ಜಯಂತ್ ಆರ್. ಹರಿತ್ಸ (ಪೂರ್ಣ ಹೆಸರು :ಜಯಂತ್ ರಾಮಸ್ವಾಮಿ ಹರಿತ್ಸ) ರವರು ಭಾರತೀಯ ಕಂಪ್ಯೂಟರ್ ವಿಜ್ಞಾನಿ ಮತ್ತು ಪ್ರಾಧ್ಯಾಪಕರಾಗಿದ್ದಾರೆ. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಸಿಡಿಎಸ್ ಮತ್ತು ಸಿಎಸ್ಎ ಇಲಾಖೆಯ ಸಿಬ್ಬಂದಿಯಾಗಿದ್ದಾರೆ . ಅವರು ಡೇಟಾಬೇಸ್ ಸಿಸ್ಟಮ್ ಗಳ ವಿನ್ಯಾಸ ಮತ್ತು ವಿಶ್ಲೇಷಣೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ .[] ೨೦೦೯ ರಲ್ಲಿ ಭಾರತದಲ್ಲಿ ಸಿಎಸ್ಐಆರ್ ಪ್ರಾಯೋಜಿಸಿದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ಹಾಗೂ ೨೦೧೪ ರಲ್ಲಿ ಇಂಜಿನಿಯರಿಂಗ್ ಗಾಗಿ ಇನ್ಫೋಸಿಸ್ ಪ್ರಶಸ್ತಿ ಗೆದ್ದಿದ್ದಾರೆ.[][]

ಜಯಂತ್ ಹರಿತ್ಸ
Born೧೦ ಮಾರ್ಚ್ ೧೯೬೪
ಬಸವನಗುಡಿ , ಬೆಂಗಳೂರು []
Occupationಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸಿಡಿಎಸ್ ಮತ್ತು ಸಿಎಸ್ಎ ಇಲಾಖೆಗಳ ಸಿಬ್ಬಂದಿ
Years active೧೯೯೦ −
Websitedsl.cds.iisc.ac.in/~haritsa/

ಜನನ ಮತ್ತು ಶಿಕ್ಷಣ

ಬದಲಾಯಿಸಿ

ಜಯಂತ್ ಹರಿತ್ಸ ರವರು ೧೦ ಮಾರ್ಚ್ ೧೯೬೪ ರಂದು ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದರು.[] ಇವರು ತಮ್ಮ ಪ್ರೌಢ ಶಿಕ್ಷಣವನ್ನು ವಿಜಯ ಪ್ರೌಢ ಶಾಲೆ , ಜಯನಗರ , ಬೆಂಗಳೂರಿನಲ್ಲಿ ಪಡೆದರು ; ನ್ಯಾಷನಲ್ ಕಾಲೇಜು (ಬಸವನಗುಡಿ) ,ಬೆಂಗಳೂರು , ವಿಜ್ಞಾನದಲ್ಲಿ ಪದವಿ ಪೂರ್ವ ಶಿಕ್ಷಣ ; ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಮದ್ರಾಸ್ ನಿಂದ ಬಿ.ಟೆಕ್.(ಎಲೆಕ್ಟ್ರಾನಿಕ್ಸ್ ) ಪದವಿಯನ್ನು ಪಡೆದರು .

ವೃತ್ತಿಜೀವನ

ಬದಲಾಯಿಸಿ

ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ (ಕಾಲೇಜ್ ಪಾರ್ಕ್) ಇನ್ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ರಿಸರ್ಚ್‌ ನಲ್ಲಿ ರಿಸರ್ಚ್ ಫೆಲೋ ಆಗಿ ಕಾರ್ಯ ನಿರ್ವಹಿಸಿದರು . ನಂತರ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಎಸ್ಎ ವಿಭಾಗದ ಅಧ್ಯಕ್ಷರಾದರು.

ಪ್ರಶಸ್ತಿಗಳು

ಬದಲಾಯಿಸಿ

ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೨೦೦೯ .[]

ಗೌರವಗಳು

ಬದಲಾಯಿಸಿ
  • ಅಸೋಸಿಯೇಷನ್ ​​ಫಾರ್ ಕಂಪ್ಯೂಟಿಂಗ್ ಮೆಷಿನರಿ ಯ ಫೆಲೋ - ೨೦೧೫ .[]
  • ಐಇಇಇ ಯ ಫೆಲೋ - ೨೦೧೩ .[]
  • ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ , ಭಾರತದ ಫೆಲೋ - ೨೦೧೦ .[]
  • ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ , ಭಾರತ - ೨೦೦೬ .[೧೦]

ಉಲ್ಲೇಖಗಳು

ಬದಲಾಯಿಸಿ
  1. ಟೈಮ್ಸ್ ಆಫ್ ಇಂಡಿಯಾ
  2. ಡಾಟಾಬೇಸ್ ಸಿಸ್ಟಮ್ಸ್
  3. ಪ್ರಶಸ್ತಿಗಳು
  4. ಜಯಂತ್ ಹರಿತ್ಸ
  5. ಜನನ
  6. ಭಟ್ನಗರ್ ಪ್ರಶಸ್ತಿ ವಿಜೇತರು
  7. ಎಸಿಎಮ್ ಫೆಲೋ
  8. ಐಇಇಇ ಫೆಲೋ
  9. "ಇನ್ಫೋಸಿಸ್". Archived from the original on 2018-10-27. Retrieved 2019-06-15.
  10. ಫೆಲೋಶಿಪ್