ಆರಂಭಿಕ ಜೀವನ ಬದಲಾಯಿಸಿ

ಭರತ ಮಹಾಜ್ಞಾನಿಯಾದ ರಾಜ. ರಾಜನಾಗಿಯೂ ತುಂಬಾ ಯಶಸ್ವಿ. ದೇಶವನ್ನು ಸಮೃದ್ಧವಾಗಿ ಕಟ್ಟಿ ಆಳಿದ. ಕೊನೆಗೆ ವಿರಕ್ತನಾಗಿ ಎಲವನ್ನೂ ತೊರೆದು ಕಾಡಿಗೆ ತೆರಳಿದ. ಕಾಡಿನಲ್ಲಿ ಒಂದು ಜಿಂಕೆಯು ನೀರು ಕುಡಿಯಲೆಂದು ಬಂತು. ತುಂಬು ಗರ್ಭಿಣಿ. ಇನ್ನೆÃನು ನೀರಿಗೆ ಬಾಯಿ ಹಾಕಬೇಕು. ಅಷ್ಟರಲ್ಲಿ ಬೀಕರವಾದ ಸಿಂಹದ ಘರ್ಜನೆಯೊಂದು ಕೇಳಿಸಿತು. ಭಯದಿಂದ ಜಿಂಕೆ ನೆಗೆಯಿತು. ನೆಗೆಯುವ ಭರದಲ್ಲಿ ಗರ್ಭ ಜಾರಿ ನೀರಿನಲ್ಲಿ ಬಿತ್ತು. ಪುಟ್ಟ ಜಿಕೆಯ ಮರಿ. ತಾಯಿ ಜಿಂಕೆ ಸಿಂಹಕ್ಕೆ ಹೆದರಿ ದಾರಿ ತಪ್ಪಿ ಓಡುತ್ತಾ ಸತ್ತಿತು. ಅನಾಥವಾದ ಜಿಂಕೆ ಮರಿಯನ್ನು ಭರತ ತಂದು ಸಾಕಿದ. ತಾನು ಹಿರಿಯ ಜ್ಞಾನಿ ಆದರೇನು..? ಜಿಂಕೆ ಮರಿಯ ಮೋಹ ಅವನನ್ನು ಮುತ್ತಿತು. ಅದಕ್ಕೆ ತಿನ್ನಿಸುವುದು ಕಾಡು ಪ್ರಾಣಿಗಳಿಂದ ಕಾಪಾಡುವುದು, ಪ್ರತೀ ಕ್ಷಣವೂ ಅದರದೇ ಚಿಂತೆ. ಸಾಯೋ ಕ್ಷಣ ಸಮೀಪಿಸಿತು. ಆದರೂ ಭರತನಿಗೆ ಜಿಂಕೆ ಮರಿಯದೇ ಚಿಂತೆ. ಇನ್ನಾರು ಗತಿ ಈ ಜಿಂಕೆ ಮರಿಗೆ ತನ್ನ ನಂತರ ಇದನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿ ಸಾಕುವವರು ಯಾರು? ಇದೇ ಅನುಕಂಪ, ಅದೇ ಧ್ಯಾನ. ಹೀಗೆ ಜಿಂಕೆ ಮರಿಯನ್ನು ನೆನೆಯುತ್ತಲೇ ಪ್ರಾಣ ಬಿಟ್ಟ. ಪರಿಣಾಮವಾಗಿ ತಾನೂ ಜಿಂಕೆಯಾಗಿ ಹುಟ್ಟಿದ. ಸಾಯೋ ಕ್ಷಣದಲ್ಲಿ ನಾವೇನನ್ನು ಯೋಚಿಸುತ್ತೆÃವೆಯೋ ಅದನ್ನೆÃ ಪಡೆಯುತ್ತೆÃವೆ ಎನ್ನುತ್ತಾರೆ ಶಾಸ್ತçಕಾರರು. ಭರತ ಚಕ್ರವರ್ತಿ ಇದಕ್ಕೆ ಉತ್ತಮ ಉದಾಹರಣೆ. ಇಂಥ ಅಪೂರ್ವ ಸಂದರ್ಬದಲ್ಲಿ ಪೂರ್ವ ಜನ್ಮದ ಸ್ಮçತಿ ಇರುವುದುಂಟು. ಜಿಂಕೆಯಾದ ಭರತನಿಗೆ ಹಾಗೆ ಆಯಿತು. ಆದ್ದರಿಂದ ಆ ಜನ್ಮದ ಬಗ್ಗೆಯೇ ಆತನಿಗೆ ವಿರಕ್ತಿ. ಋಷಿಗಳ ತಪೋವನದಲ್ಲೆÃ ಅಡ್ಡಾಡುತ್ತಾ ಒಂದು ದಿನ ಪುಣ್ಯ ತೀರ್ಥದಲ್ಲಿ ದೇಹತ್ಯಾ ಮಾಡಿದ. ಮತ್ತೆ ಸಿಂಧೂ ದೇಶದಲ್ಲಿ ಬ್ರಾಹ್ಮಣ ದಂಪತಿಗಳ ಮಗನಾಗಿ ಹುಟ್ಟಿದ. ಇಲ್ಲೂ ಅವನಿಗೆ ಭರತ ಎಂದೇ ಹೆಸರು. ಜನ್ಮತಃ ಮಹಾಜ್ಞಾನಿಯಾದರೂ ದಡ್ಡರಂತೆ ಅವಧುತನಾಗಿ ಬದುಕಿದ. ಪಾಂಡಿತ್ಯ ಇದೆ. ಪ್ರದರ್ಶನ ಇಲ್ಲ. ಆನ ದಡ್ಡನೆಂದೇ ತಿಳಿದು ಜಡಭರತ ಎಂದು ಕರೆದರು.

ರಹುಗುಣ ಬದಲಾಯಿಸಿ

ಒಂದು ದಿನ ಸಿಂಧೂ ದೇಶದ ರಾಜ ರಹೂಗುಣ ಎತ್ತಲೋ ಪಲ್ಲಕ್ಕಿಯಲ್ಲಿ ಹೊರಟಿದ್ದ. ಅಲ್ಲೆÃ ಅರಮನೆಯ ಬಾಗಿಲಲ್ಲಿ ಈ ಜಡಭರತ ಕೂತಿದ್ದ. ರಾಜಭಟರು ಇವನನ್ನು ಪಲ್ಲಕ್ಕಿ ಹೊರಲು ನಿಯಮಿಸಿದರು. ಆತ ಪಲ್ಲಕ್ಕಿಗೆ ಹೆಗಲು ಕೊಟ್ಟ. ಪಲ್ಲಿಕ್ಕಿ ಮುಂದೆ ಸಾಗಿತು. ಹಳೆಯ ಕಾಲದ ಏರುಪೇರಾದ ದಾರಿ. ನಡೆಯುವುದಷ್ಟೆÃ ಕಷ್ಟ. ಈತ ಪಲ್ಲಕ್ಕಿಗೆ ಹೊಸಬ ಬೇರೆ. ಅದರ ಜೊತೆಗೆ ನಿರ್ಲಕ್ಷ. ಯದ್ವಾ ತದ್ವಾ ಹೆಜ್ಜೆ ಇಡುತ್ತಾ ನಡೆಯತೊಡಗಿದ. ಈತನಿಗೆ ಯಾವುದರ ಪರಿವೆಯೂ ಇದ್ದಂತಿರಲಿಲ್ಲ.

ವಿರಾಗಿ ಜೀವನ ಬದಲಾಯಿಸಿ

ಪಲ್ಲಕ್ಕಿ ಏರುಪೇರಾಯಿತು. ರಾಜನಿಗೂ ಹಿಂಸೆ. ಪಲ್ಲಕ್ಕಿ ಹೊತ್ತಿದ್ದವರನ್ನು ಗದರಿದ. ಅವರು ಭಿನ್ನವಿಸಿಕೊಂಡರು. ಪ್ರಭು ನಾವು ಸರಿಯಾಗಿ ಹೋಗುತ್ತಿದ್ದೆÃವೆ. ಇದೆಲ್ಲ ಹೊಸಬನ ತಪ್ಪು. ಅರಸ ಜಡಭರತನನ್ನು ಗದರಿದ. ಸರಿಯಾಗಿ ಹೆಜ್ಜೆಯಿಟ್ಟು ಸರಿಯಾಗಿ ಸಾಗುವಂತೆ ಎಚ್ಚರಿಸಿದ. ಆದರೆ ಆತನಲ್ಲಿ ಯಾವುದೇ ಪರಿಣಾವೂ ಕಾಣಿಸಲಿಲ್ಲ. ಇಷ್ಟು ಪುಷ್ಟವಾಗಿ ಬೆಳೆದಿದ್ದಿÃಯಾ ಏನಯ್ಯಾ ಕಷ್ಟ ನಿನಗೆ.? ಪಾಪ, ನಿನಗೆ ಭರ ಹೊರುವುದು ಕಷ್ಟ. ಮುದುಕ ಬೇರೆ ಅಂತ ,ಮೂದಲಿಸಿದ. ಆದರೂ ಜಡಭರತ ತುಟಿ ಬಿಚ್ಚಲಿಲ್ಲ. ಮತ್ತೆ ಪಲ್ಲಕ್ಕಿ ಮುಂದೆ ಸಾಗಿತು. ಹಿಂದಿನಂತೆಯೇ ಅತ್ತಿಂದಿತ್ತ ತೊನೆದಾಡಿತು. ರಾಜ ರೇಗಿ ನುಡಿದ. ನಾನು ಈ ದೇಶದ ರಾಜ ಪಲ್ಲಕ್ಕಿಯ ಮೇಲೆ ಕುಳಿತು ಆಜ್ಙಾಪಿಸುತ್ತಿದ್ದೆÃನೆ. ಎಚ್ಚರ..! ಸರಿಯಾಗಿ ನಡೆ. ಮೂಕನಂತಿದ್ದ ಜಡಭರತ ಈಗ ಬಾಯಿ ತೆರೆದ: “ಏನಯ್ಯಾ ಏನೋ ಅಂದೆ. ನನಗೆ ವಯಸ್ಸಾಯಿತು ಮುದುಕನಾದೆ ಎಂದೆ. ಭಾರ ಹೊರುವುದು ಕಷ್ಟ ಎಂದು ಮರುಕದ ಹಂಗಿನ ನುಡಿಯಾಡಿದೆ. ಭಾರ ಹೊತ್ತವರಿಗೆ ಈ ಮಾತು ಹೇಳಬೇಕು ನನಗೇಕೆ ಈ ಮಾತು. ನಾನು ಯಾವ ಭಾರವನ್ನು ಹೊತ್ತಿಲ್ಲವಲ್ಲ. ಹಾಗೆಯೇ ಸರಿಯಾಗಿ ನಡೆ ಎಂದೆ. ನಡೆಯುವವರಿಗೆ ತಾನೇ ಈ ಮಾತು? ಅಂಥವರಿಗರ ಒಂದು ಗುರಿ ಇರಬೇಕು. ಒಂದು ದಾರಿ ಬೇಕು. ನನಗೇನು..? ನಾನೇನು ನಡೆಯುತ್ತಿಲ್ಲವಲ್ಲ! ನಾನು ಪುಷ್ಟವಾಗಿ ಬೆಳೆದಿದ್ದೆÃನೆ ಎಂದೆಯಲ್ಲ ಹಾಗೇ ಏನೇನೋ ಹೇಳಿದೆ. ಇದು ತಿಳಿದವರು ಆಡುವ ಮಾತಲ್ಲ. ನಾನು ಪುಷ್ಟನಾಗಿಯೂ ಇಲ್ಲ. ಕೃಷನಾಗಿಯೂ ಇಲ್ಲ. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಅಲ್ಲಯ್ಯಾ ನೀನು ಅರಸ ಎಂದೆಯಲ್ಲ ? ಯಾವ ಅರಸ ನೀನು?? ಎಲ್ಲಿಯ ಅರಸ ನೀನು? ನೀನು ಪಲ್ಲಕ್ಕಿಯಲ್ಲಿ ಕೂತವನು. ನಾನು ಅದನ್ನು ಹೊರುವವನು ಎನ್ನುವಂತೆ ಮಾತನಾಡಿದೆಯಲ್ಲ. ಎದೆಲ್ಲಾ ಅರ್ಥವಿಲ್ಲದ ಮಾತುಗಳು.

ಉಪದೇಶ ಬದಲಾಯಿಸಿ

ಈ ಮಣ್ಣಿನ ಮೈ, ಮಣ್ಣಿನ ಮೇಲೆ ಓಡಾಡುತ್ತದೆ. ಕೆಳಗೆ ಮಣ್ಣಿನ ನೆಲವಿದೆ. ನೆಲದ ಮೇಲೆ ಕಾಲಿದೆ. ಕಾಲಲ್ಲಿ ಹರಡುಗಳು; ಅದರ ಮೇಲೆ ಮೊಣಕಾಲುಗಳು, ತೊಡೆಗಳು, ತೊಡೆಯ ಮೇಲೆ ಸೊಮಟ ಇದೆ. ಅದರ ಮೇಲೆ ಹೊಟ್ಟೆ ಮೇಲೆ ಎದೆ. ಎದೆಯ ಮೇಲೆ ಹೆಗಲು. ಹೆಗಲ ಮೇಲೆ ಮರದ ಮೇನೆಯಿದೆ. ಮೇನೆಯಲ್ಲಿ ಸೌವೀರದೇಶದ ರಾಜ ಎಂದು ತಿಳಿದುಕೊಂಡವನು ಕೂತಿದ್ದಾನೆ. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ನಾನು ಯಾರನ್ನೂ ಹೊತ್ತಲ್ಲವಲ್ಲ. ರಾಜ ಪಲ್ಲಕ್ಕಿಯಿಂದ ಇಳಿದ. ಅವನ ಕಣ್ಣು ತೆರೆಯಿತು. ಅವನು ವಿಸ್ಮಿತನಾಗಿ ಕೇಳಿದ. ನೀನು ಸಾಮಾನ್ಯ ಮನುಷ್ಯನಲ್ಲ. ಅವಧುತ ವೇóಷದಲ್ಲಿ ತಿರುಗುವ ಮಹಾಜ್ಙಾನಿ ಎಂದು ಖಚಿತವಾಯಿತು. ನನಗೂ ತಿಳಿವಿನ ಬೆಳಕು ನೀಡಿ ಉದ್ಧಾರ ಮಾಡಬೇಕು. ಜಡಭರತ ಶಾಂತನಾಗಿ ನುಡಿದ. ಅಪ್ಪಾ ನೀನಿ ಸೌರದೇಶದ ಅರಸ. ನಾವೆಲ್ಲಾ ನಿನ್ನ ಪ್ರಜೆಗಳು ಎಂದು ತಿಳಿದುಕೊಂಡಿರುವೆ. ನೀನು ನಿಜವಾಗಿ ಈ ನೆಲದ ದೊರೆಯೇ ಅಲ್ಲ. ಹೇಳಿ- ಕೇಳಿ, ನೀನು ರಾಜನಾಗಿದ್ದು ಯಾವಾಗ..? ಮೊದಲು ನೀನು ತಾಯಿಯ ಹೊಟ್ಟೆಯಲ್ಲಿದ್ದೆ. ಆಗ ಬರಿಯ ಬರೀ ಭ್ರೂಣವಾಗಿದ್ದೆ. ರಾಜನಾಗಿರಲಿಲ್ಲ. ಮುಂದೆ ಮಗುವಾಗಿ ಹುಟ್ಟಿದೆ. ಆಗಲೂ ಬರಿಯ ಮಗುವಾಗಿದ್ದೆ. ಎಲ್ಲ ಮಕ್ಕಳಂತೆ, ರಾಜನಾಗಿರಲಿಲ್ಲ. ಮುಂದೊಂದು ದಿನ ಸಿಂಹಾಸನದಲ್ಲಿ ಕುಳಿತೆ. ನಾನೇ ಈ ನಮೆಲದ ದೊರೆ ಎಂದು ನೀನೆ ಭ್ರಮಿಸಿಕೊಂಡೆ. ಹಿಂದೆ ನೀನು ಏನಾಗಿದ್ದೆ? ಈ ದೇಹಕ್ಕೆ ನೀನು ಬರುವ ಮುನ್ನ ನೀನೆಲ್ಲಿದ್ದಿ? ಯವ ದೊರೆ? ಯಾವ ರಾಜ್ಯ? ಏನು ಕಥೆ? ಮುಂದೊಂದು ದಿನ ನೀನು ಎಲ್ಲರಂತೆ ಸಾಯುವೆ. ನೀನು ಹುಟ್ಟುವ ಮುನ್ನ ಈ ನೆಲ ಇತ್ತು. ನೀನು ಸತ್ತ ಮೇಲೂ ಈ ನೆಲ ಇರುತ್ತದೆ. ನಿನ್ನದು ಈ ನಾಲ್ಕು ದಿನದ ಬಾಳು. ಎಂಥ ಒಡೆತನ.!! ಈಗ ನೀನು ಈ ಶಿಬಿಕೆಯಲ್ಲಿ ದೊರೆಯೆಂದು ಕುಳಿತಿರುವೆ. ನೀನು ಸತ್ತಾಗ ಉಳಿಯುವುದೇನು..?? ಬೂದಿ. ಈ ಶಿಬಿಕೆ-ಮರದ ಕೊರಡನ್ನು ಈ ದೇಹವನ್ನು ಜತೆಯಾಗಿ ಸುಟ್ಟರೆ ಇದು ಮಹಾರಾಜರ ಬೂದಿ ಎಂದು ಗುರುತಿಸಲು ಸಾಧ್ಯವೇ..? ಸತ್ತಮೇಲೆ ನೀನು ಸೌರದೇಶದ ರಾಜನಲ್ಲ. ಬರಿಯ ಒಂದು ಹಿಡಿ ಬೂದಿ. ಹೋಗಲಿ ಬಿಡು. ನೀನು ಬದುಕಿದ್ದಾಗಲೇ ಇನ್ನೊಬ್ಬ ವೀರ ನಿನ್ನನ್ನು ಆಕ್ರಮಿಸಿ ನಿನ್ನ ಸಿಂಹಾಸನದಲ್ಲಿ ಕೂಡಬಹುದು. ಆಗ ನೀನು ರಾಜ ಹೇಗೆ ಆಗುತ್ತಿÃಯಾ..? ಯಾವ ರಾಜ್ಯಕ್ಕೂ ಯಾರ ಆಡಳಿತವೂ ಶಾಶ್ವತವಲ್ಲ. ಈ ನೆಲ ಯಾರ ಅಪ್ಪನ ಆಸ್ತಿಯೂ ಅಲ್ಲ. ಇಲ್ಲಿ ಒಬ್ಬನ ಅಧಿಕಾರ ಮಾತ್ರ ಶಾಶ್ವತ. ಒಬ್ಬನು ಮಾತ್ರವೇ ಇದರ ಚಿರಂತನ ದೊರೆ. ಅವನೇ ಭಗವಂತ. ಈ ನೆಲವೆಲ್ಲ ಅವನೊಬ್ಬನದೇ ಆಸ್ತಿ. ಈಶಾವಾಸ್ಯಂಮಿದಂ ಸರ್ವಂ. ಇಲ್ಲಿ ನಾನು ನೀನು ಏನೂ ಅಲ್ಲ. ನೀನು ನನ್ನ ದೊರೆಯಲ್ಲ. ನಾನು ನಿನ್ನ ಆಳಲ್ಲ. ನಾನು ಇಲ್ಲಿ ಆಳುವವ ಎಂಬ ಭ್ರಮೆಯನ್ನು ಬಿಟ್ಟುಬಿಡು. ಎಲ್ಲರ ದೊರೆಯಾದ ಭಗವಂತನಿಗೆ ಶರಣಾಗು.

ಜಡಭರತನ ಮಾತು ಕೇಳಿ ಅರಸ ಕರಗಿಹೋದ. ಕುಗ್ಗಿ ಹೋದ. ಭಕ್ತಿಗೌರವಗಳಿಂದ ಕೈ ಜೋಡಿಸಿ ನುಡಿದ. ನಾವೆಲ್ಲ ಎಂಥ ಭ್ರಮೆಯ ಪ್ರಪಂಚದಲ್ಲಿ ಬದುಕುತ್ತಿದ್ದೆÃವೆ. ಒಳಗಿನ ಯೋಗ್ಯತೆಗೆ ಹೊರಗಿನ ಥಳುಕನ್ನು ಮಾನದಣಡ ಮಾಡುತ್ತೆÃವೆ. ವೇಷ-ಭುಷನ ನೋಡಿ ಮಣೆ ಹಾಕುತ್ತೆÃವೆ. ಆನರ ನಿಜವಾದ ಯೋಗ್ಯತೆಯನ್ನು ನೋಡುವ ಕಣ್ಣು , ಅಳೆಯುವ ಅರ್ಹತೆ ನಮಗಿಲ್ಲ. ಈ ದೇಶದಲ್ಲಿ ಎಂಥೆಂಥ ಮಹಾನುಭಾವರು ಇದ್ದಾರೋ..! ನಮಗೆ ಅಗೋಚರವಾಗಿ, ಗುಪ್ತವಾಗಿ, ಜನರ ತಿರಸ್ಕಾರಕ್ಕೆ ಪಾತ್ರರಾಗಿ ಈ ಜಡಭರತನಂತೆ. ಅಂಥ ಎಲ್ಲರಿಗೂ ನನ್ನ ನಮಸ್ಕಾರ. ಇಲ್ಲಿ ಜ್ಞಾನದ ಗಣಿಯಿದೆ. ಅಲ್ಲಿ ನ್ನ ತಲೆ ಮಣಿಯಲಿ. ಯಾವ ಶಿಶು ಎಂಥ ಬೆಳಕಿನ ಪುಂಜವೋ ಯಾರಿಗೆ ಗೊತ್ತು. ದೊಡ್ಡವರಿಗೆ ನಮಸ್ಕಾರ, ಪುಟ್ಟ ಮಕ್ಕಳಿಗೂ ನಮಸ್ಕಾರ. ರಾಜ ರಹುಗುಣನ ಕಣ್ಣು ತೆರೆಯಿತು. ಹೀಗೆ ಅರಸನಿಗೆ ಜ್ಞಾನೋಪದೇಶ ನೀಡಿ ಉದ್ಧಾರ ಮಾಡಿದ ಮಹಾಜ್ಞಾನಿ ಜಡಭರತ.