ಛೋಯಿಲಾ ಜಾಲರಿ ಮೇಲೆ ಸುಟ್ಟ ಮಸಾಲೆಭರಿತ ಎಮ್ಮೆ ಮಾಂಸವನ್ನು ಹೊಂದಿರುವ ಒಂದು ವಿಶಿಷ್ಟ ನೇವಾರಿ ಖಾದ್ಯವಾಗಿದೆ.[೧] ಈ ಖಾದ್ಯವು ಸಾಂಪ್ರದಾಯಿಕವಾಗಿ ಎಮ್ಮೆ ಮಾಂಸದಿಂದ ಜನಪ್ರಿಯವಾಗಿದೆಯಾದರೂ, ಇತ್ತೀಚಿನ ದಿನಗಳಲ್ಲಿ ಕುರಿಮಾಂಸ, ಕೋಳಿಮಾಂಸ, ಬಾತುಕೋಳಿ ಮಾಂಸ ಮತ್ತು ಅಣಬೆಯನ್ನು ಕೂಡ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಛಿಯುರಾದೊಂದಿಗೆ (ಅಕ್ಕಿಯ ತೆಳು ಬಿಲ್ಲೆಗಳು) ತಿನ್ನಲ್ಪಡುವ ಈ ಖಾದ್ಯವು ಬಹಳ ಖಾರ, ಬಿಸಿ ಮತ್ತು ಬಾಯಿಯಲ್ಲಿ ನೀರು ಬರಿಸುವಂಥದ್ದಾಗಿರುತ್ತದೆ.

ಛೋಯಿಲಾ
ಕೋಳಿಮಾಂಸದ ಛೋಯಿಲಾ; ನೇವಾರಿ ಪಾಕಶೈಲಿ
ಮೂಲ
ಮೂಲ ಸ್ಥಳನೇಪಾಳ
ಪ್ರಾಂತ್ಯ ಅಥವಾ ರಾಜ್ಯನೇಪಾಳ ಮಂಡಲ
ನಿರ್ಮಾತೃನೇವಾರ್
ನಮೂನೆಮಾಂಸದ ಖಾದ್ಯ

ನೇವಾರಿ ಸಮುದಾಯದಲ್ಲಿ ಹಬ್ಬಗಳ ಸಂದರ್ಭದಲ್ಲಿ ಇದನ್ನು ಹಲವಾರು ಇತರ ಘಟಕಾಂಶಗಳೊಂದಿಗೆ ಆಹಾರದ ಅಗತ್ಯ ಭಾಗವೆಂದು ಪರಿಗಣಿಸಲಾಗುತ್ತದೆ. ಇದು ಸಮಯ್ ಬಜಿ ಖಾದ್ಯದ ಮುಖ್ಯವಾದ ಘಟಕಾಂಶ ಕೂಡ ಆಗಿದೆ.

ಉಲ್ಲೇಖಗಳು ಬದಲಾಯಿಸಿ

  1. "Choila receive limelight in New Delhi". ReportersNepal.com. 27 January 2011. Archived from the original on 9 February 2011. Retrieved 3 August 2011.
"https://kn.wikipedia.org/w/index.php?title=ಛೋಯಿಲಾ&oldid=994933" ಇಂದ ಪಡೆಯಲ್ಪಟ್ಟಿದೆ