ಜಾಕ್ ಆರ್ಸೇನ್ದ್ ಆರ್ಸಾನ್ವಾಲ್

ಜಾಕ್ ಆರ್ಸೇನ್ದ್ ಆರ್ಸಾನ್ವಾಲ್, ೧೮೫೧-೧೯೪೦ ಫ್ರೆಂಚ್ ಭೌತವಿಜ್ಞಾನಿ.

ಬದುಕು ಮತ್ತು ಸಾಧನೆ ಬದಲಾಯಿಸಿ

ಜನನ ಲಾಬೋರಿಯಲ್ಲಿ (೧೮೫೧). ೧೮೮೨ರ ವೇಳೆಗೆ ಈತ ಕಾಲೇಜ್ ದ ಫ್ರಾನ್ಸ್ ಎಂಬ ವಿದ್ಯಾಲಯದಲ್ಲಿ ಜೀವಭೌತವಿಜ್ಞಾನದ ಪ್ರಯೋಗಶಾಲೆಯ ಮುಖಂಡನಾಗಿ, ೧೮೯೪ರಲ್ಲಿ ಪ್ರಾಧ್ಯಾಪಕನಾದ. ಭೌತವಿಜ್ಞಾನಕ್ಕೆ ಈತ ಮಾಡಿದ ಮುಖ್ಯ ಉಪಕಾರ ಈತನ ಹೆಸರುಳ್ಳ ವಿದ್ಯುತ್ಪ್ರವಾಹಮಾಪಕದ ನಿರ್ಮಾಣ. ಇದರಲ್ಲಿ ಅಯಸ್ಕಾಂತ ಧ್ರುವಗಳ ಮಧ್ಯೆ ಒಂದು ಸುರುಳಿಯನ್ನು ತೆಳುವಾದ (ಫಾಸ್ಫಾರ್ ಬ್ರಾನ್ಸ್ ನಿಂದ ಮಾಡಿದ) ಎಳೆಯ ತುದಿಯಲ್ಲಿ ನೇತುಹಾಕಿದ್ದು, ವಿದ್ಯುತ್ಪ್ರವಾಹ ಹರಿದಾಗ ಸುರುಳಿ ತಿರುಗುವುದನ್ನು ತೋರಿಸಲು ಒಂದು ಸಣ್ಣ ಕನ್ನಡಿಯನ್ನು ಸುರುಳಿಯ ಮುಖದಲ್ಲಿ ಸೇರಿಸಿರುತ್ತಾರೆ. ಇದಲ್ಲದೆ ಈತ ಹೆಚ್ಚು ಆವೃತ್ತಿಯ ಪರ್ಯಾಯ ವಿದ್ಯುತ್ಪ್ರವಾಹಗಳನ್ನು ವೈದ್ಯವಿಜ್ಞಾನದಲ್ಲಿ ಪ್ರಯೋಗಿಸಿ ದಾರ್ಸಾನ್ವಾಲೀಕರಣ ಎಂದು ಕರೆಯಲ್ಪಡುವ ವೈದ್ಯಮಾರ್ಗವನ್ನು ಕಂಡುಹಿಡಿದ; ಮತ್ತೆ ಕೆಲವು ಉಪಕರಣಗಳನ್ನೂ ನಿರ್ಮಿಸಿದ.