ಜರ್ಪ್ಸಿಕೋರಿ ಎರಟೋ

ಎರಟೋ: ಪ್ರಾಚೀನ ಗ್ರೀಕ್ ಪುರಾಣಗಳ ಪ್ರಕಾರ ಒಂಬತ್ತು ಸಾರಸ್ವತ ಕಲಾಭಿಮಾನಿ ದೇವತೆಗಳಲ್ಲೊಬ್ಬಳು. ಈ ದೇವತೆಗಳ ಮೂಲ ಖಚಿತವಾಗಿ ತಿಳಿಯದು. ಆದರೂ ಇವರು ಅತ್ಯಂತ ಪ್ರಾಚೀನರು. ಗ್ರೀಸಿನ ಬೊಯೀಷಿಯದಲ್ಲಿನ ಹೆಲಿಕಾನ್ ಪರ್ವತ ಈ ದೇವತೆಗಳ ಆರಾಧನೆ ಪ್ರಾರಂಭವಾದ ಸ್ಥಳ. ಗಾಯಕರೂ ಕವಿಗಳೂ ಆಗಿದ್ದವರ ಪೋಷಕ ದೇವತೆಗಳೆಂದು ಇವರು ಪ್ರಸಿದ್ಧರಾಗಿದ್ದಾರೆ. ಬರಬರುತ್ತ ಇವರ ಪೋಷಕ ಹಸ್ತ ಇತರ ಕಲೆಗಳನ್ನೂ ವಿಜ್ಞಾನವನ್ನೂ ಬಳಸಿದಂತೆ ಕಾಣುತ್ತದೆ. ಹೋಮರನ ಒಡಿಸ್ಸಿಯ ಕಾಲಕ್ಕಾಗಲೇ ಈ ಒಂಬತ್ತು ದೇವತೆಗಳೂ ಕಲಾಭಿಮಾನಿ ದೇವತೆಗಳೆಂಬ ಉಲ್ಲೇಖ ಕಂಡುಬರುತ್ತದೆ. ಇವರೆಲ್ಲರೂ ಜ್ಯೂಸ್ ದೇವನ ಪುತ್ರಿಯರು. ಇವರಲ್ಲಿ ಆರನೆಯವಳೇ ಎರಟೋ, ಈಕೆ ಸೌಂದರ್ಯಾಧಿದೇವತೆ, ಶೃಂಗಾರ ಕಾವ್ಯಕ್ಕೆ ಮಾತೃಪ್ರಾಯಳು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: