ಜಯ ಸಿ. ಸುವರ್ಣ ಶ್ರೇಷ್ಠ ಸಮಾಜಸೇವಕ, ಅಪೂರ್ವ ಸಾಧಕ, 'ಭಾರತ್ ಕೋ-ಆಪರೇಟಿವ್ ಬ್ಯಾಂಕ್' ಹಾಗೂ 'ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ'ದಂತಹ  ಹಲವಾರು ಸಂಘಟನೆಗಳ ಸ್ಥಾಪಕರೆಂದು ಮುಂಬಯಿ ಮಹಾನಗರದಲ್ಲಿ ಜನಪ್ರಿಯರಾಗಿದ್ದಾರೆ. 

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

'ಜಯ ಸುವರ್ಣ'ಉಡುಪಿ ಜಿಲ್ಲೆಯ ಪಡುಬಿದ್ರಿ ಹತ್ತಿರದ ಅಡ್ವೆ ಮೂಲದ ಚಂದು ಪೂಜಾರಿ, ಮತ್ತು ಅಚ್ಚು ಪೂಜಾರಿ ದಂಪತಿಗಳ ಪ್ರೀತಿಯ ಮಗನಾಗಿ ೧೯೪೬, ಮೇ. ೧೫ ರಂದು ಜನಿಸಿದರು. ಪ್ರಾಥಮಿಕ ೭ ನೆಯ ತರಗತಿಯವರೆಗೆ ತಮ್ಮ ಊರಿನಲ್ಲಿಯೇ  ಕಲಿತರು. ೮ ನೆಯ ತರಗತಿಗೆ ಕಲಿಯಲು ದೂರದ ಅದಮಾರು ಮತ್ತು ಹೆಜಮಾಡಿ ಶಾಲೆಗಳಿಗೆ ಹೋಗಬೇಕಿತ್ತು. ಆದರೆ ಸುವರ್ಣ ಆರಿಸಿಕೊಂಡಿದ್ದು ಮುಂಬಯಿನಗರವನ್ನು.

ಮುಂಬಯಿನಗರಕ್ಕೆ ಪಾದಾರ್ಪಣೆ

ಬದಲಾಯಿಸಿ

ಜಯಸುವರ್ಣರು ತಮ್ಮ ಸೋದರಮಾವನಿದ್ದ ಮುಂಬಯಿಗೆ ೧೯೫೯ ರಲ್ಲಿ ಬಂದರು. ಮುಂಬಯಿನಗರದ ಉಪನಗರವೊಂದಾದ 'ವಡಾಲಕನ್ನಡ ಶಾಲೆ'ಯಲ್ಲಿ ೧೦ ನೆಯ ಇಯತ್ತೆಯವರೆಗೆ ಅಭ್ಯಾಸಮಾಡಿದರು. ಹೋಟೆಲ್ ಕೆಲಸ, ಮತ್ತು ವಿದ್ಯಾಭ್ಯಾಸ, ಜೊತೆ ಜೊತೆಯಾಗಿ ಸಾಗುತ್ತಿತ್ತು. ಮುಂದೆ ಅಂಧೇರಿಯ 'ಚಿನೈ ಕಾಲೇಜಿ'ಗೆ ಸೇರಿ ೧೯೭೪ ರಲ್ಲಿ ಪದವಿ ಗಳಿಸಿದರು. ಆದರೆ ಅವರಿಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚು ಆಸಕ್ತಿಕಾಣಿಸತೊಡಗಿತು. ಮುಂಬಯಿ(ಪ)ಗೋರೆಗಾವ್ ನಲ್ಲಿ ಹೋಟೆಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು.'ಶೇಟ್ ರುಕ್ಕಾರಾಮ ಸಾಲ್ಯಾನ್' ಎಂಬ ಕನ್ನಡಿಗರ ಪರಿಚಯದಿಂದಾಗಿ ಹಲವಾರು ಕನ್ನಡದ ಉದ್ಯಮಿಗಳ ನೆರವುದೊರೆಯಿತು. ಮುಂಬಯಿ ನಗರದ ಕೋಟೆಯ ವಲಯದಲ್ಲಿ 'ಮೋಹನ್ ಟೆರೇಸ್' ನಲ್ಲಿದ್ದ 'ಬಿಲ್ಲವರ ಅಸೋಸಿಯೇಷನ್ ಕಚೇರಿ'ಯನ್ನು ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಿ ಸ್ಥಳಾಂತರ ಗೊಳಿಸುವ ಕೆಲಸದಲ್ಲಿ ಸಾಲ್ಯಾನ್ ರವರಿಗೆ ಸಹಾಯ ಮಾಡಿದರು. ತರುವಾಯ ಮೂಲ್ಕಿ ನಾರಾಯಣ ಗುರು ಶಾಲೆಯ ಪ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನವೀಕರಣ ನಡೆದಾಗ, ಮುಂಬಯಿನ ಉದ್ಯಮಿ ಗೆಳೆಯರ ಮತ್ತು ಇತರರ ಸಹಾಯ-ಸಹಕಾರಗಳಿಂದ ೪೫ ಲಕ್ಷ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿದರು. ಬಿಲ್ಲವರ ಸಂಘದ ಒಕ್ಕೂಟದಲ್ಲಿ ಸುಮಾರು ೨೭೦ ಶಾಖೆಗಳಿವೆ. 'ಬಿಲ್ಲವರ ಮಹಾಮಂಡಲದ ಸ್ಥಾಪಕ ಅಧ್ಯಕ್ಷರಾಗಿ ಕೆಲಸಮಾಡಿದರು'. ತಮ್ಮ ಆಡಳಿತದ ಅವಧಿಯಲ್ಲಿ 'ಬ್ರಹ್ಮ ಶ್ರೀ ನಾರಾಯಣ ಗುರು ಎಜುಕೇಷನ್ ಟ್ರಸ್ಟ್',ಪಡುಬೆಳ್ಳೆ ಶಿಕ್ಷಣ ಸಂಸ್ಥೆ'ಯನ್ನು 'ಬಿಲ್ಲವರ ಅಸೋಸಿಯೇಷನ್' ಆಡಳಿತದ ಅಡಿಯಲ್ಲಿ ತಂದರು. 'ಬಿಲ್ಲವರ ಅಸೋಸಿಯೇಷನ್ ನ ಮುಖಪತ್ರಿಕೆ 'ಅಕ್ಷಯ' ಬೆಳವಣಿಗೆಗೆ ಕಾರಣರಾದರು. ಸರಳತೆ, ಸ್ನೇಹಪರ ಮನೋಭಾವ, ಪ್ರಾಮಾಣಿಕತೆ, ಸಂಘಟನಾ ಕೌಶಲ್ಯ, ಔದಾರ್ಯಗುಣ, ಬಂದ ಸವಾಲುಗಳನ್ನು ಎದುರಿಸಿ ಜಯಶಾಲಿಯಾಗುವ ಆತ್ಮ ಸ್ಥೈರ್ಯಗಳು ಜಯ ಸುವರ್ಣರ ಯಶಸ್ಸಿಗೆ ಕಾರಣವಾಗಿವೆ.

ಪರಿವಾರ

ಬದಲಾಯಿಸಿ

ಪತ್ನಿ, ಲೀಲಾವತಿ ಜಯ.ಸಿ.ಸುವರ್ಣ, ಹಾಗೂ ಮಕ್ಕಳು :  ೧. ಸೂರ್ಯಕಾಂತ್ ಜಯ.ಸಿ.ಸುವರ್ಣ. ೨ ಸುಭಾಷ್, ಜಯ. ಸಿ. ಸುವರ್ಣ. ೩. ದಿನೇಶ್ ಜಯ. ಸಿ . ಸುವರ್ಣ. ೪. ಯೋಗೇಶ್ ಜಯ. ಸಿ .ಸುವರ್ಣ 

ನಿಭಾಯಿಸುತ್ತಿರುವ ಜವಾಬ್ದಾರಿಯುತ ಹುದ್ದೆಗಳು

ಬದಲಾಯಿಸಿ
  1. 'ಲಲಿತ ರುಕ್ಕರಾಮ ಸಾಲ್ಯಾನ್ ಚಾರಿಟಬಲ್ ಟ್ರಸ್ಟ್' ನ 'ನಾರಾಯಣ ಗುರು ಇಂಗ್ಲಿಷ್ ಹೈಸ್ಕೂಲ್' ನ ಅಧ್ಯಕ್ಷರಾಗಿದ್ದರು.
  2. 'ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಜಿರ್ಣೋದ್ಧಾರ (ಮುಂಬಯಿ) ಸಮಿತಿ ಸಂಚಾಲಕ'
  3. 'ಮುಂಬಯಿ ಬಿಲ್ಲವರ ಅಸೋಸಿಯೇಷನ್ ಗೌರವ ಅಧ್ಯಕ್ಷರು' 
  4. 'ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷರು'.
  5. 'ರಾಷ್ಟೀಯ ಬಿಲ್ಲವರ ಮಹಾಮಂಡಲ ಸಂಸ್ಥಾಪಕ ಅಧ್ಯಕ್ಷರು'

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  1. 'ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ'
  2. 'ಯಕ್ಷಗಾನ ಕಲಾಪ್ರಶಸ್ತಿ', 
  3. 'ಸಮಾಜಸೇವಾ ಧುರೀಣ ಪ್ರಶಸ್ತಿ',
  4. 'ಜನ ಮನ ನಾಯಕ', ಮೊದಲಾದ ಹಲವಾರು ಪ್ರಶಸ್ತಿಗಳು ಸಂದಿವೆ. 

ಮುಂಬಯಿಯ ಹಲವಾರು ದೇವಾಲಯಗಳ ಟ್ರಸ್ಟ್ ಗೆ ಪದಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. 

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮಹಾರಾಷ್ಟ್ರ) ಕರ್ನಾಟಕ

ಬದಲಾಯಿಸಿ

ದಲ್ಲಿ ೧೦೨ ಶಾಖೆಗಳಿವೆ. ಒಟ್ಟಾರೆ ರಾಷ್ಟ್ರದಲ್ಲಿನ ೨,೦೦೦ ಗಣನೀಯ ಸಾಧನೆಮಾಡಿದ ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿ 'ಭಾರತ್ ಬ್ಯಾಂಕ್' ಮುಂಚೂಣಿಯಲ್ಲಿರುವ ಸಂಸ್ಥೆಯೆಂದು ಹೆಸರುಗಳಿಸಿದೆ.  ಹಲವಾರು ಪುರಸ್ಕಾರ, ಗೌರವಗಳು ಸಂದಿವೆ. 

೭೪ ವರ್ಷದ ಜಯ ಸಿ.ಸುವರ್ಣ ೨೧, ಬುಧವಾರ, ಅಕ್ಟೊಬರ್, ೨೦೨೦ ರಂದು ಮುಂಬಯಿ ಉಪನಗರದ ತಮ್ಮ ಗೋರೆಗಾಂವ್ (ಪೂ) ದಲ್ಲಿರುವ 'ನೀಲಗಿರಿ ರೆಸಿಡೆನ್ಸ್', (Nilgiri Residence] ನಲ್ಲಿ ತೀವ್ರ ಹೃದಯಾಘಾತದಿಂದ ಮರಣಿಸಿದರು. []

ಉಲ್ಲೇಖಗಳು

ಬದಲಾಯಿಸಿ
  1. ಭಾರತ ಬ್ಯಾಂಕ್ ಸ್ಥಾಪಕ, ಜಯ ಸಿ.ಸುವರ್ಣ ನಿಧನ,ಪ್ರಜಾವಾಣಿ, ೨೧, ಅಕ್ಟೋಬರ್, ೨೦೨೦

ಬಾಹ್ಯಸಂಪರ್ಕಗಳು

ಬದಲಾಯಿಸಿ
  1. ಕನ್ನಡ ಪ್ರಭ, ಭಾರತ್ ಕೋ.ಆಪರೇಟೀವ್ ಬ್ಯಾಂಕ್,ಮಾಜಿ ಅಧ್ಯಕ್ಷ ಜಯ.ಸಿ.ಸುವರ್ಣರ ನಿಧನ,೨೧,ಅಕ್ಟೋಬರ್, ೨೦೨೦
  2. Former chairman of Bharat Co-operative Bank Jaya C Suvarna passes away Oct 21 2020daijiworld.com[ಶಾಶ್ವತವಾಗಿ ಮಡಿದ ಕೊಂಡಿ]
  3. ಇದನ್ನೂ ಓದಿ : ಕರ್ನಾಟಕ ಮಲ್ಲ, ಇತಿಹಾಸ ಸೇರಿದ "ಬಿಲ್ಲವ ಕುಲ ಶಿರೋಮಣಿ"-ವಿಶ್ವನಾಥ್ ಅಮೀನ್ ನಿಡ್ಡೋಡಿ, ೨೨-೧೦-೨೦೨೦, ಪುಟ-೧೧