ಜರಗನಹಳ್ಳಿ ಶಿವಶಂಕರ್

ಜರಗನಹಳ್ಳಿ ಶಿವಶಂಕರ್‍ (ಸೆಪ್ಟೆಂಬರ್ ೦೮, ೧೯೪೯ - ಮೇ ೦೫, ೨೦೨೧) ಕನ್ನಡದ ಪ್ರಮುಖ ಲೇಖಕ. ಬಿ.ಕಾಂ ಪಧವಿದರರಾದ ಇವರು ಕೆನರಾ ಬ್ಯಾಂಕಿನಲ್ಲಿ ೨೮ ವರ್‍ಷಗಳ ಸೇವೆ ಸಲ್ಲಿಸಿ ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ವ್ಯಕ್ತಿಚಿತ್ರ

ಬದಲಾಯಿಸಿ

ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು ೪೦ ವರ್‍ಷಗಳಿಂದ ಪ್ರಪಟಗೊಳ್ಳುತ್ತಿವೆ. ಇವರು ಶುಭದ ಪ್ರಕಾಶನವೆಂಬ ಕಾವ್ಯ ಪ್ರಕಟಣೆಗೆ ಮೀಸಲಾದ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಅದರ ಮೂಲಕ ವಿವಿಧ ಬರಹಗಾರರ ಸುಮಾರು ೫೦ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಿವಶಂಕರ್ ಅವರು ಮೇ ೫, ೨೦೨೧ರಂದು ನಿಧನ ಹೊಂದಿದರು.[]

ಪುಸ್ತಕಗಳು

ಬದಲಾಯಿಸಿ

ಕವನ ಸಂಕಲನ

೧೯೮೫ ಕವನ - ಶುಭಾಂಗಿ
೧೯೯೧ ಹನಿಗವನ - ಬುಗ್ಗೆ
೧೯೯೮ ಕವನ - ಮರಗಳೂ
೨೦೦೦ ಹನಿಗವನ - ಮಳೆ
೨೦೦೧ ಕಿರು ಕವಿತೆ - ಆಲಿಕಲ್ಲು
೨೦೦೨ ಹನಿಗವನ ಝರಿ - ಆಯ್ದ ಹನಿಗವಿತೆಗಳು
೨೦೦೩ ಕವಿತೆ - ದೇವರ ನೆರಳು
೨೦೧೨ ವಚನ - ವಚನ ಧ್ಯಾನ
೨೦೧೩ ಹನಿಗವನ - ಹೊಳೆ
೨೦೧೩ ಹನಿಗವನ - ಮರಗಳು
೨೦೧೫ ಭಾವಗೀತೆ - ನಾದೋತ್ಸವ
೨೦೧೬ ವಚನ - ವಚನ ಛಾಯೆ

ಲೇಖನ
೨೦೦೪ ಭವ ಬದುಕು - ತರಂಗ ಅಂಕಣ ಬರಹಗಳು
೨೦೦೭ ನೆನಪಿನ ನೆಂಟರು - ವಿಜಯ ಕರ್ನಾಟಕದ ಅಂಕಣ ಬರಹಗಳು
೨೦೧೩ ಚಾತಕ - ಕರ್ಮವೀರ ಪತ್ರಿಕೆಯ ಅಂಕಣ ಬರಹಗಳು

ಸಂಪಾದನೆ
೧೯೮೭ ಜೊತೆಯಾದವರು - ಕವನ ವಿಮರ್‍ಶಾ ಸಂಕಲನ
೨೦೦೯ ಬೇರು ಚಿಗುರು - ಕವನ ಸಂಕಲನ
೨೦೧೩ ಅಕ್ಷರ ತಾಂಬೂಲ - ಸಂಸಾರ-ವಿವಾಹ ಸಂಬಂಧಿತ ಬರಹಗಳು
೨೦೧೫ ವಚನ ಸಂಗಮ - ಆಧುನಿಕ ವಚನಗಳ ಪ್ರಾತಿನಿಧಿಕ ಸಂಕಲನ

ಪ್ರಶಸ್ತಿ ಪುರಸ್ಕಾರ

ಬದಲಾಯಿಸಿ
  • ೨೦೦೦ ಚುಟುಕು ರತ್ನ - ಚುಟುಕು ಸಾಹಿತ್ಯ ಪರಿಷತ್ತು, ಮೈಸೂರು
  • ೨೦೦೧ ಕೆಂಪೇಗೌಡ ಪ್ರಶಸ್ತಿ - ಬೆಂಗಳೂರು ಮಹಾನಗರ ಪಾಲಿಕೆ
  • ೨೦೦೧ ಗೊರೂರು ಸಾಹಿತ್ಯ ಪ್ರಶಸ್ತಿ
  • ೨೦೦೩ ಸಾಹಿತ್ಯ ಸೇತು ಪ್ರಶಸ್ತಿ
  • ೨೦೦೪ ಸರ್ ಎಂ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
  • ೨೦೦೪ ಕೋಲಾರ ಜಿಲ್ಲಾ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ
  • ೨೦೦೫ ಸುವರ್‍ಣ ಕರ್‍ನಾಟಕ ರಜ್ಯೋತ್ಸವ ಪ್ರಶಸ್ತಿ - ಕರ್ನಾಟಕ ಸರ್‍ಕಾರ
  • ೨೦೦೫ ಭೂಪಾಲಿನ ಭಾರತ್ ಭವನದಲ್ಲಿ ನಡೆದ ‘ಕವಿಭಾರತಿ’ಯಲ್ಲಿ ಕನ್ನಡದ ಪ್ರತಿನಿಧಿ
  • ೨೦೦೬ ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ
  • ೨೦೦೭ ಕಾಸರಗೋಡಿನಲ್ಲಿ ನಡೆದ ಅಖಿಲ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷ
  • ೨೦೦೭ ಸುವರ್‍ಣ ಕರ್ನಾಟಕ ಭೂಷಣ ಪ್ರಶಸ್ತಿ
  • ೨೦೦೮ ದುಬೈ ಧ್ವನಿ ಪ್ರತಿಷ್ಠಾನ ನೀಡುವ ‘ಧ್ವನಿ’ ಪುರಸ್ಕಾರ
  • ೨೦೦೮ ಬಸವ ಜ್ಯೋತಿ ರಾಜ್ಯ ಪ್ರಶಸ್ತಿ, ಅಹೇರಿ, ಬಿಜಾಪುರ
  • ೨೦೧೩ ೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬಿಜಾಪುರ - ಗೌರವ ಪುರಸ್ಕಾರ
  • ೨೦೧೩ ತಮಿಳುನಾದಿನ ನೈವೇಲಿ ಲಿಗ್ನೈಟ್ ಕಾರ್‍ಪೊರೇಷನ್ ಕನ್ನಡ ಸಂಘದ ಸುವರ್‍ಣ ಮಹೋತ್ಸವ ಸಮಾರಂಭದ ಉಧ್ಘಾಟಕರಾಗಿ ಭಾಗಿ
  • ೨೦೧೩ ಅಡ್ವೈಸರ್‍ ಸಾಹಿತ್ಯ ಪ್ರಶಸ್ತಿ - ಮಂಡ್ಯ. ‘ಹೊಳೆ’ ಹನಿಗವಿತೆಗಳ ಸಂಕಲನಕ್ಕೆ
  • ೨೦೧೩-೧೧-೨೪ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್‍ವಾಧ್ಯಕ್ಷತೆ
  • ೨೦೧೪-೦೧-೧೦ ಕನ್ನಡ ಮತ್ತು ಸಂಸ್ಕೃತಿ ಇಲಾಖೆ - ‘ಮನೆಯಂಗಳದಲ್ಲಿ ಮಾತುಕತೆ’ ಯಲ್ಲಿ ‘ತಿಂಗಳ ಅತಿಥಿ’ ಗೌರವ
  • ೨೦೧೫-೦೨-೨೫ ‘ಹೊಳೆ’ ಹನಿಗವಿತೆಗಳ ಸಂಕಲನಕ್ಕೆ ಬೆಳಗಾವಿ ಚುಟುಕು ಸಾಹಿತ್ಯ ಸಮ್ಮೇಳನದ ದ್ವಿತೀಯ ಬಹುಮಾನ
  • ೨೦೧೬ ‘ಹೊಸಗನ್ನಡ ಕಾವ್ಯ ಸಂಚಯ’ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ, ಬಿ.ಎ. ಮೂರನೆ ಸೆಮಿಸ್ಟರ್‍ ಕನ್ನಡ ಐಚ್ಛಿಕ ಪಠ್ಯಪುಸ್ತಕ (೨೦೧೬ ರಿಂದ ೨೦೧೯) ದಲ್ಲಿ ಹನಿಗವಿತೆಗಳು ಪಠ್ಯವಾಗಿದೆ
  • ೨೦೧೬-೦೮-೦೭ ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಸಿರುವ ‘ಹೆಚ್.ಎಸ್.ರೇಣುಕಾ ಪ್ರಸಾದ ಪ್ರಶಸ್ತಿ’ ಪ್ರಥಮ ಪ್ರಶಸ್ತಿಗೆ ಭಾಜನ
  • ೨೦೧೬-೦೯-೦೮ ಅಂತರ ರಾಷ್ಟ್ರೀಯ ಮಾನವ ಧರ್‍ಮ ಪ್ರತಿಷ್ಠಾನ ‘ನಿಜ ಧರ್‍ಮಾಧೀಶ ಬಸವ’ ಪ್ರಶಸ್ತಿ
  • ೨೦೧೬-೧೦-೦೨ ವೆಲ್ಫೇರ್‍ ಪಾರ್‍ಟಿ ಆಫ್ ಇಂಡಿಯ ದಿಂದ ಗಾಂಧಿ ಶಾಂತಿ ಪುರಸ್ಕಾರ
  • ೨೦೧೬-೧೨-೦೨ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರಿನಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ
  • ೨೦೧೬ ಜೀವನ್ಮುಖಿ ಪತ್ರಿಕಾ ಪ್ರಶಸ್ತಿ

೨೦೧೬ ಬೆಂಗಳೂರು ನಗರ ಜಿಲ್ಲೆ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ

  • ೨೦೧೭-೦೯-೨೨ ಸಂದೇಶ್ ಸಂಸ್ಥೆಯಿಂದ ಪ್ರಶಸ್ತಿ
  • ೨೦೧೭-೧೨-೦೮ ಪ್ರೊ. ಸಿ ಹೆಚ್ ಮರಿದೇವರು ಸಾಹಿತ್ಯ ಪ್ರಶಸ್ತಿ (ಕ.ಸಾ.ಪ) ದತ್ತಿ ಮೊದಲನೆಯ ಪ್ರಶಸ್ತಿ
  • ೨೦೧೮-೦೧-೨೬ ಕೆನರಾ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಗಣರಾಜ್ಯೋತ್ಸವದ ಪ್ರಶಸ್ತಿ ಪುರಸ್ಕಾರ
  • ೨೦೧೮-೧೦-೦೪ ಬಹರೇನ್ ದೇಶದಲ್ಲಿ ನಡೆದ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ.
  • ೨೦೧೮-೧೦-೨೦ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯ ಅಧ್ಯಕ್ಷತೆ
  • ೨೦೧೯-೦೪-೨೨ ಭಾಲ್ಕಿ ಮಠವು ನೀಡುವ "ಬಸವ ತತ್ವ ಪ್ರಚಾರ ಪುರಸ್ಕಾರ ೨೦೧೯"
  • ೨೦೧೯-೦೫-೧೨ ಬಸವ ವೇದಿಕೆ, ಬೆಂಗಳೂರು ನೀಡುವ ವಚನ ಸಾಹಿತ್ಯ ಶ್ರೀ ೨೦೧೯ ಪ್ರಶಸ್ತಿ
  • ೨೦೧೯-೦೮-೧೧ ಸಮ್ಮಿಲನ ಸಾಹಿತ್ಯ ಪ್ರಶಸ್ತಿ

ಉಲ್ಲೇಖಗಳು

ಬದಲಾಯಿಸಿ
  1. "ಸಾಹಿತಿ ಜರಗನಹಳ್ಳಿ ಶಿವಶಂಕರ್ ನಿಧನ". Prajavani. 5 May 2021.


ಹೊರಗಿನ ಕೊಂಡಿಗಳು

ಬದಲಾಯಿಸಿ

ಚಿಲುಮೆ ಅಂತರಜಾಲ ತಾಣದಲ್ಲಿರುವ ಜರಗನಹಳ್ಳಿ ಶಿವಶಂಕರ್‍ ಅವರ ಬರಹಗಳು