್ಟಡ

ಬದಲಾಯಿಸಿ

ವಿಶಾಲವಾದ ಮೊದಲ ಅಂತಸ್ತಿನ ಶಾಲಾ ಕೊಠಡಿಯಲ್ಲಿ ಟೀಕ್ ವುಡ್ ಕಮಾನುಗಳು, ಕಿಟಕಿಗಳು. ಈ ಕೊಠಡಿಗಳಿಗೆ ಹೊದಿಕೊಂಡ ಭಾರಿ ವರಾಂಡಗಳು ಗಿರ್ಗಾಮ್ ಚೌಪಾತಿ ಬೀಚಿಗೆ ಅಭಿಮುಖವಾಗಿ ಮಂಗಳೂರು ಹೆಂಚಿನ ಛಾವಣಿ ವಿನ್ಯಾಸವನ್ನು ಹೊಂದಿವೆ. ಕಟ್ಟಡ ಮತ್ತೊಂದು ವಿಶೇಶತೆಯೆಂದರೆ ವರಾಂಡ. ಕಮಾನಿನ ಆಕಾರದ ಸಾಂಡ್ ಸ್ಟೋನ್ ನಿರ್ಮಿತ ಗ್ರೌಂಡ್ ಫ್ಲೋರ್, ವರಾಂಡ ಹೊರಗೆ ಚಾಚಿದ ಶೈಲಿ ಪಶ್ಚಿಮದ ಮುಖದ್ವಾರದಲ್ಲಿ ಸಮುದ್ರಕ್ಕ ಅಭಿಮುಖವಾಗಿ ತಾತ್ಕಾಲಿಕ ಸ್ಮ್ರುತಿ ಸಂಗ್ರಹವನ್ನು ಕ್ಲಾಸ್ ರೂಂ ಮತ್ತು ಹೊರ ಆವರಣ, ಮಳೆ ಮತ್ತು ಸೂರ್ಯನ ತಾಪಕ್ಕೆ ಒಡ್ಡಿವೆ. ಆಗಿನಕಾಲದ ನಿರ್ಮಾಣದಲ್ಲಿ ಕಾಲೇಜ್ ವರಾಂಡದ ನೆಲಕ್ಕೆ ಮಿಂಟನ್ ಇಟ್ಟಿಗೆಗಳನ್ನು ಅಳವಡಿಸಲಾಗಿದೆ. ಮೆಟ್ಟಲುಗಳಿಗೆ ಸೊಗಸಾದ ಮೊಸಾಯಿಕ್ ಚಪ್ಪಡಿಗಳನ್ನು ಬಳಸಲಾಗಿದೆ. ಹೂವಿನ ಚಿತ್ರಗಳ ವಿನ್ಯಾಸ.ನೆಲಕ್ಕೆ ಕೆಂಪು ಟೆರ್ರಾಕೋಟ ಚಪ್ಪಡಿಗಳು. ಮೊದಲ ಮಹಡಿಯಲ್ಲಿ ಎರಡನೆಯ ಮಹಡಿಗೆ ಬೇರೆತರಹದ ವಿನ್ಯಾಸದ ನೆಲವಿದೆ. ಮೊದಲು ಅಳವಡಿಸಿದ ಟೀಕ್ ವುಡ್ ದ್ವಾರಗಳು, ಮತ್ತು ಕಿಟಕಿಗಳು ಇಂದಿಗೂ ಸುವ್ಯವಸ್ಥಿತವಾಗಿದ್ದು ಒಳ್ಳೆಯ ಸ್ಥಿತಿಯಲ್ಲಿವೆ.

ಉಲ್ಲೇಖಗಳು

ಬದಲಾಯಿಸಿ
  1. Indian Caste,(Two Volumes)By the late John Wilson D.D; FRS; In two volumes, Vol.I, 1877
  2. Memoir of Mrs. Margaret Wilson, of the Scottish Mission, Bombay : Including Extracts of her letters and Journals. 1844

ಹೊರ ಸಂಪರ್ಕಗಳು

ಬದಲಾಯಿಸಿ