ಜಯವಂತ ಜೋಗುಳ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
https://upload.wikimedia.org/wikipedia/kn/2/21/IMG-20231122-WA0127.jpg ಜಯವಂತ ಜೋಗುಳ ಇವರು ಕ್ರೈಸ್ತ ಧರ್ಮ ಬೋಧಕರು. ಆದ್ದರಿಂದ ಇವರ ಹೆಸರು ರೆವೆ. ಜೆ.ಎಮ್. ಜೋಗುಳ ಎಂಬುದಾಗಿದೆ. ಇವರು ಕ್ರೈಸ್ತ ಸಭೆ ಮತ್ತು ಕ್ರೈಸ್ತ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿರುವುದು ಮಾತ್ರವಲ್ಲದೆ ಕ್ರೈಸ್ತ ಸಭಾ ಚರಿತ್ರೆ ದಾಖಲೆ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಜನನ
ಬದಲಾಯಿಸಿಇವರ ಹುಟ್ಟೂರು ಕರ್ನಾಟಕದ ಗದಗ ಬೆಟಗೇರಿ, ಇವರ ಜನನ ೧೬-೧-೧೯೩೮ (ನಿಧನ- ೨೮-೦೫-೨೦೦೯)
ವಿದ್ಯಾಭ್ಯಾಸ
ಬದಲಾಯಿಸಿ- ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ಗದಗ ಮತ್ತು ಬೆಟಗೇರಿಯಲ್ಲಿದ್ದ ಬಿ.ಇ.ಎಂ. ಶಾಲೆ
- ಎಲ್. ಟಿ.ಎಚ್. ಪದವಿ-ಮಂಗಳೂರಿನ ಬಾಸೆಲ್ ಇವ್ಯಾಂಜಲಿಕಲ್ ಮಿಷನ್ ತಿಯೋಲಾಜಿಕಲ್ ಕಾಲೆಜ್-೧೯೫೭-೧೯೬೧
- ಬಿ.ಡಿ. ಪದವಿ- ಬೆಂಗಳೂರಿನ ಯುನೈಟೆಡ್ ತಿಯೋಲಾಜಿಕಲ್ ಕಾಲೇಜ್-೧೯೬೨-೧೯೬೪
- ಬಿ.ಎ. ಮತ್ತು ಎಂ.ಎ. ಪದವಿ(ತತ್ವಜ್ಞಾನ) (ಬಾಹ್ಯ) ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ
- ಜರ್ಮನ್ ಭಾಷೆಯ ಡಿಪ್ಲೊಮಾ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ
- ಎಮ್. ಟಿ. ಎಚ್. ಪದವಿ ಪ್ರಿನ್ಸ್ ಟನ್ ಥಿಯೋಲಾಜಿಕಲ್ ಸೆಮಿನೆರಿ, ಅಮೇರಿಕಾ ೧೯೮೨
ಉದ್ಯೋಗ
ಬದಲಾಯಿಸಿ- ೧೯೬೧-೧೯೬೨ ಹುಬ್ಬಳ್ಳಿಯಲ್ಲಿ ಸಹಾಯಕ ಸಭಾಪಾಲಜಕರಾಗಿ, ಉಣಕಲ್ ನಲ್ಲಿ ಸಭಾಪಾಲಕರಾಗಿ
- ೧೯೬೪- ಹುಬ್ಬಳ್ಳಿಯಲ್ಲಿ ಸಹಾಯಕ ಸಭಾಪಾಲಕರಾಗಿ,ಹಾಗೂಲ ಜಿಲ್ಲಾ ಸಭೆಗಳ ಆಧ್ಯಕ್ಷರ ಸಹಾಯಕರಾಗಿ
ಸಭಾ ಪಾಲಕರಾಗಿ ದೀಕ್ಷೆ
ಬದಲಾಯಿಸಿಬೆಂಗಳೂರಿನ ಸೈಂಟ್ ಅಂಡ್ರೂಸ್ ದೇವಾಲಯದಲ್ಲಿ; ಮೈಸೂರು ಸಭಾ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ರೈಟ್ ರೆವೆ. ಎನ್. ಸಿ. ಸಾರ್ಜಂಟ್ ರವರಿಂದ
ದೀಕ್ಷೆ ಪಡೆದ ನಂತರ ಸೇವಾ ಕ್ಷೇತ್ರಗಳು
ಬದಲಾಯಿಸಿಹುಬ್ಬಳ್ಳಿ ಪ್ರಾಂತ್ಯದ ವ್ಯಾಪ್ತಿಯ ಮೈಯರ್ ಮೆಮೋರಿಯಲ್ ಚರ್ಚ್, ಸೈಂಟ್ ಅಂಡ್ರೂಸ್ ಚರ್ಚ್ ಹುಬ್ಬಳ್ಳಿ, ಆಲ್ ಸೈಂಟ್ ಚರ್ಚ್, ಹೆಬಿಕ್ ಮೆಮೋರಿಯಲ್ ಚರ್ಚ್ ಧಾರವಾಡ, ಹೋಸೂರು ಚರ್ಚ್, ಗದಗ ಬೆಟಗೇರಿಯಲ್ಲಿರುವ ಬಾಸೆಲ್ ಮಿಶನ್ ಬಾಲಕರ ಅನಾಥ ಶಾಲೆಯ ಮ್ಯಾನೇಜರ್ ಆಗಿಮ ಕೆಲವು ಸಮಯ ಬೆಟಗೆರಿ ಸಭೆಗಳಲ್ಲಿ ಸಹಾಯಕರಾಗಿ ಸೇವೆ
ಕುಟುಂಬ ಜೀವನ
ಬದಲಾಯಿಸಿಹುಬ್ಬಳ್ಳಿಯ ಶ್ರೀ ದೇವಪುತ್ರಪ್ಪ ಹಾಗೂ ಜೊತೆವ್ವ ಬಾಗಲಕೊಟೆ ಎಂಬವರ ಮಗಳಾದ ಮನೊರಮ ಎಂಬವರೊಂದಿದೆ ವಿವಾಹ. ಇವರು ಹುಬ್ಬಳ್ಲಳಿಯ ಬಾಸೆಲ್ ಮಿಶನ್ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾದ್ಯಾಯಿಯಾಗಿ ನಿವೃತ್ತಿಯಾಗಿರುವರು. ಇವರಿಗೆ ಸಂತೊಷ ಎಂಬ ಮಗನೂ ಸೋಫಿಯಾ ಎಂಬ ಇಬ್ಬರು ಮಕ್ಕಳು ಇವರ ಕುಟುಂಬ ಹುಬ್ಬಳ್ಳಿಯಲ್ಲಿದ್ದಾರೆ.
ವಿದೇಶ ಪ್ರಯಾಣಗಳು
ಬದಲಾಯಿಸಿಜರ್ಮನಿ, ಸ್ವಿಸ್ವರ್ಲೇಂಡ್, ಇಂಗ್ಲೆಂಡ್, ಮೋರಿಷಸ್,ಮಡಗಾಸ್ಕರ್, ಅಮೇರಿಕಾ,
ಸಾಹಿತ್ಯ ಸೇವೆ
ಬದಲಾಯಿಸಿ- ಕರ್ನಾಟಕದಲ್ಲಿ ಬಾಸೆಲ್ ಮಿಶನ್(ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ) (ಸಂ) ಧಾರವಾಡ ಹೆಬಿಕ್ ಮೆಮೋರಿಯಲ್ ಚರ್ಚ್, ೧೯೮೭,
- ಹಳೆ ಒಡಂಬಡಿಕೆ ಪ್ರವೇಶದಾಯಿನಿ, ಭಾಗ-೨ (ಅನು.) ಮೂಲ ಸಿ.ಎಸ್. ಥೋಬರ್ನ್ , ಕೆ .ಟಿ.ಸಿ. ಮಂಗಳೂರು
- ಹಳೆ ಒಡಂಬಡಿಕೆ ಪ್ರವೇಶದಾಯಿನಿ, ಭಾಗ- ೩ (ಅನು.) ಮೂಲ ಸಿ.ಎಸ್. ಥೋಬರ್ನ್, ಕೆ.ಟಿ.ಸಿ. ಮಂಗಳೂರು
- ಕ್ರಿಸ್ತನ ಸಮ್ಮುಖದಲ್ಲಿ (ಅನು.) ಮೂಲ ಡಿ.ಜಿ.ಎಸ್. ದಿನಕರನ್, ಮದ್ರಾಸ್ ೧೯೮೬
- ಜೀವನ ಸತ್ಯಗಳು (ಅನು.) ಮೂಲ ಮಾತೆ ಬಸಿಲಿಯಾ ಶ್ಲಿಂಕ
- ಯೇಸುವನ್ನು ಪ್ರೀತಿಸುವವರು(ಅನು.) ಮೂಲ ಮಾತೆ ಬಸಿಲಿಯಾ ಶ್ಲಿಂಕ
- ಮಾನಸಾಂತರ- ಆನಂದಭರಿತ ಜೀವನ (ಅನು.) ಮೂಲ ಮಾತೆ ಬಸಿಲಿಯಾ ಶ್ಲಿಂಕ
- ಆದರಣೆಯ ತಂದೆ (ಅನು.) ಮೂಲ ಮಾತೆ ಬಸಿಲಿಯಾ ಶ್ಲಿಂಕ
- ಪತ್ಮೋಸ- ಪರಲೋಕವು ತೆರೆಯಲ್ಪಟ್ಟಾಗ (ಅನು.) ಮೂಲ ಮಾತೆ ಬಸಿಲಿಯಾ ಶ್ಲಿಂಕ
- ಬಿಷಪ್ ಸುಮಿತ್ರ- ಜೀವನ ಚರಿತ್ರೆ, ೧೯೮೬ ಐ.ಡಿ.ಎಲ್.ಬಿ. ಬೆಂಗಳೂರು
- ಅಮರ ಸಂದೇಶ- ನಾಟಕ, ೧೯೮೬, (ಅನು.) ಐ.ಡಿ.ಎಲ್.ಬಿ. ಬೆಂಗಳೂರು
ಸಂಪಾದಕರಾಗಿ
ಬದಲಾಯಿಸಿವರದಿ ವಾರ್ತೆ, ಸಭಾವಾಣಿ,ಪತ್ರಿಕೆ, ಸರ್ವರ ಮಿತ್ರ