ಜಾನ್ ಡನ್ಸ್ಟಬಲ್
ಜಾನ್ ಡನ್ಸ್ಟಬಲ್ ( 1385-1453) ಆಂಗ್ಲ ಸಂಗೀತ ಕೃತಿಕಾರ.
ಜೀವನ
ಬದಲಾಯಿಸಿಹುಟ್ಟಿದ್ದು ಬೆಡ್‍ಫರ್ಡ್ ಷೈರ್‍ನಲ್ಲಿರುವ ಡನ್‍ಸ್ಟಬಲ್‍ನಲ್ಲಿ ಎಂದು ಊಹಿಸಲಾಗಿದೆ. ಈತನ ಜೀವನದ ಬಗೆಗೆ ದೊರೆತಿರುವ ಮಾಹಿತಿ ಅತ್ಯಲ್ಪ. 1419ರಿಂದ ಸುಮಾರು 20 ವರ್ಷಗಳ ಕಾಲ ಒಂದೆರಡು ಕ್ರೈಸ್ತಮಠಗಳಲ್ಲಿ ಅಧಿಕಾರಿಯಾಗಿದ್ದು ವೇತನ ಪಡೆಯುತ್ತಿದ್ದನಾಗಿ ತಿಳಿಯುತ್ತದೆ. ಈತನ ಅಧಿಕಾರ ನಿರ್ವಹಣೆಗೆ ಸ್ಥಳೀಯವಾಸ ಅನಗತ್ಯವಾಗಿರಬೇಕು. ಅಲ್ಲದೆ ಈತನ ವೇತನವೂ ಡ್ಯೂಕ್ ಆಫ್ ಬೆಡ್‍ಫರ್ಡ್‍ಷೈರ್‍ನ ಶಿಫಾರಿಸಿನಿಂದಾಗಿ ದಒರೆತ ಒಂದು ಬಗೆಯ ಆರ್ಥಿಕ ದೇಣಿಗೆಯಾಗಿರಬೇಕು. ಏಕೆಂದರೆ ಈತನ ತನ್ನ ಕಾರ್ಯಕಾರೀ ಜೀವನದ ಹೆಚ್ಚುಭಾಗವನ್ನು ಫ್ರಾನ್ಸಿನಲ್ಲಿ ಐದನೆಯ ಹೆನ್ರಿಯ ರಾಯಭಾರಿಯಾಗಿದ್ದ ಅವನ ತಮ್ಮ ಡ್ಯೂಕ್ ಆಫ್ ಬೆಡ್‍ಫರ್ಡ್‍ಷೈರ್‍ನ ಊಳಿಗದಲ್ಲಿ ಪ್ಯಾರಿಸಿನಲ್ಲಿ ಕಳೆದ.
ಸಂಗೀತದಲ್ಲಿ ಸಾಧನೆ
ಬದಲಾಯಿಸಿಇವನ 21 ಸಂಗೀತ ಕೃತಿಗಳು ಯೂರೋಪಿನ ಭಾಷೆಗಳ ಹಾಗೂ 9 ಇಂಗ್ಲಿಷಿನ ಹಸ್ತಪ್ರತಿಗಳ್ಲಲಿ ದೊರೆತಿವೆ. ಯೂರೋಪಿನ ಅದರಲ್ಲೂ ಹೆಚ್ಚಾಗಿ ಫ್ರಾನ್ಸಿನ ಸಂಗೀತದ ಬಎಳೆವಣಿಗೆಯ ಮೇಲೆ ಪ್ರಭಾವಬೀರಿದ ಅತ್ಯಲ್ಪಸಂಖ್ಯೆಯ ರಚನಾಕಾರರಲ್ಲಿ ಇವನೊಬ್ಬ. ಇದನ್ನು ಇವನ ಸಮಕಾಲೀನರಾದ ಮಾರ್ಟಿನ್ ಲೆ ಫ್ರಾಂಕ್ ಮೊದಲಾದವರು ಒಪ್ಪಿಕೊಂಡಿದ್ದಾರೆ. ಫ್ರೆಂಚ್ ಸಂಗೀತ ಇವನಿಂದ ಪ್ರಭಾವಿತವಾಯಿತೆಂದು ಎಲ್ಲ ಸಂಗೀತ ಇತಿಹಾಸಕಾರರೂ ಒಪ್ಪಿಕೊಂಡಿರುವರಾದರೂ ಆ ಪ್ರಭಾವದ ಸ್ವರೂಪ ಲ್ಕಷಣದ ಬಗೆಗೆ ಬಹುಕಾಲ ಒಮ್ಮತವಿರಲಿಲ್ಲ. ಆದರೆ ಇವನ ಸಮಗ್ರ ಕೃತಿಗಳ ಸಂಪಾದಕ ಮ್ಯಾನ್‍ಫ್ರೆಡ್ ಬಹುಕಾಫ್ಜರ್ ಮ್ಯೂಸಿಕಾ ಬ್ರಿಟಾನಿಕಾದಲ್ಲಿ (ಸಂಪುಟ 8, 1953) ಅದನ್ನು ವಿಶದಗೊಳಿಸಿದ್ದಾನೆ. ಸ್ವರಮೇಳ ಮತ್ತು ತಾಳಬದ್ಧತೆಯಲ್ಲುಂಟಾದ ಸಡಿಲವೇ ಈ ಪ್ರಭಾವದ ಪರಿಣಾಮ. ಆರನೆಯ ಹೆನ್ರಿಯ ಫ್ರೆಂಚ್ ಪಟ್ಟಾಭಿಷೇಕೋತ್ಸವಕ್ಕಾಗಿ ಡನ್‍ಸ್ಟಬಲ್ 1431ರಲ್ಲಿ ಎರಡು ಸಂಗೀತಕೃತಿಗಳನ್ನು ರಚಿಸಿದ. ವೇಣೀ ಸ್ಯಾಂಕ್ಟೆ ಸ್ಟಿರಿಟಸ್-ವೇಣಿ ಕ್ರಿಯೇಟರ್ ಸ್ಟಿರಿಟಸ್ ಎಂಬ ಪ್ರಸಿದ್ಧ ಮೊಟೆಟ್ (ಬೈಬಲ್ಲಿನ ವಚನಗಳನ್ನೇ ಹಾಡುಗಾರಿಕೆಗೆ ಹೊಂದಿಸಿ ಕಟ್ಟಿದ ಸಂಗೀತಕೃತಿ) ಅವುಗಳಲ್ಲೊಂದು. ಇವನ ಸಂಗೀತಕೃತಿಗಳ ಹಎಚ್ಚು ಹಸ್ತಪ್ರತಿಗಳು ಉಳಿದಿಲ್ಲ. ಉಳಿದಂಥವು ಮಾಸಸ (ಆರಾಧನಾ ಸಂಗೀತ) ಮತ್ತು ಮೋಟೆಟ್ಟುಗಳ ಹಸ್ತಪ್ರತಿಗಳು ಮಾತ್ರ. ಮೂರು ಕೃತಿಗಳು 15ನೆಯ ಶತಮಾನದ ಜರ್ಮನ್ ಹಸ್ತಪ್ರತಿ ಬಕ್ಸ್‍ಹೀಮ್ ಆರ್ಗನ್ ಪುಸ್ತಕದಲ್ಲಿವೆ. ಲಂಡನ್ನಿನ ದೊಡ್ಡ ಬೆಂಕಿಯಲ್ಲಿ ಭಸ್ಮವಾಗುವುದಕ್ಕಿಂತ ಮೊದಲು ಕಾಖಲಾದ ಇವನ ಸಮಾಧಿಲೇಖದಲ್ಲಿ ಈತ ಗಣಿತ ಖಗೋಳವಿಜ್ಞಾನ ಮತ್ತು ಸಂಗೀತಗಳಲ್ಲಿ ಪರವೀಣನಿದ್ದನೆಂದು ಉಲ್ಲೇಖಿಸಿದೆ. ಈತನ ಎಲ್ಲ ಸಂಗೀಕೃತಿಗಳ ಹಸ್ತಪ್ರತಿಗಳೂ ಮುಂದಿನ ಪೀಳಿಗೆಗೆ ದೊರೆಯದಂತಾಗಿರುವುದು ವಿಷಾದದ ಸಂಗತಿ. ಉಳಿದುಕೊಂಡಿರುವ ಚರ್ಚ್‍ಸಂಗೀತಕೃತಿಗಳಲ್ಲಿ ಇವನ ಆಧುನಿಕತೆ ಕಂಡುಬರುತ್ತದೆ. ಮೊತ್ತಮೊದಲ ಇಂಗ್ಲಿಷ್ ಕೃತಿಕಾರನಾಗಿದ್ದ ಈತ 15ನೆಯ ಶತಮಾನದ ನವಸಂಗೀತದ ನಿರ್ಮಾಣಕಾರರಲ್ಲೊಬ್ಬನೆಂದು ಹೆಸರುವಾಸಿಯಾಗಿದ್ದಾನೆ.