ಜಗ್ವಾರ್ ಕಾರ್ ಗಳು
It has been suggested that Swallow Sidecar Company ಮತ್ತು SS Cars Ltd be merged into this article or section. (Discuss) Proposed since February 2010. |
ಜಗ್ವಾರ್ ಟೆಂಪ್ಲೇಟು:Pronounced ಎಂಬ ಹೆಸರಿನಿಂದಲೇ ಪ್ರಚಲಿತವಾಗಿರುವ ಜಗ್ವಾರ್ ಕಾರ್ಸ್ ಲಿಮಿಟೆಡ್ ,ಇಂಗ್ಲೆಂಡ್ ನ ಕೋವೆಂಟ್ರಿಯಲ್ಲಿ ತನ್ನ ಕೇಂದ್ರಕಚೇರಿಯನ್ನು ಹೊಂದಿರುವಂತಹ ಬ್ರಿಟಿಷ್ ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಕೈಗಾರಿಕೆಯಾಗಿದೆ. ಅದು ಟಾಟಾ ಮೋಟಾರ್ಸ್ ಲಿಮಿಟೆಡ್ ನವರು ಮಾರ್ಚ್ 2008ರಿಂದ ಸಂಪೂರ್ಣ ಮಾಲಿಕತ್ವ ಹೊಂದಿರುವ ಭಾರತೀಯ ಕಂಪನಿಯ ಒಂದು ಅಂಗವಾಗಿದ್ದು, ಅದನ್ನು ಜಗ್ವಾರ್ ಲ್ಯಾಂಡ್ ರೋವರ್ ವ್ಯಾಪಾರದ ಒಂದು ಭಾಗವಾಗಿ ನಡೆಸಿಕೊಂಡುಬರಲಾಗಿದೆ.[೨]
ಚಿತ್ರ:Jaguar logo.svg | |
ಸಂಸ್ಥೆಯ ಪ್ರಕಾರ | Private Limited Company |
---|---|
ಸ್ಥಾಪನೆ | 4 September 1922 (as Swallow Sidecar Company) |
ಸಂಸ್ಥಾಪಕ(ರು) | Sir William Lyons and William Walmsley |
ಮುಖ್ಯ ಕಾರ್ಯಾಲಯ | Coventry, England, Great Britain |
ಪ್ರಮುಖ ವ್ಯಕ್ತಿ(ಗಳು) | Ratan Tata, Chairman David Smith, CEO Mike O'Driscoll, Managing Director |
ಉದ್ಯಮ | Automotive |
ಉತ್ಪನ್ನ | Automobiles |
ಮಾಲೀಕ(ರು) | Tata Motors |
ಉದ್ಯೋಗಿಗಳು | 10,000[೧] |
ಪೋಷಕ ಸಂಸ್ಥೆ | Jaguar Land Rover |
ಜಾಲತಾಣ | Jaguar.com |
ಜಗ್ವಾರ್ ಸ್ವಾಲೋ ಸೈಡ್ ಕಾರ್ ಕಂಪನಿ ಎಂಬ ಹೆಸರಿನಲ್ಲಿ ಸರ್ ವಿಲಿಯಮ್ ಲಿಯಾನ್ಸ್ ರಿಂದ 1922ರಲ್ಲಿ ಸ್ಥಾಪನೆಗೊಂಡು ಮೊದಲಿಗೆ ಮೋಟರ್ ಸೈಕಲ್ ಸೈಡ್ ಕಾರ್ ಗಳ ಉತ್ಪಾದನೆಯಲ್ಲಿ ತೊಡಗಿಕೊಂಡು, ನಂತರ ಪ್ಯಾಸೆಂಜರ್(ಪ್ರಯಾಣಿಕರ) ಕಾರ್ ಗಳನ್ನು ತಯಾರಿಲು ತೊಡಗಿತು. ಎರಡನೆಯ ಮಹಾಯುದ್ಧದ ನಂತರ SS ಎಂಬ ಅಕ್ಷರಗಳು(ಇನಿಷಿಯಲ್ ಗಳು) ಅನೈಚ್ಛಿಕವಾದ ಅ[ಆರ್ಥಗಳಿಗೆ ಎಡೆಮಾಡಿಕೊಡುತ್ತಿತ್ತೆಂಬ ಕಾರಣದಿಂದ ಕಂಪನಿಯ ಹೆಸರನ್ನು ಜಗ್ವಾರ್ ಎಂದು ಬದಲಿಸಲಾಯಿತು.[೩] 1960ರಿಂದ ಹಲವಾರು ಮಾಲೀಕರ ಕೈಬದಲಾವಣೆಗೊಳಗಂಡನಂತರ, ಜಗ್ವಾರ್ ಅನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನ ಪಟ್ಟಿಯಲ್ಲಿ ದಾಖಲಾಗಿಸಲಾಗಿದ್ದು, 1989ರಲ್ಲಿ ಫೋರ್ಡ್ ಕಂಪನಿಯು ಅದನ್ನು ತನ್ನದಾಗಿಸಿಕೊಳ್ಳುವ ತನಕ ಅದು FTSE 100 ಇಂಡೆಕ್ಸ್ ನ ಭಾಗವಾಗಿಯೇ ಆಗಿದ್ದಿತು.[೪] ಜಗ್ವಾರ್ ಹರ್ ಮೆಜೆಸ್ಟಿ ರಾಣಿ ಎಲಿಝಬೆತ್ ಮತ್ತು ಹಿಸ್ ರಾಯಲ್ ಹೈನೆಸ್ ರಾಜಕುಮಾರ ಚಾರ್ಲ್ಸ್ ರಿಂದ ರಾಯಲ್ ವಾರಂಟ್ (ರಾಜ ಪ್ರಶಂಸಾಸ್ವೀಕೃತಿ) ಸಹ ಪಡೆದಿದೆ.[೫]
ಇಂದು ಜಗ್ವಾರ್ ಕಾರ್ ಗಳನ್ನು ವಿನ್ಯಾಸಗೊಳಿಸುವುದು ಜಗ್ವಾರ್ ಲ್ಯಾಂಡ್ ರೋವರ್ ನವರ ವಾರ್ವಿಕ್ ಷೈರ್ ನ ಕೊಂವೆಂಟ್ರಿಯಲ್ಲಿರುವ ವ್ಹಿಟ್ಲೀ ಪ್ಲಾಂಟ್ ಮತ್ತು ವಾರ್ವಿಕ್ ಷೈರ್ ನ ಗೇಡನ್ ಗಳ ಎಂಜಿನಿಯರಿಂಗ್ ಕೇಂದ್ರಗಳಲ್ಲಾದರೆ, ಇದರ ತಯಾರಿಕೆಯು ಜಗ್ವಾರ್ ಲ್ಯಾಂಡ್ ರೋವರ್ ನ ಎರಡು ಪ್ಲಾಂಟ್(ಕಾರ್ಖಾನೆ)ಗಳಾದ ಬರ್ಮಿಂಗ್ ಹ್ಯಾಂ ನ ಕ್ಯಾಸಲ್ ಬ್ರೋವಿಚ್ ಅಸೆಂಬ್ಲಿ ಪ್ಲಾಂಟ್ ಮತ್ತು ಲಿವರ್ ಪೂಲ್ ಬಳಿಯಿರುವ ಹೇಲ್ವುಡ್ ಬಾಡಿ & ಅಸೆಂಬ್ಲಿ ಗಳಲ್ಲಿ ನಡೆಯುತ್ತವೆ.
ಇತಿಹಾಸ
ಬದಲಾಯಿಸಿ1922ರಲ್ಲಿ ಇಬ್ಬರು ಮೋಟಾರ್ ಸೈಕಲ್ ವ್ಯಾಮೋಹಿಗಳಾದ ಸರ್ ವಿಲಿಯಂ ಲಿಯಾನ್ಸ್ ಮತ್ತು ವಿಲಿಯಮ್ ವಾಲ್ಮ್ ಸ್ಲೇ ಯವರಿಂದ ಸ್ವಾಲೋ ಸೈಡ್ ಕಾರ್ ಕಂಪನಿ ಎಂಬ ಹೆಸರಿನಲ್ಲಿ ಸ್ಥಾಪಿತವಾದ ಈ ಕಂಪನಿಯ ಉತ್ಪಾದನೆಗಳಲ್ಲಿ, SS ಜಗ್ವಾರ್ ಎಂಬ ಹೆಸರು ಮೊದಲು ಗೋಚರವಾದದ್ದು 1935ರ 2.5 ಲೀಟರ್ ಸಲೂನ್ ಎಂಬ [೬] ಕ್ರೀಡೆಗಾಗಿ ವಿನ್ಯಾಸಗೊಳಿಸಿದ SS 90 ಮತ್ತು SS 100ಗಳಲ್ಲಿ.
1945ರಲ್ಲಿ "SS" ಅಕ್ಷರಗಳು ಗರ್ಮನಿಯ SS ಮಿಲಿಟರಿ ಆರ್ಗನೈಸೇಷನ್ ನ ಹೆಸರಿನಲ್ಲಿಯೂ ಸೇರಿದ್ದುದರಿಂದ, ಅದರ ಪ್ರಚಾರವು ಬಹಳವೇ ಆಗಿದ್ದುದರಿಂದ ಮತ್ತು ಆ ಅಕ್ಷರಗಳನ್ನು ಇಡೀ ಬ್ರಿಟನ್ನಿನಲ್ಲಿ ಬಹಳವೇ ಹಳಿಯಲ್ಪಡುತ್ತಿದ್ದುದರಿಂದ, ಎರಡನೆಯ ಮಹಾಯುದ್ಧ ಕೊನೆಯಾಗುವವೇಳೆಗೆ ಆ ಅಕ್ಷರಗಳನ್ನು ತೆಗೆದುಹಾಕಿ ಇಡೀ ಕಂಪನಿಯನ್ನು ಜಗ್ವಾರ್ ಎಂದೇ ಹೆಸರಿಸಲಾಯಿತು.[೭] ಯುದ್ಧದ ನಂತರ ಹಣದ ಮುಗ್ಗಟ್ಟು ಇದ್ದುದರಿಂದ ಜಗ್ವಾರ್ ತನ್ನ ಮೋಟಾರ್ ಪ್ಯಾನಲ್ಸ್ ಗಳ ಕಾರ್ಖಾನೆ ಮತ್ತು ಆವರಣವನ್ನು ಈ ಕಂಪನಿಯೇ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚು ಉಜ್ವಲವಾಗಿದ್ದ 1930ರ ದಶಕದಲ್ಲಿ ತಮ್ಮದಾಗಿಸಿಕೊಂಡಿದ್ದ ರೂಬೆರಿ ಓವನ್ ಎಂಬ ಆಕುಂಚಿತ ಉಕ್ಕಿನ ಭಾಗಗಳನ್ನು ಉತ್ಪಾದಿಸುವ ಕಂಪನಿಗೆ ಮಾರಿತು.[೮] ಅದೇನೇ ಇರಲಿ, ಯುದ್ಧ ಮುಗಿದ ತಕ್ಷಣದ ದಿನಗಳಲ್ಲಿ ತಯಾರಿಸಿದ ಮಾಡೆಲ್ ಗಳಿಂದ ಜಗ್ವಾರ್ ತಕ್ಕಮಟ್ಟಿನ ಆರ್ಥಿಕ ಯಶಸ್ಸನ್ನು ಗಳಿಸಿತು:ಕೋವೆಂಟ್ರಿಯಲ್ಲಿದ್ದಂತಹ ಇತರೆ ವಾಹನ ತಯಾರಕ ಸಂಸ್ಥೆಗಳಿಗೂ ಈ ಕಾಲ ತ್ರಾಸದಾಯಕವಾಗೇ ಇದ್ದುದರಿಂದ ಜಗ್ವಾರ್ ಕಂಪನಿಯು ಅಲ್ಲಿನವರೆಗೂ ತಮಗೆ ಆರು ಸಿಲಿಂಡರ್ ಗಳ ಎಂಜಿನ್ ಅನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯನ್ನು ಜಾನ್ ಬ್ಲ್ಯಾಕ್ ರವರ ಸ್ಟಾಂಡರ್ಡ್ ಮೋಟಾರ್ ಕಂಪನಿಯಿಂದ ಖರೀದಿಸಲು ಸಾಧ್ಯವಾಯಿತು.[೮]
ಜಗ್ವಾರ್ ನ ಸುದೀರ್ಘ ಮೋಟಾರ್ ಕ್ರೀಡಾ ಇತಿಹಾಸದಲ್ಲಿ ಎರಡು ಅತ್ಯಂತ ಹೆಮ್ಮೆ ಪಡುವ ಕ್ಷಣಗಳೆಂದರೆ ಅಂದಿಗೆ ಖ್ಯಾತಿಯ ಗಂಧವೂ ಇಲ್ಲದಿದ್ದ ಸ್ಕಾಟಿಷ್ ರೇಸಿಂಗ್ ತಂಡವಾದ ಎಕ್ಯೂರೀ ಎಕೋಸೇಯ ದೆಸೆಯಿಂದ ಲೆ ಮಾನ್ಸ್ 24 ಗಂಟೆಗಳ ರೇಸ್ ಅನ್ನು ಮೊದಲು 1956ರಲ್ಲಿ ಗೆದ್ದದ್ದು, ಮತ್ತೆ 1957ರಲ್ಲಿ ಗೆದ್ದದ್ದು; ಎಕ್ಯೂರೀ ಎಕೋಸೆಯ ಹೆಸರು ನಂತರದ ದಿನಗಳಲ್ಲಿ ಪ್ರಖ್ಯಾತವಾದ ಕಾರ್ ವಿನಾಶಕ ರೇಸ್ ನಲ್ಲಿ ಡೇವಿಡ್-ಗೋಲಿಯಾಥ್ ರ ರೀತಿಯಲ್ಲಿ ಎರಡು ಬಾರಿ ವಿಜಯಗಳಿಸುವುದರ ಮೂಲಕ ದಂತಕಥೆಯೇ ಆಗಿಬಿಟ್ಟಿತು.
ತನ್ನ ಮನೋಹರವಾದ ವಿನ್ಯಾಸಗಳನ್ನು ಹೊಂದಿದ ಕ್ರೀಡಾ ಕಾರ್ ಗಳು ಮತ್ತು ಐಷಾರಾಮಿ ಸಲೂನಗ ಗಳ ಮೂಲಕ 1950ರ ದಶಕದಲ್ಲಿ ಜಗ್ವಾರ್,pronounced /ˈdʒæɡjuːər/JAG-yew-ər(U.K.) ಅಥವಾ pronounced /ˈdʒæɡwɑr/JAG-wahr(U.S.),[೯] ಎಲ್ಲೆಡೆಯೂ ಮನೆಮಾತಾಯಿತು. 1951ರಲ್ಲಿ ಜಗ್ವಾರ್ ಕಂಪನಿಯು ಅನತಿಕಾಲದಲ್ಲೇ ಅದರ ಮುಖ್ಯ ಕಾರ್ಖಾನೆಯಾಗಿ ಸ್ಥಾಪಿತವಾದಂತಹ ಕಾರ್ಖಾನೆಯನ್ನು ಡೈಮ್ಲರ್ ಮೋಟಾರ್ ಕಂಪನಿ[೧೦](ಡೈಮ್ಲರ್-ಬೆಂಝ್ ಎಂದು ತಪ್ಪು ತಿಳಿಯುವಂತಹುದಲ್ಲ)ಯಿಂದ ಭೋಗ್ಯಕ್ಕೆ ತೆಗೆದುಕೊಂಡಿತು ಮತ್ತು 1960ರಲ್ಲಿ ಡೈಮ್ಲರ್ ಕಂಪನಿಯನ್ನು ಅದರ ಮೂಲಸಂಸ್ಥೆಯಾದ ಬರ್ಮಿಂಗ್ ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿ(BSA)ಯಿಂದ ಖರೀದಿಸಿತು. 1960ರ ದಶಕದ ಪಶ್ಷಿಮಾರ್ಧದಿಂದ ಡೈಮ್ಲರ್ ಅನ್ನು ಜಗ್ವಾರ್ ನ ಅತ್ಯಂತ ಐಷಾರಾಮಿ ಸಲೂನ್ ಗಳಿಗೆ ಬ್ರ್ಯಾಂಡ್ ಹೆಸರಾಗಿ ಬಳಸಲಾಯಿತು.[೧೧]
ಜಗ್ವಾರ್ ಬ್ರಿಟಿಷ್ ಮೋಟಾರ್ ಕಾರ್ಪೊರೇಷನ್ (BMC),ದ ಆಸ್ಟಿನ್-ಮಾರಿಸ್ ಕಂಬೈನ್ ಗಳೊಡನೆ ಮಿಳಿತವಾಗಿ 1966ರಲ್ಲಿ ಬ್ರಿಟಿಷ್ ಮೋಟಾರ್ ಹೋಲ್ಡಿಂಗ್ಸ್(BMH)ನ ಉಗಮಕ್ಕೆ ಕಾರಣವಾಯಿತು. ಮೊದಲೇ ರೋವರ್ ಮತ್ತು ಸ್ಟಾಂಡರ್ಡ್ ಟ್ರಯಂಫ್ ಗಳನ್ನು ತನ್ನದಾಗಿಸಿಕೊಂಡಿದ್ದ ಲೇಲ್ಯಾಂಡ್ ನೊಡನೆ ಮಿಳಿತವಾದುದರ ಪರಿಣಾಮವಾಗಿ 1968ರಲ್ಲಿ ಸ್ಥಾಪಿತವಾದ ಕಂಪನಿಯೇ ಬ್ರಿಟಿಷ್ ಲೇಲ್ಯಾಂಡ್ ಮೋಟಾರ್ ಕಾರ್ಪೊರೇಷನ್(BLMC). ಹಣಕಾಸಿನ ಮುಗ್ಗಟ್ಟು ಮತ್ತು ರೈಡರ್ ವರದಿಯ ಪ್ರಕಟಣೆಯು 1975ರಲ್ಲಿ ರಾಷ್ಟ್ರೀಕರಣಕ್ಕೆ ಎಡೆಮಾಡಿಕೊಟ್ಟಿತು ಮತ್ತು ಕಂಪನಿಯು ಬ್ರಿಟಿಷ್ ಲೇಲ್ಯಾಂಡ್ ಲಿಮಿಟೆಡ್ ಎಂದು ಪುನರ್ನಾಮಗೊಂಡಿತು.(ನಂತರ ಸರಳವಾಗಿ BL plc ಎಂದಾಯಿತು).[೧೨]
1970ರ ದಶಕದಲ್ಲಿ ಜಗ್ವಾರ್ ಮತ್ತು ಡೈಮ್ಲರ್ ಮಾರ್ಕ್ವಿಸ್ BLನ ಪರಿಣಿತ ಕಾರ್ ವಿಭಾಗ ಅಥವಾ ಜಗ್ವಾರ್ ರೋವರ್ ಟ್ರಯಂಫ್ ಲಿಮಿಟೆಡ್ನ ಒಂದು ಭಾಗವಾಗಿದ್ದು, 1980ರಲ್ಲಿ ಕಂಪನಿಯ ರೂಪರೇಷೆಗಳು ಮರುನಿರ್ಮಿತವಾದಾಗ BL ವಾಲ್ಯುಮ್ ಕಾರ್ ತಯಾರಿಕಾ ವಿಭಾಗದ ಬಹುತೇಕ ಅಂಶವು ಆಸ್ಟಿನ್ ರೋವರ್ ಗ್ರೂಪ್ ಆಗಿ ಮಾರ್ಪಟ್ಟುದರ ಪರಿಣಾಮವಾಗಿ ಜಗ್ವಾರ್ ಅದರಿಂದ ಹೊರಗುಳಿಯುವಂತಾಯಿತು. 1984ರಲ್ಲಿ ಜಗ್ವಾರ್ ಅನ್ನು ಒಂದು ಪ್ರತ್ಯೇಕ ಕಂಪನಿಯಾಗಿಯೇ ಸ್ಟಾಕ್ ಮಾರ್ಕೆಟ್ ನಲ್ಲಿ ಹರಿಯಬಿಡಲಾಯಿತು (ನಮೂದಿಸಲಾಯಿತು) - ಥ್ಯಾಚೆರ್ ಸರ್ಕಾರದ ಹಲವಾರು ಖಾಸಗೀಕರಣಗಳಲ್ಲಿ ಇದೂ ಒಂದು.[೧೩]
ಫೋರ್ಡ್ ಕಂಪನಿಯ ಮಾಲೀಕತ್ವ (1989-2008)
ಬದಲಾಯಿಸಿ1989ರಲ್ಲಿ ಫೋರ್ಡ್ ಕಂಪನಿಯು ಯುಎಸ್ ಮತ್ತು ಯುಕೆಯ ಜಗ್ವಾರ್ ಕಂಪನಿಯ ಹೂಡಿಕೆದಾರ(ಪಾಲುದಾರ)ರಿಂದ ಅವರ ಷೇರುಗಳನ್ನು ಕೊಳ್ಳಲು ಮುಂದೆ ಬಂದಿತು; ಫೆಬ್ರವರಿ ೨೮, 1990ರಂದು ಜಗ್ವಾರ್ ನ ಹೆಸರನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನ ಪಟ್ಟಿಯಿಂದ ತೆಗೆದುಹಾಕಲಾಯಿತು.[೧೪] 1999ರಲ್ಲಿ ಅದು ಆಸ್ಟನ್ ಮಾರ್ಟಿನ್, ವೋಲ್ವೋ ಕಾರ್ಸ್ಗಳೊಡನೆ, ಮತ್ತು 200ದಿಂದ ಲ್ಯಾಂಡ್ ರೋವರ್ನೊಡನೆ, ಫೋರ್ಡ್ ನ ನೂತನ ಪ್ರೀಮಿಯರ್ ಆಟೋಮೋಟಿವ್ ಗ್ರೂಪ್ನ ಒಂದು ಅಂಗವಾಯಿತು ನಂತರದ ದಿನಗಳಲ್ಲಿ ಆಸ್ಟನ್ ಮಾರ್ಟಿನ್ಅನ್ನು 2007ರಲ್ಲಿ ಮಾರಿಬಿಡಲಾಯಿತು. ಫೋರ್ಡ್ 1989ರಲ್ಲಿ ಜಗ್ವಾರ್ ಅನ್ನು ಕೊಂಡು, 2008ರಲ್ಲಿ ಅದನ್ನು ಮಾರುವುದರ ಅವಧಿಯಲ್ಲಿ ಅದು ಡಿಯರ್ ಬಾರ್ನ್-ಸ್ಥಾಪಿತ ವಾಹನ ತಯಾರಕರಿಗೆ ಯಾವುದೇ ವಿಧವಾದ ಲಾಭವನ್ನೂ ಸಂಪಾದಿಸಿಕೊಡಲಿಲ್ಲ.
ಫೋರ್ಡ್ ಮೇ 200ದಲ್ಲಿ ಲ್ಯಾಂಡ್ ರೋವರ್ ಅನ್ನು ಕೊಂಡಾಗಿನಿಂದಲೂ ಅದು ಜಗ್ವಾರ್ ನೊಡನೆ ನಿಕಟವಾದ ಸಂಬಂಧವನ್ನು ಇರಿಸಿಕೊಂಡೇ ಇತ್ತು. ಹಲವಾರು ದೇಶಗಳಲ್ಲಿ ಈ ಎರಡೂ ಕಂಪನಿಗಳು ಮಾರಾಟ ಮತ್ತು ವಿತರಣಾಜಾಲವನ್ನು ಒಂದೇ ಸ್ಥಳದಲ್ಲಿ ಒಟ್ಟಿಗೇ ಹಂಚಿಕೊಂಡು ನಡೆಸುತ್ತಾರೆ(ವ್ಯಾಪಾರಕೇಂದ್ರಗಳನ್ನು ಹಂಚಿಕೊಳ್ಳುವುದೂ ಒಳಗೊಂಡಂತೆ), ಮತ್ತು ಕೆಲವು ಮಾಡಲ್ ಗಳು ಒಂದೇ ರೀತಿಯಾದ ಬಿಡಿಭಾಗಗಳನ್ನು ಹಂಚಿಕೊಂಡಿವೆ; ಹಂಚಿಕೊಂಡಂತಹ ಏಕೈಕ ಉತ್ಪಾದನಾ ಸೌಲಭ್ಯವು ಹೇಲ್ ವುಡ್ ಎಂಬ X-ಮಾದರಿ ಮತ್ತು ಫ್ರೀಲ್ಯಾಂಡರ್ 2 ಗಳು ಹಂಚಿಕೊಂಡತಹವಾಗಿದ್ದಾಗ್ಯೂ ಈ ಇತರೆ ಹಂಚಿಕೊಳ್ಳುವಿಕೆಗಳು ಮುಂದುವರೆದಿವೆ. ಆದಾಗ್ಯೂ, ವ್ಯವಸ್ಥಾರೀತ್ಯಾ ಎರಡೂ ಕಂಪನಿಗಳು ಫೋರ್ಡ್ PAGಯಲ್ಲಿಯೇ ಸೂಕ್ತವಾದ ರೀತಿಯಲ್ಲಿ ಮೇಳೈಸಿ ಒಂದು ವ್ಯವಸ್ಥಾರೀತಿಯನ್ನು ಅನುಸರಿಸಿಕೊಂಡುಬಂದವು.
ಜೂನ್ 11, 2007ರಂದು ಫೋರ್ಡ್ ತಾನು ಲ್ಯಾಂಡ್ ರೋವರ್ ಹಾಗೂ ಜಗ್ವಾರ್ ಗಳನ್ನು ಮಾರಲು ಬಯಸುವುದಾಗಿ ಹೇಳಿ ತತ್ಕಾರಣ ಗೋಲ್ಡ್ ಮನ್ ಸ್ಯಾಕ್ಸ್, ಮೋರ್ಗನ್ ಸ್ಟ್ಯಾನ್ಲೀ ಮತ್ತು HSBCಯವರನ್ನು ಆ ಮಾರಾಟದ ಸಲಹೆಗಾರರಾಗಿ ನೇಮಿಸಿತು. ಮಾರಾಟದ ವಿಷಯವು 2007ರ ಸೆಪ್ಟೆಂಬರ್ ನಲ್ಲಿಯೇ ಘೋಷಿತವಾಗುವುದೆಂಭ ನಿರೀಕ್ಷೆಯಿದ್ದಿತು, ಆದರೆ ಅದು ಮಾರ್ಚ್ 2008ರವರೆಗೂ ವಿಳಂಬಿತವಾಯಿತು. ಖಾಸಗಿ ಬಂಡವಾಳಹೂಡಿಕೆಯ ಸಂಸ್ಥೆಗಳಾದ ಯುಕೆಯ ಆಲ್ಕೆಮಿ ಪಾರ್ಟ್ ನರ್ಸ್, TPG ಕ್ಯಾಪಿಟಲ್, ರಿಪಲ್ ವುಡ್ ಹೋಲ್ಡಿಂಗ್ಸ್(ಇದು ಫೋರ್ಡ್ ನ ಮಾಜಿ ಕಾರ್ಯಕಾರಿ ಸದಸ್ಯ ಸರ್ ನಿಕ್ ಸ್ಕೀಲ್ ರನ್ನೇ ತನ್ನ ಖರೀದಿಗೆ ಸಿದ್ಧವಾದ ಬೆಲೆ(ಬಿಡ್) ಸೂಚಿಸಲು ಮುಖಂಡನಾಗಿ ನಿಯಮಿಸಿಕೊಂಡಿತು)ಯುನೈಟೆಡ್ ಸ್ಟೇಟ್ಸ್ ನ ಸೆರೆಬೆರಸ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಮತ್ತು ಒನ್ ಈಕ್ವಿಟಿ ಪಾರ್ಟ್ನರ್ಸ್(ಜೇಪೀ ಮೋರ್ಗನ್ ಚೇಸ್ ರ ಮಾಲಿಕತ್ವ, ವ್ಯವಸ್ಥಾಪಕ ಮಾಜಿ ಫೋರ್ಡ್ ಕಾರ್ಯಕಾರಿ ಸಮಿತಿಯ ಜೇಕ್ಸ್ ನಝೀರ್)ಭಾರತದ ಟಾಟಾ ಮೊಟಾರ್ಸ್ ಮತ್ತು ಮಹೀದ್ರ ಮತ್ತು ಮಹೀಂದ್ರ (ಭಾರತದ ಒಂದು ವಾಹನ ತಯಾರಿಕಾ ಸಂಸ್ಥೆ)ರವರನ್ನು ಹೊಂದಿದ ಒಂದು ತಂಡ, ಮತ್ತು ಅಪೋಲೋ ಮ್ಯಾನೇಜ್ ಮೆಂಟ್ ಸಂಸ್ಥೆಗಳು ಮೊದಮೊದಲು ಫೋರ್ಡ್ ಮೋಟಾರ್ ಕಂಪನಿಯಿಂದ ಮಾರ್ಕ್ವೀಸ್ ಅನ್ನು ಖರೀದಿಸುವ ಬಯಕೆ ತೋರಿದವು.[೧೫][೧೬]
ಮಾರಾಟದ ವಿಚಾರ ಬಹಿರಂಗವಾಗುವುದಕ್ಕೆ ಮೊದಲೇ ಬ್ರಿಟಿಷ್ ನೆಲ ಅಗೆಯುವ ಉಪಕರಣ JCBಗಳನ್ನು ತಯಾರಿಸುವ ಕಂಪನಿಯ ಅಧ್ಯಕ್ಷರಾದ ಆಂತೋನಿ ಬ್ಯಾಂಫೋರ್ಡ್ ಈ ಕಂಪನಿಯನ್ನು ಖರೀದಿಸುವ ಇರಾದೆ ತೋರಿದ್ದರಾದರೂ, ಜೊತೆಗೆ ಲ್ಯಾಂಡ್ ರೋವರ್ ಅನ್ನೂ ಖರೀದಿಸಬೇಕೆಂದಾಗ ಅದನ್ನು ಬಯಸದ ಅವರು ಖರೀದಿಯ ಯೋಚನೆಗೆ ತಿಲಾಂಜಲಿ ಇತ್ತರು.[೧೭] 2007ರ ಕ್ರಿಸ್ ಮಸ್ ನ ಹಿಂದಿನ ದಿನ, ಮಾರಾಟದಲ್ಲಿನ ಸಂಕೀರ್ಣತೆಗಳು ತಮಗೆ ಒಗ್ಗದ ಕಾರಣ, ಮಹೀಂದ್ರ ಮತ್ತು ಮಹೀಂದ್ರದವರು ಎರಡೂ ಕಂಪನಿಗಳನ್ನು ಖರೀದಿಸುವ ಸ್ಪರ್ಧೆಯಿಂದ ಹೊರಗುಳಿದರು.[೧೮]
ಟಾಟಾ ಮೋಟಾರ್ಸ್ ಮಾಲಿಕತ್ವ (2008ರಿಂದ ಇಂದಿನವರೆಗೆ)
ಬದಲಾಯಿಸಿಜನವರಿ 1, 2008ರಂದು ಫೋರ್ಡ್ ಅಧಿಕೃತವಾಗಿ ಟಾಟಾ ಮೋಟಾರ್ಸ್ ಕಂಪನಿಯೇ ತಮಗೆ ಸರಿಹೊಂದಿದ ಖರೀದಿದಾರ ರೆಂದು ಘೋಷಿಸಿತು.[೧೯] ಟ್ರ್ಯಾನ್ಸ್ ಪೋರ್ಟ್ ಮತ್ತು ಜನರಲ್ ವರ್ಕರ್ಸ್ ಯೂನಿಯನ್(TGWU)-ಅಮಿಕಸ್[೨೦] ಕಂಬೈನ್ ಹಾಗೂ ಫೋರ್ಡ್ ಸಹ ಟಾಟಾ ಮೋಟಾರ್ಸ್ ಈ ಕಂಪನಿ ಕೊಳ್ಳುವುದಕ್ಕೆ ತಮ್ಮ ಸಹಮತ ತೋರಿದವು.[೨೧] ಹರಾಜಿನ ನಿಯಮಗಳ ಪ್ರಕಾರ ಈ ಘೋಷಣೆಯು ಇತರ ಅರ್ಹ ಕಂಪನಿಗಳು ಇದನ್ನು ಕೊಳ್ಳುವುದನ್ನೇನೂ ತಡೆಯುವುದಿಲ್ಲ. ಆದರೆ, ಫೋರ್ಡ್(ಹಾಗೂ ಈ ಯುನೈಟ್ ನ ಪ್ರತಿನಿಧಿಗಳು)ಟಾಟಾ ಮೋಟಾರ್ಸ್ ನೊಂದಿಗೆ ಆಮೂಲಾಗ್ರವಾಗಿ ಚರ್ಚಿಸಿ ಕಾರ್ಮಿಕರ ವಿಷಯಗಳು(ಉದ್ಯೋಗ ಖಚಿತತೆ ಮತ್ತು ಮಾಸಾಶನಗಳು), ತಂತ್ರಾಂಶ(IT ವ್ಯವಸ್ಥೆಗಳು ಮತ್ತು ಎಂಜಿನ್ ತಯಾರಿಕೆ), ಬೌದ್ಧಿಕ ಆಸ್ತಿ[೨೨] ಹಾಗೂ ಖರೀದಿಯ ಬೆಲೆಯ ನಿಷ್ಕರ್ಷೆಗೆ ಅನುವು ದೊರೆಯಿತು.[೨೩] ಫೋರ್ಡ್ ಸಹ ತನ್ನ ಲೆಕ್ಕಪತ್ರಗಳ ಪುಸ್ತಕಗಳನ್ನು ಟಾಟಾದವರ ಸಮಗ್ರವಾದ ಸೂಕ್ಷ್ಮ ಪರಿಶೀಲನೆಗಾಗಿ ತೆರೆಯಿತು.[೨೪] ಮಾರ್ಚ್ 18, 2008ರಂದು ಅಮೆರಿಕದ ಬ್ಯಾಂಕರ್ಸ್ ಆದ ಸಿಟಿಗ್ರೂಪ್ ಮತ್ತು ಜೆಪಿ ಮೋರ್ಗನ್ USD 3 ಬಿಲಿಯನ್ ನಷ್ಟು ಹಣಕ್ಕೆ ಜಾಮೀನಾಗಿ ನಿಲ್ಲಲು ಮುಂದೆಬಂದರೆಂದು ರಾಯಿಟರ್ಸ್ ವರದಿ ಮಾಡಿತು.[೨೫]
ಮಾರ್ಚ್ 26, 2008ರಂದು ಫೋರ್ಡ್ ತನ್ನ ಜಗ್ವಾರ್ ಮತ್ತು ಲ್ಯಾಂಡ್ ರೋವರ್ ಉತ್ಪಾದನೆಗಳನ್ನು ಟಾಟಾ ಮೋಟಾರ್ಸ್ ಗೆ ಮಾರಲು ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡುತ್ತಾ ಈ ಮಾರಾಟವು 2008ರ ಮೊದಲ ಅರ್ಧಭಾದಲ್ಲಿ ಸಮಗ್ರವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆಯೆಂದು ಹೇಳಿತು.[೨೬] ಈ ವ್ಯವಹಾರದಲ್ಲಿ ಇತರ ಮೂರು ಬ್ರಿಟಿಷ್ ಬ್ರ್ಯಾಂಡ್ ಗಳಾದ ಜಗ್ವಾರ್ ದೇ ಆದ ಡೈಮ್ಲರ್, ಮತ್ತು ಇತರ ಎರಡು ಜಡವಾಗಿದ್ದ ಬ್ರ್ಯಾಂಡ್ ಗಳಾದ ಲ್ಯಾಂಚೆಸ್ಟರ್ ಮತ್ತು ರೋವರ್ಗಳ ಹಕ್ಕುಗಳೂ ಸೇರಿದ್ದವು.[೨೭] ಜೂನ್ 2, 2008ರಂದು ಟಾಟಾ ಮೋಟಾರ್ಸ್ ಗೆ £1.7 ಬಿಲಿಯನ್ ಮೊತ್ತಕ್ಕೆ ಈ ಕಂಪನಿಯು ಸಮಗ್ರವಾಗಿ ಮಾರಾಟಗೊಂಡಿತು.[೨೮][೨೯][೩೦]
ಬಿಡಿಭಾಗಗಳ ಕೈಗಾರಿಕೆಗಳು
ಬದಲಾಯಿಸಿದ ಸ್ವಾಲೋ ಸೈಡ್ ಕಾರ್ ಕಂಪನಿ(SSC) ಮೊದಲಿಗೆ ಬ್ಲ್ಯಾಕ್ ಪೂಲ್ನಲ್ಲಿ ಸ್ಥಾಪಿತವಾಗಿದ್ದು, ನಂತರ, ಆಸ್ಟಿನ್ ಸ್ವಾಲೋ ಕಾರ್ ಗೆ ಬಂದ ಬೇಡಿಕೆಯ ಮಹಾಪೂರವನ್ನು ಆ ಕಾರ್ಖಾನೆಯಲ್ಲಿ ಪೂರೈಸುವುದು ಸಾಧ್ಯವಿಲ್ಲದುದರಿಂದ ಕೋವೆಂಟ್ರಿಯ ಹಾಲ್ ಬ್ರೂಕ್ ಲೇನ್ ಗೆ ಸ್ಥಳಾಂತರಗೊಂಡಿತು.[೩೧] 1951ರಲ್ಲಿ ಕೋವೆಂಟ್ರಿಯ ಕಾರ್ಖಾನೆಯಿಂದಲೂ ಬೇಡಿಕೆ ಪೂರೈಸಲಾಗದ ಮಟ್ಟಕ್ಕೆ ಕಂಪನಿ ಬೆಳೆದಾಗ ಕಂಪನಿಯು, ಯುದ್ಧಕಾಲದಲ್ಲಿ "ಗುಪ್ತ ಕಾರ್ಖಾನೆ"ಗೆ ಸ್ಥಳವಾಗಿದ್ದ, ಡೈಮ್ಲರ್ ಮೋಟಾರ್ ಕಂಪನಿಯವರು ನಡೆಸುತ್ತಿದ್ದ ಬ್ರೌನ್ಸ್ ಲೇನ್ ಗೆ ಸ್ಥಳಾಂತರಗೊಂಡಿತು. ಇಂದು ಜಗ್ವಾರ್ ಕಾರ್ ಗಳ ಜೋಡಣೆಯು ಬರ್ಮಿಂಗ್ ಹ್ಯಾಂನ ಕ್ಯಾಸಲ್ ಬ್ರೋವಿಚ್ ಮತ್ತು ಲಿವರ್ ಪೂಲ್ ನ ಹೇಲ್ ವುಡ್ ಗಳಲ್ಲಿ ನಡೆಯುತ್ತಿದೆ. ಐತಿಹಾಸಿಕ ಬ್ರೌನ್ಸ್ ಲೇನ್ ಪ್ಲ್ಯಾಂಟ್ ತನ್ನ ಚಿಕ್ಕ, ಚೊಕ್ಕ, ಅಂತಿಮ ಉತ್ಪಾದನೆಗಳನ್ನು 2005ರಲ್ಲಿ ಸ್ಥಗಿತಗೊಳಿಸಿತು, ಅದಕ್ಕೆ ಎರಡು ವರ್ಷ ಮುಂಚೆಯೇ X350 XJ ಕ್ಯಾಸಲ್ ಬ್ರೋವಿಚ್ ಗೆ ರವಾನೆಯಾಗಿದ್ದು,XK ಮತ್ತು S-ಮಾದರಿಗಳ ಉತ್ಪಾದನೆಯನ್ನು ಕ್ಯಾಸಲ್ ಬ್ರೋವಿಚ್ ಗೆ ಬಿಟ್ಟುಕೊಡಲಾಯಿತು ಮತ್ತು ಹೊಸ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2ರೊಂದಿಗೆ X-ಮಾದರಿಯ ಕಾರ್ ಗಳ ಉತ್ಪಾದನೆಯನ್ನು ಹೇಲ್ ವುಡ್ ನಲ್ಲಿ ಆರಂಭಿಸಲಾಯಿತು. ಸಣ್ಣದಾದ ಬ್ರೌನ್ಸ್ ಲೇನ್ ಸೈಟ್ ಈಗಲೂ ಜಗ್ವಾರ್ ಲ್ಯಾಂಡ್ ರೋವರ್ ಮತ್ತು ಇತರ ಕಾರ್ ಗಳಿಗೆಂದು ವಿನೀರ್ ಗಳನ್ನು ಮತ್ತು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉತ್ಪಾದಿಸುವುದರಲ್ಲಿ ತೊಡಗಿಕೊಂಡಿದೆ.
ಮೋಟಾರು ವಾಹನಗಳು
ಬದಲಾಯಿಸಿಪ್ರಸ್ತುತ ಮಾದರಿಗಳು
ಬದಲಾಯಿಸಿX-ಮಾದರಿ
ಬದಲಾಯಿಸಿಜಗ್ವಾರ್ ನ ಜರ್ಮನಿಯ ಪ್ರತಿಸ್ಪರ್ಧಿಗಳು ತಯಾರಿಸಿದ ಕಾರ್ ಗಳಾದ BMWನ 3 ಸೀರೀಸ್,ಆಡಿಯ A4, ಮತ್ತು ಮರ್ಸಿಡಿಸ್ ಬೆಂಝ್ ರವರ C-ಶ್ರೇಣಿಗಳೊಂದಿಗೆ ಪ್ರತಿಸ್ಪರ್ಧಿಸಲು ಅವುಗಳಿಗೆ ಸಾಮ್ಯವಿರುವ ಜಗ್ವಾರ್ X-ಮಾದರಿ ಕಾಂಪ್ಯಾಕ್ಟ್ ಎಕ್ಸಿಕ್ಯುಟಿವ್ ಕಾರ್ ಅನ್ನು 2001ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. 200ದ ಫೋರ್ಡ್ ಮಾನೆಡೋದೊಡನೆ ನೆಲೆಗಟ್ಟನ್ನು ಹಂಚಿಕೊಂಡ X-ಮಾದರಿಯು ಇನ್ನೂ ತನ್ನ ಮೊದಲ ರೂಪದಲ್ಲೇ ಇದ್ದು ಅದರ ವಾರಸನ್ನು ಹೊಂದುವ ಯಾವುದೇ ವಿನ್ಯಾಸವು ಇನ್ನೂ ನಿಯೋಜಿತವಾಗಿಲ್ಲ. ಈಗಿನ ಸೊಗವೇರಿಸಿದ ಮಾಡೆಲ್ ಮಾರುಕಟ್ಟೆಯಲ್ಲಿ 2010ರವರೆಗೂ ಮುಂದುವರೆಯುವುದೆಂದು ನಿರೀಕ್ಷಿಸಲಾಗಿದೆ.
ಈ X-ಮಾದರಿಯು ಸಲೂನ್ ಮತ್ತು ಎಸ್ಟೇಟ್ಗಳಾಗಿ ಲಭ್ಯವಿದ್ದು £21,500ರಿಂದ £29,000ವರೆಗೂ ಮೌಲ್ಯವುಳ್ಳದ್ದಾಗಿದೆ.[೩೨]
2009ರ ಕೊನೆಯಲ್ಲಿ ಜಗ್ವಾರ್ ಲ್ಯಾಂಡ್ ರೋವರ್ X-ಮಾದರಿಯ ಜಗ್ವಾರ್ ಗಳ ತಯಾರಿಕಯನ್ನು ಸ್ಥಗಿತಗೊಳಿಸಿತು.[೩೩]
XF
ಬದಲಾಯಿಸಿಜಗ್ವಾರ್ XF ಮಧ್ಯಮ ಅಳತೆಯ ಎಕ್ಸಿಕ್ಯುಟಿವ್ ಕಾರ್ ಆಗಿದ್ದು, ಇದನ್ನು 2008ರಲ್ಲಿ ಕಂಪನಿಯ ಲೈನ್-ಅಪ್ ನಿಂದ ಹೊರನಡೆಯುತ್ತಿದ್ದ S-ಮಾದರಿಯ ಕಾರ್ ಗಳು ತೆರವು ಮಾಡಿದ ಸ್ಥಾನವನ್ನು ತುಂಬಲು ಪರಿಚಯಿಸಲಾಯಿತು. ಜನವರಿ 2008ರಲ್ಲಿ XF ಗೆ ಪ್ರತಿಷ್ಠಿತ ವಾಟ್ ಕಾರ್? ಪ್ರಶಸ್ತಿ ನೀಡಲಾಯಿತು. 'ವರ್ಷದ ಕಾರ್(ಕಾರ್ ಆಫ್ ದ ಇಯರ)' ಪ್ರಶಸ್ತಿ ಪಡೆದುದಲ್ಲದೆ ಎಕ್ಸಿಕ್ಯುಟಿವ್ ಕಾರ್ ವಿಭಾಗದ ಬಹುಮಾನವನ್ನೂ ತನ್ನದಾಗಿಸಿಕೊಂಡಿತು. ವಾಟ್ ಡೀಸಲ್? ಮ್ಯಾಗಾಝೈನ್ ನಿಂದಲೂ XF ಕಾರ್ ವರ್ಷದ ಕಾರ್ ಎಂಬ ಪ್ರಶಸ್ತಿಗೆ ಭಾಜನವಾಯಿತು
XF ಮಾದರಿಯಲ್ಲಿ ದೊರೆಯುವ ಎಂಜಿನ್ ಗಳೆಂದರೆ 3.0 ಲೀಟರ್V6 ಡೀಸೆಲ್ ಅಥವಾ ಪೆಟ್ರೋಲ್ ಎಂಜಿನ್ ಮತ್ತು "r" ಎಂದು ಕರೆಯಲ್ಪಡುವ, ಶ್ರೇಷ್ಠಶಕ್ತಿಭರಿತ 5.0 ಲೀಟರ್ V8 ಆಥವಾ ಸ್ವಾಭಾವಿಕ-ವಾಯುಶೋಷಕವುಳ್ಳ Vಪೆಟ್ರೋಲ್ ಎಂಜಿನ್, ಮತ್ತು, ಯುಎಸ್ ನಲ್ಲಿ, 4.2L V8ಎಂಜಿನ್. ಬೆಲೆ £33,000 ರಿಂದ £59,000ದ ವರೆಗೆ.[೩೪]
XJ
ಬದಲಾಯಿಸಿಜಗ್ವಾರ್ XJಯು ಒಂದು ಪೂರ್ಣಪ್ರಮಾಣದ ಐಷಾರಾಮಿ ಸಲೂನ್ ಮತ್ತು ಕಂಪನಿಯ ಲಾಂಛನ ದ ಮಾಡಲ್ ಎಂದೇ ಹೆಸರಾಗಿರುವಂತಹ ಕಾರ್. ಇದು 1968ರಿಂದಲೂ ಉತ್ಪಾದನೆಯಾಗುತ್ತಿದ್ದು,ಈ ಮಾಡಲ್ ನ ಮೊದಲ ಸಂತತಿಯು ಕಂಪನಿಯ ಸ್ಥಾಪಕ ಕ್ರಿಯಾಶೀಲ ವಿನ್ಯಾಸಕಾರರಾದ ಸರ್ ವಿಲಿಯಂ ಲಿಯಾನ್ಸ್ ವಿನ್ಯಾಸಗೊಳಿಸಿದ ಕಡೆಯ ಮಾಡಲ್ ಆಗಿದೆ. 2003ರ ಪೂರ್ವಭಾಗದಲ್ಲಿ, ಮೂರನೆಯ ತಲೆಮಾರಿನ XJ ಪ್ರದರ್ಶನಮಳಿಗೆಗಳಿಗೆ ಲಗ್ಗೆಯಿಟ್ಟಿತು ಮತ್ತು ಕಾರ್ ನ ಹೊರಭಾಗ ಮತ್ತು ಒಳಭಾಗಗಳು ಸಾಂಪ್ರದಾಯಿಕ ರೀತಿಯಲ್ಲಿಯೇ ಇದ್ದರೂ ಸಹ, ಈ ಕಾರ್ ಸಂಪೂರ್ಣವಾಗಿ ಮರು-ಯಂತ್ರರಚನಾ ಕೌಶಲಕ್ಕೆ ಒಳಗಾಗಿತ್ತು. ಅದರ ಶೈಲಿಯು ಹಲವಾರು ಮೋಟಾರ್ ಬಾತ್ಮೀದಾರರಿಂದ ಕಟು ವಿಮರ್ಶೆಗೆ ಒಳಗಾಯಿತು; ಈ ಕಾರ್ ಪುರಾತನ ಕಾಲದ ಕಾರ್ ನಂತೆ ಕಾಣುತ್ತದೆ ಮತ್ತು ಇದರ ಹಿಂದಿನ ಕಾರ್ ಗಿಂತಲೂ ಆಧುನಿಕ ರೀತಿಯಲ್ಲಿದೆಯೆಂದು ಗುರುತಿಸುವುದು ಕಷ್ಟ ಎಂಬ ಟೀಕೆಗಳ ಬಂದವಲ್ಲದೆ ಿನ್ನೂ ಕೆಲವರು ಮಾರ್ಕ್ 2ರಿಂದ ಮಾರ್ಕ್ 3 KJಗೆ ಬದಲಾದ ಸಂದರ್ಭದಲ್ಲೇ 'ಲಿಯಾನ್ಸ್ ಲೈನ್' ಎಲ್ಲೋ ಕಳೆದುಹೋಯಿತೆಂದರು. ಹೊರ ಆಕಾರದ ಅಡಿಯಲ್ಲೇ ಬಹಳವೇ ತಾಂತ್ರಿಕವಾಗಿ ಮುಂದುವರೆದ ಅಲ್ಯುಮಿನಿಯಮ್ ರಚನೆಯು XJಯನ್ನು ತನ್ನ ಶ್ರೇಣಿಯಲ್ಲಿನ ಸರಿಸುಮಾರು ಉತ್ತುಂಗಕ್ಕೆ ಕೊಂಡೊಯ್ದಿದ್ದುದನ್ನೂ ಸಹ ಈ ಟೀಕಾಕಾರರು ಗಮನಿಸಲಾರದಾದರು.[೩೫] 2009ರಲ್ಲಿ ಆರಂಭಗೊಂಡ ನಾಲ್ಕನೆಯ ತಲೆಮಾರಿನ XJ ಹೊರವಿನ್ಯಾಸದಲ್ಲಿ ಹಿಂದಿನವುಗಳಿಗಿಂತಲೂ ಭಿನ್ನವಾಗಿದ್ದು, ಇದೇ ಕಂಪನಿಯವರ XF ಮತ್ತು XK ಮಾಡಲ್ ಗಳ ಮೂಲಕ ವಿನ್ಯಾಸದಲ್ಲಿ ಕಂಡುಬಂದ ಬದಲಾವಣೆಗಳ ಜಾಡನ್ನೇ ಹಿಡಿದಿತ್ತು.
XJಯ ಬೆಲೆಯು £44,500 ರಿಂದ £59,000ರ ವರೆಗಿದ್ದು,ಕ್ರೀಡಾ ಮಾಡಲ್ ಆದ ಸೂಪರ್ V8, £50,000ಗಳ ಆರಂಭ ಬೆಲೆಯಿಂದ ಲಭ್ಯವಿದೆ.[೩೬] ಹೆಸರೇ ಸೂಚಿಸುವಂತೆ ಸೂಪರ್ 8ರಲ್ಲಿ ಸೂಪರ್ ಚಾರ್ಜ್ ಗೊಂಡ 4.2 ಲೀಟರ್ V8 ಎಂಜಿನ್ ಇದ್ದು, ಇದು ಕಾರ್ ನ ವೇಗವು 0 to-[convert: unknown unit]ಯಿಂದ ಕೇವಲ 5.0 ಸೆಕೆಂಡ್ ಗಳಲ್ಲಿ ತಲುಪುವಂತೆ ಮಾಡುತ್ತದೆ. ಲಿಮೋಸಿನ್ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತಿರಲು, ಎಲ್ಲಾ XJ ಮಾಡಲ್ ಗಳಲ್ಲೂ ನೀಳವಾದ ವೀಲ್ ಬೇಸ್ ನೀಡುವ ಸೌಲಭ್ಯವಿದ್ದು, ಈ ಸೌಲಬ್ಯವು ಕ್ಯಾಬಿನ್ ನ ಒಳಗೆ ಹೆಚ್ಚು ಜಾಗ ದೊರೆಯಲು ಅನುಕೂಲವಾಗಿಸುತ್ತದೆ.[೩೭]
ಒಂದು ವಿನೂತನ XJ ಮಾಡಲ್ ಜುಲೈ 9, 2009ರಂದು ಲಂಡನ್ ನ ಸಾಚೀ ಗ್ಯಾಲರಿಯಲ್ಲಿ ನಡೆದ ಒಂದು ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಈ ಹೊಸ ಕಾರ್ ನ ಉತ್ಪಾದನೆಯು 2009ರ ಕೊನೆಯಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು, 2010ರ ಆರಂಭದಲ್ಲಿ ರವಾನೆಯಾಗುವ ಸಾಧ್ಯತೆಗಳಿವೆ. ಇದು ಹಿಂದಿನ ಟೀಕೆಗಳನ್ನು ಗಮನದಲ್ಲಿರಿಸಿಕೊಂಡು, ಬಹಳವೇ ಆಧುನಿಕವಾದ ಆಕಾರವನ್ನು ಜಗ್ವಾರ್ ನ ಪರಿಧಿಯಲ್ಲಿಯೇ ಸ್ಪಷ್ಟವಾಗಿ ನೀಡುತ್ತಿದ್ದು, ಹೆಚ್ಚಿನ ಯೌವನಭರಿತತೆ ಮತ್ತು ಸಮಕಾಲೀನತೆಗೆ ಪುಷ್ಟಿ ನೀಡಿದ್ದು, ಒಳಭಾಗದಲ್ಲಿ ಸಮಕಾಲೀನ ವಾತಾವರಣವನ್ನು ಸೃಷ್ಟಿಸಿದ್ದು ಇಂದಿನ ತಲೆಮಾರಿಗೆ ಮೆಚ್ಚಿಗೆಯಾಗುವ ರೀತಿಯ ಮಾಡಲ್ ಆಗಿದೆ.[೩೮]
XK
ಬದಲಾಯಿಸಿಜಗ್ವಾರ್ XK8ರ ಬದಲಾಗಿ 2006ರಲ್ಲಿ ಕಂಪನಿಯು ಲೋಕಕ್ಕೆ ಪರಿಚಯಿಸಿದ ಐಷಾರಾಮಿ ಗ್ರ್ಯಾಂಡ್ ಟೂರರ್ ಎಂಬ ಪ್ರವಾಸಯೋಗ್ಯ ಕಾರ್ ಜಗ್ವಾರ್ XK. XKಯು ಎರಡು-ಬಾಗಿಲಿನ ಕೂ ರೀತಿಯಲ್ಲಿಯೂ ಮತ್ತು ಎರಡು-ಬಾಗಿಲಿನ ಕಾರ್ಬಿಯೊಲೆಟ್/ಕನ್ವರ್ಟಿಬಲ್ ರೀತಿಗಳಲ್ಲಿಯೂ ಲಭ್ಯವಿದೆ..
XK ಯ ದರವು £60,000 ರಿಂದ £71,000 ಆಗಿರುತ್ತದೆ.
R ಮಾಡಲ್ ಗಳು
ಬದಲಾಯಿಸಿಐತಿಹಾಸಿಕ ಮಾಡಲ್ ಗಳು
ಬದಲಾಯಿಸಿಜಗ್ವಾರ್ ಕಂಪನಿಯು ಯುದ್ಧ-ಪೂರ್ವದಲ್ಲಿ 1.5, 2.5 ಮತ್ತು 3.5 ಲೀಟರ್ ಮಾಡಲ್ ಗಳ ಉತ್ಪಾದನೆ ಆರಂಭಿಸಿತು; ಇವು ಸ್ಟಾಂಡರ್ಡ್ ಮೋಟಾರ್ ಕಂಪನಿ ರಚಿಸಿದ ಎಂಜಿನ್ ಗಳನ್ನು ಹೊಂದಿದ್ದವು. 1.5 ಲೀಟರ್ ನ ನಾಲ್ಕು-ಸಿಲಿಂಡರ್ ವುಳ್ಳ ಎಂಜಿನ್ ಅನ್ನು ಅಂದಿಗೂ ಸ್ಟಾಂಡರ್ಡ್ ನವರೇ ಸರಬರಾಜು ಮಾಡುತ್ತಿದ್ದರು, ಆದರೆ ಎರಡು ದೊಡ್ಡದಾದ ಆರು-ಸಿಲಿಂಡರ್ ಎಂಜಿನ್ ಗಳನ್ನು ಜಗ್ವಾರ್ ತಮ್ಮಲ್ಲೇ ತಯಾರಿಸಿಕೊಂಡಿತು. ಈ ಕಾರ್ ಗಳು ಅನಧಿಕೃತವಾಗಿ ಮಾರ್ಕ್ IVಗಳೆಂದೇ ಖ್ಯಾತವಾಗಿವೆ.
ಯುದ್ಧದ ನಂತರದ ಮೊದಲ ಮಾಡಲ್ 1948ರ ಮಾರ್ಕ್ V ಆಗಿದ್ದು, ಇದು 2.5 ಅಥವಾ 3.5 ಲೀಟರ್ ಎಂಜಿನ್ ಗಳನ್ನು ಹೊಂದಿದಂತೆ ಲಭ್ಯವಿದ್ದು,ಯುದ್ಧ-ಪೂರ್ವ ಮಾಡಲ್ ಗಳಿಗಿಂತಲೂ ಹೆಚ್ಚು ಅಚ್ಚುಕಟ್ಟಾದ ಆಕಾರವನ್ನು ಹೊಂದಿದ್ದುದಲ್ಲದೆ ಪ್ರಮುಖವಾಗಿ ಸ್ವತಂತ್ರವಾದ ಮುಂಭಾಗದ ಸಸ್ಪೆಂಷನ್ ಮತ್ತು ಹೈಡ್ರಾಲಿಕ್ ಬ್ರೇಕ್ ಗಳನ್ನು ಹೊಂದಿತ್ತು.
ವಿಲಿಯಮ್ ಹೇಯ್ನ್ಸ್, ವಾಲ್ಟರ್ ಹಸನ್ ಮತ್ತು ಕ್ಲಾಡ್ ಬೇಯ್ಲಿಯವರು ರೂಪಿಸಿದ 3.5ಲೀಟರ್ ಹೆಮಿ-ಹೆಡ್ ಆರು-ಸಿಲಿಂಡರ್ ಗಳುಳ್ಳ ಎಂಜಿನ್, 1940ರ BMW 328 ಕೂ ಹೊಂದಿದ್ದ ಆಕಾರದ ರೂಪದ ಸರಿಸುಮಾರು ನಕಲು ಹಾಗೂ ನೂತನ XK ಅವಳಿ ಶಿರೋಪರಿ ಕ್ಯಾಂಷ್ಯಾಫ್ಟ್(DOHC)ಗಳನ್ನು ಹೊಂದಿದ್ದ 1948ರ XK120 ಕ್ರೀಡಾ ಕಾರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದುದು ಈ ಕಂಪನಿಯ ಮಹತ್ತರ ಸಾಧನೆಯೆಂದು ಜನಜನಿತವಾಯಿತು. ಬೆಂಕಿಯೇಳುವಿಕೆಯ ವಿರುದ್ಧ ಕಾವಲು ಕಾಯಲು ಯುದ್ಧಕಾಲದಲ್ಲಿ ದೀರ್ಘರಾತ್ರಿಗಳನ್ನು ಕಳೆಯುತ್ತಿದ್ದಾಗ ಈ ಎಂಜಿನ್ ಅನ್ನು ವಿನ್ಯಾಸಗೊಳಿಸಲಾಯಿತು. ಹಲವಾರು ಯತ್ನಗಳ ನಂತರ ಕಡೆಗೆ ಒಂದು ವಿನ್ಯಾಸವನ್ನು ಅಂಗೀಕರಿಸಲಾಯಿತು. "ಅದರ ಸದ್ದನ್ನು ತಗ್ಗಿಸಿರಿ" ಎಂದು ಮಾಲಿಕ ವಿಲಿಯಮ್ ಲಿಯಾನ್ಸ್ ಹೇಳುವವರೆಗೂ ಈ ವಿನ್ಯಾಸಕಾರ್ಯ ನಡೆದೇ ಇತ್ತು. ಮೂಲತಃ ಕಂಪನಿಯು ಹೊರತರಬಯಸಿದ್ದ ಹೊಸ ಮಾರ್ಕ್ VII ಸಲೂನ್ ಗೆ ಈ ನೂತನ ಎಂಜಿನ್ ಆಳವಡಿಸುವ ಯೋಜನೆಯಿದ್ದು ಎಂಜಿನ್ ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲೆಂದು ಕೊಂಚ ಕಾಲದ (ಸಣ್ಣ) ಉತ್ಪಾದನಾ ವಿನ್ಯಾಸದ ಸಲುವಾಗಿ ಕೇವಲ 200 ಕಾರ್ ಗಳನ್ನು ಮಾತ್ರ ತಯಾರಿಸುವ ಯೋಜನೆಯಿದ್ದಿತು. ಆದರೆ XK120ಅನ್ನು ಜನತೆ ಸ್ವಾಗತಿಸಿದ ಅಮೋಘತೆಯು ಈ ಕಾರನ್ನು 1954ರವರೆಗೂ ತಯಾರಿಸಲೇಬೇಕಾದ ರಿತಿಯಿದ್ದಿತು; ತದನಂತರ ತಯಾರಿಸಲ್ಪಟ್ಟ XK140, XK150, ಮತ್ತು E-ಮಾದರಿ ಕಾರ್ ಗಳು ಜಗ್ವಾರ್ ಕ್ರೀಡಾ ಕಾರ್ ಗಳ ಮಾರುಕಟ್ಟೆಯಲ್ಲಿ ಮುಂದುವರೆಯಲು ಪೂರಕವಾದವು.
ಅಮೆರಿಕ ಮಾರುಕಟ್ಟೆಗೆಂದೇ ತಯಾರಿಸಿದ ದೊಡ್ಡ ಮಾರ್ಕ್ VII ಸಲೂನ್ ಅನ್ನು 1951ರಲ್ಲಿ ಪರಿಚಯಿಸಿದ ಜಗ್ವಾರ್ ಗೆ ಬೇಡಿಕೆಗಳ ಸುರಿಮಳೆಯೇ ಆಯಿತು. ಮಾರ್ಕ್ VII ಮತ್ತು ನಂತರದ ಕಾರುಗಳು ರೋಡ್ & ಟ್ರ್ಯಾಕ್ , ಮತ್ತು ದ ಮೋಟಾರ್ ಗಳಂತಹ ಪತ್ರಿಕೆಗಳಿಂದ ಅಮೋಘವಾದ ವಿಮರ್ಶೆಗಳನ್ನು ಹೊಂದಿದವು. 1956ರಲ್ಲಿ ಮಾರ್ಕ್ VII ಪ್ರತಿಷ್ಠಿತ ಮಾಂಟೀ ಕಾರ್ಲೋ ರಾಲಿಯಲ್ಲಿ ಗೆಲುವನ್ನು ಸಾಧಿಸಿತು.
1955ರಲ್ಲಿ ಉತ್ಪಾದನೆಗೊಂಡ ಮಾರ್ಕ್ ಇ ಸಣ್ಣ ಸಲೂನ್ ಜಗ್ವಾರ್ ತಯಾರಿಸಿದ ಮೊದಲ ಮಾನೋಕಾಕ್ (ಯೂನೀ ಬಾಡಿ) ಹೊಂದಿದ ಕಾರ್ ಆಗಿದ್ದು XK ಎಂಜಿನ್ನಿನ ಮಾದರಿಯ 2.4 ಲೀಟರ್ ಶಾರ್ಟ್ ಸ್ಟ್ರೋಕ್ ರೀತಿಯ ಎಂಜಿನ್ನನ್ನು ಹೊಂದಿತ್ತು. 1959ರಲ್ಲಿ ಈ ಕಾರನ್ನು ಮತ್ತೂ ಉತ್ತಮಗೊಳಿಸಿ, ಮೊದಲಿಗಿಂತಲೂ ದೊಡ್ಡದಾದ ಎಂಜಿನ್ ಅಳವಡಿಸಿ, ಕಿಟಕಿಗಳ ಅಳತೆಯನ್ನು ಹೆಚ್ಚಿಸಿ ತಯಾರಿಸಿದ ಕಾರೇ ಜಗ್ವಾರ್ ಕಂಪನಿಗೆ ಬಹಳವೇ ಹೆಸರು ತಂದ ಮಾಡಲ್ ಗಳ ಪೈಕಿ ಪ್ರಮುಖವಾದ ಮಾರ್ಕ್ 2. ಸಣ್ಣದಾಗಿ, ಹಗುರವಾಗಿ, ಶಕ್ತಿಯುತವಾದ ಎಂಜಿನ್ ಹೊಂದಿದ್ದ ಈ ಕಾರು ಬ್ರಿಟಿಷ್ ಪೊಲೀಸ್ ಪಡೆಗೆ ಬಹಳವೇ ಪ್ರಿಯವಾಯಿತು.
1956ರ ಮಾರ್ಕ್ VIII ಮತ್ತು 1958ರ ಮಾರ್ಕ್ IX ಕಾರ್ ಗಳು ಮಾರ್ಕ್ VIIರ ಉತ್ತಮಗೊಂಡ ಆವಿಷ್ಕಾರಗಳೇ ಆಗಿದ್ದವು, ಆದರೆ 1061ರ ಮಾರಕ್ X ಸಂಪೂರ್ಣವಾಗಿ ಹೊಸ ವಿನ್ಯಾಸವುಳ್ಳದ್ದಾಗಿದ್ದು ಯೂನೀಬಾಡಿ ಮತ್ತು ಸರ್ವತೋಮುಖ ಸ್ವತಂತ್ರ ಸಸ್ಪೆಂಷನ್ ಹೊಂದಿದ ದೊಡ್ಡ ಸಲೂನ್ ಆಗಿತ್ತು.
ಮಾರ್ಕ್ 10ರ ಸ್ವತಂತ್ವಾದ ಹಿಂದಿನ ಸಸ್ಪೆಂಷನ್ ಅನ್ನು 1963ರ S-ಮಾದರಿಯಲಗಲಿ ಅಳವಡಿಸಲಾಗಿ ಆ ಕಾರು ಮಾರ್ಕ್ 2ವನ್ನು ಹೋಲುತ್ತಿತ್ತು ಮತ್ತು 1967ರಲ್ಲಿ ಆ ಕಾರನ್ನು ಮಾರ್ಕ್ ೨ ಎಂಬುದರ ಬದಲಾಗಿ 240/340 ರೇಂಜ್ ಎಂದು ಮರುನಾಮಕರಣ ಮಾಡಿದರು. 1966ರ 420ಯು ಡೈಮ್ಲರ್ ಸಾವರೀನ್ ಎಂಬ ಹೆಸರಿನಡಿಯಲ್ಲೂ ಮಾರಾಟವಾಗಿ, S-ಮಾದರಿಯ ಕಾರಿನ ಮುಂಭಾಗಕ್ಕೆ ಹೊಸ ಆಕಾರವಿತ್ತಂತಹುದಾಗಿದ್ದು, 1968ರಲ್ಲಿ S-ಮಾದರಿಯ ಎಂಬ ಹೆಸರನ್ನು ಬಿಡುವವರೆಗೂ,ಎರಡೂ ಕಾರುಗಳು ಏಕಕಾಲದಲ್ಲಿ ಮಾರುಕಟ್ಟೆಯಲ್ಲಿದ್ದಂತಹವಾಗಿದ್ದವು. 1966ರಲ್ಲಿ ಮಾರ್ಕ್ X 420G ಎಂದು ಕರೆಯಲ್ಪಡಲಾಯಿತು.
ಇತ್ತೀಚಿನ ಸಲೂನ್ ಗಳ ಪೈಕಿ ಅತ್ಯಂತ ಗಮನಾರ್ಹವಾದುದೆಂದರೆ XJ (1968ರಿಂದ ಇಂದಿನವರೆಗೂ), ಇದು ಇಂದಿಗೂ ಹಲವಾರು ಜನರ 'ಜಗ್ವಾರ್ ಎಂದರೆ ಇದೇ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾರ್ ಆಗಿದೆ. 1968ರ ನಂತರ I XJ ಸರಣಿಯ ಕಾರುಗಳು ಪ್ರಮುಖವಾದ ಬದಲಾವಣೆಗಳನ್ನು ಹೊಂದುತ್ತಾ ಸಾಗಿದವು; 1973(ಸರಣಿ IIಆಗಿ), 1979 (ಸರಣಿ III), 1986 ಯೂರೋಪ್/1987 ಯುನೈಟೆಡ್ ಸ್ಟೇಟ್ಸ್ (XJ40), 1995 (X300), 1997 ( V8-ಚಾಲಿತ X308), 2003 (ಪ್ರಸ್ತುತ ಮಾಡಲ್, X350)ಗಳಾಗಿ ಇದರ ಬೆಳವಣಿಗೆಯನ್ನು ಗುರುತಿಸಬಹುದಾಗಿದೆ. XJ ಸರಣಿಯ ಅತ್ಯಂತ ಐಷಾರಾಮಿ ಮಾಡಲ್ ಗಳು ವ್ಯಾಂಡೆನ್ ಪ್ಲಾಸ್ (US) ಅಥವಾ ಡೈಮ್ಲರ್ (ಜಗದ ಮಿಕ್ಕೆಲ್ಲ ಕಡೆಗಳಲ್ಲಿ) ಸಾಮಫಲಕಗಳನ್ನು ಹೊಂದಿರುತ್ತವೆ.
ಉತ್ಪಾದಿತ ಕಾರ್ ಗಳ ಪೈಕಿ ಅತ್ಯಂತ ವೇಗವಾಗಿ (350 km/h, 217 mph)ಚಲಿಸುವ ವಿಶ್ವದಾಖಲೆಯನ್ನು ಸೃಷ್ಠಿಸಿದ ಹೆಮ್ಮೆ XJ220(1992–1994)ದಾಗಿತ್ತು.
ವಿಶೇಷ ಮಾಡೆಲ್ ಗಳು
ಬದಲಾಯಿಸಿದೊಡ್ಡ ಎಕ್ಸಿಕ್ಯುಟಿವ್
ಬದಲಾಯಿಸಿ- 1935–1948 2½ ಲೀಟರ್ ಸಲೂನ್
- 1937–1948 3½ ಲೀಟರ್ ಸಲೂನ್
- 1948–1951 ಮಾರ್ಕ್ V
- 1951–1957 ಮಾರ್ಕ್ VII (& VIIM)
- 1957–1959 ಮಾರ್ಕ್ VIII
- 1959–1961 ಮಾರ್ಕ್ IX
- 1961-1970 ಮಾರ್ಕ್ X
- 1966-1970 420ಜಿ
- 1968–1987 XJ6 ಸರಣಿ 1, 2 & 3
- 1972–1992 XJ12
- 1986–1994 XJ6 (XJ40)
- 1993–1994 XJ12 (XJ81)
- 1995–1997 XJ6 & XJ12 (X300 & X301)
- 1998–2003 XJ8 (X308)
- 2004–2009 XJ (X350)
- 2009–ಇಂದಿನವರೆಗೂ XJ (X351)
ಕಾಂಪ್ಯಾಕ್ಟ್(ಸಂಕ್ಷೇಪ) ಎಕ್ಸಿಕ್ಯುಟಿವ್
ಬದಲಾಯಿಸಿ- 1935–1949 1½ ಲೀಟರ್ ಸಲೂನ್
- 1955–1959 ಮಾರ್ಕ್ 1
- 1959–1967 ಮಾರ್ಕ್ 2
- 1963–1968 S-ಮಾದರಿ
- 1966–1968 420
- 1966–1968 240 & 340
- 1999-2008 S-ಮಾದರಿ
- 2001-ಇಂದಿನವರೆಗೂ X-ಮಾದರಿ
- 2008-ಇಂದಿನವರೆಗೂ XF
ಕ್ರೀಡೆಗಾಗಿ
ಬದಲಾಯಿಸಿ- 1948–1954 XK120
- 1954–1957 XK140
- 1957–1961 XK150
- 1961–1974 E-ಮಾದರಿ
- 1975–1996 XJ-S
- 1992-1994 XJ220
- 1997–2005 XKR (X100)
- 1996–2006 ಜಗ್ವಾರ್ XK8[೩೯]
- 2007-ಇಂದಿನವರೆಗೆ XKR (X150)
ರೇಸಿಂಗ್ ಮತ್ತು ಸ್ಪರ್ಧೆಗಳು
ಬದಲಾಯಿಸಿ- 1950ರ ದಶಕದಲ್ಲಿ C-ಮಾದರಿ
- 1950ರ ದಶಕದಲ್ಲಿ D-ಮಾದರಿ
- 1960ರ ದಶಕದಲ್ಲಿ E-ಮಾದರಿ ಹಗುರವಾದದ್ದು
- 1985-1992 XJR-5 ರಿಂದ XJR-15
- 2009 ಬೋನ್ ವಿಲ್ಲೆ 225.675 mph (363.189 km/h)XFR
ಹೊಸ ಕಲ್ಪನೆಯ ಮಾದರಿಗಳು
ಬದಲಾಯಿಸಿ- E1A - 1950ರ E-ಮಾದರಿಯ ಕಲ್ಪಿತ ವಾಹನ
- E2A - ಎರಡನೆಯ E-ಮಾದರಿ ಕಲ್ಪಿತ ವಾಹನ;ಇದನ್ನು ಲೀಮಾನ್ಸ್ ನಲ್ಲಿ ಮತ್ತು ರೇಸಿಂಗ್ ಗಾಗಿ USAಯಲ್ಲಿಉಪಯೋಗಿಸಲಾಗಿತ್ತು.
- ಪಿರಾನಾ (1967)
- XJ13 - ಲೀಮಾನ್ಸ್ ನಲ್ಲಿ ರೇಸ್ ಗೆಂದು ರಚಿಸಿದ್ದು, ಎಂದೂ ಓಡಲಿಲ್ಲ
- XK180 (1998)
- F-ಮಾದರಿ (2000) – ರೋಡ್ ಸ್ಟರ್, XK8 ನಂತೆಯೇ, ಆದರೆ ಚಿಕ್ಕದು.
- R-ಕೂ (2002) – ಐಷಾರಾಮಿ ನಾಲ್ಕು-ಸೀಟರ್ ಕೂ, ಇದಕ್ಕೆ ಅತಿ ಹತ್ತಿರದ ಸ್ಪರ್ಧಿಯೆಂದರೆ ಬೆಂಟ್ಲೀ ಕಾಂಟಿನೆಂಟಲ್ GT
- ಫ್ಯುವೋರ್ XF 10 (2003)
- R-D6 (2003) – ಸಂಕ್ಷೇಪವಾದ ನಾಲ್ಕು-ಸೀಟುಗಳುಳ್ಲ ಕೂ
- XK-RR – ಕಡೆಯ ತಲೆಮಾರಿನ XK ಕೂ ನ ಶ್ರೇಷ್ಠ-ಕಾರ್ಯಕ್ಷಮತೆಯ ಮಾದರಿ
- XK-RS – ಹೋದ ತಲೆಮಾರಿನ XK ಕಂವರ್ಟಿಬಲ್ ನ ಮಾದರಿಯ ಮತ್ತೊಂದು ಕಾರ್ಯಕ್ಷಮತೆಗೆ-ಸೂಚಿತವಾದ ಮಾದರಿ
- ಕಾಂಸೆಪ್ಟ್ ಎಯ್ಟ್ (2004) – ನೀಳ-ವೀಲ್ ಬೇಸ್ ಹೊಂದಿದ್ದ XJ ಮಾಡಲ್ ನ ಉನ್ನತ-ಐಷಾರಾಮೀ ಮಾದರಿಯ ಅವತರಣಿಕೆ
- C-XF (2007)
ಎಂಜಿನುಗಳು
ಬದಲಾಯಿಸಿಜಗ್ವಾರ್ ತನ್ನ ಸ್ವಂತ ಉಪಯೋಗಕ್ಕಾಗಿ ನಾಲ್ಕು ತಲೆಮಾರಿನಿಂದ ಎಂಜಿನ್ ಗಳನ್ನು ರೂಪಿಸಿದೆ.
- ಐತಿಹಾಸಿಕ ಎಂಜಿನ್ ಗಳು:
- ಈಗಿನ ಎಂಜಿನ್ ಗಳು:
ವಾಹನ ಕ್ರೀಡೆಗಳು
ಬದಲಾಯಿಸಿ- ಇವನ್ನೂ ನೋಡಿರಿ:ಜಗ್ವಾರ್ ರೇಸಿಂಗ್ ಮತ್ತು ಜಗ್ವಾರ್ XJR ಕ್ರೀಡಾಕಾರ್ ಗಳು
ಸ್ಪೋರ್ಟ್ಸ್ ಕಾರ್ ರೇಸಿಂಗ್ ನಲ್ಲಿ ಕಂಪನಿಯು ಪ್ರಮುಖವಾದ ಯಶವನ್ನು ಗಳಿಸಿದ್ದು, ವಿಶೇಷವಾಗಿ ಲೇ ಮಾನ್ಸ್ 24 ಗಂಟೆಗಳ ರೇಸ್ ನಲ್ಲಿ ಯಶ ಪಡೆದಿದೆ. ಗೆಲುವುಗಳು 1951ಮತ್ತು1953ರಲ್ಲಿ C-ಮಾದರಿ ಕಾರ್ ಮೂಲಕ, ನಂತರ 1955,1956ಮತ್ತು1957ರಲ್ಲಿ D-ಮಾದರಿ ಕಾರ್ ಮೂಲಕ ಪ್ರಾಪ್ತವಾದವು. ಈ ಅವಧಿಯಲ್ಲಿ ರೇಸಿಂಗ್ ತಂಡದ ಮ್ಯಾನೇಜರ್(ವ್ಯವಸ್ಥಾಪಕ)ರಾಗಿದ್ದ ಲಾಫ್ಟೀ ಇಂಗ್ಲೆಂಡ್ ತದನಂತರ, 1970ರ ದಶಕದ ಪೂರ್ವಭಾಗದಲ್ಲಿ ಜಗ್ವಾರ್ ಕಂಪನಿಯ CEO ಆಗಿ ನೇಮಕಾತಿ ಹೊಂದಿದರು. XJ13ರ ನಮೂನೆಯನ್ನು 1960ರ ಮಧ್ಯಭಾಗದಲ್ಲಿಯೇ ರಚನೆ ಮಾಡಿದ್ದರೂ, ಆ ಕಾರನ್ನು ರೇಸ್ ಗೆ ಎಂದೂ ಉಪಯೋಗಿಸಲೇ ಇಲ್ಲ ಮತ್ತು, ಯೂರೋಪಿಯನ್ ಸ್ಪೋರ್ಟ್ಸ್ ಕಾರ್ ರೇಸ್ ಗಳಿಗೆಂದು 1980ರ ಮಧ್ಯಭಾಗದಲ್ಲಿ ಟಾಮ್ ವಾಕಿಂನ್ ಷಾರವರ TWR ತಂಡವು ಜಗ್ವಾರ್ V12-ಎಂಜಿನ್ನುಳ್ಳ ಕ್ರೀಡಾಕಾರ್ ಗಳ ನಮೂನೆಯನ್ನು ಕಲ್ಪಿಸಿ, ಸಿದ್ಧಪಡಿಸುವವರೆಗೂ, ಆ ಖ್ಯಾತ ರೇಸ್ ನಿಂದ ಹಲವಾರು ವರ್ಷಗಳು ಜಗ್ವಾರ್ ದೂರವೇ ಉಳಿದಿತ್ತು. ಈ ತಂಡವು 1987ರಿಂದ ಸತತವಾಗಿ ಜಯಗಳಿಸಲಾರಂಭಿಸಿ, ಕಾರ್ಖಾನೆಯ ಹೆಚ್ಚಿನ ಬೆಂಬಲ ಪಡೆದುದರ ವತಿಯಿಂದ 1988 ಮತ್ತು 1990ರಲ್ಲಿ ಲೀ ಮಾನ್ಸ್ ರೇಸ್ ನಲ್ಲೂ ಗೆಲುವು ಸಾಧಿಸಿತು.
1999ರಲ್ಲಿ ಜಗ್ವಾರ್ ತಮ್ಮ ಕಾರ್ಪೊರೇಷನ್ ನ ಫಾರ್ಮಲಾ ಒನ್ ನಲ್ಲಿ ಭಾಗವಹಿಸುವುದೆಂದು ತೀರ್ಮಾನಿಸಿತು. ಫೋರ್ಡ್ ಸ್ಟುವರ್ಟ್ ಗ್ರ್ಯಾಂಡ್ ಪ್ರೀ ತಂಡವನ್ನು ಕೊಂಡುಕೊಂಡು ಅದನ್ನು ಜಗ್ವಾರ್ ರೇಸಿಂಗ್ ಎಂದು ಹೆಸರಿಸಿ 2000ದ ರೇಸಿಂಗ್ ಸಮಯಕ್ಕೆ ಅಣಿಮಾಡಿತು. ಆದರೆ ಜಗ್ವಾರ್ F1 ಕ್ರಿಯೆಯಲ್ಲಿ ಯಶಸ್ವಿಯಾಗಲಿಲ್ಲ,2000 ಮತ್ತು2004 ಕಾಲಘಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಒಟ್ಟು ಐದು ಸೀಸನ್(ಸ್ಪರ್ಧಾಸಮಯದಲ್ಲಿ)ಗಳಲ್ಲಿ ಕೇವಲ ಎರಡು ಪೋಡಿಯಂ ಫಿನಿಷ್ (2ನೆಯ ಅಥವಾ 3ನೆಯ ಸ್ಥಾನಗಳಿಕೆ) ಮಾತ್ರ ಗಳಿಸಲು ಶಕ್ತವಾಯಿತು. 2004ರ ಕೊನೆಯಲ್ಲಿ, ಖರ್ಚು ಹೆಚ್ಚುತ್ತಿದ್ದು, ಫೋರ್ಡ್ ನ ಆದಾಯ ಕಡಿಮೆಯಾಗುತ್ತಿದ್ದುದರಿಂದ F1 ತಂಡವು ಅನಗತ್ಯವಾದ ಖರ್ಚೆಂದು ಭಾವಿಸಿದ ಕಂಪನಿಯು ಅದನ್ನು ರೆಡ್ ಬುಲ್ ಶಕ್ತಿದಾಯಕ ಪಾನೀಯ ಕಂಪನಿಯ ಮಾಲಿಕರಾದ ಡೀಯ್ಟ್ ರಿಚ್ ಮ್ಯಾಟೆಸ್ ಚಿಟ್ಝ್ ರಿಗೆ ಮಾರಿಬಿಟ್ಟಿತು ಮತ್ತು ಆ ತಂಡವು ರೆಡ್ ಬುಲ್ ರೇಸಿಂಗ್ ಎಂದು ಮರುನಾಮಕರಣಗೊಂಡಿತು. 2004ರಿಂದ ಈಚೆಗೆ ಜಗ್ವಾರ್ ಅಧಿಕೃತವಾಗಿ ಯಾವುದೇ ಮೋಟಾರ್ ಸ್ಪೋರ್ಟ್ಸ್ ನಲ್ಲೂ ಭಾಗವಹಿಸಿಲ್ಲ.
ದಾಖಲಾರ್ಹ ಜಗ್ವಾರ್ ಕ್ರೀಡಾ ರೇಸ್ ಕಾರ್ ಗಳೆಂದರೆ:
- ಜಗ್ವಾರ್ C-ಮಾದರಿ(1951–1953)
- ಜಗ್ವಾರ್ D-ಮಾದರಿ(1954–1957)
- ಜಗ್ವಾರ್ ಹಗುರ E-ಮಾದರಿ
- ಜಗ್ವಾರ್ XJR ಕ್ರೀಡಾ ಕಾರ್ ಗಳು
- ಜಗ್ವಾರ್ XJR-9(1988)
- XJ220 (1988)
- XJR-15 (1990)
ವಿದ್ಯುಚ್ಚಾಲಿತ ವಾಹನಗಳು
ಬದಲಾಯಿಸಿ"ಲೈಮೋ ಗ್ರೀನ್" ಎಂಬ UK ಸರ್ಕಾರದ ಟೆಕ್ನಾಲಜಿ ಸ್ಟ್ರಾಟೆಜಿ ಬೋರ್ಡ್ ವೆಚ್ಚ ಭರಿಸಿದ ಐಷಾರಾಮಿ ಹೈಬ್ರಿಡ್ ಎಕ್ಸಿಕ್ಯುಟಿವ್ ಸೆಡಾನ್ ತಯಾರಿಸುವ ಯೋಜನೆಗಾಗಿ ಲೋಟಸ್ ಕಾರ್ಸ್ ಕಂಪನಿಯು ಜಗ್ವಾರ್ ಮತ್ತು ಕ್ಯಾಪಾರೋಗಳೊಡನೆ ಕೈಜೋಡಿಸಿತು. ಈ ವಾಹನವು ಪ್ಲಗ್-ಇನ್ ಹೈಬ್ರಿಡ್ ಕಾರ್ ಗಳ ಒಂದು ಸರಣಿಯಾಗಿರುತ್ತದೆ.[೪೦]
ಆಕರಗಳು
ಬದಲಾಯಿಸಿ- ↑ "Employee relations". Jaguar - Environmental and Social Reporting. Retrieved 2009-07-03.
- ↑ "Tata Buys Jaguar Land Rover for $2.3 Billion". Autoblog.com. Retrieved 2009-06-19.
- ↑ "The Years 1938 to 1953". Jaguar Cars Ltd. Archived from the original on 2009-06-01. Retrieved 2009-06-18.
- ↑ "The Years 1989 to 1986". Jaguar Cars Ltd. Archived from the original on 2009-06-24. Retrieved 2009-06-19.
- ↑ "The Royal Warrant Holders ' Association - Directory of Royal Warrant Holders". Archived from the original on 2007-12-12. Retrieved 2007-12-24.
- ↑ "The Years 1932 to 1935". Jaguar Cars Ltd. Archived from the original on 2009-06-01. Retrieved 2008-12-26.
- ↑ "The Years 1938 to 1953". Jaguar Cars Ltd. Archived from the original on 2009-06-01. Retrieved 2008-12-26.
- ↑ ೮.೦ ೮.೧ "The Lyons share - interview with WL". Motor: pages 18 - 21. date 19 February 1972.
{{cite journal}}
:|pages=
has extra text (help); Check date values in:|date=
(help) - ↑ Webster's New World Dictionary of the American Language. New York: World. 1962. p. 782.
- ↑ "75 Years of Daimler: A look back at one of the first car manufacturers in this country". Autocar. 134 (nbr 3914): pages 16 - 19. date 1 April 1971.
{{cite journal}}
:|pages=
has extra text (help); Check date values in:|date=
(help) - ↑ "The Years 1968 to 1979". Jaguar Cars Ltd. Archived from the original on 2009-06-01. Retrieved 2008-12-26.
- ↑ "The Ryder Report". Austin Rover Online. Retrieved 2008-12-26.
- ↑ "A whole world sold on sell-offs". The Guardian. Retrieved 2008-12-26.
- ↑ "The Years 1989 to 1996". Jaguar Cars Ltd. Archived from the original on 2008-12-07. Retrieved 2007-05-10.
- ↑ "India's Tata confirms interest in Land Rover, Jaguar". AFX News Ltd. 24 August 2007. Archived from the original on 2009-05-31. Retrieved 2007-12-18.
- ↑ Clark, Nick (4 January 2008). "Tata in pole position to buy Jaguar and Land Rover marques from Ford". Archived from the original on 2008-01-05. Retrieved 2008-01-04.
- ↑ "JCB's Sir Anthony Bamford eyes Jaguar". Contract Journal. 24 August 2006. Archived from the original on 31 ಮೇ 2009. Retrieved 19 ಏಪ್ರಿಲ್ 2010.
- ↑ Doval, Pankaj (24 December 2007). "M&M out of Jaguar, Land Rover race". Times News Network. Retrieved 2007-12-24.
- ↑ Krisher, Tom (3 January 2008). "Indian Company Top Bidder for Jaguar". Associated Press. Archived from the original on 2008-01-06. Retrieved 2008-01-04.
- ↑ "Tata set to clinch Jaguar-Land Rover deal: Report". Press Trust of India. 20 December 2007. Retrieved 2007-12-20.
- ↑ "Ford set to pick Jaguar frontrunner in days: source". Reuters. 17 December 2007. Retrieved 2007-12-18.[permanent dead link]
- ↑ Ghosh, Suprotip (3 January 2008). "Super car technology headed for Tata stable". Hindustan Times. Archived from the original on 2008-01-05. Retrieved 2008-01-04.
- ↑ Leahy, Joe (4 January 2008). "Tata falls for the attraction of opposites". Financial Times. Archived from the original on 2016-08-11. Retrieved 2008-01-04.
{{cite news}}
: Unknown parameter|coauthors=
ignored (|author=
suggested) (help) - ↑ "Ball now in Tata Motors' court to tie-up deal: Unite". CNBC TV-18. 3 January 2008. Retrieved 2008-01-04.
- ↑ "Tata gets $3 billion loan from Citi, JPMorgan: source". Reuters. 18 March 2008. Archived from the original on 2008-12-07. Retrieved 2008-03-18.
- ↑ "FORD MOTOR COMPANY ANNOUNCES AGREEMENT TO SELL JAGUAR LAND ROVER TO TATA MOTORS" (Press release). Ford Motor Company. 2008-03-26. Archived from the original on 2008-06-12. Retrieved 2008-03-27.
- ↑ "5 for 2 special: Tata acquires 3 other British marques in Jaguar, Land Rover deal". Leftlane News. 28 March 2008. Archived from the original on 2012-03-05. Retrieved 2008-03-28.
- ↑ "Tata Motors completes acquisition of Jag, Land Rover". Thomson Reuters. 2 June 2008. Retrieved 2008-06-02.
- ↑ "On U.S. tour, Mr. Tata gives Jaguar and Rover dealers a hug: AutoWeek Magazine". Autoweek.com. Archived from the original on 2012-01-17. Retrieved 2009-05-04.
- ↑ "Jobs warning at Jaguar Land Rover". BBC News. 2009-06-26. Retrieved 2009-06-26.
- ↑ "Jaguar History". The Surrey Region Jaguar Enthusiasts Club. Archived from the original on 2007-06-30. Retrieved 2010-04-19.
- ↑ "http://www.carpages.co.uk/guide/jaguar/jaguar-x-type-guide.asp". Carpages.co.uk. 2007-10-12. Retrieved 2009-09-24.
{{cite web}}
: External link in
(help)|title=
- ↑ "300 jobs lost at Jaguar's Halewood plant". guardian.co.uk. Guardian News and Media. 2009-07-15. Retrieved 2009-07-15.
- ↑ http://www.carpages.co.uk/guide/jaguar/jaguar-xf-guide.asp http://www.carpages.co.uk/guide/jaguar/jaguar-xf-guide.asp
- ↑ "Jaguar XJ Series". Autocars.co.uk. Retrieved 2009-06-19.
- ↑ "Jaguar XJ - New Car Data". carpages.co.uk. Retrieved 2009-06-19.
- ↑ "Jaguar XJ - models". Jaguar Cars Ltd. Retrieved 2009-06-19.[permanent dead link]
- ↑ "Changing face of Jaguar". BBC News. 9 July 2009. Retrieved 2009-07-15.
- ↑ "Jaguar XK8 | Used Car Tests | Car Reviews". Auto Express. 2006-12-05. Retrieved 2009-09-24.
- ↑ "Future Jaguar XJ May Cut CO2 Via Lotus 'LimoGreen' Project". Green Car Reports. 2009-02-20. Archived from the original on 2009-02-23. Retrieved 2009-05-04.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಜಗ್ವಾರ್ ಕಾರ್ಸ್ ನ ಅಧಿಕೃತ ವೆಬ್ ಸೈಟ್
- ಜಗ್ವಾರ್ ಕಾರ್ಸ್ ಯೂ ಟ್ಯೂಬ್ ಚಾನಲ್
- ಜಗ್ವಾರ್ ಕಾರ್ ಗಳು ಓಪನ್ ಡೈರೆಕ್ಟರಿ ಪ್ರಾಜೆಕ್ಟ್
ಟೆಂಪ್ಲೇಟು:Jaguar vehicles timeline (classic) ಟೆಂಪ್ಲೇಟು:Jaguar vehicles timeline (modern)