ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜಾನುವೈದ್ಯ - ವೈದ್ಯನಾಥ ದೈವದೊಂದಿಗೆ ಜಾನು ಬೈದ್ಯನಿಗೂ ಕೆಲವು ಕಡೆಗಳಲ್ಲಿ ಕಟ್ಟು ಕಟ್ಟಳೆಯ ನೇಮ ಸಲ್ಲುತ್ತದೆ. ಈತ ಬಂಟ್ವಾಳ ತಾಲೂಕಿನ ಸುಜಿರು ವೈದ್ಯನಾಥ ಸ್ಥಾನದ ಮೂಲ ಪುರುಷ ಹಾಗೂ ವೈದ್ಯನಾಥ ದೈವದ ಆರಾಧನೆಯ ಮೂಲ ಪುರುಷನೆಂದು ಹೇಳುತ‍್ತಾರೆ. ಈತ ಹೆಸರಾಂತ ನಾಟಿ ವೈದ್ಯನಾಗಿದ್ದನು. ಜಾನು ಬೈದ್ಯನ ಸ್ಮರಣಾರ್ಥವಾಗಿ ವೈದ್ಯನಾಥ ದೈವದ ಆರಾಧನೆಯ ಸಂಧರ್ಭದಲ್ಲಿ ಕೆಲವು ಕಡೆಗಳಲ್ಲಿ ಬಿಲ್ಲವ ಜನಾಂಗದ ಪೂಜಾರಿಯೊಬ್ಬರು ಮಣ್ಣಿನ ಕುಡಿಕೆಯಲ್ಲಿ ಗಿಡ ಮೂಲಿಕೆಯ ಔಷಧಿಗಳನ್ನು ತುಂಬಿಸಿ ಅದರ ಮೇಲ್ಭಾಗದ ಬಾಯಿಗೆ ಬಟ್ಟೆ ಕಟ್ಟಿ ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ವೈದ್ಯನಾಥ ದೈವದೊಂದಿಗೆ ಜೊತೆಯಾಗಿ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಪದ್ಧತಿ ಬಂಟ್ವಾಳ ತಾಲೂಕಿನ ಬಾಕಿಲ ಹಾಗೂ ಹಲವೆಡೆ ಆಚರಣೆಯಲ್ಲಿದೆ. ಇದು ಬಿಲ್ಲವರ ಪುರಾತನ ವಂಶಪಾರಂಪರ್ಯವಾದ ವೈದ್ಯ ವಿದ್ಯೆಯನ್ನು ಪ್ರತಿನಿಧಿಸುತ್ತದೆ.