ಚೆನ್ನೆಕಾಯಿ ಅಥವಾ ಚೆನ್ನೆಮರವು ಶ್ರೀಲಂಕಾ ಮೂಲದ ಒಂದು ಮರ.ಇದರಲ್ಲಿ ಚೆನ್ನೆ ಆಡಲು ಉಪಯೋಗಿಸುವ ಕಾಯಿಗಳು ಸಿಗುವ ಕಾರಣ ಚೆನ್ನೆಮರ ಅಂತಲೂ ಕರೆಯುತ್ತಾರೆ.

ಚೆನ್ನೆಕಾಯಿ ಮರ

ಮರದ ಸ್ವರೂಪ

ಬದಲಾಯಿಸಿ

ಇಂದೊಂದು ಅತಿ ಎತ್ತರ ಬೆಳೆಯುವ ಮರ.ಸಾಮಾನ್ಯವಾಗಿ ೬ರಿಂದ ೧೫ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.ಇದರ ಕಾಂಡವು ದಪ್ಪವಾಗಿ ೪೫ ಸೆ.ಮೀ ವ್ಯಾಸವನ್ನು ಹೊಂದಿರುತ್ತದೆ.ಕಾಂಡಗಳಲ್ಲಿ ಅಲ್ಲಲ್ಲಿ ಗೆಲ್ಲುಗಳು ಇರುತ್ತದೆ.ಇದರ ಎಲೆಯು ಸಾಮಾನ್ಯವಾಗಿ ನುಗ್ಗೆ ಸೊಪ್ಪು, ಹುಣಸೆ ಮರದ ಎಲೆಯ ರೀತಿಯಲ್ಲಿ ಒಂದು ಕಡ್ದಿಯಲ್ಲಿ ಒತ್ತೊತ್ತಾಗಿ ಇರುತ್ತದೆ

ಉಪಯೋಗಗಳು

ಬದಲಾಯಿಸಿ
ಈ ಮರವು ನೆರಳನ್ನು ಕೊಡುವುದಲ್ಲದೆ ಮಣ್ಣಿನ ನೈಟ್ರೊಜನ್ ಸ್ಥಿರತೆಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.ಅದಲ್ಲದೆ ಔಷಧಿಯ ತಯಾರಿಯಲ್ಲಿಯು ಉಪಯೋಗವಾಗುತ್ತದೆ ಇದರ ತೊಗಟೆ,ಎಲೆ ಮತ್ತು ಬೀಜಗಳನ್ನು ಉಪಯೋಗಿಸಿಕೊಂಡು ಔಷಧಿಯನ್ನು ತಯಾರಿಸುತ್ತಾರೆ [] ಈ ಮರವನ್ನು ದೋಣಿ ತಯಾರಿಸಲು ಉಪಯೋಗಿಸುತ್ತಾರೆ.ಈ ಮರವು ಗಟ್ಟಿಯಾಗಿರುವುದರಿಂದ ಪೀಠೋಪಕರಣಗಳ ತಯಾರಿಯಲ್ಲಿಯು ಉಪಯೋಗಿಸುತ್ತಿದ್ದರು.ಇದರ ತೊಗಟೆ,ಎಲೆ ಮತ್ತು ಬೀಜಗಳನ್ನು ಉಪಯೋಗಿಸುತ್ತಾರೆ

ಉಲ್ಲೇಖ

ಬದಲಾಯಿಸಿ
  1. http://www.instituteofayurveda.org/plants/plants_detail.php?i=559&s=Scientific_name