ಜಗಟೆ ಸೊಪ್ಪಿನ ಸುಕ್ಕಾ

ತಗಟೆ ಸೊಪ್ಪನ್ನು [] ಆಟಿ ತಿಂಗಳಲ್ಲಿ ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಕನ್ನಡದಲ್ಲಿ ತಗಟೆ, ತುಳುವಿನಲ್ಲಿ 'ತಜಂಕ್ತಜಂಕ್ ಸೊಪ್ಪು 'ಎಂದು ಕರೆಯಲ್ಪಡುವ ಸೊಪ್ಪಿಗೆ ಇಂಗ್ಲಿಷ್‌ನಲ್ಲಿ 'cassia tora' ಎಂದು ಕರೆಯುತ್ತಾರೆ. ಈ ಸೊಪ್ಪು ಮಳೆಗಾಲದಲ್ಲಿ ಹಳ್ಳಿ ಕಡೆಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಇದರ ಚಿಗುರು ಎಲೆ ಚಿವುಟಿ ತಂದು ಅದನ್ನು ಸ್ವಚ್ಛ ಮಾಡಿ ಕತ್ತರಿಸಿ ಇದರಿಂದ ಪಲ್ಯ, ಸಾರು, ಪತ್ರೊಡೆ ಮುಂತಾದ ರುಚಿಕರವಾದ ಅಡುಗೆ ಮಾಡಲಾಗುವುದು.ಇದರ ಪಲ್ಯ ಮಾಡುವ ವಿಧಾನ ಇತರ ಸೊಪ್ಪು ಪಲ್ಯದಂತೆಯೇ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ,.

ಬೇಕಾಗುವ ಸಾಮಗ್ರಿಗಳು

ಬದಲಾಯಿಸಿ
 
Cassia tora-1-kottachedu-yercaud-salem-India

ತಜಂಕ್ ಅಥವಾ ತಗಟೆ ಎಲೆ, ಈರುಳ್ಳಿ ,ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಚಮಚ, ಕಪ್ ತೆಂಗಿನ ತುರಿ, ರುಚಿಗೆ ತಕ್ಕ ಉಪ್ಪು, ಸಾಸಿವೆ ತೆಂಗಿನೆಣ್ಣೆ, ಚಮಚ/ಯಾವ ಅಡುಗೆ ಎಣ್ಣೆ ಬೇಕಾದರೂ ಬಳಸಬಹುದು.

ಮಾಡುವ ವಿಧಾನ

ಬದಲಾಯಿಸಿ

ಮೊದಲಿಗೆ ತಜಂಕ್ ಅಥವಾ ತಗಟೆ ಸೊಪ್ಪಿನ ಎಲೆ ಬಿಡಿಸಿಕೊಳ್ಳಬೇಕು. ಮತ್ತೆ ಈರುಳ್ಳಿ ಹಾಗೂ ಹಸಿ ಮೆಣಸು ಕತ್ತರಿಸಿ, ಪ್ಯಾನ್‌ಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ , ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಸೊಪ್ಪು ತೊಳೆದು ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಸೊಪ್ಪು ಬೆಂದು ಬರುವಾಗ ತುರಿದ ತೆಂಗಿನ ಕಾಯಿ ಹಾಕಿ ಫ್ರೈ ಮಾಡಿದರೆ ತಗಟೆ ಸೊಪ್ಪಿನ ಪಲ್ಯ ರೆಡಿ.

ತಗಟೆ ಸೊಪ್ಪಿನ ಸುಕ್ಕ

ಬದಲಾಯಿಸಿ

ಇದೇ ರೀತಿ ತಗಟೆ ಸೊಪ್ಪಿನ ಸುಕ್ಕ ಮಾಡುವುದು.ತಗಟೆ ಸೊಪ್ಪನ್ನು ಬೀಯಿಸಿ ಅದಕ್ಕೆ ತೆಂಗಿನ ತುರಿ, ಜೀರಿಗೆ, ಬೆಳ್ಳುಳ್ಳಿ, ಸ್ವಲ್ಪ ಅಕ್ಕಿ ಯನ್ನು ಕೊತ್ತಂಬರಿ, ಮೆಣಸು, ಪುಳಿ,ಹಾಕಿ ತರಿ ತರಿ ಯಾಗಿ ರುಬ್ಬಿ ಆ ಮಸಾಲೆಯನ್ನು ಸೇರಿಸಿದರೆ ಸುಕ್ಕ ರೆಡಿ.ತಜಂಕ್ ಸೊಪ್ಪು

ಉಲ್ಲೇಖ

ಬದಲಾಯಿಸಿ