ಚೆಲುವ ಕನ್ನಡ
ಪ್ರೊ. ಸಿ.ವಿ ಕೆರಿಮನಿಯವರ ಸಂಪಾದಿತ ಕೃತಿ ಚೆಲುವ ಕನ್ನಡ . ಕನ್ನಡ ನಾಡು, ಕನ್ನಡ ನುಡಿ-ಸಂಸ್ಕೃತಿ ಎಂಬ ಶೀರ್ಷಿಕೆಯಡಿ ೩೫ ವೈವಿಧ್ಯಮಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಕರ್ನಾಟಕದ ಇತಿಹಾಸದಿಂದ ಪ್ರಾರಂಭವಾಗಿ, ಕನ್ನಡ ನಾಡು, ನುಡಿ ಎದುರಿಸುತ್ತಿರುವ ಸಮಸ್ಯೆಗಳು, ಕರ್ನಾಟಕದ ಜನಪರ ಚಳವಳಿಗಳು, ಆರೋಗ್ಯ, ಉದ್ಯೋಗ, ಬ್ಯಾಂಕಿಂಗ್, ಕನ್ನಡ ಮತ್ತು ವಿಜ್ಞಾನ, ತಂತ್ರಜ್ಞಾನ, ಕನ್ನಡ ಪುಸ್ತಕೋದ್ಯಮ, ಶಿಕ್ಷಣ, ಗಡಿನಾಡು, ಹೊರನಾಡು ಈ ಎಲ್ಲ ವಿಷಯಗಳ ಬಗ್ಗೆ ಬೇರೆ ಬೇರೆ ವಿದ್ವಾಂಸರು, ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳನ್ನು ಸಂಪಾದಿಸಿದ್ದಾರೆ.
ಲೇಖಕರು | ಪ್ರೊ. ಸಿ.ವಿ ಕೆರಿಮನಿ |
---|---|
ಮುಖಪುಟ ಕಲಾವಿದ | ಶ್ರೀಪಾದ, ಬೆಂಗಳೂರು |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಕರ್ನಾಟಕದ ಇತಿಹಾಸ, ಕನ್ನಡ ನಾಡು, ನುಡಿ ಎದುರಿಸುತ್ತಿರುವ ಸಮಸ್ಯೆಗಳು, ಕರ್ನಾಟಕದ ಜನಪರ ಚಳವಳಿಗಳು, ಆರೋಗ್ಯ, ಉದ್ಯೋಗ, ಬ್ಯಾಂಕಿಂಗ್, ಕನ್ನಡ ಮತ್ತು ವಿಜ್ಞಾನ, ತಂತ್ರಜ್ಞಾನ, ಕನ್ನಡ ಪುಸ್ತಕೋದ್ಯಮ, ಶಿಕ್ಷಣ, ಗಡಿನಾಡು, ಹೊರನಾಡು |
ಪ್ರಕಾರ | ಸಂಪಾದಿತ ಕೃತಿ |
ಪ್ರಕಾಶಕರು | ಸಪ್ನ ಬುಕ್ ಹೌಸ್ |
ಪ್ರಕಟವಾದ ದಿನಾಂಕ | ನವೆಂಬರ್ ೨೦೧೨ |
ಪುಟಗಳು | ೩೭೪ |
ಐಎಸ್‍ಬಿಎನ್ | 978-81-280-2034-6 |
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಕೃತಿಯನ್ನು ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಅರ್ಪಿಸಲಾಗಿದೆ.