ಚೂರಿಮುಳ್ಳು, ತೂರಿಮುಳ್ಳು, ಸೂರಿಮುಳ್ಳು ಎಂಬುದು ಭಾರೀ ರುಚಿಕರವಾದ ಕಾಡು ಹಣ್ಣು. ಇದು ಏಷ್ಯಾ ಹಾಗೂ ಆಸ್ಥ್ರೇಲಿಯಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ಚೂರಿಮುಳ್ಳು

ಇದು ಹರಡಿದಂತೆ ಇರುವ, ಮುಳ್ಳುಗಳಿಂದ ಕೂಡಿದ ಪೊದೆಯಂತಿರುವ ಸಸ್ಯ. ಈ ಗಿಡ ಸುಮಾರು ೧-೨ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಹಸಿರು ದೊರಗಾಗಿರುವ ಎಲೆಯನ್ನು ಹೊಂದಿರುವ ಈ ಗಿಡದ ಹೂ ಕೂಡಾ ಹಸಿರು ಬಣ್ಣದ್ದಾಗಿದೆ. ಗಿಡದ ತುಂಬಾ ಆಗುವ ಹಸಿರು ಕಾಯಿಗಳು ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ತೆಳುವಾದ ಸಿಪ್ಪೆ ಸಮೇತವಾಗಿ ತಿನ್ನಬಹುದಾದ ಈ ಹಣ್ಣಿನ ಒಳಗಡೆ ಒಂದು ಬೀಜ ಇರುತ್ತದೆ.

 
ಚೂರಿಮುಳ್ಳು

ಈ ಗಿಡದ ಎಲೆ, ಕಾಯಿ, ಗೆಲ್ಲು ಹಾಗೂ ಬೇರನ್ನು ಮನೆಮದ್ದಿನಲ್ಲಿ ಉಪಯೋಗಿಸುತ್ತಾರೆ. ಬರ್ಮಾ ದೇಶದಲ್ಲಿ ಇದರ ಕಾಂಡದ ಸಿಪ್ಪೆಯನ್ನು ಗಂಟಲು ನೋವಿಗೆ ಬಾಯಿ ಮುಕ್ಕಳಿಸಲು ಮಾತ್ರವಲ್ಲದೆ ಗರ್ಭಕೋಶದ ತೊಂದರೆಗೆ ಕೊಡುತ್ತಾರೆ.[]. ಇದರ ಬೇರನ್ನು ಆಯುರ್ವೇದಿಕ್ ಮದ್ದಿನಲ್ಲಿ ಉಪಯೋಗಿಸುತ್ತಾರೆ. [] ಮಹಾರಾಷ‍್ಠ್ರದ ಕೊಂಕಣಿ ಜನರು ಬಾಯಿ ಹುಣ್ಣಿಗೆ ಇದರ ಎಲೆಯನ್ನು ಅಗಿಯಲು ಕೊಡುತ್ತಾರೆ.[] ದಕ್ಷಿಣ ಕನ್ನಡದಲ್ಲಿ ಚಿಕ್ಕ ಮಕ್ಕಳಿಗೆ ಈ ಗಿಡದ ಚಿಗುರಿನ ರಸವನ್ನು ಕೊಡುತ್ತಾರೆ.

 
ಚೂರಿಮುಳ್ಳು

ಚಿತ್ರ ಸಂಪುಟ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. Myanmar Medicinal Plant Database
  2. Ayurvedic medicinal plants.
  3. Kuvar & Bapat (2010).