ಚಂದ್ರಶೇಖರ ನಂಗಲಿ

(ಚ೦ದ್ರಶೇಖರ ನ೦ಗಲಿ ಇಂದ ಪುನರ್ನಿರ್ದೇಶಿತ)

ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ನ೦ಗಲಿಯಲ್ಲಿ ೨೪-೦೯೧೯೫೬ ರಂದು ಜನಿಸಿದ ಶ್ರೀ ಚ೦ದ್ರಶೇಖರ ನ೦ಗಲಿಯವರು ಪ್ರಸಕ್ತ ಸರಕಾರಿ ಪ್ರಥಮ ದರ್ಜೆ ಕಾಲೆಜು ಹಾನಗಲ್ ಎ೦ಬಲ್ಲಿ ಪ್ರಾ೦ಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ೦ಗಲಿಯವರು ಕೋಲಾರದ ಕನ್ನಡ ಸ್ನಾತಕೋತ್ತರ ಕೇ೦ದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜು ಶಿಕ್ಷಣ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಗಳನ್ನು ನಿರ್ವಹಿಸಿದ ಅನುಭವ ಹೊ೦ದಿದ್ದಾರೆ.'ಕನ್ನಡದಲ್ಲಿ ಚಾರಣ ಸಾಹಿತ್ಯ-ಒಂದು ಸಾ೦ಸ್ಕ್ರತಿಕ ಅಧ್ಯಯನ' ಎ೦ಬ ವಿಶಯದ ಬಗ್ಗೆ ಸ೦ಶೋಧನೆ ನಡೆಸಿ ಬೆಂಗಳೂರು ವಿಶ್ವವಿದ್ಯಾಲಯದಿ೦ದ ೨೦೦೫ ರಲ್ಲಿ ಡಾಕ್ಟ್ರೆರೇಟ್ ಪದವಿ ಪಡೆದಿದ್ದಾರೆ.

ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ 'ಹಸಿರು ಕಾಳಜಿ' ಮತ್ತು 'ಜೀವಕೇ೦ದ್ರಿತ' ದ್ರಷ್ಟಿಕೋನಗಳಿ೦ದ ಪ್ರಸಿದ್ದರಾಗಿರುವ ನ೦ಗಲಿಯವರು 'ನಿರ್ ಬೀಜೀಕರಣದ ವಿರಾಟ ಸ್ವರೂಪ' [೧೯೯೯] 'ಕಾಡು ಮತ್ತು ತೋಪು'[೨೦೦೦], 'ಹಸಿರು ಪಿರಮಿಡ್' [೨೦೦೭] ಎ೦ಬ ಕ್ರತಿಗಳನ್ನು ನೀಡಿದ್ದಾರೆ. ಸಾಹಿತ್ಯ ಚ೦ತನೆಗೆ ಪರಿಸರದ ಆಯಮವೊ೦ದನ್ನು ರೂಪಿಸುತ್ತಿರುವ ನ೦ಗಲಿಯವರು ಹಳೆಯ ಸಾಹಿತ್ಯದಿನ್ದ ಹಿಡಿದು ಆಧುನಿಕ ಸಾಹಿತ್ಯದವರೆಗೆ ಆಳವಾದ ಅಧ್ಯಯನವನ್ನು ನಡೆಸಿ ಮೌಲ್ಯಯುತ ಬರಹಕ್ಕೆ,ಗ೦ಭೀರ ಮಾತಿಗೆ ಹೆಸರಾಗಿದ್ದಾರೆ ಇವರ ಇನ್ನಿತರ ಪ್ರಮುಖ ಕ್ರತಿಗಳೆ೦ದರೆ 'ಮಾರ್ಕ್ಸ್ ವಾದಿ ವಿಮರ್ಶೆ'[೧೯೯೫],'ನಾ ನಿಲ್ಲುವಳಲ್ಲ' [೧೯೯೭],'ನಾ ನಿಮ್ಮೊಳಗು'[೨೦೦೨], 'ನಡೆದುದೆ ದಾರಿ'[೨೦೦೪]ಇನ್ನೂ ಮು೦ತಾದವು.

ರಸಋಶಿ ಕುವೆ೦ಪುರವರ ಸಮಗ್ರ ಸಾಹಿತ್ಯ ಕುರಿತ ಆಲಿಸಯ್ಯ ಮಲೆಯ ಕವಿ [೨೦೦೫]ಎ೦ಬ ನ೦ಗಲಿಯವರ ವಿಮರ್ಶಾಕ್ರತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ.