ಜಲ್ ಮೆಹೆಲ್ (ಹರಿಯಾಣಾ)

ಜಲ್ ಮೆಹೆಲ್ 16 ನೇ ಶತಮಾನದ ಉತ್ತರಾರ್ಧದ ಒಂದು ಅರಮನೆ, ಕೋಟೆ ಮತ್ತು ಕೃತಕ ಸರೋವರ. ಇದು ಹರಿಯಾಣ ರಾಜ್ಯದ ನಾರ್ನೌಲ್‍ನಲ್ಲಿ ಸ್ಥಿತವಾಗಿದೆ. ನಾರ್ನೌಲ್‍ನ ಒಬ್ಬ ಮೊಘಲ್ ಮಂಡಲಾಧಿಪತಿಯಿಂದ ನಿರ್ಮಿತವಾದ ಈ ರಚನೆಯು ಪ್ರಸ್ತುತವಾಗಿ ಒಂದು ಪ್ರವಾಸಿ ಆಕರ್ಷಣೆಯಾಗಿದೆ.

ಭಾರತದ ನಾರ್ನೌಲ್‌ನಲ್ಲಿರುವ ಜಲ ಮಹಲ್

ವಿವರ ಬದಲಾಯಿಸಿ

ಮೊಘಲ್ ಸಾಮ್ರಾಜ್ಯದ ಕುಲೀನರ ಸದಸ್ಯನಾದ ಮತ್ತು ನಾರ್ನೌಲ್‍ನ ಮಂಡಲಾಧಿಪತಿಯಾದ ಶಾ ಕುಲಿ ಖಾನ್ ಕ್ರಿ.ಶ. 1591 ರಲ್ಲಿ ಜಲ ಮಹಲ್‍ನ್ನು ನಿರ್ಮಿಸಿದನು.

ಒಬ್ಬ ಸಮರ್ಥ ಸೇನಾ ನಾಯಕನಲ್ಲದೆ, ಖಾನ್ ಪ್ರಸಿದ್ಧ ವಾಸ್ತುಶಿಲ್ಪ ಪೋಷಕನಾಗಿದ್ದನು.[೧] ಇವನ ಮೊದಲನೆಯ ನಿರ್ಮಾಣ ತನಾಗಾಗಿ ಒಂದು ಸಮಾಧಿ (1574-75 ರಲ್ಲಿ ನಿರ್ಮಿಸಲಾಗಿದೆ).[೨] ಇದಲ್ಲದೆ, ಖಾನ್‌ನ ಯೋಜನೆಗಳು ಸಮಕಾಲೀನ ಮೊಘಲ್ ಗ್ರಂಥಗಳಲ್ಲಿ ದಾಖಲಿಸುವಷ್ಟು ಗಮನಾರ್ಹವಾಗಿವೆ.

ತನ್ನ ಸಮಾಧಿಯನ್ನು ಪೂರ್ಣಗೊಳಿಸಿದ 15 ವರ್ಷಗಳ ನಂತರ, ಖಾನ್ ನಾರ್ನೌಲ್‌ನಲ್ಲಿ ಹೊಸ ಅರಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ; ಈ ರಚನೆಯು ಈಗ ಜಲ ಮಹಲ್ ಆಗಿ ಮಾರ್ಪಟ್ಟಿದೆ.[೧] ಖಾನ್ ಚೌಕಾಕಾರದ ಕೃತಕ ಸರೋವರವನ್ನು ರಚಿಸುವ ಮೂಲಕ ಪ್ರಾರಂಭಿಸಿದನು (ಇದನ್ನು ಸಾಮಾನ್ಯವಾಗಿ ಕೊಳ ಅಥವಾ ಜಲಾಶಯ ಎಂದು ವಿವರಿಸಲಾಗುತ್ತದೆ). ಮಧ್ಯದಲ್ಲಿ ಒಂದು ದ್ವೀಪವಿತ್ತು. ನಂತರ ಖಾನ್ ಸರೋವರದ ಉತ್ತರ ತುದಿಯಲ್ಲಿ ರಕ್ಷಿತ ಪ್ರವೇಶದ್ವಾರವನ್ನು ನಿರ್ಮಿಸಲು ಆದೇಶಿಸಿದ. ಇದರ ನಂತರ, ಜಲಾಶಯದ ಮಧ್ಯಭಾಗದಲ್ಲಿ ಒಡ್ಡುದಾರಿಯನ್ನು ನಿರ್ಮಿಸಲಾಯಿತು. ಅಲ್ಲಿ ಅಡಿಪಾಯ ಹಾಕಿ ಅರಮನೆಯನ್ನು ನಿರ್ಮಿಸಲಾಯಿತು. ಜಲ ಮಹಲ್, ಅದರ ಪ್ರವೇಶದ್ವಾರ ಮತ್ತು ಸರೋವರದ ನಿರ್ಮಾಣಕ್ಕೆ 2-3 ವರ್ಷಗಳು ಬೇಕಾದವು.

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ Asher, Catherine B. (1992-09-24). Architecture of Mughal India (in ಇಂಗ್ಲಿಷ್). Cambridge University Press. ISBN 9780521267281.
  2. "Shah Quli Khan Tomb,Monuments in Haryana,Ancient Shah Quli Khan Tomb Mounument Haryana". www.indiantravelportal.com. Archived from the original on 2017-11-11. Retrieved 2018-11-04.