ಜಹಾಂಗೀರ್ ಮೆಹೆಲ್
ಜಹಾಂಗೀರ್ ಮೆಹೆಲ್, ಜಹಾಂಗೀರ್ ಕೋಟೆ, ಓರ್ಛಾ ಅರಮನೆ, ಮೆಹೆಲ್-ಎ-ಜಹಾಂಗೀರ್ ಓರ್ಛಾ ಭಾರತದ ಮಧ್ಯಪ್ರದೇಶ ರಾಜ್ಯದ ಓರ್ಛಾದಲ್ಲಿರುವ ಒಂದು ಕೋಟೆ ಮತ್ತು ಕಾವಲುದಂಡು.[೧]
ಜಹಾಂಗೀರ್ ಮೆಹೆಲ್‍ನ ಸ್ಥಾಪನೆ ೧೭ನೇ ಶತಮಾನದಷ್ಟು ಹಿಂದೆ ಆಯಿತೆಂದು ಹೇಳಲಾಗುತ್ತದೆ. ಆಗ ಆ ಪ್ರದೇಶದ ಅರಸನಾದ ವೀರ್ ಸಿಂಗ್ ದೇವ್ ಮುಘಲ್ ಸಾಮ್ರಾಟ ಜಹಾಂಗೀರ್ ಈ ನಗರಕ್ಕೆ ಮೊದಲ ಬಾರಿ ಭೇಟಿನೀಡಿದಾಗ ಅವನ ಆತ್ಮೀಯ ಸ್ವಾಗತದ ಸಂಕೇತವಾಗಿ ಈ ರಚನೆಯನ್ನು ನಿರ್ಮಿಸಿದನು. ಜಹಾಂಗೀರ್ ಮೆಹೆಲ್‍ನ ಪ್ರವೇಶದ್ವಾರವು ಕಲಾತ್ಮಕ ಮತ್ತು ಸಾಂಪ್ರದಾಯಿಕ ಹೆಬ್ಬಾಗಿಲನ್ನು ವಿಶೇಷ ಲಕ್ಷಣವಾಗಿ ಹೊಂದಿದೆ. ಈ ರಚನೆಯ ಮುಂಭಾಗದ ಗೋಡೆಯು ಪೂರ್ವಾಭಿಮುಖವಾಗಿದ್ದು ಹಸಿರು ಮಿಶ್ರಿತ ನೀಲಿ ಬಣ್ಣದ ಹಾಸುಬಿಲ್ಲೆಗಳಿಂದ ಆವೃತವಾಗಿದೆ. ಜಹಾಂಗೀರ್ ಮೆಹೆಲ್ ಮೂರು ಅಂತಸ್ತಿನ ರಚನೆಯಾಗಿದ್ದು ಸೊಗಸಾಗಿ ತೂಗಾಡುವ ಬಾಲ್ಕನಿಗಳು, ಮುಖಮಂಟಪಗಳು ಮತ್ತು ಅಪಾರ್ಟ್‌ಮಂಟ್‍ಗಳನ್ನು ಹೊಂದಿದೆ.[೨]
ಉಲ್ಲೇಖಗಳು
ಬದಲಾಯಿಸಿ- ↑ Kumar, Arjun (2009-09-20). "Discovery of monuments at Orchha - The Economic Times". Economictimes.indiatimes.com. Retrieved 2017-01-22.
- ↑ "Jahangir Mahal Orchha". Liveindia.com. Archived from the original on 9 June 2017. Retrieved 2017-01-22.
ಗ್ರಂಥಸೂಚಿ
ಬದಲಾಯಿಸಿ- "Orchha Town". The Imperial Gazetteer of India, Vol. 19. Oxford at Clarendon Press. 1909. pp. 247–248.
- "Orchha State". The Imperial Gazetteer of India, Vol. 19. Oxford at Clarendon Press. 1909. pp. 241–247.