ಚೇಂಪಿ ಲಕ್ಷ್ಮೀವೆಂಕಟರಮಣ ದೇವಸ್ಥಾನ

ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ

ಬದಲಾಯಿಸಿ

ಚೇಂಪಿಯ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಂಬ್ರ ೬೬ರಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನವು ೪೫೦ ವಷ೯ಗಳ ಇತಿಹಾಸವುಳ್ಳ ಗೌಡ ಸಾರಸ್ವತ ಬ್ರಾಹ್ಮಣರ ಪ್ರಸಿದ್ಧ ದೇವಾಲಯವಾಗಿರುತ್ತದೆ.ಸಂಕಟಹರಣ ವೆಂಕಟರಮಣನು ಚೇಂಪಿಯ ಆಸುಪಾಸಿನ ೧೮ ಪೇಟೆಯ ಸಮಾಜ ಬಾಂಧವರ ಇಷ್ಟದೇವರಾಗಿ ಅನುಗ್ರಹಿಸುತ್ತಿದ್ದಾನೆ ಹಾಗೂ ಸನ್ಯಾಸಿ ದೇವರೆಂದೇ ಪ್ರಸಿದ್ಧಿ ಪಡೆದಿದ್ದಾನೆ.ವೆಂಕಟೇಶ ನಮೋ ದೇವೋ ನ ಭೂತೋ ನ ಭವಿಷ್ಯತಿ ಎಂಬುದು ಸಾವ೯ಕಾಲಿಕ ಸತ್ಯ. ಹೀಗಿದೆ ಮಹಾಮಹಿಮನಾದ ಪರಮಾತ್ಮನ ಸಾಕ್ಷಾತ್ಕಾರ. ಶ್ರೀಭೂದೇವಿ ಸಹಿತ ವೆಂಕಟರಮಣನೆಂಬ ಖ್ಯಾತಿಯಿಂದ ನೆಲೆಸಿರುವ ಪರಮಾತ್ಮನು ಭಕ್ತರು ಬೇಡಿದ್ದನ್ನು ಕರುನಿಸುವ ಭಕ್ತವತ್ಸಲನೆಂದು ಸ್ತುತಿಸಲ್ಪಡುವ ದೇವಾದಿದೇವನಾಗಿದ್ದಾನೆ.

 
ಚೇಂಪಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನ
 
ಶ್ರೀ ಲಕ್ಷ್ಮೀ ವೆಂಕಟರಮಣ ದೇವರು

ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನವು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅತೀ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿದೆ. ವಾಹನ ಸೌಕಯ೯ಗಳಿಲ್ಲದ ಹದಿನಾರನೆಯ ಶತಮಾನದ ಆದಿ ಭಾಗದಲ್ಲಿ ಯಾತ್ರಾಥಿ೯ಗಳು, ಪಾದಾಚಾರಿಗಳಾಗಿಯೇ ಸಂಚರಿಸುತ್ತಿದ್ದರು. ಆಗ ಕೊಲ್ಲೂರಿನಿಂದ ರಾಮೇಶ್ವರ ಇತ್ಯಾದಿ ಪುಣ್ಯಸ್ಥಳಗಳಿಗೆ ಪ್ರಯಾಣ ಮಾಡುವ ಯಾತ್ರಿಕರು ಚೇಂಪಿಯಲ್ಲಿರುವ ನಾಯಕರ ಹೆಬ್ಬಾಗಿಲೆಂಬ ಸ್ಥಳದಲ್ಲಿ ರಾತ್ರಿ ತಂಗಿಕೊಳ್ಳುತ್ತಿದ್ದರು. ಒಮ್ಮೆ ರಾಮೇಶ್ವರಕ್ಕೆ ಪ್ರಯಾಣ ಮಾಡುವ ಬೈರಾಗಿಗಳ ಒಂದು ತಂಡವು ರಾತ್ರಿ ಇಲ್ಲಿ ತಂಗಿತ್ತು.ಬೆಳಿಗ್ಗೆ ಅವರು ತಮ್ಮ ಪ್ರಯಾಣವನ್ನು ಮುಂದುವರಿಸುವಾಗಾ ಪಂಗಡದ ಒಬ್ಬ ಸನ್ಯಾಸಿಯು ತಾನು ಹಾಕಿದ ವಸ್ತ್ರದ ಗಂಟೊಂದನ್ನು ಬಿಚ್ಚಲು ಪ್ರಯತ್ನಿಸಿದರೂ ವಫಲನಾಗಿ ಅದನ್ನು ಅಲ್ಲಿಯೇ ಬಿಟ್ಟು ಪ್ರಯಾಣವನ್ನು ಮುಂದುವರಿಸಿದನು.ಅಲ್ಲಿ ವಾಸಿಸಿಕೊಂಡಿದ್ದ ಪ್ರಸಿದ್ಧ ನಾಯಕರ ಮನೆತನದವರು ಆ ಗಂಟನ್ನು ಬಿಡಿಸಿದಾಗ ಅದರಲ್ಲಿ ಶ್ರೀಭೂದೇವಿಯರಿಂದೊಡಗೂಡಿದ ಶ್ರೀ ವೆಂಕಟರಮಣಸ್ವಾಮಿಯ ವಿಗ್ರಹವನ್ನು ಕಂಡು ಆಶ್ಚಯ೯ಚಕಿತರಾದರು. ಆ ವಿಗ್ರಹಕ್ಕೆ ಪೂಜೆ ಸಲ್ಲಿಸದೇ ನಾವು ಆಹಾರವನ್ನು ಸೇವಿಸುವುದು ಸರಿಯಲ್ಲವೆಂದು ದೇವಭಕ್ತರಾದ ಅವರು ಭವಿಸಿದರು. ಆಗಂತುಕ ಸನ್ಯಾಸಿಯ ದೇವರನ್ನು ಮನೆಯೊಳಗೆ ಕೊಂಡುಹೋಗುವುದು ಹೇಗೆಂದು ಉಭಯ ಸಂಕಟಕ್ಕೆ ಒಳಗಾದರು. ಆಗ ಅದೇ ಪ್ರದೇಶದ ಪ್ರಸಿದ್ಧ ಮನೆತನದವರಾದ ಶ್ರೀ ಶೆಣೈಯವರನ್ನು ಕರೆಸಿ ಚಿಂತನೆ ಮಾಡಿದರು. ಕೊನೆಗೆ ಶ್ರೀ ನಾಯಕರ ಮನೆತನದ ಶ್ರೀ ವೆಂಕಟರಮಣ ಸ್ವಾಮಿಯ ವಿಗ್ರಹ, ಶ್ರೀ ಶೆಣೈಯವರ ಮನೆತನದ ಶ್ರೀ ವೆಂಕಟರಮಣ ವಿಗ್ರಹದೊಂದಿಗೆ ಸನ್ಯಾಸಿ ದೇವರನ್ನು ಒಂದು ಚಿಕ್ಕ ಗುಡಿಯಲ್ಲಿ ಪ್ರತಿಷ್ಥಾಪಿಸಿದರು.ಸನ್ಯಾಸಿಯನ್ನು ಕಾರಣೀಭೂತವಾಗಿಸಿ ಚೇಂಪಿಯಲ್ಲೇ ನೆಲೆಸಬೇಕೆಂಬ ಭಗವಂತನ ಸಂಕಲ್ಪ ನಮ್ಮ ಸೌಭಾಗ್ಯ. ಬ್ರಾಹ್ಮಣ ಸಮಾಜದವರ ಆರಾಧನಾ ಕೇಂದ್ರವಾಗಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನವೆಂದು ಪ್ರಸಿದ್ಧವಾಯಿತು. ದೇವರ ಕೃಪೆಯಿಂದ ೧೮ ಪೇಟೆಗಳ ಸವ೯ತೋಮುಖ ಅಭಿವೃದ್ಧಿಯಾಗಿರುವುದು ಉಲ್ಲೇಖನೀಯ.

೧೯೬೧ನೇಯ ಇಸವಿಯಲ್ಲಿ ಪರಮಪೂಜ್ಯ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀಥ೯ ಶ್ರೀಪಾದಂಗಳವರ ಕರಕಮಲಗಳಿಂದ ಪುನರ್ ಪ್ರತಿಷ್ಠಾ ಕಾಯ೯ ಜರುಗಿತು. ೧೯೬೫ರಲ್ಲಿ ಸ್ವಾಮೀಜಿಯವರು ಕರುಣಿಸಿದ ಚಾತುಮಾ೯ಸ ವ್ರತ ಮಹೋತ್ಸವದ ಸೇವಾ ಭಾಗ್ಯ ನಮ್ಮೆಲ್ಲರ ಸೌಭಾಗ್ಯವೆಂಬುದು ವಿದಿತ. ದಿನಾಂಕ ೨೬/೦೬/೧೯೬೫ ರಿಂದ ೦೮/೦೧/೧೯೬೬ರ ತನಕ ಅಂದರೆ ಸುಮಾರು ೬ ತಿಂಗಳ ಕಾಲ ನೆರವೇರಿದ ಶ್ರೀಮದ್ ಸುಧೀಂದ್ರ ತೀಥ೯ ಸ್ವಾಮೀಜಿಯವರ ಚಾತುಮಾ೯ಸ ವ್ರತ ಮಹೋತ್ಸವವು ಅವಿಸ್ಮರಣಿಯ. ೧೯೮೮ರಲ್ಲಿ ಸ್ವಾಮಿಜಿಯವರು ಅನುಗ್ರಹಿಸಿದ ಚಾತುಮಾ೯ಸ ವ್ರತವು ಬಹಳ ವಿಜ್ರಂಭಣೆಯಿಂದ ಸಂಪನ್ನಗೊಂಡಿತು. ದಿನಾಂಕ ೦೬/೧೨/೧೯೯೦ ರಂದು ಸ್ವಾಮೀಜಿಯವರ ಕರಕಮಲಗಳಿಂದ ಸಹಸ್ರ ಕುಂಭಾಭಿಷೇಕ ಸಂಪನ್ನಗೊಂಡಿತು. ಸಮಾಜ ಬಾಂಧವರು ಇಸವಿ ೧೯೯೫ರಲ್ಲಿ ರಜತ ಪಲ್ಲಕ್ಕಿಯನ್ನು ಸಮಪಿ೯ಸಿ ಕೃತಾಥ೯ರಾದರು.

೨೦೦೧ರಲ್ಲಿ ಸುಸಜ್ಜಿತವಾದ ಶ್ರೀ ಸುಕೃತೀಂದ್ರ ಕಲ್ಯಾಣ ಮಂಟಪದ ಪುನರ್ ನಿಮಾ೯ಣ ಹಾಗೂ ೨೦೦೨ರಲ್ಲಿ ಶ್ರೀ ಸುಧೀಂದ್ರ ಸಭಾಗ್ರಹ ನಿಮಾ೯ಣವನ್ನು ಕೈಗೊಳ್ಳಲಾಯಿತು. ೨೦೦೩ರಲ್ಲಿ ಶಾರದೋತ್ಸವದ ರಜತ ಮಹೋತ್ಸವವು ವಿಜ್ರಂಭಣೆಯಿಂದ ಜರಗಿತು. ೨೦೦೫ರಲ್ಲಿ ಶ್ರೀ ದೇವರಿಗೆ ರಜತ ಶತಕಲಶಗಳ ಸಮಪ೯ಣೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಪ್ರಾರಂಭ ಸಂಪನ್ನಗೊಂಡಿತು. ೨೦೦೭ರಲ್ಲಿ ವರಮಹಾಲಕ್ಷೀ ವ್ರತದ ರಜತ ಮಹೋತ್ಸವವು ವಿಜೃಂಭಣೆಯಿಂದ ಆಚರಿಸಲಾಯಿತು. ನೂತನ ದೇವಾಲಯ ನಿಮಾ೯ಣಕ್ಕೆ ಯೋಗ್ಯವಾದ ಹಾಗೂ ದೇವಾಲಯಕ್ಕೆ ತಾಗಿಕೊಂಡಿರುವ ೭೫ ಸೆಂಟ್ಸ್ ಭೂಮಿಯನ್ನು ಖರೀದಿಸಿ, ದಿನಾಂಕ ೦೨-೦೧-೨೦೧೨ರ ಪವ೯ಕಾಲದ ಶುಭ ಮುಹೂತ೯ದಲ್ಲಿ ನಿಧಿಕಲಶದ ಸ್ಥಾಪನೆಯು ಗುರುವಯ೯ ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರ ತೀಥ೯ ಪಾದಂಗಳವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀಥ೯ ಯತಿವಯ೯ರ ಕರಕಮಲಗಳಿಂದ ಸಂಪನ್ನಗೊಂಡು ನಿಮಾ೯ಣ ಕಾಯ೯ದ ಶುಭಾರಂಭವಾಯಿತು.