ಜಾನ್ ಕ್ಯಾಮರಾನ್


ಬೆಂಗಳೂರಿನಲ್ಲಿ ಲಾಲ್ ಬಾಗ್ ನ, ’ಕ್ಯೂರೇಟರ್’ ಆಗಿ :

ಬದಲಾಯಿಸಿ

೧೮೭೪ ರಿಂದ ೧೯೦೮ ರವರೆಗೆ, ೩೪ ವರ್ಷಗಳಷ್ಟು ದೀರ್ಘಕಾಲ ಬೆಂಗಳೂರಿನ ಲಾಲ್ ಬಾಗ್ ಸಸ್ಯತೋಟದ ಕ್ಯೂರೇಟರ್ ಆಗಿ, ಕಾರ್ಯನಿರ್ವಹಿಸಿದ ಜಾನ್ ಕ್ಯಾಮರಾನ್, ತಮ್ಮ ಆಡಳಿತಾವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಥಾನ ಗೊಳಿಸಿದರು. ಸಸ್ಯಶಾಸ್ತ್ರ ಪರಿಣತರಾದ ಕ್ಯಾಮರಾನ್, ಲಂಡನ್ "ರಾಯಲ್ ಬಟಾನಿಕಲ್ ಗಾರ್ಡನ್" ನಲ್ಲಿ ತಾವು ಪಡೆದ ವಿಶೇಷ ತರಬೇತಿಯನ್ನು ಉಪಯೋಗಿಸಿ, ಲಾಲ್ ಬಾಗ್ ನ್ನು, ವಿಶ್ವದ ಅಗ್ರಗಣ್ಯ ಸಸ್ಯೋದ್ಯಾನವನ್ನಾಗಿ ರೂಪಿಸಿದರು. ದೇಶ-ವಿದೇಶಗಳಿಂದ ಅನೇಕ ಪ್ರಕಾರದ ಸಸ್ಯಗಳನ್ನು ತರಿಸಿ, ಅವನ್ನು ನೆಟ್ಟು, ಪಳಗಿಸಿ, ಬೆಳವಣಿಗೆಯನ್ನು ಅಭ್ಯಸಿಸಿ, ಸಾರ್ವಜನಿಕ ಬೇಸಾಯಕ್ಕೆ ಬಿಡುಗಡೆ ಮಾಡಿದರು. ಆ ಸಸ್ಯಗಳು, ಮೈಸೂರು ರಾಜ್ಯದಲ್ಲಿ ವ್ಯಾಪಕವಾಗಿ ಬೇಸಾಯಗೊಂಡವು.

ಅನೇಕ ಹೊಸ ಹೊಸ ತರಕಾರಿ ತಳಿಗಳು, ಮತ್ತು ಹಣ್ಣು ಹಂಪಲುಗಳು :

ಬದಲಾಯಿಸಿ

೧೮೮೭-೮೮ ರಲ್ಲಿ ಕ್ಯಾಮರಾನ್, ಸೇಬಿನ ೧೭ ತಳಿಗಳನ್ನು ಯೂರೋಪಿನಿಂದ ತರಿಸಿ, ಪಳಗಿಸಿ, ಅಭ್ಯಸಿಸಿದಾಗ, "ರೋಮ್ ಬ್ಯೂಟಿ," ಎಂಬ ತಳಿ, ಬೆಂಗಳೂರಿನ ಹವಮಾನಕ್ಕೆ ಹೊಂದಿಕೊಂಡು ಹೆಚ್ಚಿನ ಇಳುವರಿ ಕೊಟ್ಟಿತು. ಈ ಸೇಬು, ಸುಮಾರು ೧,೦೦೦ ಎಕರೆಯಲ್ಲಿ ಬೆಳೆದದ್ದನ್ನು ಬೆಂಗಳೂರಿನಲ್ಲಿ ನೆಲಸಿದ್ದ ಸಾವಿರಾರು ಯೂರೋಪಿಯನ್ ಪರಿವಾರದವರು ಬಹುವಾಗಿ ಮೆಚ್ಚಿಕೊಂಡರು. ಮರುಕಟ್ಟೆಯಲ್ಲಿ ಈ ತಳಿ ಜನಪ್ರಿಯವಾದಂತೆಲ್ಲಾ, ರೈತರಿಗೆ ಹೆಚ್ಚಿನ ವರಮಾನ ದೊರೆಯಿತು. ಸೇಬು ಅದಿನಗಳಲ್ಲಿ ಅತ್ಯಂತ ಹೆಚ್ಚು ಆದಾಯ ತರುವ ಬೆಳೆಯಾಗಿತ್ತು.

ಸೀಮೆಬದ್ನೇಕಾಯಿ ಬೆಳೆಯನ್ನು, ಪರಿಚಯಿಸಲು ಅವರು ಪ್ರಾರಂಭಿಸಿದ ಬಗೆ, ಸ್ವಾರಸ್ಯವಾಗಿದೆ. ೧೮೯೦ ರಲ್ಲಿ ಅವರು ಕೇವಲ, ೩ ಸೀಮೆ ಬದ್ನೆಕಾಯಿಗಳನ್ನು ಶ್ರೀಲಂಕಾದಿಂದ ತಂದು, ಅವನ್ನು ಲಾಲ್ ಬಾಗ್ ನಲ್ಲಿ ಬೆಳೆಸಿ ವೃದ್ಧಿಪಡಿಸಿದರು. ಬೆಂಗಳೂರಿನ ಹವಾಗುಣದಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಸೀಮೆಬದನೇಕಾಯಿ ಬೆಳೆ, ಅಪಾರ ಸಂಖ್ಯೆಯ ಕಾಯಿ ಬಿಡುತ್ತಿತ್ತು. ಆದರೆ ರೈತರಿಗೆ ಇದರಬಗ್ಗೆ ತಿಳುವಳಿಕೆ ನೀಡುವುದು ಆಗ ಅಗತ್ಯವಾಗಿತ್ತು. ಏಕೆಂದರೆ ಅದು ಸಂಪೂರ್ಣ ವಿದೇಶಿ ಮತ್ತು ವಿಚಿತ್ರ ಆಕಾರದ್ದು. ಕ್ಯಾಮರಾನ್ ಪ್ರತಿದಿನ ಬೆಂಗಳೂರಿನ ತರಕಾರಿಮಾರುಕಟ್ಟೆಗೆ ಕುದುರೆಯಮೇಲೆ ಸವಾರಿ ಮಾಡುತ್ತಾ, ಗ್ರಾಮಾಂತರಗಳಿಂದ ಬರುತ್ತಿದ್ದ ರೈತರಿಗೆ ಸೀಮೆ ಬದನೆಕಾಯಿಗಳನ್ನು ಪುಕ್ಕಟೆಯಾಗಿ ಕೊಟ್ಟು, ಅದರ ವ್ಯವಸಾಯಮಾದಲು ತಿಳಿಸಿ ಹೇಳಿ, ಪ್ರೋತ್ಸಾಹಿಸುತ್ತಿದ್ದರು. ಅಧಿಕ ಇಳುವರಿಕೊಡುವ, ರುಚಿಕರ ತರಕಾರಿ, ಸರ್ವಋತು ಸಫಲತ್ಯನ್ನು ಕಂಡಿತು. ರೈತರ ಆದಾಯದಲ್ಲಿ ಹೆಚ್ಚುವರಿ ಆಯಿತು. ಇಂತಹ ಒಳ್ಳೆಯ ಕಾರ್ಯಗಳಲ್ಲಿ ಧನ್ಯತೆಯನ್ನು ಕಂಡುಕೊಂಡ ಕ್ಯಾಮರಾನ್, ಸರ್ವಕಾಲಸ್ಮರಣೀಯರು.


೧೯ ನೆಯ ಶತಮಾನದಲ್ಲಿ ತಮ್ಮ ಅಪಾರ ಪರಿಶ್ರಮದಿಂದ ಮೈಸೂರಿನ ( ಈಗ ಕರ್ನಾಟಕದ ) ತೋಟಗಾರಿಕೆಗೆ ಒಂದು ಮೂರ್ತ ಸ್ವರೂಪವನ್ನು ನೀಡಿದ ಈ ಮಹಾನ್ ವ್ಯಕ್ತಿಗೆ, "ಮೈಸೂರು ತೋಟಗಾರಿಕೆಯ ಪಿತಾಮಹ," ಎನ್ನುವ ಹೆಸರು ಸಲ್ಲುತ್ತದೆ.

ಹಣ್ಣುಗಳು :

ಬದಲಾಯಿಸಿ

ಬೆಂಗಳೂರು 'ಬ್ಲ್ಯೂ'ದ್ರಾಕ್ಷಿ, ಬೆಂಗಳೂರು ಸೇಬು- ’ರೋಮ್ ಬ್ಯೂಟಿ’.

ತರಕಾರಿಗಳು :

ಬದಲಾಯಿಸಿ

ಎಲೆಕೋಸು, ಹೂಕೋಸು, ನವಿಲುಕೋಸು, ತಿಂಗಳ ಅವರೆ[ಫ್ರೆಂಚ್ ಬೀನ್ಸ್] ಕ್ಯಾರೆಟ್[ಗಜ್ಜರಿ] ಮೂಲಂಗಿ, ಲೆಟ್ಯೂಸ್ ಇತ್ಯಾದಿ ಮುಖ್ಯವಾದವುಗಳು.

ಚಳಿಗಾಲದ ವಿಶೇಷ ತರಕಾರಿಗಳು :

ಬದಲಾಯಿಸಿ

ಟರ್ನಿಪ್, ಲೆಟ್ಯೂಸ, ರುಬಾರ್ಬ್, ಸೆಲರಿ, ಸ್ಪಿನಾಚ್, ಬೀಟ್ ರೂತ್, ಬಟಾಣಿ ಇತ್ಯಾದಿಗಳನ್ನು ಬೆಂಗಳೂರಿನ ರೈತರಿಗೆ ಪರಿಚಯಿಸಿದರು.

ಬೇರೆ ವಾಣಿಜ್ಯಬೆಳೆಗಳು :

ಬದಲಾಯಿಸಿ

ಪ್ಯಾರಾರಬ್ಬರ್, ಹಿಪ್ಪುನೇರಳೆ,, ಉಪವರ್ಗ : ತೋಟಗಾರಿಕೆ.

-ಡಾ. ಎಸ್. ವಿ. ಹಿತ್ತಲಮನಿ. " ತ್ರಿವಿಕ್ರಮ ಹೆಜ್ಜೆಗಳು", ಸಂಪಾದಕರು : ಟೀ. ಆರ್. ಅನಂತರಾಮು.