ಚೆನ್ನಪಟ್ಟಣ ಚರ್ಚು

ಚೆನ್ನಪಟ್ಟಣವು ರಾಮನಗರ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಹೆದ್ದಾರಿಯಲ್ಲಿ ೬೦ಕಿಲೋಮೀಟರು ದೂರದಲ್ಲಿದೆ. ಕ್ಲೋಸ್ ಪೇಟೆ(ಇಂದಿನ ರಾಮನಗರ)ಯ ಉಪ ಧರ್ಮಕೇಂದ್ರವಾಗಿದ್ದ ಚೆನ್ನಪಟ್ಟಣ ಸ್ವತಂತ್ರ ಧರ್ಮಕೇಂದ್ರವಾದದ್ದು ೧೯೫೫ರಲ್ಲಿ. ಮಹಾಧರ್ಮಾಧಿಪತಿ ತೋಮಾಸ್ ಪೋತಕಮೂರಿಯವರು ಉದ್ಘಾಟಿಸಿದ ಈ ಧರ್ಮಕೇಂದ್ರದ ಪ್ರಥಮ ಗುರುವಾಗಿ ಯೇಸುಸಭೆಯ ಸ್ವಾಮಿ ಜಾನ್ ಎರೇನಾ (೧೯೫೫-೫೭) ಪಾಲನೆ ಮಾಡಿದರು. ಬಹುಶಃ ಇವರ ಕಾಲದಲ್ಲಿಯೇ ಇಲ್ಲಿನ ದೇವಾಲಯದಲ್ಲಿ ಜಪಸರದ ೧೫ ರಹಸ್ಯಗಳ ಭಿತ್ತಿಚಿತ್ರಗಳು ದೇವಾಲಯದ ಗೋಡೆಯಲ್ಲಿ ಮೂಡಿಬಂದವು. ಚೆನ್ನಪಟ್ಟಣದಲ್ಲಿ ಈ ಕೆಳಕಂಡ ಇತರ ಪಾದ್ರಿಗಳು ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

ಸ್ವಾಮಿ ಮ್ಯಾಥ್ಯೂ ಲೂಯಿಸ್ ೧೯೫೭-೫೯ ಸ್ವಾಮಿ ಸಿರಿಲ್ ವಿ ಸಿಲ್ವಾ ೧೯೫೯-೬೪ ಸ್ವಾಮಿ ಸೆಬಾಸ್ಟಿಯನ್ ಮೇನಾಚೆರ್ರಿ ೧೯೬೪-೬೫ ಸ್ವಾಮಿ ವಿಲಿಯಂ ಮಥಾಯಿಸ್ ೧೯೬೫-೭೧ ಸ್ವಾಮಿ ಪಯಸ್ ೧೯೭೧-೭೨ ಸ್ವಾಮಿ ಲಾಜರ್ ೧೯೭೨-೭೬ ಸ್ವಾಮಿ ಜೆ ಡಿ ಪಿಂಟೋ ೧೯೭೬-೭೮ ಸ್ವಾಮಿ ಅಮೃತರಾಜ್ ೧೯೭೮-೮೩ ಸ್ವಾಮಿ ಜೆರೋಮ್ ಲೋಬೊ ೧೯೮೩-೮೪ ಸ್ವಾಮಿ ಜಾನ್ ರೊಸಾರಿಯೋ ೧೯೮೪-೮೯ ಸ್ವಾಮಿ ಸುಂದರರಾಜ್ ೧೯೮೯-೯೦ ಸ್ವಾಮಿ ಅಮೃತರಾಜ್ ಸ್ವಾಮಿ ಎಲ್ ಅರುಳಪ್ಪ ಸ್ವಾಮಿ ಸಂದ್ಯಾಗೊ

ಚೆನ್ನಪಟ್ಟಣದಲ್ಲಿನ ಈ ಚರ್ಚು ೧೯೫೮ರಿಂದಲೂ ಕನ್ನಡ ಉನ್ನತ ಪ್ರಾಥಮಿಕ ಶಾಲೆ ನಡೆಸುತ್ತಿದೆ. ೧೯೮೦ರಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಸೇರಿಸಲಾಯಿತು. ೧೯೫೯ರಿಂದ ಕಾರ್ಯಾರಂಭ ಮಾಡತೊಡಗಿದ ಸಂತ ಅನ್ನಮ್ಮ ಕನ್ಯಾಮಠ ಈ ಊರಿನಲ್ಲಿ ಪ್ರೌಢಶಾಲೆಯನ್ನು ನಡೆಸುತ್ತಿದೆ. ಸ್ವಾಮಿ ಎಲ್ ಅರುಳಪ್ಪನವರು ಈ ಕೇಂದ್ರದ ಗುಡಿಯ ಸ್ವರ್ಣಮಹೋತ್ಸವದ ನೆನಪಿಗೆ ೨೦೦೫ರಲ್ಲಿ ಹೊಸ ಚರ್ಚನ್ನು ಕಟ್ಟಿಸಿದ್ದಾರೆ.