ಜಯಾದಿತ್ಯ - ಕ್ರಿ.ಶ ಸು. 650. ಪಾಣಿನಿಯ ಸಂಸ್ಕೃತ ವ್ಯಾಕರಣ ಅಷ್ಟಾಧ್ಯಾಯಿಯ ಮೇಲೆ ಬಂದಿರುವ ಅತ್ಯಂತ ಉತ್ಕøಷ್ಟ ವಿವರಣೆಯಾದ ಕಾಶಿಕಾವೃತ್ತಿಯ ಕರ್ತೃ. ಸಂಕ್ಷಿಪ್ತತೆ ಮತ್ತು ಸ್ಪಷ್ಟತೆಗಳಿಂದ ಕೂಡಿದ ಈ ವೃತ್ತಿಪಾಣಿನಿಯ ಸೂತ್ರಗಳಿಗೆ ಉತ್ತಮ ವ್ಯಾಖ್ಯಾನವೆನಿಸಿಕೊಂಡಿದೆ. ಕಾಶಿಕಾವೃತ್ತಿಯ ಮೊದಲಿನ ಐದು ಅಧ್ಯಾಯನಗಳನ್ನು ಜಯಾದಿತ್ಯನೂ ಮಿಕ್ಕಿದ್ದನ್ನು ವಾಮನನೂ ಬರೆದಿದ್ದಾರೆ. ಪಾಣಿನಿಯ ಸೂತ್ರ ಕ್ರಮವನ್ನು ವ್ಯತ್ಯಾಸ ಮಾಡಿಕೊಳ್ಳದೇ ಇದರಲ್ಲಿ ವೃತ್ತಿರಚನೆಯಾಗಿದೆ. ವ್ಯಾಕರಣದ ಮೊದಲ ಪಾಠಕ್ಕೆ ಇದನ್ನು ಬಳಸಿಕೊಳ್ಳಲಾಗುತ್ತಿತ್ತಲ್ಲದೆ ಭಾರತಕ್ಕೆ ಬಂದ ಚೀನೀಯರು ಮೊಟ್ಟಮೊದಲ ಇದರ ಮೂಲಕ ಸಂಸ್ಕೃತ ವ್ಯಾಕರಣವನ್ನು ಕಲಿಯುತ್ತಿದ್ದರು ಎಂದು ಭಾರತಕ್ಕೆ ಬಂದಿದ್ದ (ಕ್ರಿ.ಶ. 672) ಚೀನೀಯಾತ್ರಿಕ ಇ-ತ್ಸಿಂಗ್ ಹೇಳಿದ್ದಾನೆ. ಈ ವ್ಯಾಕರಣದ ಮೂಲಕವೇ ಆತನೂ ಸಂಸ್ಕೃತವನ್ನು ಕಲಿತನೆನ್ನಲಾಗಿದೆ. ಕಾಶಿಕಾವೃತ್ತಿಯ ಮೇಲೆ ನ್ಯಾಸವೆಂದು ಪ್ರಸಿದ್ಧವಾಗಿರುವ ಕಾಶಿಕಾವಿವರಣ ಪಂಜಿಕಾ ಎಂಬ ವಿವರಣ ಗ್ರಂಥ ಜಿನೇಂದ್ರಬುದ್ಧಿಯಿಂದಲೂ ಪದಮಂಜರಿ ಎಂಬ ವಿಸ್ತಾರವಾದ ವ್ಯಾಖ್ಯಾನಗ್ರಂಥ ಹರದತ್ತನಿಂದಲೂ ರಚಿತವಾಗಿವೆ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

.